Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ನೈಸರ್ಗಿಕ ಸುಂದರಿಯಲ್ಲ ಎಂಬ ಚಿಂತೆ ಇನ್ಯಾಕೆ?

ಸಕ್ಕರೆ ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು: ಸಕ್ಕರೆ ಅಧಿಕ ತಿಂದರೆ ಮುಖದಲ್ಲಿ ನೆರಿಗೆಗಳು ಬೇಗನೆ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಸಕ್ಕರೆ ತ್ವಚೆಯಲ್ಲಿರುವ ಕೊಲಾಜಿನ್ (collagen) ಅಂಶ ಕಮ್ಮಿ ಮಾಡಿ ಅಕಾಲಿಕ ಮುಪ್ಪು ಬರುವಂತೆ ಮಾಡುತ್ತದೆ.
ಕೂದಲಿನ ಆರೈಕೆ: ರಾತ್ರಿ ಮಲಗುವಾಗ ಕೂದಲನ್ನು ಬಾಚಿ ಸಡಿಲವಾಗಿ ಎತ್ತಿದ ಜುಟ್ಟು ಅಥವಾ ಜಡೆ ಹಾಕಿದರೆ ಕೂದಲು ಸಿಕ್ಕಾಗಿ ಹಾಳಾಗುವುದು ತಪ್ಪುತ್ತದೆ.
ಕಣ್ಣಿನ ರೆಪ್ಪೆ: ಆಕರ್ಷಕ ಕಣ್ಣಿನ ರೆಪ್ಪೆಗಳು ಮುಖದ ಸೌಂದರ್ಯ ಹೆಚ್ಚಿಸುವುದು.ಕಣ್ಣಿನ ರೆಪ್ಪೆಗೆ ಹರಳೆಣ್ಣೆಯನ್ನು ಉಜ್ಜಿದರೆ ಆಕರ್ಷಕವಾಗಿ ಬೆಳೆಯುತ್ತದೆ. ಅಲ್ಲದೆ ಮೇಕಪ್ ಮಾಡುವಾಗ ಗುಣಮಟ್ಟದ ಸಾಧನಗಳನ್ನೇ ಕಣ್ಣಿಗೆ ಬಳಸಬೇಕು.
ಕೈ ಮತ್ತು ಕಾಲುಗಳಿಗೆ ಸ್ಪಾ: ಮುಖಕ್ಕೆ ಒಳ್ಳೆಣ್ಣೆಯಿಂದ ಮಸಾಜ್ ಮಾಡುವಾಗ ರೀತಿ ಕೈ ಮತ್ತು ಕಾಲುಗಳಿಗೆ ಮಸಾಜ್ ಮಾಡಬೇಕು. ಇಲ್ಲದಿದ್ದರೆ ಕೈ, ಕಾಲುಗಳಲ್ಲಿ ಬೇಗನೆ ನೆರಿಗೆ ಉಂಟಾಗುವುದು.
ಒತ್ತಡ ಕಡಿಮೆ ಮಾಡಲು ಮಸಾಜ್ : ಅಧಿಕ ಒತ್ತಡವಿದ್ದರೆ ಅದು ಮುಖದಲ್ಲಿ ಕಾಣಿಸಿ ಮುಖದ ಆಕರ್ಷಣೆ ಕಡಿಮೆಯಾಗುವುದು. ಇದಕ್ಕೆಲ್ಲಾ ಪರಿಹಾರವನ್ನು ಮಸಾಜ್ ಮಾಡಿಸುವುದರಿಂದ ಪಡೆಯಬಹುದು.
ವಿಟಮಿನ್‌ಗಳು:ವಿಟಮಿನ್ ಸಿ ಸೂರ್ಯನ ಕಿರಣಗಳಿಂದ ತ್ವಚೆ ಬಾಡದಿರುವಂತೆ ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಇತರ ವಿಟಮಿನ್ ಇರುವ ಆಹಾರಗಳನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ದೇಹದ ಮತ್ತು ತ್ವಚೆ ಆರೋಗ್ಯ ಹೆಚ್ಚಾಗುವುದು.
ಹಣ್ಣುಗಳ ಬಳಕೆ: ಕುರುಕಲು ತಿಂಡಿಗಳ ಬದಲು ಹಣ್ಣುಗಳನ್ನು ತಿನ್ನುವ ಅಭ್ಯಾಸ ೊಳ್ಳೆಯದು. ಒಣ ಹಣ್ಣುಗಳು ಮತ್ತು ನಟ್ಸ್ ಅನ್ನು ಪ್ರತಿ ದಿನ ಸೇವಿಸಿದರೆ ತ್ವಚೆಯಲ್ಲಿ ಹೊಳಪು ಬರಲಾರಂಭಿಸುತ್ತದೆ.
ಈ ಮೇಲಿನ ವಿಧಾನಗಳನ್ನು ಪಾಲಿಸಿಕೊಂಡು ಬಂದರೆ ನೈಸರ್ಗಿಕ ತ್ವಚೆ ಕಾಂತಿ ಪಡೆಯಬಹುದು.



Click it and Unblock the Notifications
