ಜೀವನ ಶೈಲಿಯಿಂದ ಆರೋಗ್ಯ ವೃದ್ಧಿಸುವುದು ಹೇಗೆ?

ಬಹುತೇಕ ಜನರು ಆರೋಗ್ಯದ ಬಗ್ಗೆ / ಆರೋಗ್ಯಕರ ಆಹಾರಗಳ ಬಗ್ಗೆ ಜಾಗ್ರತೆವಹಿಸುವುದೇ ಇಲ್ಲ. ಓಡುತ್ತಿರುವ ತಂತ್ರಜ್ಞಾನದಲ್ಲಿ ಕೇವಲ ಹಣದ ಹಿಂದೆ ಬಿದ್ದಿದ್ದೇವೆ. ನಮ್ಮ ಆರೋಗ್ಯದ ಬಗ್ಗೆ ಬೇರೆಯಾರಾದರೂ ನಮ್ಮನ್ನು ನೆನಪಿಸಬೇಕು ಎನ್ನುವಂತಾಗಿದೆ ಎಲ್ಲರ ಸ್ಥಿತಿ!

ಆದರೆ ನಾವು ಆರೋಗ್ಯಕರವಾಗಿ, ಮುಂದೆ ಯಾವುದೇ ತೊಂದರೆಗಳೂ ಬಾರದಂತೆ ನೋಡಿಕೊಳ್ಳದಿದ್ದರೆ ನಮ್ಮ ಭವಿಷ್ಯಕ್ಕೆ ನಾವೇ ಮುಳ್ಳಾದ ಹಾಗೆ.

ಇಂತಹ ಸಮಸ್ಯೆಗಳಿಂದ ದೂರವಿರಲು, ದಿನನಿತ್ಯದ ಜೀವನಕ್ಕೆ ಅಗತ್ಯವಾದಂತಹ, ಸುಲಭವಾದ ಹಾಗೂ ಹೆಚ್ಚಿನ ಒತ್ತಡಗಳಿಲ್ಲದೆ ಆರೋಗ್ಯಕರ ಆಹಾರಗಳನ್ನು ನೀವು ಬಳಸುವುದಕ್ಕೆ ಕೆಲವು ಪ್ರಮುಖ ಅಂಶಗಳು ಈ ರೀತಿ ಇವೆ.

1.ಕಡ್ಡಾಯವಾಗಿ ಬೆಳಗಿನ ಉಪಹಾರ ಸೇವಿಸಿ

1.ಕಡ್ಡಾಯವಾಗಿ ಬೆಳಗಿನ ಉಪಹಾರ ಸೇವಿಸಿ

ಮುಂಜಾನೆ ಎದ್ದು ಉಪಹಾರವನ್ನು ಸೇವಿಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಥಮ ಹಾಗೂ ಪ್ರಮುಖವಾದ ಅಂಶ. ನಮ್ಮ ಜೀವನದಲ್ಲಿ ಸರಿಯಾಗಿ ಬೆಳಗಿನ ಉಪಹಾರವನ್ನು ಸೇವಿಸದಿದ್ದರೆ ಆಯಸ್ಸು ಕಡಿಮೆಯಾಗುತ್ತದೆ ಎನ್ನಲಾಗಿದೆ. ಏಕೆಂದರೆ ಆರೋಗ್ಯವಂತರಿಗೆ ಮಾತ್ರ ಆಯಸ್ಸು ಎಂಬ ಹಳೆಯ ಮಾತಿನಂತೆ ಬೆಳಿಗ್ಗೆ ಎದ್ದು ಏನನ್ನಾದರೂ (ಉಪಹಾರ)ತಿಂದರೆ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಎಸಿಡಿಟಿಯಂತಹ ಯಾವುದೇ ಸಮಸ್ಯೆಗಳೂ ಉಂಟಾಗುವುದಿಲ್ಲ. ಇದು ವೈಜ್ಞಾನಿಕವಾಗಿ ಪ್ರಮಾಣಿತ ಕೂಡ.

