Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೂದಲು ಒರಟಾಗಿದೆಯೇ? ಹೀಗೆ ಮಾಡಿ ತುಂಬಾ ಮೃದುವಾಗುವುದು
ಕಳೆದ 5-6 ತಿಂಗಳಿನಿಂದ ಎಲ್ಲರ ಬದುಕಿನ ಚಿತ್ರಣವೇ ಬದಲಾಗಿದೆ. ಹೇರ್ ಕಟ್ ಇರಲಿ, ಫೇಶಿಯಲ್ ಇರಲಿ, ಪೆಡಿಕ್ಯೂರ್, ಮ್ಯಾನಿಕ್ಯೂರ್ ಏನೇ ಇರಲಿ ಎಲ್ಲವೂ ಮನೆಯಲ್ಲಿಯೇ ಮಾಡಿಕೊಂಡು ಸೌಂದರ್ಯದ ಆರೈಕೆ ಮಾಡಬೇಕು.

ಮನೆಯಲ್ಲಿಯೇ ನಿಮ್ಮ ಕೂದಲಿನ ಆರೈಕೆ ಮಾಡುವುದು ಹೇಗೆ, ಮುಖದ ಹೊಳಪು ಹೆಚ್ಚಿಸುವುದು ಹೇಗೆ ಎಂದು ಸೆಲೆಬ್ರಿಟಿಗಳು ಬ್ಯೂಟಿ ಸೀಕ್ರೆಟ್ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಸ್ಯಾಂಡಲ್‌ವುಡ್ ನಟಿ, ಬಿಗ್‌ಬಾಸ್ ಖ್ಯಾತಿಯ ಅನುಪಮ ಗೌಡ ಒರಟಾದ ಕೂದಲನ್ನು ಮೃದುವಾಗಿಸುವುದು ಹೇಗೆ ಎಂದು ನೀಡಿರುವ ಸಿಂಪಲ್ ಬ್ಯೂಟಿ ಟಿಪ್ಸ್ ಐಡಿಯಾ ನೀಡಿದ್ದೇವೆ ನೋಡಿ:

ಸಿಕ್ಕು-ಸಿಕ್ಕಾಗಿ ಒರಟಾದ ಕೂದಲು
ನೀವು ಪಾರ್ಲರ್‌ಗೆ ಹೋಗಿ ಹೇರ್ ಸ್ಪಾ ಮಾಡಿಸುತ್ತಿದ್ದರೆ ಈಗ ನಿಮಗೆ ಅಯ್ಯೋ ನನ್ನ ಕೂದಲು ತುಂಬಾ ಒರಟಾಗಿದೆ, ಪಾರ್ಲರ್‌ಗೂ ಹೋಗೋಕೆ ಆಗ್ತಾ ಇಲ್ಲ ಎಂದು ಗೊಣಗುತ್ತಿರುತ್ತೀರಿ. ಆದರೆ ನೀವು ಮೃದುವಾದ ಕೂದಲು ಪಡೆಯಲು ಪಾರ್ಲರ್‌ಗೇ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕೆಲವೊಂದು ಸರಳ ರೆಸಿಪಿ ಮೂಲಕ ಆಕರ್ಷಕ ಕೂದಲು ಪಡೆಯಬಹುದು.
ಮೊದಲಿಗೆ ಕೂದಲನ್ನು ಬಾಚಿ ಸಿಕ್ಕು ಬಿಡಿಸಿ, ನಂತರ ಈ ಮಿಶ್ರಣವನ್ನು ಹಚ್ಚಿ.

ಬೇಕಾಗುವ ಸಾಮಗ್ರಿ
ರಾತ್ರಿ ನೆನೆ ಹಾಕಿದ ಎರಡು ಚಮಚ ಮೆಂತೆ
ಅರ್ಧ ಈರುಳ್ಳಿ
1 ಚಮಚ ತೆಂಗಿನೆಣ್ಣೆ
1 ಚಮಚ ಮೊಸರು
ಇಷ್ಟು ಸಾಮಗ್ರಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.

ತಲೆಗೆ ಪೇಸ್ಟ್ ಹಚ್ಚಿ
ಈಗ ರೆಡಿಯಾದ ಪೇಸ್ಟ್ ಅನ್ನು ಚೆನ್ನಾಗಿ ಕೂದಲಿನ, ಬುಡ ಹಾಗೂ ಕೂದಲಿಗೆ ಹಚ್ಚಿ ಕೂದಲಿಗೆ ಶವರ್ ಕ್ಯಾಪ್ ಅಥವಾ ಪ್ಲಾಸ್ಟಿಕ್ ಹಾಕಿ, ಒಂದೆರಡು ತಾಸು ಬಿಡಿ.
ನಂತರ ಉಗುರು ಬೆಚ್ಚಗಿನ ನೀರಿನಿಂದ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ.

ಮೃದುವಾದ ಕೂದಲಿನ ಸೌಂದರ್ಯ
ನೀವು ಇಷ್ಟು ಮಾಡಿದ್ದೇ ಆದರೆ ಮೊದಲ ಪ್ರಯತ್ನದಲ್ಲಿಯೇ ಕೂದಲಿನಲ್ಲಾದ ವ್ಯತ್ಯಾಸ ತಿಳಿಯುತ್ತದೆ. ಕೂದಲು ತುಂಬಾ ಮೃದುವಾಗುವುದು.
ಈ ಮಿಶ್ರಣದ ಇತರ ಪ್ರಯೋಜನಗಳು
ನೀವು ಈ ಮೆಂತೆ, ಈರುಳ್ಳಿ, ಮೊಸರು, ಎಣ್ಣೆಯ ಮಿಶ್ರಣವನ್ನು ಹಚ್ಚುವುದರಿಂದ ದೊರೆಯುವ ಇತರ ಪ್ರಯೋಜನಗಳೆಂದರೆ
- ಕೂದಲು ಉದುರುವುದಿಲ್ಲ
- ಕೂದಲು ಉದ್ದವಾಗಿ ಬೆಳೆಯುವುದು
- ಕೂದಲಿನ ಮಾಯಿಶ್ಚರೈಸರ್ ಕಾಪಾಡುತ್ತದೆ
- ಅಕಾಲಿಕ ನೆರೆ ಕೂದಲಿನ ಸಮಸ್ಯೆ ಕಾಡುವುದಿಲ್ಲ
- ತಲೆ ಹೊಟ್ಟಿನ ಸಮಸ್ಯೆ ಇರುವುದಿಲ್ಲ.
ಈ ಹೇರ್ ಕೇರ್ ಟಿಪ್ಸ್ ತುಂಬಾ ಸರಳವಾಗಿದೆ ಅಲ್ವಾ?



Click it and Unblock the Notifications
