Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲದಲ್ಲಿ ಕೂದಲು ಉದುರುವ ಸಮಸ್ಯೆ: ಈ ಸಂಗತಿಗಳು ನಿಮಗೆ ತಿಳಿದಿರಲಿ
ಕಾಲ ಬದಲಾದಂತೆ ಅದಕ್ಕೆ ತಕ್ಕಂತೆ ಕೂದಲಿನ ಆರೈಕೆ ಮಾಡಬೇಕು, ಇದೀಗ ಮಾನ್ಸೂನ್ ಪ್ರಾರಂಭ, ಮಳೆಯಲ್ಲಿ ಕೂದಲು ಒದ್ದೆಯಾಗುವುದು, ಕೂದಲು ಒಣಗದಿರುವುದು ಇವೆಲ್ಲಾ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಆದ್ದರಿಂದಲೇ ಕೂದಲು ಉದುರುವ ಸಮಸ್ಯೆ ಉಂಟಾಗುವುದು. ಆದ್ದರಿಂದ ಮಳೆಗಾಲದಲ್ಲಿ ನೀವು ಕೂದಲಿನ ಆರೈಕೆ ಈ ರೀತಿ ಮಾಡಿ:
ಬಿಸಿ ಎಣ್ಣೆಯಿಂದ ಆರೈಕೆ ಮಾಡಿ
ಎಣ್ಣೆಯನ್ನು ಬಿಸಿ ಮಾಡಿ ಹದ ಬಿಸಿ ಎಣ್ಣೆಯನ್ನು ತಲೆಗೆ ಹಚ್ಚಿ, ಇದರಿಂದ ಕೂದಲಿನ ಬುಡದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುವುದು. ವಾರಕ್ಕೆ ಎರಡು ಬಾರಿ ಬಿಸಿ ಎಣ್ಣೆಯ ಮಸಾಜ್ ಹಾಕಿ ಮೈಲ್ಡ್ ಶ್ಯಾಂಪೂವಿನಿಂದ ತಲೆ ತೊಳೆಯಿರಿ.

ಕಂಡೀಷಿನಿಂಗ್
ಒಳ್ಳೆಯ ಕಂಡೀಷನರ್ ಬಳಸಬೇಕು. ಇದರಿಂದ ಕೂದಲಿನಲ್ಲಿ ಮಾಯಿಶ್ಚರೈಸರ್ ಕಾಪಾಡಲು ಸಹಕಾರಿ. ಇದರಿಂದಾಗಿ ಕೂದಲು ಕವಲೊಡೆಯುವುದು, ಕೂದಲು ಗಂಟಾಗುವುದು, ಕೂದಲು ಡ್ರೈಯಾಗುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ. ಆದ್ದರಿಂದ ಸರಿಯಾದ ಕಂಡೀಷನರ್ ಬಳಸುವುದು ತುಂಬಾನೇ ಅವಶ್ಯಕ. ಕಂಡೀಷನರ್ ಬಳಸುವುದರಿಂದ ತಲೆಬುಡ ಒಣಗುವುದು ತಡೆಗಟ್ಟಲು ಸಹಕಾರಿ. ಇದರಿಂದ ತಲೆಹೊಟ್ಟು ಬರುವುದು, ತಲೆ ಕೂದಲು ಡ್ರೈಯಾಗುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ಆರೋಗ್ಯಕರ ಆಹಾರಕ್ರಮ ಪಾಲಿಸಿ
ಆರೋಗ್ಯಕರ ಡಯಟ್ ಕೂದಲಿನ ಆರೋಗ್ಯ ಕಾಪಾಡಲು ಅವಶ್ಯಕ. ಮೊಟ್ಟೆಯ ಬಿಳಿ, ತೆಳು ಮಾಂಸ, ಧಾನ್ಯಗಳು, ಮೊಳಕೆ ಬರಿಸಿದ ಕಾಳುಗಳು ಇವೆಲ್ಲಾ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಳೆಗಾಲದಲ್ಲೂ 8-12 ಲೋಟ ನೀರು ಕುಡಿಯಿರಿ. ವಿಟಮಿನ್ 12, ಸತು, ಕಬ್ಬಿಣದಂಶ ಇರುವ ಆಹಾರ ಸೇವಿಸಿ. ವಿಟಮಿನ್ ಬಿ12, ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಸಹಕಾರಿ.
