Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಡಯಟ್ ಬಗ್ಗೆ ಈ ತಪ್ಪು ಕಲ್ಪನೆ ಬಿಟ್ಟರೆ ಮಧುಮೇಹ ರಿವರ್ಸ್ ಮಾಡಬಹುದು!
ಮಧುಮೇಹದ ಡಯಟ್ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಟೈಪ್ 2 ಮಧುಮೇಹದ ಬಗ್ಗೆ ನೀವೂ ಕೂಡ ಅಂಥ ಮಾತುಗಳನ್ನು ನಂಬಿದ್ದರೆ ಈ ಲೇಖನ ಓದಿದ ಮೇಲೆ ನಿಮಗೆ ಸ್ಪಷ್ಟ ಕ್ಲಾರಿಟಿ ಸಿಗುವುದು ನೋಡಿ:

ಮಧುಮೇಹಿಗಳ ಕೇಂದ್ರ ಮಧುಮೇಹ
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆಘಾತಕಾರಿಯೇ. ಈಗಾಗಲೇ 80 ಮಿಲಿಯನ್ ಮಧುಮೇಹಿಗಳಿದ್ದರೆ, 2045ರಷ್ಟಿಗೆ ಮಧುಮೇಹಿಗಳ ಸಂಖ್ಯೆ 134 ಮಿಲಿಯನ್ ತಲುಪಿದೆ ಎಂದು ಹೇಳಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ 50 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತಿರುವ ಈ ಕಾಯಿಲೆ ಈ 30 ವರ್ಷದ ಆಸುಪಾಸಿನಲ್ಲಿ ಇರುವ ಎಷ್ಟೋ ಜನರಲ್ಲಿದೆ.
ನಮ್ಮ ಬದಲಾದ ಜೀವನಶೈಲಿ, ಆಹಾರಶೈಲಿ, ಅತೀ ಕಡಿಮೆ ನಿದ್ದೆ, ಕಲುಷಿತ ವಾತಾವರಣ, ಅನಾರೋಗ್ಯಕರ ಆಹಾರಶೈಲಿ, ರಾಸಾಯನಿಕಗಳಿರುವ ಆಹಾರಗಳ ಬಳಿಕೆ ಹೀಗೆ ಅನೇಕ ಕಾರಣಗಳಿಂದ ಮಧುಮೇಹ ಹೆಚ್ಚಾಗುತ್ತಿದೆ.
ಇನ್ನು ಮಧುಮೇಹ ಬಂದ ಮೇಲೆ ಕೆಲವರು ತಪ್ಪು ಕಲ್ಪನೆಯಿಂದಾಗಿ ತಮ್ಮ ಆರೋಗ್ಯ ಸಮಸ್ಯೆ ಹೆಚ್ಚು ಮಾಡಿಕೊಳ್ಳುತ್ತಾರೆ.
ಬನ್ನಿ ಆಹಾರಕ್ರಮದ ಬಗ್ಗೆ ಇರುವ ಆ ತಪ್ಪು ಕಲ್ಪನೆಗಳು ಯಾವುವು ಎಂದು ನೋಡೋಣ:

ಆಹಾರಕ್ರಮ
ಮಧುಮೇಹ ಬಂದ ಮೇಲೆ ಔಷಧ ತೆಗೆದುಕೊಳ್ಳುವುದು ಮುಖ್ಯ, ಆಹಾರಕ್ರಮದ ಕಡೆ ಸ್ವಲ್ಪ ಗಮನ ನೀಡಿದರೆ ಸಾಕು ಎಂಬ ಕಲ್ಪನೆ ಹಲವರಲ್ಲಿದೆ, ಆದರೆ ಮಧುಮೇಹ ಬಂದಾಗ ಆರಂಭದಲ್ಲಿಯೇ ಔಷಧ ತೆಗೆದುಕೊಳ್ಳುವ ಅಗ್ಯತವಿಲ್ಲ. ನೀವು ಒಳ್ಳೆಯ ಆಹಾರಕ್ರಮ ಹಾಗೂ ವ್ಯಾಯಾಮ ಮಾಡಿದರೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಹೆಚ್ಚಿಸಿ, ಸಕ್ಕರೆಯಂಶವನ್ನು ನಿಯಂತ್ರಣದಲ್ಲಿರಬಹುದು. ನಿಮ್ಮ ಆಹಾರದಲ್ಲಿ ಕಾರ್ಬ್ಸ್ ಕಡಿಮೆ ಇದ್ದು ನಾರಿನಂಶ ಅಧಿಕವಿದ್ದರೆ ಒಳ್ಳೆಯದು.

ಮಧುಮೇಹ ಹಾಗೂ ಸಿಹಿ ಪದಾರ್ಥಗಳ ಸೇವನೆ
ಸಿಹಿ ಪದಾರ್ಥಗಳಿ ಹಾಗೂ ಪಿಷ್ಠ ಅಧಿಕವಿರುವ ಆಹಾರಗಳನ್ನು ತಿಂದಾಗ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು. ಆದ್ದರಿಂದ ಸಿಹಿ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು, ಇನ್ನು ನ್ಯೂಟ್ರಿಷಿಯನಿಸ್ಟ್ ನಿಮಗೆ ಯಾವ ಬಗೆಯ ಆಹಾರಕ್ರಮ ಒಳ್ಳೆಯದು ಎಂಬ ಸಲಹೆ ನೀಡುತ್ತಾರೆ. ನೀವು ಆ ಬಗೆಯ ಆಹಾರಕ್ರಮ ಪಾಲಿಸುತ್ತಾ ಬಂದರೆ ಸಕ್ಕರೆಯಂಶ ನಿಯಂತ್ರಣದಲ್ಲಿಡುವುದು ಅಸಾಧ್ಯವೇನಲ್ಲ.