2.ಒಳ್ಳೆಯ ನಿದ್ದೆ

2.ಒಳ್ಳೆಯ ನಿದ್ದೆ

ಸದೃಢ ದೇಹಕ್ಕೆ ಪ್ರಶಾಂತ ಮನಸ್ಸಿಗೆ ನಿದ್ದೆ ಬೇಕೆ ಬೇಕು. ದಿನಕ್ಕೆ 8ಗಂಟೆಗಳ ಕಾಲವಾದರೂ ನಿದ್ದೆ ಮಾಡಬೇಕು. ಕೇವಲ ಮಲಗುವುದು ಇಲ್ಲಿನ ಉದ್ದೇಶವಲ್ಲ. ನೀವು ಮಲಗುವುದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಅಲ್ಲದೇ ಇದು ಆರೋಗ್ಯವಾಗಿರುವುದಕ್ಕೆ ಅಗತ್ಯ. ನಿಮ್ಮೆಲ್ಲಾ ಯೋಚನೆಗಳಿಂದ ದೂರ ಉಳಿದು ನಿದ್ದೆ ಮಾಡಿದರೆ ಮನಸ್ಸಿಗೆ, ದೇಹಕ್ಕೆ ರಿಲಾಕ್ಸ್ ಎನಿಸುತ್ತದೆ.

3.ಅಧಿಕ ನೀರು ಕುಡಿಯಿರಿ

3.ಅಧಿಕ ನೀರು ಕುಡಿಯಿರಿ

ನೀರು ಬಹಳಷ್ಟು ರೋಗಗಳಿಗೆ ರಾಮಬಾಣ. ಹೆಚ್ಚು ಹೆಚ್ಚು ನೀರು ಕುಡಿದ ಹಾಗೆ ದೇಹದಲ್ಲಿರುವ ಕಶ್ಮಲಗಳು ಹೊರಹೋಗಿ ರೋಗಗಳು ಬರದಂತೆ ತಡೆಯುತ್ತವೆ. ದಿನಕ್ಕೆ ಕನಿಷ್ಠ 8 ಲೀಟರ್ ನೀರನ್ನಾದರೂ ಕುಡಿಯಲೇ ಬೇಕು.ಇದರಿಂದ ನಮ್ಮ ದೇಹ ಗಟ್ಟಿಯಾಗಿರುವಂತೆ ಮಾಡುತ್ತದೆ.

4.ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳಿ

4.ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳಿ

ಎಲ್ಲರೊಂದಿಗೆ ಸದಾ ಜಗಳವಾಡುತ್ತಾ ಬದುಕುವುದು ಅಸಹ್ಯವೆನಿಸಿಬಿಡುತ್ತದೆ. ನಿಮ್ಮ ಸುತ್ತಲಿನವರೊಂದಿಗೆ, ನೆರೆ ಹೊರೆಯವರೊಂದಿಗೆ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗಿರುತ್ತದೆ ಜೊತೆಗೆ ದಿನವಿಡಿ ಲವಲವಿಕೆಯಿಂದ ನೀವು ಕೆಲಸಮಾಡಬಹುದು.ನಿಮ್ಮ ಮಕ್ಕಳೊಂದಿಗೆ ಅಥವಾ ಹಿರಿಯರೊಂದಿಗೆ ಕಳೆಯಲು ದಿನದ ಸ್ವಲ್ಪ ಸಮಯವನ್ನು ಮೀಸಲಿಡಿ. ನಿಮ್ಮ ಕೆಲಸದ ಒತ್ತಡವನ್ನೂ ಕಡಿಮೆ ಮಾಡಲು ಇದು ಒಳ್ಳೆಯ ಮಾರ್ಗ.

5.ನಡಿಗೆ ಆರೋಗ್ಯಕ್ಕೆ ಅಗತ್ಯ

5.ನಡಿಗೆ ಆರೋಗ್ಯಕ್ಕೆ ಅಗತ್ಯ

ಪ್ರತಿದಿನ ವಾಹನಗಳಲ್ಲಿಯೇ ಪ್ರಯಾಣಮಾಡುವವರು ನೀವಾಗಿದ್ದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ನಿಮಗೆ ದಿನದ ಸ್ವಲ್ಪ ಹೊತ್ತಿನ ನಡಿಗೆ ಅನಿವಾರ್ಯ. ದಿನವೂ ಸ್ವಲ್ಪ ದೂರ ನಡೆಯುವುದು ಎಲ್ಲಾ ವರ್ಗದ (ವಯಸ್ಸಿನ)ಜನರಿಗೂ ಒಳ್ಳೆಯದೆ. ದೇಹದಲ್ಲಿನ ಅಧಿಕ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಮತ್ತು ಆರೋಗ್ಯ ಪೂರ್ಣ ದೇಹಕ್ಕೆ ಅತೀ ಅವಶ್ಯಕ.

