Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾಸಾಯನಿಕ ಪುಡಿ ಹಾಕದ ಕುಂಕುಮ ಮನೆಯಲ್ಲಿಯೇ ಮಾಡುವುದು ಹೇಗೆ?
ಭಾರತೀಯರು ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಅರಿಶಿಣ- ಕುಂಕುಮಕ್ಕೆ ಹೆಚ್ಚಿನ ಮಹತ್ವವಿದೆ. ಮದುವೆಯಾದ ನಂತರ ಹೆಣ್ಣಿಗೆ ಅರಿಶಿನ ಕುಂಕುಮವೇ ಸಂಪತ್ತು ಎಂದು ಹೇಳಲಾಗುತ್ತದೆ.

ಹಿಂದೂ ಶಾಸ್ತ್ರಗಳ ಪ್ರಕಾರ ಕುಂಕುಮಕ್ಕೆ ವಿಶೇಷವಾದ ಮಹತ್ವವಿದೆ ದೇವರಿಗೆ ಕುಂಕುಮವನ್ನು ಅರ್ಪಿಸುವುದು ಇರಬಹುದು ಅಥವಾ ಮಹಿಳೆಯರು ಹಣೆಗೆ ಇಟ್ಟುಕೊಳ್ಳುವುದು ಇರಬಹುದು ಒಟ್ಟಿನಲ್ಲಿ ಕುಂಕುಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚು ವೈಶಿಷ್ಟ್ಯ ಪೂರ್ಣವಾಗಿದೆ.
ಕುಂಕುಮ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ ಎನ್ನುವುದು ನಿಮಗೆ ಗೊತ್ತು. ಕೆಂಪು ಬಣ್ನದ ಕುಂಕುಮ ಇದೀಗ ಮರೂ, ಬೂದು, ಗುಲಾಬಿ ಮೊದಲಾದ ಬಣ್ಣದಲ್ಲಿಯೂ ಕೂಡ ಸಿಗುತ್ತದೆ ಆದರೆ ಇವೆಲ್ಲವೂ ಒರಿಜಿನಲ್ ಕುಂಕುಮ ಆಗಿರುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಕುಂಕುಮ ಎಲ್ಲವೂ ಒರಿಜಿನಲ್ ಆಗಿರುವುದಿಲ್ಲ. ಯಾಕೆಂದರೆ ಅದರಲ್ಲಿ ರಾಸಾಯನಿಕಗಳನ್ನ ಬೆರೆಸಿರುತ್ತಾರೆ ಇದನ್ನು ನಾವು ನಮ್ಮ ತ್ವಚೆಗೆ ಹಚ್ಚಿಕೊಂಡರೆ ಅದು ತ್ವಚೆಯ ಆರೋಗ್ಯವನ್ನು ಹಾಳು ಮಾಡಬಹುದು. ಹಾಗಾಗಿ ನಿತ್ಯ ಕುಂಕುಮ ಹಚ್ಚಿಕೊಳ್ಳುವವರು ಮನೆಯಲ್ಲಿಯೇ ಸುಲಭವಾಗಿ ಕುಂಕುಮ ತಯಾರಿಸಿಕೊಳ್ಳುವುದು ಒಳ್ಳೆಯದು.
ಕುಂಕುಮ ತಯಾರಿಸುವುದು ಹೇಗೆ ಗೊತ್ತಾ
ಉತ್ತರ ಕನ್ನಡ ಭಾಗದಲ್ಲಿ ಮಹಿಳೆಯರು ಸಾಮಾನ್ಯವಾಗಿ ಕುಂಕುಮಾರ್ಚನೆಯನ್ನು ನೆರವೇರಿಸುತ್ತಾರೆ. ಹೀಗೆ ಕುಂಕುಮಾರ್ಚನೆ ಮಾಡುವಾಗ ಕುಂಕುಮ ಬಳಸುವುದು ಸಾಮಾನ್ಯ. ಇದರಲ್ಲಿ ಒಂದು ವಿಶೇಷವೆಂದರೆ ಮಹಿಳೆಯರು ಮನೆಯಲ್ಲಿಯೇ ಕುಂಕುಮ ತಯಾರಿ ಮಾಡುತ್ತಾರೆ ಈ ಒರಿಜಿನಲ್ ಕುಂಕುಮ ತಯಾರಿಸುವುದು ಹೇಗೆ ನೋಡೋಣ.
