Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಬೇಸಿಗೆಯಲ್ಲಿ ಒಣಚರ್ಮಕ್ಕೆ ನಿವಾರಿಸಲು ಪರಿಣಾಮಕಾರಿ ಮನೆಮದ್ದುಗಳು
ಬೇಸಿಗೆ ಕಾಲದಲ್ಲಿ ಅತಿಯಾದ ಬೆವರು ಹಾಗೂ ಹೊರಗಿನ ಬಿಸಿಲಿನಿಂದಾಗಿ ಚರ್ಮವು ತುಂಬಾ ಒಣಗುವುದು ಮತ್ತು ಅತಿಯಾದ ಉಷ್ಣಾಂಶದಿಂದಾಗಿ ದೇಹಕ್ಕೆ ಹೆಚ್ಚಿನ ತೇವಾಂಶ ಬೇಕಾಗುವುದು. ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿರುವುದು. ಆದರೆ ನೀವು ಚರ್ಮದ ಆರೈಕೆಯನ್ನು ಮಾಡಿಕೊಳ್ಳಲೇಬೇಕು. ಯಾಕೆಂದರೆ ಚರ್ಮವು ಸುಂದರವಾಗಿದ್ದರೆ ಆಗ ನಿಮ್ಮಸೌಂದರ್ಯವು ಎದ್ದು ಕಾಣುವುದು.

ಇಂತಹ ಸಮಯದಲ್ಲಿ ನೀವು ಚರ್ಮದ ಆರೈಕೆಯನ್ನು ಕಡೆಗಣಿಸಬಾರದು. ಹೀಗಾಗಿ ನೀವು ಚರ್ಮದ ಆರೈಕೆ ಮಾಡಲು ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ರೀತಿಯ ಉತ್ಪನ್ನಗಳನ್ನು ಬಲಸಿಕೊಳ್ಳಬಹುದು. ಇದು ನಿಮಗೆ ಕೆಲವು ಸಮಯ ಕಾಂತಿ ನೀಡಿದರೂ ಅದರಿಂದ ಮುಂದೆ ಕೆಟ್ಟ ಪರಿಣಾಮಗಳು ಉಂಟಾಗುವುದು. ಇದಕ್ಕಾಗಿ ಮನೆಯಲ್ಲೇ ಕೆಲವೊಂದು ಸಾಮಗ್ರಿಗಳನ್ನು ತೆಗೆದುಕೊಂಡು ಅದರಿಂದ ಚರ್ಮದ ಆರೈಕೆ ಮಾಡಿಕೊಳ್ಳಬೇಕು. ಒಣ ಚರ್ಮವನ್ನು ಕಡೆಗಣಿಸಿದರೆ ಆಗ ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಬಹುದು.

ಆಲಿವ್ ತೈಲ/ಬಾದಾಮಿ ಎಣ್ಣೆ ಮಸಾಜ್
ಬಾದಾಮಿ ಅಥವಾ ಆಲಿವ್ ತೈಲದಿಂದ ನೀವು ಚರ್ಮಕ್ಕೆ ಮಸಾಜ್ ಮಾಡಿದರೆ ಆಗ ಎಣ್ಣೆಯು ಒಳಗೆ ಹೋಗಿ ಚರ್ಮವು ಒಣಗುವುದನ್ನು ತಪ್ಪಿಸುವುದು. ನೀವು ರಾತ್ರಿ ಮಲಗುವ ಮೊದಲು ಬಾದಾಮಿ ಎಣ್ಣೆ ಅಥವಾ ಆಲಿವ್ ತೈಲದಿಂದ ಮಸಾಜ್ ಮಾಡಿಕೊಂಡರೆ ಆಗ ಚರ್ಮಕ್ಕೆ ಸುಮಾರು 8 ಗಂಟೆಗಳ ಕಾಲ ನೆನೆಸಿದಂತೆ ಆಗುವುದು.

ಟೊಮೆಟೊ
ಟೊಮೆಟೊ ಪ್ಯೂರಿಯು ಚರ್ಮಕ್ಕೆ ತುಂಬಾ ಹಿತಕರವಾಗಿ ಇರುವುದು ಮತ್ತು ಹಲವಾರು ರೀತಿಯ ಲಾಭಗಳನ್ನು ಇದು ಚರ್ಮಕ್ಕೆ ನೀಡುವುದು. ಇದು ಕಲೆ ನಿವಾರಣೆ ಮಾಡುವುದು. ಚರ್ಮವನ್ನು ಇದು ಪುನರ್ಶ್ಚೇತನಗೊಳಿಸುವ ಜತೆಗೆ ಚರ್ಮಕ್ಕೆ ಕಾಂತಿ ನೀಡುವುದು ಮತ್ತು ನಿಸ್ತೇಜವಾಗಿರುವ ಚರ್ಮವನ್ನು ನಿವಾರಿಸುವುದು. ಇದನ್ನು ನೀವು ಕೂದಲಿಗೂ ಬಳಸಿಕೊಳ್ಳಬಹುದು. ಇದರಿಂದ ತುಂಬಾ ಕಾಂತಿ ಮತ್ತು ಬಿಸಿಲಿನಿಂದ ಆಗುವ ಹಾನಿ ತಪ್ಪುವುದು. ಸುಲಭವಾಗಿ ಇದನ್ನು ಪ್ರಯೋಗಿಸಲು ನೀವು ಟೊಮೆಟೊ ತೆಗೆದುಕೊಂಡು ಅದನ್ನು ಚರ್ಮಕ್ಕೆ ಹಾಗೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೊಳೆಯಿರಿ.

