Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಲಿಪ್ ಸ್ಟಿಕ್ ಯಾವ ರೀತಿ ಹಚ್ಚಿದರೆ ಚೆನ್ನ!

1. ವಾರದಲ್ಲಿ ಎರಡು ಬಾರಿ ಒಂದು ಚಮಚ ಎಣ್ಣೆಗೆ ಸ್ವಲ್ಪ ಸಕ್ಕರೆ ಮತ್ತು ಉಪ್ಪು ಹಾಕಿ ಸ್ಕ್ರಬ್ ಮಾಡಬೇಕು. ನಂತರ ವ್ಯಾಸೆಲೈನ್ (Vaseline) ಹಚ್ಚಿ ನಂತ ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು.
2. ಲಿಪ್ ಸ್ಟಿಕ್ ಹಚ್ಚುವ ಮುನ್ನ ತುಟಿಗೆ ಲಿಪ್ ಲೈನರ್ ನಿಂದ ಗೆರೆ ಎಳೆಯಬೇಕು. ಗೆರೆ ತುಟಿಯಿಂದ ಹೊರಗೆ ಬರದಂತೆ ಎಳೆಯಬೇಕು.
3. ಈಗ ಲಿಪ್ ಸ್ಟಿಕ್ ತೆಗೆದುಕೊಂಡು ತುಟಿಯ ಲಿಪ್ ಲೈನರ್ ನಿಂದ ಎಳೆದ ಗೆರೆಯನ್ನು ದಾಟದಂತೆ ಲಿಪ್ ಸ್ಟಿಕ್ ಹಚ್ಚಿ, ನಂತರ ಚಿಕ್ಕ ಬ್ರಷ್ ಅನ್ನು ತುಟಿ ಮೇಲೆ ಸವರಿ ಅಥವಾ ತುಟಿಯಿಂದಲೆ ಲಿಪ್ ಸ್ಟಿಕ್ ಸರಿಯಾದ ರೀತಿಯಲ್ಲಿ ಹರಡುವಂತೆ ಮಾಡಿಕೊಳ್ಳಿ. ನಂತರ ಟಿಶ್ಯೂ ಪೇಪರ್ ನಿಂದ ತುಟಿಯ ಹೊರಭಾಗವನನ್ನು ಉಜ್ಜಬೇಕು.
4. ನಂತರ ಲಿಪ್ ಸ್ಟಿಕ್ ಮೇಲೆ ಲಿಪ್ ಗ್ಲೋಸ್ ಸವರಬೇಕು. ಈ ರೀತಿ ಮಾಡಿದರೆ ತುಟಿ ಆಕರ್ಷಕವಾಗಿ ಕಾಣುತ್ತದೆ.
ಲಿಪ್ ಸ್ಟಿಕ್ ಹಚ್ಚುವಾಗ ಈ ಕೆಳಗಿನ ಅಂಶ ಗಮನದಲ್ಲಿದ್ದರೆ ಒಳ್ಳೆಯದು.
1. ತುಟಿಗೆ ಹೊಂದುವ ಬಣ್ಣ: ನಿಮ್ಮ ಮುಖಕ್ಕೆ ಯಾವ ಬಣ್ಣದ ಲಿಪ್ ಸ್ಟಿಕ್ ಅಥವಾ ಲಿಪ್ ಶೇಡ್ ಹೊಂದುತ್ತದೆ ಎಂದು ತಿಳಿದುಕೊಳ್ಳಿ. ಉದಾಹರಣೆಗೆ ಬಿಳಿ ಬಣ್ಣದವರಿಗೆ ತೆಳು ಪಿಂಕ್ ಬಣ್ಣದ ಲಿಪ್ ಸ್ಟಿಕ್ ಆಕರ್ಷಕವಾಗಿ ಕಾಣುತ್ತದೆ. ತುಂಬಾ ಬೆಳ್ಳಗ್ಗೆ ಇರುವವರಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಆಕರ್ಷಕವಾಗಿ ಕಾಣುತ್ತದೆ. ಎಣ್ಣೆಗೆಂಪು ಬಣ್ಣದವರಿಗೆ ತೆಳು ಕಂದು ಬಣ್ಣದ ಲಿಪ್ ಸ್ಟಿಕ್ ಅಥವಾ ಲಿಪ್ ಶೇಡ್ ಹಚ್ಚಿದರೆ ಚೆಂದ ಕಾಣುವುದು.
2. ಲಿಪ್ ಲೈನರ್ ಹೇಗಿರಬೇಕು: ಲಿಪ್ ಸ್ಟಿಕ್ ಬಣ್ಣಕ್ಕಿಂತ ಲಿಪ್ ಲೈನರ್ ಬಣ್ಣ ಗಾಢವಾಗಿ ಇರಬೇಕು. ಅಂದರೆ ಮಾತ್ರ ಆಕರ್ಷಕವಾಗಿ ಕಾಣಲು ಸಾಧ್ಯ. ತುಂಬಾ ಚಿಕ್ಕ ತುಟಿ ಇರುವವರಿಗೆ ಲಿಪ್ ಲೈನರ್ ಹಚ್ಚಿದರೆ ತುಟಿಯ ಆಕಾರ ಸರಿಯಾದ ರೀತಿಯಲ್ಲಿರುವಂತೆ ಗೋಚರಿಸುವುದು. ದಪ್ಪ ತುಟಿ ಇರುವವರು ಲಿಪ್ ಲೈನರ್ ನಿಂದ ತುಂಬಾ ತೆಳುಚಾದ ಗೆರೆ ಎಳೆದು ನಂತರ ಲಿಪ್ ಸ್ಟಿಕ್ ಹಚ್ಚಬೇಕು.



Click it and Unblock the Notifications