ಇನ್ನು ಮಧುಮೇಹಿಗಳ ಆಹಾರಕ್ರಮದ ಬಗ್ಗೆ ಇರುವ ತಪ್ಪು ಕಲ್ಪನೆಗಳು
ಸ್ವಲ್ಪ-ಸ್ವಲ್ಪ ಆಹಾರ ಆಗಾಗ ತಿನ್ನಬಹುದು
ಮಧುಮೇಹಿಗಳು ಹೊಟ್ಟೆ ತುಂಬಾ ತಿನ್ನಬಾರದು, ಸ್ವಲ್ಪ-ಸ್ವಲ್ಪ ಆಹಾರವನ್ನಷ್ಟೇ ತಿನ್ನಬೇಕು ಎಂದು ಹೇಳಲಾಗುವುದು, ಆದರೆ ಈ ರೀತಿಯ ಆಹಾರ ವಿಧಾನ ಮಧುಮೇಹಿಗಳಿಗೆ ಸರಿಯಲ್ಲ. ದಿನಾ ನಿರ್ಧಿಷ್ಟ ಸಮಯದಲ್ಲಿ ಆಹಾರ ಸೇವಿಸಬೇಕು ಹಾಗೂ ಸಂಜೆ ಆಹಾರವನ್ನು 7 ಗಂಟೆಯೊಳಗಡೆ ತಿಂದು ನಂತರ ಏನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಮಧುಮೇಹವನ್ನು ಬೇಗನೆ ನಿಯಂತ್ರಣದಲ್ಲಿಡಬಹುದು.

ಟೈಪ್ 2 ಮಧುಮೇಹ ರಿವರ್ಸ್ ಮಾಡೋಕೆ ಸಾಧ್ಯವಿಲ್ಲ
ಹಾಗೇನಿಲ್ಲ, ಎಷ್ಟೋ ಜನರು ಆರೋಗ್ಯಕರ ಆಹಾರಶೈಲಿ ಪಾಲಿಸುವುದರ ಮೂಲಕ ಟೈಪ್ 2 ಮಧುಮೇಹವನ್ನು ರಿವರ್ಸ್ ಮಾಡಿದ್ದಾರೆ. ಮಿತ ಆಹಾರ ಸೇವನೆ ಮಾಡಬೇಕು, ನಿಮ್ಮ ತಟ್ಟೆಯಲ್ಲಿ ನಾರಿನಂಶದ ಪದಾರ್ಥ ಅಧಿಕವಿರಬೇಕು, ದೈಹಿಕ ವ್ಯಾಯಾಮ ಇರಬೇಕು ಈ ರೀತಿ ಮಾಡುವ ಮೂಲಕ ಮಧುಮೇಹವನ್ನು ರಿವರ್ಸ್ ಮಾಡಬಹುದು.

ಮಧುಮೇಹ ನಿಧಾನಕ್ಕೆ ಹೆಚ್ಚಾಗುತ್ತದೆ
ಇದು ದೊಡ್ಡ ತಪ್ಪು ಕಲ್ಪನೆಯಾಗಿದೆ. ನೀವು ಮಧುಮೇಹ ಬಂದ ಮೇಲೆ ಅದನ್ನು ಆಹಾರಕ್ರಮ ಹಾಗೂ ವ್ಯಾಯಾಮದ ಮೂಲಕ ನಿಯಂತ್ರಣದಲ್ಲಿಟ್ಟರೆ ನಿಮ್ಮ ಜೀವಿತಾವಧಿಯವರೆಗೆ ಇತರರಂತೆ ಆರೋಗ್ಯಕರ ಜೀವನಶೈಲಿ ನಡೆಸಬಹುದು.
ಯಾರು ನಿಯಂತ್ರಣದಲ್ಲಿ ಇಡುವುದಿಲ್ಲವೋ ಅವರಲ್ಲಿ ಮಧುಮೇಹ ಹೆಚ್ಚಾಗಿ ಇದರಿಂದ ಇತರ ಸಮಸ್ಯೆಗಳು ಉಂಟಾಗುತ್ತದೆ, ಇಲ್ಲದಿದ್ದರೆ ಯಾವುದೇ ತೊಂದರೆಯಿಲ್ಲ.

ಮಧುಮೇಹ ಬಂದಿದೆಯೇ? ರಿವರ್ಸ್ ಮಾಡಲು ಹೀಗೆ ಮಾಡಿ:
* ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿ: ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ, ದೈಹಿಕ ವ್ಯಾಯಾಮ ಇಲ್ಲದಿದ್ದರೆ ಮಧುಮೇಹದ ಸಮಸ್ಯೆ ಹೆಚ್ಚುವುದು
* ಆಹಾರಶೈಲಿಯಲ್ಲಿ ಬದಲಾವಣೆ ಮಾಡಿ: ನಿಮ್ಮ ಆಹಾರದಲ್ಲಿ ನಾರಿನಂಶ ಅಧಿಕವಿರಲಿ, ಕಾರ್ಬ್ಸ್ ತುಂಬಾ ಕಡಿಮೆ ಇರಲಿ. ಈ ಆಹಾರಕ್ರಮ ಪಾಲಿಸುತ್ತಾ ಬಂದರೆ ಮಧುಮೇಹ ನಿಯಂತ್ರಣಕ್ಕೆ ಬರುವುದು.



Click it and Unblock the Notifications