Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಅಡುಗೆ ಮನೆಯಲ್ಲಿರುವ 11 ಸೌಂದರ್ಯ ವರ್ಧಕಗಳು
ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸೌಂದರ್ಯ ಸಮಸ್ಯೆ ಇರುತ್ತದೆ. ಕೆಲವೊಂದು ಸಮಸ್ಯೆಗಳನ್ನು ಅದಕ್ಕೆ ಸೂಕ್ತ ಚಿಕಿತ್ಸೆ ಮಾಡುವುದರ ಮುಖಾಂತರ ಗುಣ ಪಡಿಸಬಹುದು. ಮೊಡವೆ, ಕಣ್ಣಿನ ಸುತ್ತ ಕಪ್ಪು ಕಲೆ, ಹಳದಿ ಹಲ್ಲುಗಳು, ಒಣ ತುಟಿಗಳು ಈ ರೀತಿಯ ಸಮಸ್ಯೆಗಳಿಗೆ ಬೆಲೆ ಬಾಳುವ ಕ್ರೀಮ್ ಬಳಸುವ ಬದಲು ಮನೆಯಲ್ಲಿಯೇ ಇರುವಂತಹ ಕೆಲವೊಂದು ನೈಸರ್ಗಿಕವಾದ ವಸ್ತುಗಳನ್ನು ಬಳಸಬಹುದು.
ನೈಸರ್ಗಿಕವಾದ ವಸ್ತುಗಳನ್ನು ಬಳಸುವುದರಿಂದ ದೊರೆಯುವ ಮುಖ್ಯ ಪ್ರಯೋಜನವೆಂದರೆ ಇವು ತ್ವಚೆಯ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ರಾಸಾಯನಿಕ ವಸ್ತುಗಳನ್ನು ಬಳಸಿರುವ ಸೌಂದರ್ಯ ವರ್ಧಕಗಳು ತ್ವಚೆಯ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ಅದರಲ್ಲೂ ನಾವು ಅಡುಗೆಗೆ ಬಳಸುವ ಕೆಲವೊಂದು ವಸ್ತುಗಳಲ್ಲಿ ಸೌಂದರ್ಯ ವರ್ಧಕ ಗುಣಗಳಿವೆ. ಆ ವಸ್ತುಗಳಾವುವು ಎಂದು ನೋಡೋಣ ಬನ್ನಿ:

ಅರಿಶಿಣ
ಅರಿಶಿಣ ಹಚ್ಚುವುದರಿಂದ ಮೊಡವೆ ಕಡಿಮೆ ಮಾಡಬಹುದು. ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ಅರಿಶಿಣ ಹಚ್ಚುವುದರಿಂದ ತ್ವಚೆ ಕಾಂತಿ ಹೆಚ್ಚಾಗುತ್ತಾ ಬರುತ್ತದೆ.

ಟೊಮೆಟೊ
ಪ್ರತಿನಿತ್ಯ ಚಿಕ್ಕ ಟೊಮೆಟೊ ತುಂಡನ್ನು ಮುಖಕ್ಕೆ ಉಜ್ಜಿ. ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುವುದು.

ಹಾಲು
ಪ್ರತಿದಿನ ರಾತ್ರಿ ಮಲಗುವ ಮುನ್ನ ಸ್ವಲ್ಪ ಹಾಲಿಗೆ ಹತ್ತಿಯನ್ನು ಅದ್ದಿ ಅದರಿಂದ ಮುಖ ಕ್ಲೆನ್ಸ್ ಮನಾಡಿ ನಂತರ ತಣ್ಣೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ತ್ವಚೆಯಲ್ಲಿ ಅಲರ್ಜಿ, ದೂಳಿನಿಂದಾಗಿ ಮೊಡವೆ ಬರುವುದು ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಬಹುದು.

ಉಪ್ಪು
ಉಪ್ಪಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದರಿಂದ ಸ್ಕ್ರಬ್ ಮಾಡಿದರೆ ತ್ವಚೆಯಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು.

ಆಲೀವ್ ಎಣ್ಣೆ
ಒಣ ತ್ವಚೆಯಿರುವವರು ಆಲೀವ್ ಎಣ್ಣೆಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತಿನ ಬಳಿಕ ಮುಖ ತೊಳೆಯಬೇಕು. ಈ ರೀತಿ ಮಾಡುವುದರಿಂದ ತ್ವಚೆಯ ಮಾಯಿಶ್ಚರೈಸರ್ ಹೆಚ್ಚಿಸಬಹುದು.

ಈರುಳ್ಳಿ
ತ್ವಚೆ ಅಲರ್ಜಿ ಉಂಟಾಗಿದ್ದರೆ ಆ ಭಾಗಕ್ಕೆ ಈರುಳ್ಳಿ ರಸ ಹಾಕಿದರೆ ಸಾಕು, ತ್ವಚೆ ಅಲರ್ಜಿ ಕಡಿಮೆಯಾಗುವುದು.

ಸಕ್ಕರೆ
ತ್ವಚೆಯಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಲು ಸಕ್ಕರೆಗೆ ಸ್ವಲ್ಪ ಎಣ್ಣೆ ಹಾಕಿ ಮುಖವನ್ನು ಸ್ಕ್ರಬ್ ಮಾಡಬಹುದು. ಇದು ಮುಖದಲ್ಲಿರುವ ಕೂದಲನ್ನು ಕಡಿಮೆ ಮಾಡುತ್ತದೆ.

ಕ್ರೀಮ್
ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿದರೆ ಮುಖ ಮಾಯಿಶ್ಚರೈಸರ್ ಆಗಿರುವಂತೆ ನೋಡಿಕೊಳ್ಳಬಹುದು. ಮೊಸರನ್ನು ಕೂಡ ಮುಖಕ್ಕೆ ಹಚ್ಚಬಹುದು.

ನಿಂಬೆ ಹಣ್ಣು
ನಿಂಬೆ ಹಣ್ಣನ್ನು ಕತ್ತರಿಸಿ ಅದರಿಂದ ಮುಖವನ್ನು ಉಜ್ಜಿದರೆ ಮೊಡವೆ ಸಮಸ್ಯೆ ಇದ್ದವರಿಗೆ ಕಡಿಮೆಯಾಗುವುದು, ಇದರಿಂದ ಉಗುರನ್ನು ತಿಕ್ಕಿದರೆ ಬೆಳ್ಳಗಿನ ಉಗುರನ್ನು ಪಡೆಯಬಹುದು.

ಓಟ್ಸ್
ಓಟ್ಸ್ ಅನ್ನು ಪುಡಿ ಮಾಡಿ ಅದರಿಂದ ಸ್ಕರಬ್ ಮಾಡಬಹುದು. ಅದಕ್ಕೆ ಸ್ವಲ್ಪ ಸೇಬಿನ ತುಂಡುಗಳನ್ನು ಹಾಕಿ ಪೇಸ್ಟ್ ರೀತಿ ಮಾಡಿ ಫೇಶಿಯಲ್ ಕೂಡ ಮಾಡಬಹುದು.

ಸೌತೆಕಾಯಿ
ಸೌತೆಕಾಯಿ ಮುಖದಲ್ಲಿರುವ ಕಲೆಯನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲವನ್ನು ಹೋಗಲಾಡಿಸುತ್ತದೆ. ಇದರ ಪೇಸ್ಟ್ ಮಾಡಿ ಹಚ್ಚಿದರೆ ಮುಖದ ಕಾಂತಿ ಹೆಚ್ಚುವುದು.



Click it and Unblock the Notifications