Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸವ್ಯಸಾಚಿ ಅನಾರ್ಕಲಿ ಗೌನ್‌ನಲ್ಲಿ ಐಶ್ವರ್ಯಾ ಮೋಡಿ!
ಐಶ್ವರ್ಯಾ ರೈಗೂ ಅನಾರ್ಕಲಿ ಗೌನ್‌ಗೂ ಹತ್ತಿರದ ನಂಟು ಎಂದೇ ಹೇಳಬಹುದು. ಆರಾಧ್ಯನ ತಾಯಿಯಾದ ನಂತರ ಐಶ್ವರ್ಯಾ ದಪ್ಪಗಾದರು. ನಂತರ ತಮ್ಮ ಧಿರಿಸನ್ನು ಅನಾರ್ಕಲಿ ಗೌನ್‌ಗೆ ಮೀಸಲಾಗಿರಿಸಿದ್ದಾರೆ. ತಮ್ಮ ಪ್ರಥಮ ಆಭರಣ ಕ್ಯಾಂಪೈನ್ ಆದ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಹಲವಾರು ಕಾರ್ಯಕ್ರಮಗಳಲ್ಲಿ ಐಶ್ವರ್ಯಾ ಅನಾರ್ಕಲಿ ಧಿರಿಸಿನಲ್ಲಿ ಗಮನ ಸೆಳೆದಿದ್ದರು.
ಈಗ ಮತ್ತೊಮ್ಮೆ ಐಶ್ವರ್ಯಾರನ್ನು ಅನಾರ್ಕಲಿ ಗೌನ್‌ನಲ್ಲಿ ನೋಡುವ ಭಾಗ್ಯ ನಮ್ಮದು. ಸವ್ಯಸಾಚಿ ವಿನ್ಯಾಸದ ಗೌನ್‌ನಲ್ಲಿ ಐಶ್ವರ್ಯಾ ದಂಗುಬಡಿಸುವಂತೆ ಕಂಡುಬಂದಿದ್ದರು.
ಪ್ರತಿಯೊಂದು ಧಿರಿಸು ಐಶ್ವರ್ಯಾಗೆ ಹೇಳಿ ಮಾಡಿಸಿದಂತಿರುತ್ತದೆ. ಈ ಬಾರಿ ಕಪ್ಪು ಬಣ್ಣದ ಅನಾರ್ಕಲಿಯಲ್ಲಿ ನಮ್ಮನ್ನು ಮನಸೋಲುವಂತೆ ಮಾಡಿದ ಐಶ್ವರ್ಯಾ ಸರಳ ಸುಂದರಿಯಾಗಿದ್ದರು. ಕಲ್ಯಾಣ್ ಜ್ಯುವೆಲ್ಲರ್ಸ್‌ನ ದೆಹಲಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಐಶ್ ಜರಾವೋ ನೆಕ್‌ಲೇಸ್ ಹಾಗೂ ಸರಳ ಮೇಕಪ್‌ನಲ್ಲಿ ಚೇತೋಹಾರಿಯಾಗಿದ್ದರು.
ಕಪ್ಪು ಬಣ್ಣದಲ್ಲಿ ಗೋಲ್ಡನ್ ಎಂಬ್ರಾಯಿಡರಿಯಿಂದ ಮೇಳೈಸಿದ್ದಂತಿದ್ದ ಗೌನ್ ಐಶ್ವರ್ಯಾರ ಹಾಲಕೆನ್ನೆ ಬಣ್ಣಕ್ಕೆ ಚೆನ್ನಾಗಿ ಒಪ್ಪುತ್ತಿತ್ತು. ಬನ್ನಿ, ಕಲ್ಯಾಣ್ ಜ್ಯುವೆಲ್ಲರ್ಸ್‌ನ್ನು ದೆಹಲಿಯಲ್ಲಿ ಐಶ್ ಉದ್ಘಾಟಿಸಿದ ಕಣ್ಮನ ಸೆಳೆಯುವ ಕ್ಲಿಕ್‌ಗಳು ನಿಮಗಾಗಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಪ್ಪು ಧಿರಿಸಿನಲ್ಲಿ ಕಣ್ಮನ ಸೆಳೆದ ಸುಂದರಿ ಐಶ್ವರ್ಯ

ಸಬ್ಯಸಾಚಿ ಧಿರಿಸಿನಲ್ಲಿ ಐಶ್:
ದೆಹಲಿಯಲ್ಲಿ ನೂತನವಾಗಿ ಆರಂಭಗೊಂಡ ಕಲ್ಯಾಣ್ ಜ್ಯುವೆಲ್ಲರ್ಸ್ ಅನ್ನು ಉದ್ಘಾಟಿಸಿದ ಐಶ್ ಸಬ್ಯಸಾಚಿ ವಿನ್ಯಾಸದ ಅನಾರ್ಕಲಿ ಗೌನ್ ಅನ್ನು ಧರಿಸಿದ್ದರು.

