Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಕೂದಲು ದುರ್ವಾಸನೆ ಬೀರುವುದೇ? ಇದನ್ನು ಟ್ರೈ ಮಾಡಿ
ಮಳೆಗಾಲವಿರಲಿ, ಬೇಸಿಗೆ ಇರಲಿ ಕೂದಲು ಒದ್ದೆಯಾಗಿ ಸರಿಯಾಗಿ ಒಣಗದೇ ಇದ್ದರೆ ಕೂದಲು ದುರ್ವಾಸನೆ ಬೀರುತ್ತದೆ. ಮಳೆಗಾಲದಲ್ಲಿ ಸರಿಯಾಗಿ ಒಣಗದೆ ಕೂದಲು ಒಣಗಿದದ್ದರೆ, ಬೇಸಿಗೆಯಲ್ಲಿ ಕೂದಲು ಒಣಗಿದರೂ ಬೆವರುವುದರಿಂದ ಕೂದಲು ಒದ್ದೆಯಾಗಿ ಕೆಟ್ಟ ವಾಸನೆ ಬೀರುವುದು. ಅದರಲ್ಲೂ ತೆಂಗಿನೆಣ್ಣೆ ತಲೆಗೆ ಹಚ್ಚಿದರೆ ಬೆವರಿನ ವಾಸನೆ ಜೊತೆ ಮಿಶ್ರವಾದರೆ ತಲೆಕೂದಲಿನಿಂದ ಬರುವ ದುರ್ನಾತ ಇದೆಯೆಲ್ಲಾ ಅಬ್ಬಾ! ಸಹಿಸಲು ಅಸಾಧ್ಯ.
ತಲೆ ಕೂದಲನ್ನು ಸರಿಯಾಗಿ ಸ್ವಚ್ಛ ಮಾಡದಿದ್ದರೆ ಅಥವಾ ಕೂದಲಿನ ಎಣ್ಣೆಯಂಶ ಸರಿಯಾಗಿ ತೆಗೆಯದಿದ್ದರೆ ಈ ರೀತಿಯ ಸಮಸ್ಯೆ ಉಂಟಾಗುವುದು. ತಲೆಬುಡದಲ್ಲಿ ಬ್ಯಾಕ್ಟಿರಿಯಾ ಅಥವಾ ಫಂಗಲ್ ಸೋಂಕಿನಿಂದಾಗಿ ಕೆಟ್ಟ ವಾಸನೆ ಉಂಟಾಗುವುದು. ನಾವಿಲ್ಲಿ ಕೂದಲಿನ ದುರ್ವಾಸನೆ ಹೋಗಲಾಡಿಸಲು ಏನು ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ.

ಆ್ಯಂಟಿಮೈಕ್ರೋಬಯಲ್ ಶ್ಯಾಂಪೂ ಬಳಸಿ
ಫಂಗಸ್ ಅಥವಾ ಬ್ಯಾಕ್ಟಿರಿಯಾ ಕಾರಣದಿಂದ ತಲೆಯಿಂದ ದುರ್ವಾಸನೆ ಬೀರುವುದನ್ನು ತಡೆಗಟ್ಟಲು ತಲೆಗೆ
Antimicrobial ಶ್ಯಾಂಪೂ ಸಿಗುತ್ತೆ, ಅದನ್ನು ಹಚ್ಚಿ ತಲೆ ಸ್ನಾನ ಮಾಡಿ.

ಸೀಗೆಕಾಯಿ ಪೌಡರ್ ಬಳಸಿ
ತಲೆತೊಳೆಯಲು ಸೀಗೆಕಾಯಿ ಪೌಡರ್ ಬಳಸುವುದರಿಂದ ಕೂದಲಿನಲ್ಲಿರುವ ಅತ್ಯಧಿಕ ಎಣ್ಣೆಯಂಶ ತೆಗೆಯಲು ಸಹಕಾರಿ. ಇದು ಕೂದಲು ಎಣ್ಣೆ-ಎಣ್ಣೆಯಾಗುವುದನ್ನು ತಪ್ಪಿಸಿ, ಕೂದಲು ಶುಭ್ರವಾಗಿ ಇರುವಂತೆ ಮಾಡುವುದರ ಜೊತೆಗೆ ಕೂದಲಿನಿಂದ ಕೆಟ್ಟ ವಾಸನೆ ಕೂಡ ಬೀರುವುದಿಲ್ಲ.