ಮೊದಲಿಗೆ ಕುಂಕುಮ ತಯಾರಿಸಲು ಅರಿಶಿಣ ಬೇಕು ಅಂದರೆ ಸಾವಯವವಾಗಿ ಬೆಳೆದ ಅರಿಶಿಣದ ಗಡ್ಡೆಯನ್ನು ಕುಂಕುಮ ತಯಾರಿಸುವುದಕ್ಕೆ ಬಳಸಲಾಗುತ್ತದೆ. ಅರಿಶಿನವನ್ನು ಕಿತ್ತು ಚೆನ್ನಾಗಿ ತೊಳೆದು ಅದನ್ನ ತೆಳ್ಳಗಿನ ಸ್ಲೈಸಸ್ ಆಗಿ ಕತ್ತರಿಸಿಕೊಳ್ಳಬೇಕು ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಕತ್ತರಿಸಿದ ಅರಿಶಿನವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿದ ನಂತರ ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿ ಇನ್ನು ಮನೆಯಲ್ಲಿ ಕುಂಕುಮ ತಯಾರು ಮಾಡಲು ನಿಂಬೆರಸ ಕೂಡ ಬೇಕಾಗುತ್ತದೆ. ಜೊತೆಗೆ ಬಿಳಿಗಾರ ಹಾಗೂ ಸ್ಪಟಿಕವನ್ನು ಕೂಡ ಕುಂಕುಮ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಅರ್ಧ ಕೆಜಿ ಅರಿಶಿಣದಲ್ಲಿ ಕುಂಕುಮ ತಯಾರಿಸಲು, 75 ಗ್ರಾಂ ನಷ್ಟು ಬಿಳಿಗಾರ ಹಾಕಬೇಕು. (ಬಿಳಿ ಗಾರ ವಿಶೇಷವಾಗಿ ಕುಂಕುಮ ತಯಾರಿಕೆಗಾಗಿಯೇ ಇದ್ದು ಗ್ರಂಥಿಗೆ ಅಂಗಡಿಯಲ್ಲಿ ನೀವು ಖರೀದಿ ಮಾಡಬಹುದು) ಇನ್ನು ಇದಕ್ಕೆ 5 ಗ್ರಾಂ ನಷ್ಟು ಸ್ಪಟಿಕ ಬಳಸಲಾಗುತ್ತದೆ. ಸ್ಪಟಿಕವನ್ನು ಪುಡಿ ಮಾಡಿ ಬಳಸಬೇಕು. ಇದಕ್ಕೆ ಸುಮಾರು 350 ಎಂ.ಎಲ್ ನಷ್ಟು ಶುದ್ಧವಾದ ನಿಂಬೆರಸ ಬಳಸಲಾಗುತ್ತದೆ.