ಅನಾರ್ಕಲಿ ಗೌನ್‌ನಲ್ಲಿ ಐಶ್:
ಪ್ರತಿಯೊಂದು ಕಾರ್ಯಕ್ರಮದಲ್ಲೂ ಐಶ್ ಅನಾರ್ಕಲಿಯನ್ನು ಆಯ್ಕೆ ಮಾಡುತ್ತಿದ್ದು ಮಗಳು ಆರಾಧ್ಯರನ್ನು ಪ್ರಸವಿಸಿದ ನಂತರ ಅನಾರ್ಕಲಿ ಔಟ್‌ಫಿಟ್‌ಗೆ ಐಶ್ ತುಸು ಜಾಸ್ತಿ ಗಮನ ನೀಡುತ್ತಿದ್ದಾರೆ.

ಗೋಲ್ಡ್ ಮತ್ತು ಕಪ್ಪು ಬಣ್ಣದ ಮಿಶ್ರಣ:
ಐಶ್ವರ್ಯಾ ಗೌನ್ ಕಪ್ಪು ಸ್ಲೀವ್‌ನೊಂದಿಗೆ ಗೋಲ್ಡನ್ ಎಂಬ್ರಾಯಿಡರಿಯನ್ನು ಹೊಂದಿದೆ.

ಸಿಂಹದ ಮಾದರಿ:
ಗೌನ್ ಸ್ಲೀವ್‌ಗಳಲ್ಲಿ ಸಿಂಹದ ಮಾದರಿಯನ್ನು ಹೊಂದಿದ್ದು ಚಿನ್ನದ ಬಣ್ಣದಲ್ಲಿ ಕಂಗೊಳಿಸಿದೆ.

ಜರಾವೋ ಆಭರಣ:
ಭಾರೀ ಜರಾವೋ ಆಭರಣದಲ್ಲಿ ಹೆಚ್ಚಾಗಿ ಕಂಡುಬರುವ ಐಶ್ ಹೆಚ್ಚಾಗಿ ಇದನ್ನೇ ಧರಿಸುತ್ತಾರೆ. ಇದು ನಮ್ಮನ್ನು ಬೋರಿಂಗ್ ಮಾಡಿದ್ದಂತೂ ನಿಜ.

ಕೇಶ ವಿನ್ಯಾಸ:
ಬೌನ್ಸಿ ತೆರೆದ ಕೂದಲಿನೊಂದಿಗೆ ಐಶ್ ಕಾರ್ಯಕ್ರಮಕ್ಕೆ ಆಗಮಸಿದ್ದಾರೆ. ಈ ಬಗೆಯ ಕೇಶವಿನ್ಯಾಸ ಟ್ರೆಂಡ್ ಆಗುತ್ತಿದೆ.

ಕಲ್ಯಾಣ್ ಜ್ಯುವೆಲ್ಲರ್ಸ್ ಆರಂಭ:
ಕಲ್ಯಾಣ್ ಜ್ಯುವೆಲ್ಲರ್ಸ್‌ನ ಬ್ರಾಂಡ್ ರಾಯಭಾರಿಯಾಗಿರುವ ಐಶ್ವರ್ಯಾ ದೆಹಲಿಯಲ್ಲಿ ಈ ವಾರ ಚಿನ್ನದ ಅಂಗಡಿಗಳ ಮೂರು ಅಂಗಡಿಗಳನ್ನು ಉದ್ಘಾಟಿಸಿದ್ದಾರೆ.

ಬಿಳಿ ಸಬ್ಯಸಾಚಿ ಗೌನ್:
ಇತ್ತೀಚೆಗೆ ಸ್ಟೆಮ್ ಸೆಲ್ಸ್‌ಗಳ ಜಾಹೀರಾತಿನಲ್ಲಿ ಐಶ್ವರ್ಯಾ ಬಿಳಿ ಬಣ್ಣದ ಸಬ್ಯಸಾಚಿ ಗೌನ್‌ನಲ್ಲಿ ಕಾಣಿಸಿಕೊಂಡಿದ್ದರು.

ಕಪ್ಪು ಸಬ್ಯಸಾಚಿ:
ಇದೇ ರೀತಿಯ ಹಲವಾರು ಗೌನ್‌ನಲ್ಲಿ ಐಶ್ ನಮಗೆ ಕಂಡುಬಂದಿದ್ದಾರೆ. ಈ ಕಪ್ಪು ಮತ್ತು ಕೆಂಪು ಬಣ್ಣದ ಸಬ್ಯಸಾಚಿ ಗೌನ್ ಅನ್ನು ಐಶ್ ಕಳೆದ ಬಾರಿ ಕೆಲವೊಮ್ಮೆ ಧರಿಸಿದ್ದಾರೆ.



Click it and Unblock the Notifications
