Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
ಈ ಬ್ಯೂಟಿ ಟಿಪ್ಸ್ ಪುರುಷರಿಗೆ ಮಾತ್ರ!
ಸುಂದರವಾಗಿ ಕಾಣಬೇಕೆಂಬ ಆಸೆ ಸ್ತ್ರೀಯರಿಗೆಮಾತ್ರವಲ್ಲ ಪುರುಷರಿಗೂ ಇರುತ್ತದೆ. ಆದರೆ ಪುರುಷರಿಗೆ ತ್ವಚೆ ಆರೈಕೆ ಮಾಡಲು ಏನೋ ಮುಜುಗರ. ಫೇಶಿಯಲ್, ಫೇಸ್ ಪ್ಯಾಕ್ ಅಂತ ಮಾಡಿದರೆ ಫ್ರೆಂಡ್ಸ್ ಮತ್ತು ಮನೆಯವರು ಹುಡುಗಿ ತರ ಏಕೇ ಇಷ್ಟು ಸ್ಟೈಲ್ ಮಾಡುತ್ತೀಯ ಎಂದು ಕೇಳುತ್ತಾರೆ ಎಂಬ ಭಯ.
ಸಾಮಾನ್ಯವಾಗಿ ಹೆಚ್ಚಿನ ಪುರುಷರು ತಮ್ಮ ಸೌಂದರ್ಯದ ಬಗ್ಗೆ ಗಮನವೇ ಹರಿಸುವುದಿಲ್ಲ. ಶೇವ್ ಮಾಡಿದರೆ ಸಾಕು, ನಾವು ಸುಂದರವಾಗಿ ಕಾಣುತ್ತೇವೆ ಎಂಬ ಭಾವನೆ ಹೆಚ್ಚಿನವರಲ್ಲಿರುತ್ತದೆ. ಆದರೆ ಆಕರ್ಷಕವಾದ ತ್ವಚೆಗೆ ಶೇವ್ ಮಾತ್ರ ಸಾಕಾಗುವುದಿಲ್ಲ. ತ್ವಚೆ ತುಂಬಾ ಒರಟಾಗದಂತೆ ತಡೆಯಲು, ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಯಸುವುದಾದರೆ ಈ ಕೆಳಗಿನ ಟಿಪ್ಸ್ ಪಾಲಿಸುವುದು ಒಳ್ಳೆಯದು:

ತ್ವಚೆಯಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಿ
ತ್ವಚೆಯಲ್ಲಿ ಎಣ್ಣೆಯಂಶವಿದ್ದರೆ ಮುಖ ಮುಖ ಮಂಕಾಗಿ ಕಾಣುವುದು, ಅಲ್ಲದೆ ಕೆಲವರಿಗೆ ಮೊಡವೆ ಬರಲು ಮುಖದಲ್ಲಿರುವ ಜಿಡ್ಡಿನಂಶ ಕೂಡ ಒಂದು ಕಾರಣವಾಗಿದೆ. ಆದ್ದರಿಂದ ಮುಖದಲ್ಲಿರುವ ಎಣ್ಣೆಯಂಶವನ್ನು ಹೋಗಲಾಡಿಸಲು ಕ್ಲೆನ್ಸ್ ಮಾಡುವುದು ಒಳ್ಳೆಯದು.

ಸನ್ ಸ್ಕ್ರೀನ್ ಬಳಸಿ
ಬಿಸಿಲಿಗೆ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸಬೇಕು. ಇದರಿಂದ ಮುಖ ಬಿಸಿಲಿಗೆ ತ್ವಚೆ ಕಪ್ಪಾಗುವುದಿಲ್ಲ. SPF 20+ ಇರುವ ಸನ್ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು.

ದೇಹದಲ್ಲಿ ನೀರಿನಂಶವಿರುವಂತೆ ನೋಡಿಕೊಳ್ಳಿ
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತ್ವಚೆ ಡ್ರೈಯಾಗುತ್ತದೆ. ಆದ್ದರಿಂದ ದೇಹದಲ್ಲಿ ನೀರಿನಂಶವನ್ನು ಸಮತೋಲನದಲ್ಲಿಡಲು ನೀರಿನಂಶವಿರುವ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು.