ಕೂದಲನ್ನು ಪ್ರತಿದಿನ ತೊಳೆಯಿರಿ
ಕೂದಲನ್ನು ಪ್ರತಿದಿನ ತೊಳೆಯುವುದಕ್ಕಿಂತ ವಾರದಲ್ಲಿ ಎರಡು ಬಾರಿ ತೊಳೆಯುವುದು ಒಳ್ಳೆಯದೆಂದು ಹೇಳುತ್ತೇವೆ. ಆದರೆ ತಲೆ ತುಂಬಾ ಬೆವರುತ್ತಿದ್ದರೆ ಕೂದಲನ್ನು ಪ್ರತಿದಿನ ತೊಳೆಯುವುದೇ ಒಳ್ಳೆಯದು. ಇದರಿಂದ ಬ್ಯಾಕ್ಟಿರಿಯಾ ಅಥವಾ ಶಿಲೀಂಧ್ರ ಸೋಂಕು ಉಂಟಾಗುವುದನ್ನು ತಡೆಯಬಹುದು. ಪ್ರತಿದಿನ ತಲೆ ಸ್ನಾನ ಮಾಡಿದರೆ ತಲೆಯಲ್ಲಿ ಬೆವರು ಉಳಿಯುವುದಿಲ್ಲ, ಇದರಿಂದ ತಲೆ ತುರಿಕೆ ಮುಂತಾದ ಸಮಸ್ಯೆ ಉಂಟಾಗುವುದಿಲ್ಲ.

ಕೂದಲನ್ನು ಚೆನ್ನಾಗಿ ಒಣಗಿಸಿ
ಸ್ನಾನವಾದ ಬಳಿಕ ಒದ್ದೆ ಕೂದಲನ್ನು ಕಟ್ಟುವ ಅಭ್ಯಾಸ ಅನೇಕರಲ್ಲಿ ಇರುತ್ತದೆ. ಇದರಿಂದ ಕೂಡ ಕೂದಲು ದುರ್ನಾತ ಬೀರುವುದು. ತಲೆಸ್ನಾನದ ಬಳಿಕ ಕೂದಲನ್ನು ಹರಡಿ, ಚೆನ್ನಾಗಿ ಒಣಗಿಸಿ. ಕೂದಲಿಗೆ ಸಾಂಬ್ರಾಣಿ ಹೊಗೆ ಹಾಕಿ ಒಣಗಿಸಿದರೆ ಕೂದಲು ಸುವಾಸನೆ ಬೀರುವುದು. ಕೂದಲನ್ನು ರೂಂನ ಉಷ್ಣತೆಯಲ್ಲಿ ಒಣಗಿಸಿ, ಫ್ಯಾನ್ ಕೆಳಗೆ ನಿಲ್ಲುವುದು, ಹೇರ್ ಡ್ರೈಯರ್ ಬಳಸಿ ಒಣಗಿಸುವುದು ಕೂದಲಿಗೆ ಅಷ್ಟು ಒಳ್ಳೆಯದಲ್ಲ.

ಆ್ಯಪಲ್ ಸಿಡರ್ ವಿನೆಗರ್ ಬಳಸಿ
ಇನ್ನು ಕೂದಲಿನಿಂದ ಬರುವ ಕೆಟ್ಟ ವಾಸನೆ ತಡೆಗಟ್ಟಲು ಆ್ಯಪಲ್ ಸಿಡರ್ ವಿನೆಗರ್ ಕೂಡ ಸಹಕಾರಿ. ಇದು ತಲೆಬುಡದ pH ಬ್ಯಾಲೆನ್ಸ್ ಮಾಡುತ್ತದೆ. 1/4 ಕಪ್ ಆ್ಯಪಲ್ ಸಿಡರ್ ವಿನೆಗರ್ ಅನ್ನು 21/2 ಕಪ್ (ಎರಡೂವರೆ) ನೀರಿಗೆ ಹಾಕಿ ಮಿಶ್ರ ಮಾಡಬೇಕು. ಅದನ್ನು ತಲೆ ಶ್ಯಾಂಪೂ ಹಾಕಿ ತೊಳೆದ ಬಳಿಕ ನಂತರ ಕೊನೆಗೆ ಸುರಿದು ಕೂದಲು ಒರೆಸಿ, ಇಣಗಿಸಬೇಕು. ಹೀಗೆ ಮಾಡುವುದರಿಂದ ಕೂದಲು ಬಲವಾಗಿ ಇರುತ್ತದೆ ಹಾಗೂ ನಿಮ್ಮ ಕೂದಲಿನ ವಾಸನೆ ಸಮೀಪ ಕೂರುವವರಿಗೆ, ನಿಮ್ಮ ಸಂಗಾತಿಗೆ ಆಪ್ತ ಎನಿಸುವುದು.



Click it and Unblock the Notifications
