Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ನಟಿ ಸಾಯಿ ಪಲ್ಲವಿ ನ್ಯಾಚುರಲ್ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ
ದಕ್ಷಿಣ ಭಾರತದ ಫೇಮಸ್ ನಟಿ ಮಣಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಸಾಯಿ ಪಲ್ಲವಿ ತಮ್ಮ ಬ್ಯೂಟಿ ಹಾಗೂ ನೈಜ್ಯ ನಟನೆಯಿಂದಾನೇ ಎಲ್ಲರ ಗಮನ ಸೆಳೆದಿದ್ದಾರೆ. ಹೆಚ್ಚು ಜನ ಸಾಯಿ ಪಲ್ಲವಿ ಅವರನ್ನು ಇಷ್ಟ ಪಡೋದಕ್ಕೆ ಮುಖ್ಯ ಕಾರಣ ಅವರ ಸಿಂಪ್ಲಿಸಿಟಿ. ಹಾಗೆ ನೊಡೋಕೆ ಹೋದ್ರೆ ಸಾಯಿ ಪಲ್ಲವಿ ಒರ್ವ ನಟಿ ಅಂತ ಅನ್ನಿಸೋದೇ ಇಲ್ಲ. ಯಾಕಂದ್ರೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾಣಿಸಿಕೊಳ್ತಾರೆ ಈ ನಟಿ.
"ಪ್ರೇಮಂ" ಮೂಲಕ ಸಿನಿ ಜಗತ್ತಿಗೆ ಎಂಟ್ರಿ!
ಮಲಯಾಳಂನ ಪ್ರೇಮಂ ಸಿನಿಮಾದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಬಹುದು. ಈ ಸಿನಿಮಾ ಮಲಯಾಳಂನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿತ್ತು. ಈ ಪ್ರೇಮಂ ಸಿನಿಮಾದ ಮೂಲಕ ಸಾಯಿ ಪಲ್ಲವಿಯವರು "ಮಲರ್" ಆಗಿ ಸಿನಿ ಜಗತ್ತಿಗೆ ಎಂಟ್ರಿ ಪಡೆದುಕೊಳ್ತಾರೆ.

ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರ ಅಭಿನಯ ತುಂಬಾನೇ ಚೆನ್ನಾಗಿತ್ತು. ಹಾಗೂ ಇದ್ರಿಂದ ಅವರು ಸಾಕಷ್ಟು ಹೆಸರನ್ನು ಕೂಡ ಪಡೆದುಕೊಂಡ್ರು. ಆ ನಂತರ ಸಾಯಿ ಪಲ್ಲವಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಒಂದರ ಮೇಲೊಂದರಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸೋದಕ್ಕೆ ಶುರುಮಾಡ್ತಾರೆ.
ಮೇಕಪ್ ಇಲ್ಲದೆ ಮುದ್ದಾಗಿ ಕಾಣುತ್ತಾರೆ ಸಾಯಿ ಪಲ್ಲವಿ!
ನಟಿ ಅಂದ್ರೆ ಹೀಗೆ ಇರ್ಬೇಕು ಎನ್ನುವ ಬೌಂಡರಿಯನ್ನು ಮುರಿದವರು ಸಾಯಿ ಪಲ್ಲವಿ. ಪ್ರೇಮಂ ಚಿತ್ರದಲ್ಲಿ ಯಾವುದೇ ಮೇಕಪ್ ಇಲ್ಲದೇ ತುಂಬಾನೇ ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ರು. ಇವರ ಮುದ್ದು ಮುಖ ಪ್ರೇಕಷಕರಿಗೆ ತುಂಬಾನೇ ಇಷ್ಟವಾಗಿತ್ತು. ಈಗಲೂ ಕೂಡ ಅವರು ಯಾವುದೇ ಸಿನಿಮಾಗಳಲ್ಲಿ ಹೆಚ್ಚಾಗಿ ಮೇಕಪ್ ಮಾಡಿಕೊಳ್ಳೋದೇ ಇಲ್ಲ. ಹಾಗಾದ್ರೆ ಸಾಯಿ ಪಲ್ಲವಿ ಸೌಂದರ್ಯದ ರಹಸ್ಯವೇನು? ಸೌಂದರ್ಯ ಕಾಪಾಡಿಕೊಳ್ಳಲು ಸಾಯಿ ಪಲ್ಲವಿ ಏನೆಲ್ಲಾ ಟಿಪ್ಸ್ ಫಾಲೋ ಮಾಡ್ತಾರೆ ಅನ್ನೋದನ್ನು ತಿಳಿಯೋಣ.
