Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲುದುರುವ ಸಮಸ್ಯೆಗೆ-ಗ್ರೀನ್ ಟೀ ಹೇರ್ ಪ್ಯಾಕ್...
ಹಸಿರು ಟೀ ಅಥವಾ ಗ್ರೀನ್ ಟೀ ಸೇವನೆಯಿಂದ ದೇಹಕ್ಕೆ ಹತ್ತು ಹಲವು ವಿಧದ ಪ್ರಯೋಜನಗಳಿವೆ, ಎಂಬುದನ್ನು ನಾವು ಹಲವು ಬಾರಿ ನಮ್ಮ ಬೋಲ್ಡ್ ಸ್ಕೈ ತಾಣದಲ್ಲಿ ಪ್ರಕಟಿಸಿದ್ದೇವೆ... ಅದರಲ್ಲೂ ವಿಶೇಷವಾಗಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ, ಅಷ್ಟೇ ಅಲ್ಲದೆ ಉತ್ತಮಗೊಂಡ ಪರಿಚಲನೆ ತಲೆಗೂದಲ ಬುಡಕ್ಕೂ ತಲುಪುತ್ತದೆ...

ಇನ್ನೂ ಇದರ ವಿಶೇಷತೆ ಏನೆಂದರೆ ಹಸಿರು ಟೀಯಲ್ಲಿರುವ epigallocatechin gallate ಅಥವಾ EGCG ಎಂಬ ಪೋಷಕಾಂಶ ಕೂದಲ ಬುಡವನ್ನು ಹೊಸ ಕೂದಲು ಹುಟ್ಟಲು ಅಗತ್ಯ ಪೋಷಣೆ ನೀಡುತ್ತದೆ ಹಾಗೂ catechin ಎಂಬ ಇನ್ನೊಂದು ಪೋಶಕಾಂಶ ಹೊಸ ಕೂದಲು ಹುಟ್ಟಲು ಪ್ರಚೋದಿಸುತ್ತದೆ. ಗ್ರೀನ್ ಟೀನಲ್ಲಿದೆ ಮಧುಮೇಹ ನಿಯಂತ್ರಿಸುವ ಶಕ್ತಿ
ಪರಿಣಾಮವಾಗಿ ಹೊಸ ಕೂದಲು ಆರೋಗ್ಯಕರವಾಗಿ ಬೆಳೆಯಲು ನೆರವಾಗುತ್ತದೆ. ಬನ್ನಿ, ಹಸಿರು ಟೀಯನ್ನು ಒಂದು ಲೇಪನದ ಮೂಲಕ ಹೇಗೆ ಕೂದಲಿಗೆ ಬಳಸಬಹುದು ಎಂಬು ಬಗ್ಗೆ ಕೇಶತಜ್ಞರು ನೀಡುವ ವಿವರಗಳನ್ನು ನೋಡೋಣ:
ಹಸಿರು ಟೀ ಮತ್ತು ಕೊಬ್ಬರಿ ಎಣ್ಣೆ
ಕೊಂಚ ಹಸಿರು ಟೀಪುಡಿಯನ್ನು ನಿಮ್ಮ ನೆಚ್ಚಿನ ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯೊಡನೆ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಕೂದಲ ಬುಡಕ್ಕೆ ನಯವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಈ ಲೇಪನದಲ್ಲಿ ಎಣ್ಣೆಗಿಂತಲೂ ಹಸಿರು ಟೀ ಪ್ರಮಾಣವೇ ಹೆಚ್ಚಿರಲಿ. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!
