Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರೆಡ್ ಲಿಪ್‌ಸ್ಟಿಕ್ ಹಚ್ಚುವವರು ಪಾಲಿಸಲೇಬೇಕಾದ ನಿಯಮಗಳು
ಹೆಣ್ಣಿಗೆ ಅಲಂಕಾರವೇ ಅಂದವನ್ನು ದ್ವಿಗುಣಗೊಳಿಸುವುದು. ಕಣ್ಣಿಗೆ ಹಾಡುವ ಕಾಡಿಗೆಯಿಂದ ಹಿಡಿದು ತುಟಿಗೆ ಹಚ್ಚುವ ಲಿಪ್‌ಸ್ಟಿಕ್ ಕೂಡ ಅಲಂಕಾರದಲ್ಲಿ ಪ್ರಧಾನವಾಗಿರುತ್ತದೆ.
ಹಾಗಿದ್ದರೆ ಈ ಅಲಂಕಾರಗಳನ್ನು ನೀವು ಮಾಡಿಕೊಳ್ಳುವ ಮೊದಲು ಕೆಲವೊಂದು ಸಲಹೆಗಳನ್ನು ನಿಮಗಾಗಿ ನಾವು ನೀಡಿದರೆ ನಿಮ್ಮ ಅಂದವನ್ನೂ ಚೆಂದವನ್ನೂ ಅದು ಇನ್ನಷ್ಟು ಹೆಚ್ಚಿಸುವುದು ಖಂಡಿತ ಅಲ್ಲವೇ? ಆದ್ದರಿಂದ ಈ ಲೇಖನದಲ್ಲಿ ನಿಮ್ಮ ತುಟಿಯ ರಂಗಿನ ಬಗ್ಗೆ ಕೆಲವೊಂದು ಸಲಹೆಗಳನ್ನು ಪಡೆಯೋಣ.

ಕಣ್ಣಿಗೆ 10 ಬಗೆಯಾಗಿ ಕಾಜಲ್ ಹಚ್ಚುವ ವಿಧಾನ:
ನೀವು ಕೆಂಪು ಬಣ್ಣವನ್ನು ತುಟಿಗೆ ಹಚ್ಚುವವರಾಗಿದ್ದರೆ ನೀವು ಅನುಸರಿಸಬೇಕಾದ ಕೆಲವೊಂದು ಸಲಹೆಗಳಿವೆ. ಈ ಸಲಹೆಗಳನ್ನು ನೀವು ಪಾಲಿಸುವುದರಿಂದ ನಿಮ್ಮ ತುಟಿಯ ರಂಗಿನ ಶೋಭೆ ಹೆಚ್ಚುತ್ತದೆ. ಮತ್ತು ನೀವು ಹತ್ತು ಜನರ ಎದುರು ಎದ್ದು ಕಾಣುತ್ತೀರಿ.
ಎಣ್ಣೆಯುಕ್ತ ತ್ವಚೆಗೆ ಇಲ್ಲಿದೆ 10 ಬೇಸಿಗೆ ಮೇಕಪ್‌ಗಳು
ಗಾಢ ಫೌಂಡೇಶನ್ ಅಗತ್ಯ:
ನೀವು ಕೆಂಪು ಲಿಪ್‌ಸ್ಟಿಕ್ ಅನ್ನು ಹಚ್ಚಬೇಕೆಂದಲ್ಲಿ ನಿಮ್ಮ ಮುಖಕ್ಕೆ ತೆಳುವಾದ ಮೇಕಪ್ ಅನ್ನು ಮಾಡಿಕೊಳ್ಳದಿರಿ. ಮುಖಕ್ಕೆ ಗಾಢವಾದ ಮೇಕಪ್ ಅನ್ನು ಮಾಡಿ. ಇದರಿಂದ ನಿಮ್ಮ ಲಿಪ್‌ಸ್ಟಿಕ್ ಮತ್ತು ಫೌಂಡೇಶನ್ ಸರಿಸಮವಾಗಿರುತ್ತದೆ.
ಮ್ಯಾಚಿಂಗ್ ಬಣ್ಣ ಇರಲಿ:
ನೀವು ಕೆಂಪು ಬಣ್ಣವನ್ನು ತುಟಿಗೆ ಹಚ್ಚಿದ್ದು ತುಸು ಹೆಚ್ಚಾಯಿತು ಎಂದು ನಿಮಗೆ ಅನಿಸಿದಲ್ಲಿ ಅದನ್ನು ಮ್ಯಾಚಿಂಗ್ ಬಣ್ಣಗಳೊಂದಿಗೆ ಮಿಶ್ರ ಮಾಡಿಕೊಳ್ಳಿ.
ಸಮಾರಂಭಕ್ಕಾಗಿ ಮಾತ್ರ:
ನೀವು ಸಮಾರಂಭಕ್ಕೆ ಹೋಗುವಾಗ ಮಾತ್ರ ರೆಡ್ ಲಿಪ್‌ಸ್ಟಿಕ್ ಅನ್ನು ಆಯ್ದುಕೊಳ್ಳಿ. ಕಚೇರಿಗೆ ಹೋಗುವಾಗ ಈ ಬಣ್ಣದ ಲಿಪ್‌ಸ್ಟಿಕ್ ಅನ್ನು ಹಚ್ಚಿಕೊಳ್ಳದಿರಿ.
ನೈಸರ್ಗಿಕವಾಗಿ ಮೇಕಪ್ ಬ್ರಶ್‌ಗಳನ್ನು ಸ್ವಚ್ಛಗೊಳಿಸಿ
ಲೇಯರ್ ಬೇಡ:
ಆದಷ್ಟು ರೆಡ್ ಲಿಪ್‌ಸ್ಟಿಕ್ ಅನ್ನು ತುಟಿಗೆ ಹಚ್ಚಿಕೊಳ್ಳುವಾಗ ಲೇಯರ್ ಬರದಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಮುಖಕ್ಕೆ ಲಿಪ್‌ಸ್ಟಿಕ್ ಗಾಢವಾಗಿ ತೋರಬಹುದು.
ತೆಳು ತುಟಿ:
ಕೆಂಪು ಲಿಪ್‌ಸ್ಟಿಕ್ ಅನ್ನು ನೀವು ಹಚ್ಚಿಕೊಳ್ಳುವಾಗ ನೀವು ಪಾಲಿಸಲೇಬೇಕಾದ ಸಲಹೆಯೆಂದರೆ ನಿಮ್ಮದು ದಪ್ಪ ಅಥವಾ ತೆಳು ತುಟಿಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀವು ತೆಳು ತುಟಿಯವರಾಗಿದ್ದಲ್ಲಿ ನಿಮಗೆ ಕೆಂಪು ಲಿಪ್‌ಸ್ಟಿಕ್ ಬೇಡ. ದಪ್ಪ ತುಟಿಯವರಿಗೆ ಮಾತ್ರವೇ ಈ ಬಣ್ಣ ಸರಿಹೊಂದುತ್ತದೆ.



Click it and Unblock the Notifications