ಮಳೆಗಾಲದಲ್ಲಿ ಕೂದಲು ಉದುರುವುದು ತಡೆಗಟ್ಟಲು ಟಿಪ್ಸ್
- ದಪ್ಪ ಹಲ್ಲಿನ ಬ್ರೆಷ್ ಬಳಸಿ
- ಕೂದಲಿನ ಬುಡಕ್ಕೆ ತಲೆಹೊಟ್ಟು ಆಗದಂತೆ ಜಾಗ್ರತೆವಹಿಸಿ.
- ತುಂಬಾ ರಾಸಾಯನಿಕವಿರುವ ಶ್ಯಾಂಪೂ ಬಳಸಬೇಡಿ.
- ಮಳೆಗಾಲದಲ್ಲಿ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ.
- ಕೂದಲು ಸಂಪೂರ್ಣ ಒಣಗುವವರೆಗೆಕಟ್ಟಬೇಡಿ.
- ಬೇರೆಯರ ಬಾಚಣಿಕೆ ಬಳಸಬೇಡಿ
- ಒದ್ದೆ ಕೂದಲನ್ನು ಬಾಚಬೇಡಿ
- ಸರಿಯಾದ ಸಮಯಕ್ಕೆ ನಿದ್ದೆ ಮಾಡಿ.
ಈ ಮನೆಮದ್ದುಗಳು ಕೂಡ ಕೂದಲು ಉದುರುವುದನ್ನು ತಡೆಗಟ್ಟಲು ಸಹಕಾರಿ:
ಲೋಳೆಸರ: ನೀವು ಮನೆಯಲ್ಲಿ ಲೋಳೆಸರವಿದ್ದರೆ ಅದನ್ನು ತಲೆ ಕೂದಲಿಗೆ ಹಚ್ಚಿ. ಸ್ನಾನಕ್ಕೆ ಎರಡು ಗಂಟೆಗೆ ಮುಂಚೆಗೆ ಕೂದಲಿಗೆ ಲೋಳೆಸರ ಹಚ್ಚಿ, ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ.
ನಿಂಬೆರಸ
ತಲೆಹೊಟ್ಟಿನ ಸಮಸ್ಯೆಯಿದ್ದರೆ ಇದು ತುಂಬಾ ಪರಿಣಾಮಕಾರಿ ಮನೆಮದ್ದು. ಮೊಸರಿಗೆ ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಅದನ್ನು ತಲೆ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು.
ಈರುಳ್ಳಿ ರಸ
ಈರುಳ್ಳಿ ರಸ ಕೂಡ ಕೂದಲಿನ ಆರೊಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಕೂದಲಿಗೆ ಅತ್ಯುತ್ತಮವಾದ ಕಂಡೀಷನರ್ ಕೂಡ ಹೌದು. ನೀವು ಕೂದಲಿನ ಬುಡ ಬಲವಾಗಿಸಲು ಕೂಡ ಇದು ಸಹಕಾರಿ. ಈರುಳ್ಳಿ ರಸ ಬಳಸುವುದರಿಂದ ಕೂದಲು ಮಂದವಾಗುವುದು. ಅಲ್ಲದೆ ಕೂದಲು ಉದುರುವುದನ್ನು ತಡೆಗಟ್ಟಲು ಈರುಳ್ಳಿ ರಸ ತುಂಬಾನೇ ಸಹಕಾರಿ.
ಮೊಟ್ಟೆ
ಮೊಟ್ಟೆಯ ಬಿಳಿ ಕೂಡ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೂದಲಿನ ಬಿಳಿ ಕೂದಲಿಗೆ ಹಚ್ಚುವುದರಿಂದ ಕೂದಲು ಮಂದವಾಗುವುದು, ಕೂದಲಿನ ಹೊಳಪು ಹೆಚ್ಚುವುದು, ಕೂದಲು ಆಕರ್ಷಕವಾಗಿ ಕಾಣುವುದು.



Click it and Unblock the Notifications










