Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿಕ್ಕು ಕೂದಲಿನ ಸಮಸ್ಯೆಗೆ ಬಾದಾಮಿ ಎಣ್ಣೆ, ಮೊಸರು, ಜೇನಿನ ಲೇಪನ
ಸಿಕ್ಕುಸಿಕ್ಕಾದ ಕೂದಲನ್ನು ಬಿಡಿಸುವುದು ಒಂದು ಕಷ್ಟಕರವಾದ ಕೆಲಸ. ಬಾಚಣಿಗೆಯಿಂದ ಒತ್ತಡ ಹೇರಿದಷ್ಟೂ ಕೂದಲು ಮಧ್ಯೆ ತುಂಡಾಗುವ ಸಂಭವವೇ ಹೆಚ್ಚು. ಕೂದಲು ಎಳೆದಾಗ ಆಗುವ ನೋವು, ತುಂಡಾದ ಕೂದಲು ಕಂಡಾಗ ಆಗುವ ಬೇಸರ, ಬುಡದಲ್ಲಿ ದಪ್ಪಗಿದ್ದರೂ ತುದಿಯಲ್ಲಿ ಹಾವಿನ ಬಾಲದಂತಾಗಿರುವ ಕೇಶವನ್ನು ಕಂಡಾಗ ಯಾರಿಗೂ ಕೇಶಶೃಂಗಾರ ಮಾಡಿಕೊಳ್ಳುವ ಉತ್ಸಾಹವೇ ಉಳಿದಿರುವುದಿಲ್ಲ. ಸತ್ತು ಹೋಗಲಿ ಎಂದು ಬೈದು ಮಾಮೂಲಿಯಂತೆ ಜುಟ್ಟುಕಟ್ಟಿಕೊಳ್ಳುವುದು ಅಥವಾ ಮಡಚಿದ ಜಡೆ ಕಟ್ಟಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ.
ಇದಕ್ಕೆ ಕಾರಣವನ್ನು ಕೆದಕಿದರೆ ನಾವೇ ನಮ್ಮ ಕೈಯಾರೆ ಇದಕ್ಕೆ ಕಾರಣ ಎಂದು ಗೊತ್ತಾಗುತ್ತದೆ. ಕೂದಲಿಗೆ ಸರಿಯಾದ ಆರೈಕೆ ಮಾಡದಿರುವ ಕಾರಣ ಕೂದಲ ಬುಡಗಳು ಎದ್ದು ಬರುತ್ತವೆ. ಇದರಿಂದ ಕೂದಲಿಗೆ ಅಗತ್ಯವಾದ ಆರ್ದ್ರತೆ ದೊರಕದೇ ಕೂದಲ ಬುಡ ತೆಳುವಾಗುತ್ತಾ ಹೋಗುತ್ತದೆ. ನಮ್ಮ ಜೀವನಶೈಲಿಯೂ ಇದಕ್ಕೆ ಹೆಚ್ಚೂ ಕಡಿಮೆ ಕಾರಣವಾಗಿದೆ. ಪರಿಣಾಮವಾಗಿ ಪ್ರತಿ ಕೂದಲೂ ಏಕಪ್ರಕಾರವಾಗಿ ದಪ್ಪನಾಗಿರುವುದಿಲ್ಲ, ಬುಡದಲ್ಲಿ ತೆಳುವಾಗಿದ್ದು ಮಧ್ಯೆ ಎಲ್ಲೋ ಕೊಂಚ ದಪ್ಪನಾಗಿರುವುದು ತುದಿಯಲ್ಲಿ ಮತ್ತೆ ಸಪೂರವಾಗಿರುವುದು ಕಾಣಬರುತ್ತದೆ.

ಈ ಅಸಮಾನತೆಯ ಕಾರಣ ಸಪೂರವಾಗಿರುವ ಕೂದಲಿನ ಭಾಗ ಪಕ್ಕದ ಕೂದಲಿನ ದಪ್ಪನಾದ ಭಾಗಕ್ಕೆ ಬಳ್ಳಿಯಂತೆ ಸುತ್ತಲು ಸಾಧ್ಯವಾಗುತ್ತದೆ. ಎಲ್ಲಾ ಕೂದಲುಗಳು ಒಟ್ಟಾರೆಯಾಗಿ ಹೀಗೆ ಸುತ್ತಿಕೊಳ್ಳುವ ಕಾರಣ ಕೂದಲು ಸಿಕ್ಕುಸಿಕ್ಕಾಗುತ್ತದೆ. ಈ ಸಿಕ್ಕನ್ನು ಬಿಡಿಸಲು ಹಲವು ಶಾಂಪೂ, ಸೀರಂ, ಕಂಡೀಶನರುಗಳು ಲಭ್ಯವಿವೆಯಾದರೂ ಇವುಗಳಲ್ಲಿರುವ ರಾಸಾಯನಿಕಗಳು ನಿಧಾನವಾಗಿ ಕೂದಲಿಗೆ ಘಾಸಿಯುಂಟುಮಾಡಬಹುದು. ಗುಂಗುರು ಕೂದಲಿರುವವರು ತಲೆಬಾಚುವಾಗ ಮಾಡುವ ತಪ್ಪುಗಳು
ಈ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವ ಕೆಲವು ನೈಸರ್ಗಿಕ ಘಟಕಾಂಶಗಳಿವೆ. ಇವುಗಳ ಸಮರ್ಪಕ ಬಳಕೆಯಿಂದ ಕೂದಲಿಗೆ ಉತ್ತಮ ಪೋಷಣೆ ನೀಡುವ ಜೊತೆಗೇ ಸಿಕ್ಕುಸಿಕ್ಕಾಗಿರುವ ಕೂದಲನ್ನು ಸುಲಭವಾಗಿ ಬಿಡಿಸಿ ಕೂದಲು ತುಂಡಾಗುವುದನ್ನು ತಪ್ಪಿಸಬಹುದು. ಇಂದು ಈ ಪೋಷಣೆಯನ್ನು ನೀಡುವ ಲೇಪನವನ್ನು ಹೇಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಎಂಬುದನ್ನು ಕಲಿಯೋಣ. ಇದಕ್ಕೆ ಪ್ರಮುಖವಾಗಿ ಬೇಕಾಗಿರುವುದು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿರುವ ಮೂರೇ ಸಾಮಾಗ್ರಿಗಳು.