ಅಲೋವೆರಾ
ಒಣ ಚರ್ಮಕ್ಕೆ ಇದು ತುಂಬಾ ಒಳ್ಳೆಯ ಮನೆಮದ್ದು ಆಗಿದೆ. ಅಲೋವೆರಾ ಲೋಳೆ ತೆಗೆಯಿರಿ ಮತ್ತು ಇದನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. ಇದನ್ನು ಹಚ್ಚಿಕೊಂಡ ಬಳಿಕ ಚರ್ಮಕ್ಕೆ ಶಮನ ಸಿಗುವುದನ್ನು ನೀವು ನೋಡಬಹುದು. ಇದು ಹಲವಾರು ರೀತಿಯ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಜೇನುತುಪ್ಪ
ಜೇನುತುಪ್ಪವನ್ನು ಒಣಚರ್ಮದ ಮೇಲೆ ಹಚ್ಚಿಕೊಳ್ಳುವ ಕಾರಣದಿಂದಾಗಿ ಅದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು ಮತ್ತು ಹೊಸ ಕೋಶಗಳು ಬೆಳೆಯಲು ನೆರವಾಗುವುದು. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದಾಗಿ ಇದನ್ನು ಒಡೆದ ಚರ್ಮಕ್ಕೂ ಬಳಸಬಹುದು.

ಹಾಲಿನ ಸ್ನಾನ
ಒಣ ಚರ್ಮಕ್ಕೆ ನೀವು ಶಮನ ನೀಡಲು ವಾರಕ್ಕೆ ಒಂದು ಸಲ ಹಾಲಿನಲ್ಲಿ ಸ್ನಾನ ಮಾಡಿಕೊಳ್ಳಿ.
ಹಾಲಿನ ಹುಡಿಯೊಂದಿಗೆ ಬಾದಾಮಿ ಎಣ್ಣೆ ಅಥವಾ ಆಲಿವ್ ತೈಲ ಹಾಕಿಕೊಂಡರೆ ಅದು ಚರ್ಮಕ್ಕೆ ಪೋಷಣೆ ಸಿಗುವುದು.

ಸೌತೆಕಾಯಿ
ಸೌತೆಕಾಯಿ ಶಮನ ನೀಡುವುದು ಮತ್ತು ಇದು ತಿನ್ನುವಾಗಲು ತುಂಬಾ ತಂಪಾಗಿರುವುದು. ಆದರೆ ಇದನ್ನು ನೀವು ಚರ್ಮಕ್ಕೆ ಹಚ್ಚಿಕೊಳ್ಳಬೇಕು. ಇದು ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುವುದು ಮತ್ತು ಬಿಸಿಲಿನಿಂದ ಆಗಿರುವ ಕಲೆ ನಿವಾರಣೆ ಮಾಡುವುದು. ಸೌತೆಕಾಯಿ ಜತೆಗೆ ಟೊಮೆಟೊ ಹಾಕಿದರೆ ಆಗ ಅದು ಅದ್ಭುತವಾಗಿ ಕೆಲಸ ಮಾಡುವುದು. ಇದರಿಂದ ಮೊಡವೆ ಹಾಗೂ ಬೊಕ್ಕೆ ನಿವಾರಣೆ ಮಾಡಬಹುದು.

ಅವಕಾಡೊ
ಅವಕಾಡೊ ತೈಲ ಅಥವಾ ಅವಕಾಡೊವನ್ನು ಹಾಗೆ ಜಜ್ಜಿಕೊಂಡು ಅದರೊಂದಿಗೆ ನೀರು ಬೆರೆಸಿ ಒಣಚರ್ಮಕ್ಕೆ ಬಳಸಬೇಕು. ಇದರಿಂದ ಚರ್ಮಕ್ಕೆ ಪೋಷಣೆ ಸಿಗುವುದು. ಅವಕಾಡೊದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕೊಬ್ಬಿನಾಮ್ಲಗಳು ಇವೆ. ಇದು ಚರ್ಮಕ್ಕೆ ಕಾಂತಿ ನೀಡುವುದು ಮತ್ತು ಪುನರ್ಶ್ಚೇತನ ನೀಡುವುದು.



Click it and Unblock the Notifications