1. ಆರೋಗ್ಯಯುತವಾದ ಆಹಾರ ಸೇವಿಸೋದು
ಸಾಯಿ ಪಲ್ಲವಿಯವರು ಆರೋಗ್ಯಯುತವಾದ ಆಹಾರವನ್ನು ಸೇವನೆ ಮಾಡುತ್ತಾರಂತೆ. ಅನಾರೋಗ್ಯಕರ ಆಹಾರವನ್ನು ಆದಷ್ಟು ಅವೈಡ್ ಮಾಡ್ತಾರಂತೆ. ಆರೋಗ್ಯಕರ ಆಹಾರಗಳು ದೇಹದ ಒಳಗಿನಿಂದ ಅಷ್ಟೇ ಅಲ್ಲದೇ ದೇಹದ ಹೊರಗಿನಿಂದಲೂ ನಮ್ಮನ್ನು ಆರೋಗ್ಯದ ರಕ್ಷಣೆ ಮಾಡುತ್ತದೆ.
2. ದಿನನಿತ್ಯ ವ್ಯಾಯಾಮ ಮಾಡುವುದು
ನಟಿ ಸಾಯಿ ಪಲ್ಲವಿಯ ಪ್ರಕಾರ ದೇಹವನ್ನು ಫಿಟ್ ಆಗಿ ಇಡೋದಕ್ಕೆ ದಿನ ನಿತ್ಯ ವ್ಯಾಯಾಮವನ್ನು ಮಾಡಬೇಕು. ಸಾಯಿ ಪಲ್ಲವಿ ಜಿರೋ ಫಿಗರ್ ಮಾಡ್ಬೇಕು ಅನ್ನೋ ದೃಷ್ಟಿಯಿಂದ ವ್ಯಾಯಾಮ ಮಾಡೋದಿಲ್ವಂತೆ. ಬದಲಾಗಿ ದೇಹದ ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಾರಂತೆ.
3. ದೇಹವನ್ನು ಹೈಡ್ರೇಟ್ ಆಗಿ ಇಡಬೇಕು
ನೀರು ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ. ನಾವು ನೀರು ಕುಡಿದರೆ ದೇಹ ಹೈಡ್ರೇಟ್ ಆಗಿ ಇರುತ್ತದೆ. ಸಾಯಿ ಪಲ್ಲವಿ ಕೂಡ ನಿತ್ಯವು ಸಾಕಷ್ಟು ನೀರು ಕುಡಿಯುತ್ತಾರಂತೆ. ಇದರಿಂದ ದೇಹ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
4. ಸಿಂಥೆಟಿಕ್ ಪ್ರಾಡಕ್ಟ್ ಗಳನ್ನು ಬಳಕೆ ಮಾಡೋದಿಲ್ಲ
ಸಾಯಿ ಪಲ್ಲವಿಯವರು ಹೇಳುವಂತೆ ಅವರು ಯಾವುದೇ ರೀತಿಯ ಸಿಂಥೆಟಿಕ್ ಪ್ರಾಡಕ್ಟ್ ಗಳನ್ನು ಬಳಕೆ ಮಾಡೋದಿಲ್ವಂತೆ. ಸೋಪು, ಶ್ಯಾಂಪು ಏನೇ ಇದ್ದರೂ ಸಿಂಥೆಟಿಕ್ ಬಳಕೆ ಮಾಡಿದ್ದರೆ ಅವರು ಅದನ್ನು ಮುಟ್ಟೋದಿಲ್ವಂತೆ. ನೈಸರ್ಗಿಕ ವಸ್ತುಗಳನ್ನೇ ಅವರು ಬಳಕೆ ಮಾಡುತ್ತಾರಂತೆ. ಇನ್ನೂ ಸಿನಿಮಾಗಾಗಿ ಹೇರ್ ಕಲರಿಂಗ್ ಕೂಡ ಇವರು ಮಾಡೋದಿಲ್ಲ. ತಮ್ಮ ನೈಸರ್ಗಿಕ ಕೂದಲು ಇಟ್ಟುಕೊಂಡು ಅದರಲ್ಲೇ ಆಕ್ಟ್ ಮಾಡುತ್ತಾರೆ.