ಅವೆಂದರೆ ಮೊಸರು, ಜೇನು ಮತ್ತು ಬಾದಾಮಿ ಎಣ್ಣೆ. ಈ ಮೂರೂ ಸಾಮಾಗ್ರಿಗಳು ಪ್ರತ್ಯೇಕವಾಗಿ ಚರ್ಮ ಮತ್ತು ಕೂದಲಿಗೆ ಉತ್ತಮ ಪೋಷಣೆ ನೀಡುತ್ತಿದ್ದು ಮೂರನ್ನೂ ಬೆರೆಸಿ ಬಳಸಿದಾಗ ಕೂದಲಿಗೆ ಅತ್ಯುತ್ತಮವಾದ ಕಂಡೀಶನಿಂಗ್ ದೊರಕುತ್ತದೆ. ಸಿಕ್ಕಾಗಿದ್ದ ಕೂದಲು ಬಿಡಿಬಿಡಿಯಾಗಲು ಸಾಧ್ಯವಾಗುತ್ತದೆ. ಕೂದಲ ಬುಡಕ್ಕೂ ಉತ್ತಮ ಪೋಷಣೆ ದೊರೆತು ಕೂದಲ ಬುಡ ದೃಢವಾಗುತ್ತದೆ.
ಅಗತ್ಯವಿರುವ ಸಾಮಾಗ್ರಿಗಳು
*ಎರಡು ದೊಡ್ಡ ಚಮಚ ಬಾದಾಮಿ ಎಣ್ಣೆ
*ಅರ್ಧ ಕಪ್ ಮೊಸರು
*ಕಾಲು ಕಪ್ ಜೇನು. ಕೂದಲಿನ ಆರೈಕೆ ಕೂಡ ಕೋಮಲತೆಯಿಂದ ಕೂಡಿರಲಿ
ತಯಾರಿಸುವ ವಿಧಾನ
*ಎಲ್ಲಾ ಸಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಕಲಕಿ ಲೇಪನ ತಯಾರಿಸಿ
*ಈ ಲೇಪನವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದು ಒರೆಸಿಕೊಂಡ ಕೂದಲಿಗೆ ನಯವಾದ ಮಸಾಜ್ ಮೂಲಕ ಹಚ್ಚಿ ಸುಮಾರು ಐದರಿಂದ ಹತ್ತು ನಿಮಿಷ ಮಸಾಜ್ ಮಾಡುತ್ತಲೇ ಇರಿ.
*ಬಳಿಕ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷ ಹಾಗೇ ಬಿಡಿ.
*ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.
*ಸ್ನಾನದ ತಕ್ಷಣವೇ ತಲೆ ಒರೆಸಿಕೊಳ್ಳಲು ಹೋಗಬೇಡಿ, ನೀರೆಲ್ಲಾ ತಾನಾಗಿ ಇಳಿಯುವವರೆಗೆ ಕಾದು ಬಳಿಕ ದಪ್ಪ ಟವೆಲ್ ಒತ್ತಿ ನೀರನ್ನು ಹೀರಿಕೊಳ್ಳುವಂತೆ ಮಾಡಿ.
*ಬಳಿಕ ದೊಡ್ಡ ಹಲ್ಲುಗಳ ಬಾಚಣಿಗೆ ಬಳಸಿ ಕೂದಲನ್ನು ಬಾಚಿಕೊಳ್ಳಿ, ಸಿಕ್ಕಾಗಿದ್ದ ಕೂದಲ್ಲೆಲ್ಲಾ ಸುಲಭವಾಗಿ ಬಿಡಿಸಿಕೊಂಡು ಕೂದಲು ನಯವಾಗಿರುವುದು ಗಮನಕ್ಕೆ ಬರುತ್ತದೆ.
ಈ ವಿಧಾನದಲ್ಲಿ ನಯವಾದ ಕೂದಲು ಕನಿಷ್ಠ ಒಂದು ತಿಂಗಳಾದರೂ ಹಾಗೇ ಇರುತ್ತದೆ. ಆದ್ದರಿಂದ ಕನಿಷ್ಠ ಒಂದು ತಿಂಗಳವರೆಗೆ ಈ ವಿಧಾನವನ್ನು ಮತ್ತೆ ಅನುಸರಿಸಬಾರದು. ಆದರೆ ನಿಯಮಿತ ಆರೈಕೆಯನ್ನೂ ಬಿಡಬಾರದು.



Click it and Unblock the Notifications