ಶುದ್ಧ ಕುಂಕುಮ ತಯಾರಿಸುವ ವಿಧಾನ:
ಮೊದಲಿಗೆ ಒಂದು ಪಾತ್ರೆಗೆ ಬಿಳಿಗಾರ ಪುಡಿ ಮಾಡಿಟ್ಟುಕೊಂಡ ಸ್ಪಟಿಕ ಹಾಗೂ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕರಗಬೇಕು. ಅಲ್ಲಿಯವರೆಗೆ ಮಿಕ್ಸ್ ಮಾಡಿ. ಈಗ ಇದಕ್ಕೆ ಒಣಗಿಸಿಟ್ಟುಕೊಂಡ ಅರಿಶಿನದ ಸ್ಲೈಸಸ್ (ತುಂಡು) ಸೇರಿಸಿ ಮಿಕ್ಸ್ ಮಾಡಬೇಕು. ಕೈಯಿಂದಲೇ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಇಲ್ಲವಾದರೆ ತಳದಲ್ಲಿ ನಿಂಬೆರಸ ಉಳಿದುಕೊಂಡು ಬೀಳುತ್ತದೆ ಕೈಯಿಂದ ಈ ಮಿಶ್ರಣವನ್ನು ಅರಿಶಿನದ ಬಣ್ಣ ಬದಲಾಗುವುದನ್ನು ನೀವು ಗಮನಿಸಬಹುದು. ಅಥವಾ ಅರಿಶಿನ ಹಾಗೂ ನಿಂಬೆರಸದ ಮಿಶ್ರಣ ಆಗುವವರೆಗೆ ನೀವು ನೆನೆಯಲು ಬಿಡಿ. (ಅರ್ಧ ಗಂಟೆ) ಅರಿಶಿಣದ ಕೊಂಬಿಗೆ ಅಥವಾ ಅರಿಶಿಣದ ತುಂಡಿಗೆ ನಿಂಬೆರಸ ಚೆನ್ನಾಗಿ ಹೀರಿಕೊಂಡ ನಂತರ ಅದನ್ನು ಮುತ್ತುಗದ ಎಲೆ ಅಥವಾ ಬಾಳೆ ಎಲೆ ಮೇಲೆ ಮತ್ತೆ ಒಣಗಿಸಬೇಕು. ಇದನ್ನು ಬಿಸಿಲಿನಲ್ಲಿ ಒಣಗಿಸಬಾರದು ನೆರಳಿನಲ್ಲಿಯೇ ಒಣಗಿಸಬೇಕು ಸುಮಾರು ಒಂದು ವಾರಗಳ ಕಾಲ ಇದನ್ನ ನೆರಳಿನಲ್ಲಿ ಒಣಗಿಸಬೇಕಾಗುತ್ತದೆ.
ಅರಿಶಿಣದ ತುಂಡುಗಳು ಒಣಗಿದ ನಂತರ ಅದನ್ನು ಮಿಕ್ಸರ್ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಜಾಲರಿ ಹಿಡಿದುಕೊಳ್ಳಿ ( ಸೋಸಿ ಕೊಳ್ಳಿ). ಈಗ ಕುಂಕುಮದ ಪುಡಿ ಸಿದ್ಧವಾಗಿದೆ ಇದು ಬಹಳ ಉದುರು ಉದುರಾಗಿ ಇರುವುದರಿಂದ ಇದಕ್ಕೆ 50 ಗ್ರಾಂ ನಷ್ಟು ದೇಸಿ ತುಪ್ಪವನ್ನು ಬೆರೆಸಿ ಮತ್ತೆ ಮಿಕ್ಸ್ ಮಾಡಿ. ಈಗ ಶುದ್ಧ ಕುಂಕುಮ ಸಿದ್ಧವಾಗಿದೆ ಇದನ್ನ ನೀವು ಗಾಜಿನ ಪಾತ್ರೆ ಅಥವಾ ಹಿತ್ತಾಳೆ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬಹುದು ಜೊತೆಗೆ ಯಾವುದೇ ರಾಸಾಯನಿಕ ಬಳಸದೆ ಇರುವುದರಿಂದ ಜೊತೆಗೆ ಇದರ ಪರಿಮಳವೂ ಕೂಡ ಅದ್ಭುತವಾಗಿರುತ್ತದೆ.
ಮನೆಯಲ್ಲಿಯೇ ಶುದ್ಧ ಕುಂಕುಮವನ್ನು ತಯಾರಿಸುವುದು ಬಹಳ ಸುಲಭ. ಜೊತೆಗೆ ಕೆಲವೇ ಕೆಲವು ವಸ್ತುಗಳಿಂದ, ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ಕುಂಕುಮ ತಯಾರಿಸಬಹುದು. ತಪ್ಪದೇ ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications

