Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮುಖಕ್ಕೆ ಕ್ರೀಮ್ ಹಚ್ಚಿ ಮಲಗಬಾರದು ಏಕೆ?

ಎಷ್ಟೋ ಜನರು ರಾತ್ರಿ ಮಲಗುವಾಗ ಮೇಕಪ್ ತೆಗೆಯದೆ ಹಾಗೇ ಮಲಗುತ್ತಾರೆ, ಮತ್ತೆ ಕೆಲವರು ಮೇಕಪ್ ಮಾಡಿ ಮಲಗುತ್ತಾರೆ, ಈ ಎರಡು ವಿಧಾನವೂ ತ್ವಚೆ ಆರೋಗ್ಯಕ್ಕೆ ಒಳ್ಳೆಯದಲ್ಲ. ತ್ವಚೆ ಆರೋಗ್ಯವಾಗಿದ್ದರೆ ಮಾತ್ರ ಆಕರ್ಷಕವಾಗಿ ಕಾಣಲು ಸಾಧ್ಯ. ಆದ್ದರಿಂದ ಮಲಗುವ ಮೊದಲು ಈ ಕೆಳಗಿನಂತೆ ತ್ವಚೆ ಆರೈಕೆ ಮಾಡಿದರೆ ಒಳ್ಳೆಯದು.
ಮುಖ ತೊಳೆಯುವುದು: ಹೊರಗಡೆ ಸುತ್ತಿ ಬಂದ ತಕ್ಷಣ ಮುಖ ತೊಳೆಯಬೇಕು. ನಂತರ ಎಣ್ಣೆಯಿಂದ ಮಸಾಜ್ ಮಾಡಬೇಕು. ಇದರಿಂದ ತ್ವಚೆಯಲ್ಲಿ ನೀರಿನಂಶ ಕಾಪಾಡಲು ಸಹಕಾರಿಯಾಗಿದೆ.
ಕ್ಲೆನ್ಸರ್: ಆಕರ್ಷಕ ತ್ವಚೆ ಬೇಕೆಂದು ಬಯಸುವುದಾದರೆ ಪ್ರತಿನಿತ್ಯ ಸಾಯಂಕಾಲ ಅಥವಾ ರಾತ್ರಿ ಕ್ಲೆನ್ಸಿಂಗ್ ಮಾಡಿದರೆ ಒಳ್ಳೆಯದು. ಕ್ರೀಮ್ ಹಚ್ಚಿ ಹಾಗೇ ಮಲಗಿದರೆ ಅದರಲ್ಲಿ ಕೆಮಿಕಲ್ ಇರುವುದರಿಂದ ತ್ವಚೆಗೆ ಅಷ್ಟು ಒಳ್ಳೆಯದಲ್ಲ. ಆದ್ದರಿಂದ ಕ್ಲೆನ್ಸಿಂಗ್ ಮಾಡಿದರೆ ತ್ವಚೆ ರಂಧ್ರಗಳು ಉಸಿರಾಡಲು ಸಹಕಾರಿಯಾಗಿದೆ.
ನೀರು ಕುಡಿಯಬೇಕು: ತ್ವಚೆ ಆರೋಗ್ಯಕ್ಕೆ ಮಾತ್ರವಲ್ಲ, ದೇಹದ ಆರೋಗ್ಯಕ್ಕೆ 10 ಗ್ಲಾಸ್ ನಿರು ಕುಡಿಯಬೇಕು. ಮಲಗುವ ಮುಂಚೆ ಒಂದು ಲೋಟ ನೀರು ಕುಡಿದು ಮಲಗುವುದು ಒಳ್ಳೆಯದು.
ಬೆಡ್ ಪರೀಕ್ಷಿಸಿ: ಮಲಗುವ ಬೆಡ್ ತುಂಬಾ ಶುದ್ಧವಾಗಿರಬೇಕು. ಕೊಳೆ, ಎಣ್ಣೆ ಜಿಡ್ಡು ಇವುಗಳಿದ್ದರೆ ತ್ವಚೆಯಲ್ಲಿ ತುರಿಕೆ ಉಂಟಾಗಬಹುದು. ಅದಲ್ಲದೆ ತಲೆದಿಂಬು ಮತ್ತು ಬೆಡ್ ತುಂಬಾ ಮೃದುವಾಗಿದ್ದರೆ ತ್ವಚೆಗೆ ಒಳ್ಳೆಯದು.
ಈ ಮೇಲಿನ ಅಂಶಗಳನ್ನು ಪಾಲಿಸಿದರೆ ತ್ವಚೆಯ ಹೊಳಪು ಹೆಚ್ಚುವುದು.



Click it and Unblock the Notifications