ಶೇವಿಂಗ್
ಶೇವಿಂಗ್ ಕ್ರೀಮ್ ಬಳಸಿ ಶೇವ್ ಮಾಡಬೇಕು ಇದರಿಂದ ಮುಖ ನೀಟಾಗಿ ಕಾಣುತ್ತದೆ. ನಂತರ ಮಾಯಿಶ್ಚರೈಸರ್ ಬಳಸಿದರೆ ತ್ವಚೆ ಒರಟಾಗುವುದಿಲ್ಲ.

ಫೇಶ್ ವಾಶ್
ಮುಖಕ್ಕೆ ಸೋಪಿನ ಬದಲು ಫೇಶ್ ವಾಶ್ ಬಳಸುವುದು ಒಳ್ಳೆಯದು. ಸೋಪು ಬಳಸುವುದಾದರೆ ಮೃದುವಾದ ಸೋಪನ್ನು ಬಳಸಿ. ತುಂಬಾ ಸುವಾಸನೆ ಇರುವ ಸೋಪು ಒಳ್ಳೆಯದಲ್ಲ. ತಲೆ ಹೊಟ್ಟು ಬರದಿರಲು ದಿನಾ ತಲೆ ತೊಳೆಯಿರಿ.

ಮಾಯಿಶ್ಚರೈಸರ್
ವಿಟಮಿನ್ ಇ ಇರುವ ಮಾಯಿಶ್ಚರೈಸರ್ ಬಳಸುವುದು ಒಳ್ಳೆಯದು. ಲೋಳೆಸರದ ಅಂಶವಿರುವ ಮಾಯಿಶ್ಚರೈಸರ್ ಕೂಡ ಪುರುಷರ ತ್ವಚೆ ರಕ್ಷಣೆಯಲ್ಲಿ ಸಹಕಾರಿಯಾಗಿದೆ.

ಫೇಶಿಯಲ್
ಫೇಶಿಯಲ್ ಅನ್ನು ಸ್ತ್ರೀಯರು ಮಾತ್ರವಲ್ಲ, ಪುರುಷರೂ ಮಾಡಿಸುವುದು ಒಳ್ಳೆಯದು. ಏಕೆಂದರೆ ಫೇಶಿಯಲ್ ಮಾಡಿದರೆ ಮುಖದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಮುಖದ ಕಾಂತಿ ಹೆಚ್ಚುವುದು. ಕಪ್ಪು ಕಲೆಗಳು ಮಾಯವಾಗುವುದು.

ಎಕ್ಸ್ ಫೋಲೆಟ್
ವಾರಕ್ಕೊಮ್ಮೆ ಮುಖವನ್ನು ಎಕ್ಸ್ ಫೋಲೆಟ್ (ೆಕ್ಸ್ ಫೋಲೆಟ್ ಅಂದರೆ 1 ಚಮಚ ಆಲೀವ್ ಎಣ್ಣೆಗೆ ಅರ್ಧ ಚಮಚ ಸಕ್ಕರೆ ಹಾಗೂ ಅರ್ಧ ಚಮಚ ಉಪ್ಪು ಹಾಕಿ ಮಿಶ್ರ ಮಾಡಿ ಮುಖವನ್ನು ಸ್ಕ್ರಬ್ ಮಾಡುವುದು) ಮಾಡುವುದು ಒಳ್ಳೆಯದು. ಹೀಗೆ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು.

ಆಲೀವ್ ಎಣ್ಣೆ
ಆಲೀವ್ ಎಣ್ಣೆ ನೈಸರ್ಗಿಕವಾದ ಮಾಯಿಶ್ಚರಯಸರ್ ಆಗಿದೆ. ದಿನಾ ಆಲೀವ್ ಎಣ್ಣೆಯಿಂದ ಮಸಾಜ್ ಮಾಡಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುವುದು.



Click it and Unblock the Notifications