6.ವ್ಯಾಯಾಮ ಮತ್ತು ಧ್ಯಾನ ಮಾಡಿ

6.ವ್ಯಾಯಾಮ ಮತ್ತು ಧ್ಯಾನ ಮಾಡಿ

ಆರೋಗ್ಯಕರ ಜೀವನವನ್ನು ಸಾಗಿಸಲು ವ್ಯಾಯಾಮಕ್ಕಿಂತ ಬೇರೆ ಔಷಧಿಯೇ ಇಲ್ಲ. ಇದು ಮನಸ್ಸು ಮತ್ತು ದೇಹ ಎರಡನ್ನೂ ಸಮಾನವಾಗಿ ಆರೋಗ್ಯದಿಂದಿರುವಂತೆ ಮಾಡುತ್ತದೆ.ಎಲ್ಲ ಇದ್ದರೂ ಮನಸ್ಸಿಗೆ ಸಂತೋಷವೇ ಇಲ್ಲ, ಸಮಾಧಾನವೇ ಇಲ್ಲ ಎಂದು ದಿನನಿತ್ಯ ಪರಿತಪಿಸುತ್ತಿರುತ್ತೇವೆ. ಅದಕ್ಕೆ ಕಾರಣ ಮಸಸ್ಸಿಗೆ ಶಾಂತಿ ಇಲ್ಲದೇ ಇರುವುದು.ಅದಕ್ಕಾಗಿ ಪ್ರತಿ ದಿನ ಧ್ಯಾನ ಮಾಡುವ ಪದ್ಧತಿಯನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಚಿತ್ತ ಸಕಲ ಚಿಂತೆಗಳನ್ನೂ ಮರೆತು ನೆಮ್ಮದಿಯಿಂದ ಇರುವಂತಾಗುತ್ತದೆ. ಏಕಾಂತ ಇರುವ ಸ್ಥಳಗಳಲ್ಲಿ ಧ್ಯಾನ ಮಾಡಿದರೆ ಹೆಚ್ಚು ಪರಿಣಾಮಕಾರಿ. ದಿನದ ಅರ್ಧ ಗಂಟೆಯಾದರೂ ಧ್ಯಾನ ಹಾಗೂ ಯೋಗಗಳಿಗೆ ಮೀಸಲಿಟ್ಟರೆ ಅನಾರೋಗ್ಯ ಅಥವಾ ಖಾಯಿಲೆ ಎನ್ನುವುದು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ!

7.ಹಲ್ಲಿನ ಆರೋಗ್ಯ

7.ಹಲ್ಲಿನ ಆರೋಗ್ಯ

ನಮ್ಮ ಆರೋಗ್ಯ ಸುರಕ್ಶತೆಗೆ ಹಲ್ಲಿನ ಆರೈಕೆಯೂ ಅಷ್ಟೇ ಮುಖ್ಯ. ಬೆಳಿಗ್ಗೆ ಹಲ್ಲು ಉಜ್ಜುವುದರ ಜೊತೆಗೆ ರಾತ್ರಿ ಊಟವಾದ ಮೇಲೆ ಮಲಗುವ ಮುನ್ನ ಹಲ್ಲುಜ್ಜಿ ಮಲಗಬೇಕು.ಇಲ್ಲವಾದರೆ ಕಿಟಾಣುಗಳಿಂದಾಗಿ ಬಾಯಿ ಹುಣ್ಣು ಮುಂತಾದ ತೊಂದರೆಗಳು ಉಂಟಾಗುತ್ತವೆ. ಮುಖ್ಯವಾಗಿ ಮಕ್ಕಳಿಗೂ ಇದರ ಬಗ್ಗೆ ಅರಿವು ಮೂಡಿಸುವುದು ಪಾಲಕರ ಕರ್ತವ್ಯ.

X
Desktop Bottom Promotion