Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಪ್ರಯಾಣ ಮಾಡುವಾಗ ಪಾಲಿಸಬೇಕಾದ ಮೇಕಪ್ ಟಿಪ್ಸ್
ದೂರ ಪ್ರಯಣ ಮಾಡುವಾಗ ಆ ಸಂಭ್ರಮದಲ್ಲಿ ಗಾಢವಾಗಿ ಮೇಕಪ್ ಮಾಡಿ ಹೊರಡುವವರನ್ನು ನೋಡಿದ್ದೇನೆ. ಪ್ರಯಾಣ ಮಾಡುವಾಗ ಯಾವ ಆಹಾರವನ್ನು ತಿನ್ನಬೇಕು, ಯಾವ ವಸ್ತುಗಳನ್ನು ಜೊತೆಯಲ್ಲಿ ಕೊಂಡೊಯ್ಯಬೇಕು ಎಂದು ಯೋಚಿಸುತ್ತೇವೆ. ಆದರೆ ತ್ವಚೆ ರಕ್ಷಣೆಯ ಬಗ್ಗೆ ಗಮನ ಕೊಡುವುದೇ ಇಲ್ಲ.
ದೂರದ ಪ್ರಯಾಣ ಮಾಡುವಾಗ ಗಾಢ ಮೇಕಪ್ ಬಳಸಬಾರದು. ಇಲ್ಲಿ ನಾವು ಕೆಲವೊಂದು ಟಿಪ್ಸ್ ನೀಡಿದ್ದೇವೆ. ಈ ಟಿಪ್ಸ್ ಅನ್ನು ದಿನಾ ಪ್ರಯಾಣ ಮಾಡುವವರು ಹಾಗೂ ದೂರ ಪ್ರಯಾಣ ಮಾಡುವವರು ಪಾಲಿಸಿದರೆ ತ್ವಚೆ ರಕ್ಷಣೆ ಮಾಡಬಹುದು:

ಮುಖ ತೊಳೆಯಿರಿ
ದೂರ ಪ್ರಯಾಣ ಮಾಡುವವರು ಸಾಧ್ಯವಾದರೆ 2-3 ಸಲ ಮುಖ ತೊಳೆಯಬೇಕು. ಇದರಿಂದ ಮುಖದಲ್ಲಿ ದೂಳು ನಿಲ್ಲದಂತೆ ನೋಡಿಕೊಳ್ಳಬಹುದು. ದೂಳು ತ್ವಚೆ ಸಮಸ್ಯೆಗೆ ಪ್ರಮುಖಕಾರಣವಾಗಿದೆ.

ಮಾಯಿಶ್ಚರೈಸರ್
ಪ್ರಯಾಣ ಮಾಡುವಾಗ ತ್ವಚೆಯನ್ನು ಮಾಯಿಶ್ಚರೈಸರ್ ಆಗಿ ಇಟ್ಟುಕೊಳ್ಳಿ. ತುಂಬಾ ದೂರ ಪ್ರಯಾಣ ಮಾಡಿದಾಗ ಮುಖ ಡ್ರೈಯಾಗುವುದು, ನಂತರ ಮುಖದಲ್ಲಿ ಹೊಳಪು ಬರಲು ಸ್ವಲ್ಪ ದಿನ ತೆಗೆದುಕೊಳ್ಳುತ್ತದೆ. ಅದೇ ಮುಖದಲ್ಲಿ ತೇವಾಂಶ ಕಾಪಾಡಿದರೆ ಮುಖದ ಹೊಳಪು ಕಡಿಮೆಯಾಗುವುದಿಲ್ಲ.

ಪೌಂಡೇಷನ್ ಹಚ್ಚಬೇಡಿ
ಪೌಂಡೇಷನ್ ಹಚ್ಚಿದರೆ ತ್ವಚೆ ಒಣಗುವುದು. ಯಾವುದಾದರೂ ಫಂಕ್ಷನ್ ಗೆ ಹೋಗುವುದಾದರೆ ಪೌಂಡೇಷನ್ ಹಚ್ಚುತ್ತೇವೆ, ಆಗ ಮೊದಲು ಟ್ರಿಮ್ಮರ್ ಹಚ್ಚಿ ನಂತರ ಪೌಂಡೇಷನ್ ಹಚ್ಚಿ.

ಲಿಪ್ ಸ್ಟಿಕ್ ಹಚ್ಚಬೇಡಿ
ಪ್ರಯಾಣ ಮಾಡುವಾಗ ಲಿಪ್ ಸ್ಟಿಕ್ ಹಚ್ಚಬೇಡಿ, ತುಟಿ ಆಕರ್ಷಕವಾಗಿ ಕಾಣಲು ಲಿಪ್ ಗ್ಲೋಸ್ ಹಚ್ಚಿ. ಲಿಪ್ ಸ್ಟಿಕ್ ಅನ್ನು ಪ್ರಯಾಣ ಮಾಡುವಾಗ ಹಚ್ಚಿದರೆ ತುಟಿಯ ತ್ವಚೆಗೆ ಹಾನಿಯುಂಟಾಗುತ್ತದೆ.

ನಿದ್ದೆ ಮಾಡಿ
ದೂರದ ಪ್ರಯಾಣ ಮಾಡುವಾಗ ಬುಕ್ ಓದುವುದು, ಲ್ಯಾಪ್ ಟಾಪ್ ನೋಡುವುದು ಮಾಡಬೇಡಿ. ಸುಖವಾಗಿ ನಿದ್ದೆ ಮಾಡಿ. ಇದರಿಂದ ತುಂಬಾ ಆಯಾಸ ಉಂಟಾಗುವುದಿಲ್ಲ.

ಕಣ್ಣಿಗೆ ತುಂಬಾ ಮೇಕಪ್
ಕಣ್ಣಿಗೆ ತುಂಬಾ ಮೇಕಪ್ ಮಾಡಬೇಡಿ. ವಾಟರ್ ಪ್ರೂಫ್ ಐ ಲೈನರ್ ಹಚ್ಚಿ. ಪ್ರಯಾಣ ಮಾಡುವಾಗ ತುಂಬಾ ಮೇಕಪ್ ಮಾಡಿದರೆ ಮುಖಕ್ಕೆ ಹರಡಬಹುದು. ವೆಟ್ ಟಿಶ್ಯೂ ಇಟ್ಟುಕೊಂಡು ಕಣ್ಣಿನ ಸುತ್ತ ಉಜ್ಜಿ.

ಮುಖವನ್ನು ಮುಟ್ಟಬೇಡಿ
ಪ್ರಯಾಣ ಮಾಡುವಾಗ ಮುಖವನ್ನು ಮುಟ್ಟುವುದಾದರೆ ಕೈಗಳನ್ನು ತೊಳೆದು ಮುಟ್ಟಿ. ಕೈನಲ್ಲಿರುವ ದೂಳು ಮುಖಕ್ಕೆ ತಾಗುತ್ತದೆ.



Click it and Unblock the Notifications
