Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೌಂದರ್ಯ ಹಾಳು ಮಾಡುವ 5 ಮೇಕಪ್ ಮಿಸ್ಟೇಕ್ !
ವಯಸ್ಸಾದಂತೆ ತ್ವಚೆ ಸಡಿಲವಾಗಿ ನೆರಿಗೆಗಳು ಬೀಳುವುದು ನೈಸರ್ಗಿಕವಾದ ನಿಯಮ. ಆದರೆ ತ್ವಚೆ ಆರೈಕೆ ಸರಿಯಾಗಿ ಮಾಡದಿದ್ದರೆ ಅಥವಾ ಮೇಕಪ್ ಸರಿಯಾಗಿ ಹಚ್ಚಲು ಬರದಿದ್ದರೆ ಅವುಗಳು ಮುಖದಲ್ಲಿ ಅಕಾಲಿಕ ನೆರಿಗೆಯನ್ನು ಮೂಡಿಸುತ್ತದೆ.
ಮೇಕಪ್ ಮುಖದ ಅಂದವನ್ನು ಹೆಚ್ಚಿಸುತ್ತದೆ. ಅದೇ ಮೇಕಪ್ ನಲ್ಲಿ ವ್ಯತ್ಯಾಸವಾದರೆ ಮುಖದ ಅಂದವನ್ನು ಕೆಡಿಸಿ ಬಿಡುತ್ತದೆ. ಆದ್ದರಿಂದ ಮೇಕಪ್ ಮಾಡುವಾಗ ಎಚ್ಚರಿಕವಹಿಸಬೇಕು. ಕ್ರೀಮ್ ಹಚ್ಚುವ ವಿಧಾನ ಗೊತ್ತಿರಬೇಕು. ಕ್ರೀಮ್ ಹಚ್ಚುವಾಗ ವೃತ್ತಾಕಾರವಾಗಿ ಉಜ್ಜಬೇಕು. ಯಾವ ಬಣ್ಣದ ಲಿಪ್ ಸ್ಟಿಕ್ ನಮ್ಮ ಮೈ ಬಣ್ಣಕ್ಕೆ ಸೂಕ್ತ ಎಂದು ಗೊತ್ತಿರಬೇಕು.
ಮೇಕಪ್ ಮಾಡುವಾಗ ಈ ಕೆಳಗಿನ ತಪ್ಪುಗಳನ್ನು ಮಾಡಿದರೆ ಬೇಗನೆ ಮುಪ್ಪಾಗುವಿರಿ. ಅಂದ ಹೆಚ್ಚಿಸಲು ಮಾಡುವ ಮೇಕಪ್ ಮುಂದೆ ನಿಮ್ಮ ಸೌಂದರ್ಯಕ್ಕೆ ಕುತ್ತಾಗದಿರಲಿ:

ಅಧಿಕ ಪೌಂಡೇಶನ್ ಕ್ರೀಮ್ ಹಚ್ಚುವುದು:
ಪೌಂಡೇಶನ್ ಕ್ರೀಮ್ ಹಚ್ಚಿದರೆ ಮುಖ ಆಕರ್ಷಕವಾಗಿ ಕಾಣುವುದು. ಆದ್ದರಿದ ಪೌಂಡೇಶನ್ ಅನ್ನು ತುಂಬಾ ತೆಳುವಾಗಿ ಹಚ್ಚಬೇಕು. ಮುಖದ ರಂಧ್ರಗಳು ಮುಚ್ಚುವಂತೆ ಪೌಂಡೇಶನ್ ಹಚ್ಚಿದರೆ ತ್ವಚೆಗೆ ಉಸಿರಾಡಲು ಸಾಧ್ಯವಿಲ್ಲ. ಆದ್ದರಿಂದ ಪೌಂಡೇಶನ್ ಹಚ್ಚುವಾಗ ಎಚ್ಚರವಹಿಸಿ. ಪ್ರತಿನಿತ್ಯ ಪೌಂಡೇಶನ್ ಹಚ್ಚುವ ಬದಲು ಅಪರೂಪಕ್ಕೆ ಹಚ್ಚುವುದು ಒಳ್ಳೆಯದು.