5. ಮೇಕಪ್ ಬಳಕೆ ಮಾಡೋದಿಲ್ಲ
ಸಾಮಾನ್ಯವಾಗಿ ಸಾಯಿ ಪಲ್ಲವಿಯವರು ಯಾವುದೇ ಮೇಕಪ್ ಪ್ರಾಡಕ್ಟ್ ಗಳನ್ನು ಬಳಕೆ ಮಾಡೋದಿಲ್ವಂತೆ. ಸಿನಿಮಾಕ್ಕೆ ತೀರ ಅಗತ್ಯ ಅನ್ನಿಸಿದಾಗ ಮಾತ್ರ ಬಳಕೆ ಮಾಡುತ್ತಾರಂತೆ. ಅದರ ಹೊರತಾಗಿ ಅವರು ತಮ್ಮ ಮುಖದ ಚರ್ಮದ ಮೇಲೆ ಹೆಚ್ಚಿನ ಒತ್ತಡ ಹಾಕೋದಿಲ್ವಂತೆ.
ಸಾಯಿ ಪಲ್ಲವಿ ದಿನನಿತ್ಯ ಎಂತಹ ಆಹಾರ ಸೇವಿಸುತ್ತಾರೆ?
ಸಾಯಿ ಫಿಟ್ ಆಗಿರಲು ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಅವರು ಖಾಲಿ ಹೊಟ್ಟೆಗೆ ಬಹಳಷ್ಟು ನೀರು ಕುಡಿಯುತ್ತಾರೆ. ಕೆಲವು ಗಂಟೆಗಳ ನಂತರ
ಬೇಯಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳಗ್ಗಿನ ಉಪಹಾರಕ್ಕಾಗಿ ಸೇವನೆ ಮಾಡುತ್ತಾರೆ. ಸಾಯಿ ಪಲ್ಲವಿ ಊಟಕ್ಕೆ ಗ್ರಿಲ್ಡ್ ಫಿಶ್ ಮತ್ತು ಬ್ರೌನ್ ಬ್ರೆಡ್ ತಿನ್ನಲು ಇಷ್ಟಪಡುತ್ತಾರೆ. ಇನ್ನೂ ರಾತ್ರಿಯ ಊಟಕ್ಕೆ ಮೀನಿನ ಸಾರು, ಚಪಾತಿ ಮತ್ತು ತರಕಾರಿಗಳನ್ನು ತಿನ್ನುತ್ತಾರಂತೆ. ಇದರ ಜೊತೆಗೆ ವ್ಯಾಯಾಮ ಕೂಡ ಮಾಡುತ್ತಾರೆ.
ಭಾರತೀಯ ಸಿನಿಮಾ ರಂಗದಲ್ಲಿ ಬಹುಶಃ ಸಾಯಿ ಪಲ್ಲವಿಯಂತಹ ನಟಿ ಬೇರ್ಯಾರು ಇಲ್ಲ ಅನ್ನಿಸುತ್ತೆ. ಇವರು ತುಂಬಾನೇ ಸಿಂಪಲ್ ಹಾಗೂ ನ್ಯಾಚುರಲ್ ಬ್ಯೂಟಿ ಅಂದ್ರೆ ತಪ್ಪಾಗೋದಿಲ್ಲ.



Click it and Unblock the Notifications