ಹಸಿರು ಟೀ ಮತ್ತು ಬೆಣ್ಣೆಹಣ್ಣಿನ ಲೇಪನ
ಒಂದು ಚೆನ್ನಾಗಿ ಹಣ್ಣಾದ ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಚೆನ್ನಾಗಿ ಗೊಟಾಯಿಸಿ ಲೇಪನ ತಯಾರಿಸಿ. ಈ ತಿರುಳಿಗೆ ಒಂದು ದೊಡ್ಡ ಚಮಚ ಹಸಿರು ಟೀ ಪುಡಿ ಮತ್ತು ಒಂದು ದೊಡ್ಡ ಚಮಚ ಮೆಂತೆಕಾಳಿನ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿ. ಕೊಂಚವೇ ಉಗುರುಬೆಚ್ಚನೆಯ ನೀರು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳುವಷ್ಟು ಗಾಢವಾಗಿಸಿ. ಈ ಲೇಪನವನ್ನು ಈಗತಾನೇ ತೊಳೆದ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.
ಹಸಿರು ಟೀ ಮತ್ತು ಪುದೀನಾ ಎಲೆಗಳು
ಎರಡು ಕಪ್ ಟೀ ಮಾಡಲು ಅಗತ್ಯವಿರುವಷ್ಟು (ಅಥವಾ ಎರಡು ಮುಳುಗಿಸಬಹುದಾದ ಸ್ಯಾಶೆಗಳ) ಹಸಿರು ಟೀ ಪುಡಿಯನ್ನು ಐದು ಪುದೀನಾ ಎಲೆಗಳೊಂದಿಗೆ ಅರ್ಧ ಲೀಟರ್ ನೀರಿನಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಕನಿಷ್ಠವಾಗಿಸಿ ಅರ್ಧ ಗಂಟೆ ಹಾಗೇ ಇರಿಸಿ. ಬಳಿಕ ಉರಿ ಆರಿಸಿ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿಗೆ ಒಂದು ದೊಡ್ಡ ಗಾತ್ರದ ಲಿಂಬೆರಸವನ್ನು ಸೇರಿಸಿ ತಣಿಯಲು ಬಿಡಿ. ಈ ನೀರಿನಿಂದ ಇಡಿಯ ತಲೆಯನ್ನು ನೆನೆಸಿ ಹದಿನೈದು ನಿಮಿಷ ಕಾಲ ಹಾಗೇ ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ರಾತ್ರಿ ಮಲಗುವ ಮುನ್ನ 'ಗ್ರೀನ್ ಟೀ' ಕುಡಿದರೆ ದುಪ್ಪಟ್ಟು ಲಾಭ!
ಹಸಿರು ಟೀ ಮತ್ತು ಮದರಂಗಿ
ಒಂದು ಕಪ್ ನೀರಿನಲ್ಲಿ ಕೊಂಚ ಹಸಿರು ಟೀ ಕುದಿಸಿ ಗಾಢ ಹಸಿರು ಬಣ್ಣ ಬಂದ ಬಳಿಕ ತಣಿಸಿ ಈ ನೀರನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ. ಈ ನೀರಿಗೆ ಕೊಂಚ ಮದರಂಗಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಗೌರವರ್ಣದ ತ್ವಚೆಗಾಗಿ ಗ್ರೀನ್ ಟೀ- ಜೇನಿನ ಫೇಸ್‌ಪ್ಯಾಕ್
ಈ ಮಿಶ್ರಣವನ್ನು ಇಡಿಯ ರಾತ್ರಿ ಹಾಗೇ ಇರಿಸಿ. ಮರುದಿನ ನಿಮಗೆ ಸೂಕ್ತವಾದ ಸಮಯದಲ್ಲಿ ಇದನ್ನು ಹಚ್ಚುವ ಮುನ್ನ ಕೆಲವು ಹನಿ ನಿಮ್ಮ ಆಯ್ಕೆಯ ಯಾವುದೇ ಅವಶ್ಯಕ ತೈಲವನ್ನು ತಲೆಗೆ ಹಚ್ಚಿಕೊಳ್ಳಿ. ಬಳಿಕ ಈ ಮಿಶ್ರಣವನ್ನು ನಯವಾದ ಮಸಾಜ್ ಮೂಲಕ ಇಡಿಯ ತಲೆ ಆವರಿಸುವಂತೆ ಹಚ್ಚಿ ಒಂದು ಗಂಟೆಯಾದರೂ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.



Click it and Unblock the Notifications