2. ತ್ವಚೆಯನ್ನು ಒಣಗಲು ಬಿಡುವುದು
ತ್ವಚೆ ಒಣಗುವುದರಿಂದ ತ್ವಚೆಯಲ್ಲಿ ಬೇಗನೆ ನೆರಿಗೆ ಮೂಡುತ್ತದೆ. ತ್ವಚೆ ಒಣಗುತ್ತಿದ್ದರೆ ಮಾಯಿಶ್ಚರೈಸರ್ ಹಚ್ಚಬೇಕು. ರಾತ್ರಿ ಮಲಗುವಾಗ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ ಮಲಗುವುದು ಒಳ್ಳೆಯದು. ಈ ರೀತಿ ಮಾಡಿದರೆ ತ್ವಚೆ ತನ್ನ ಯೌವನದ ಆಕರ್ಷಣೆಯನ್ನು ಮಧ್ಯ ವಯಸ್ಸು ದಾಟಿದರೂ ಉಳಿಸಿಕೊಳ್ಳುತ್ತದೆ.

3. ಪೌಡರ್ ಹಚ್ಚುವುದು
ಕ್ರೀಮ್ ಹಚ್ಚಿದ ನಂತರ ಪೌಡರ್ ಅಥವಾ ಪೌಂಡೇಶನ್ ಪೌಡರ್ ಹಚ್ಚುವ ಅಭ್ಯಾಸ ಹೆಚ್ಚಿನವರಲ್ಲಿ ಇರುತ್ತದೆ. ಆದರೆಪೌಡರ್ ಹೆಚ್ಚಾಗಿ ಹಚ್ಚುವುದು ಒಳ್ಳೆಯದಲ್ಲ. ಅಧಿಕ ಪೌಡರ್ ಹಚ್ಚಿ ನಂತರ ಅದನ್ನು ಬಟ್ಟೆಯಿಂದ ಉಜ್ಜುವುದು ಈ ರೀತಿ ಮಾಡಿದರೆ ತ್ವಚೆಗೆ ಹಾನಿಯುಂಟಾಗುತ್ತದೆ. ಪೌಡರ್ ಅನ್ನು ಕೈಯಿಂದ ಹಚ್ಚುವ ಬದಲು ಸ್ಪಾಂಜ್ ಬಳಸಿ ಹಚ್ಚಿ.

4. ಹೊಳೆಯುವ ಕಣ್ಣಿನ ಮೇಕಪ್
ಕಣ್ಣಿಗೆ ಮೇಕಪ್ ಮಾಡಿದರೆ ಆಕರ್ಷಕವಾಗಿ ಕಾಣುವಿರಿ. ಆದರೆ ಕಣ್ಣಿಗೆ ಶೈನರ್, ಐ ಶ್ಯಾಡೊ ಇವುಗಳನ್ನು ಹಚ್ಚುವುದಾದರೆ ಗುಣಮಟ್ಟದ ಕಣ್ಣಿನ ಮೇಕಪ್ ಗಳನ್ನು ಬಳಸಬೇಕು. ಕಿಣ್ಣಿಗೆ ಐಶ್ಯಾಡೊಗಳನ್ನು ಪ್ರತಿನಿತ್ಯ ಮಾಡಬೇಡಿ. ದಿನಾ ಹಚ್ಚಿದರೆ ಕಣ್ಣಿನ ಪಕ್ಕದಲ್ಲಿ ನೆರಿಗೆ ಬೀಳುವುದು.

5. ಗಾಢವಾದ ಲಿಪ್ ಶೇಡ್
ತುಂಬಾ ಗಾಢವಾಗಿ ಲಿಪ್ ಸ್ಟಿಕ್ ಹಚ್ಚುವುದರಿಂದ ತುಟಿ ತನ್ನ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ತುಟಿಗೆ ಡ್ರೈ ರೀತಿಯ ಲಿಪ್ ಸ್ಟಿಕ್ ಹಚ್ಚಬಾರದು. ಲಿಪ್ ಸ್ಟಿಕ್ ಹಚ್ಚಿದರೆ ಮನೆಗೆ ಬಂದ ಮೇಲೆ ಅದನ್ನು ತೆಗೆದು ತುಟಿಗೆ ಜೇನಿನಿಂದ ಮಾಯಿಶ್ಚರೈಸರ್ ಮಾಡಿ. ತುಟಿಯಲ್ಲಿ ಮಾಯಿಶ್ಚರೈಸರ್ ಇರುವಂತೆ ನೋಡಿಕೊಂಡರೆ ತುಟಿ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದಿಲ್ಲ.



Click it and Unblock the Notifications
