Latest Updates
-
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು
ಬರೀ ಒಂದೇ ವಾರದಲ್ಲಿ ರೇಷ್ಮೆಯಂತಹ ಕೂದಲು ಪಡೆಯಿರಿ!
ಪ್ರತಿದಿನ ಬೆಳಿಗ್ಗೆ ತಲೆ ಬಾಚಿಕೊಳ್ಳುವಾಗ ಕೂದಲು ನಡುವೆ ತುಂಡಾಗುತ್ತಿದೆಯೇ? ಕೂದಲು ವಿಪರೀತವಾಗಿ ಒಣಗಿ ಹೊಳಪಿಲ್ಲದೇ ಮುರುಟಿದೆಯೇ? ಹಾಗಾದರೆ ಇದರ ಆರೈಕೆಗಾಗಿ ಕೆಲವಾದರೂ ಮಾರುಕಟ್ಟೆಯಲ್ಲಿ ದೊರಕುವ, ಜಾಹೀರಾತಿನ ಮೂಲಕ ಅದ್ಭುತ ಪರಿಣಾಮ ಬೀರುವ ಕೆಲವು ಪ್ರಸಾಧನಗಳನ್ನಾದರೂ ನೀವು ಈಗಾಗಲೇ ಪ್ರಯತ್ನಿಸಿರಬಹುದು. ಆದರೆ ಹೆಚ್ಚಿನವು ಜಾಹೀರಾತಿನಲ್ಲಿ ನೀಡಿದ ಭರವಸೆಯ ನೂರರಲ್ಲಿ ಒಂದಂಶವನ್ನೂ ಉಳಿಸಿಕೊಳ್ಳದಿರುವುದನ್ನೂ ನೀವು ಗಮನಿಸಿರಬಹುದು.

ಒಂದು ಉತ್ಪನ್ನ ಪ್ರಯೋಜನವಿಲ್ಲವೆಂದಾಕ್ಷಣ ಇನ್ನೊಂದನ್ನು ಪ್ರಯತ್ನಿಸಿ, ಮತ್ತೊಮ್ಮೆ ಮತ್ತೊಂದನ್ನು ಪ್ರಯತ್ನಿಸುವ ನಿಟ್ಟಿನಲ್ಲಿ ಕೂದಲು ಇನ್ನಷ್ಟು ಘಾಸಿಗೊಳ್ಳಲು ಪ್ರತಿ ಉತ್ಪನ್ನದಲ್ಲಿರುವ ಭಿನ್ನ ಭಿನ್ನ ರಾಸಾಯನಿಕಗಳೇ ಕಾರಣವಾಗಿವೆ. ಆದ್ದರಿಂದ ಸೌಂದರ್ಯದ ವೃದ್ಧಿಗೆ ನಿಸರ್ಗದ ಮೊರೆ ಹೋಗುವುದೇ ಕ್ಷೇಮ. ಕೂದಲ ಆರೈಕೆಗೆ ನಿಸರ್ಗ ಅತ್ಯುತ್ತಮವಾದ ಪ್ರಸಾಧನಗಳನ್ನು ನೀಡಿದ್ದು ಇದರ ಪರಿಣಾಮ ಬೀರುವುದು ಕೊಂಚ ನಿಧಾನ ಎಂಬ ಏಕಮಾತ್ರ ಕಾರಣ ಬಿಟ್ಟರೆ ಇವನ್ನು ಇಲ್ಲವೆನ್ನಲು ಬೇರಾವುದೇ ಕಾರಣ ಉಳಿಯುವುದಿಲ್ಲ.
ಹೆಚ್ಚಿನ ಸಮಯದಲ್ಲಿ ಚಿಕ್ಕವರಿದ್ದಾಗ ಇದ್ದ ನೀಳ, ಸೌಮ್ಯ ಮತ್ತು ಕಾಂತಿಯುಕ್ತ ಕೂದಲು ಕಾಲಕ್ರಮೇಣ ಕಳೆಗುಂದಲು ಕೆಲವು ಬಾಹ್ಯ ಕಾರಣಗಳಿರಬಹುದು. ಧೂಳು, ಪ್ರದೂಷಣೆ, ಹೊಗೆ, ಬಿಸಿಲು, ಅಸಮರ್ಪಕ ಮತ್ತು ಅನಾರೋಗ್ಯಕರ ಸಿದ್ಧ ಆಹಾರಗಳ ಸೇವನೆ, ಸಾಕಷ್ಟು ನೀರು ಸೇವಿಸದಿರುವುದು ಇತ್ಯಾದಿಗಳು ಕೂದಲ ಸಹಿತ ದೇಹದ ಇತರ ಅಂಗಗಳ ಆರೋಗ್ಯವನ್ನೂ ಕುಂಠಿತಗೊಳಿಸುತ್ತವೆ. ಇವನ್ನು ರಿಪೇರಿಗೊಳಿಸಲು ನಿಸರ್ಗದ ಕೆಲವು ಪರಿಕರಗಳು ಸಾಕು.
ಇಂದು ಇಂತಹ ಒಂದು ಅದ್ಭುತ ಮತ್ತು ಪರಿಣಾಮಕಾರಿ ವಿಧಾನದ ಬಗ್ಗೆ ಅರಿಯೋಣ. ಇದಕ್ಕಾಗಿ ಬೇಕಾಗಿರುವುದು ಮೊಟ್ಟೆಯಲ್ಲಿರುವ ಹಳದಿ ಭಾಗ, ಕೊಬ್ಬರಿ ಎಣ್ಣೆ ಮತ್ತು ವ್ಹಿಪ್ಡ್ ಕ್ರೀಂ ಅಷ್ಟೇ. ಇದರ ಸರಿಯಾದ ಬಳಕೆಯಿಂದ ಕೂದಲು ಸೌಮ್ಯ, ರೇಷ್ಮೆಯಂತೆ ನುಣುಪು ಹಾಗೂ ಕಾಂತಿ ಪಡೆಯುತ್ತದೆ.
ಅಗತ್ಯವಿರುವ ಸಮಾಗ್ರಿಗಳು
*ಮೊಟ್ಟೆಯಲ್ಲಿರುವ ಹಳದಿ ಭಾಗ - ಎರದು ದೊಡ್ಡ ಚಮಚ
*ವ್ಹಿಪ್ಡ್ ಕ್ರೀಂ: ಎರಡು ದೊಡ್ಡ ಚಮಚ
*ಕೊಬ್ಬರಿ ಎಣ್ಣೆ : ಎರಡು ದೊಡ್ಡ ಚಮಚ
ಈ ಮೂರೂ ಸಾಮಾಗ್ರಿಗಳಲ್ಲಿ ಕೂದಲ ಬುಡಕ್ಕೆ ಆರ್ದ್ರತೆ ನೀಡುವ ಗುಣಗಿದ್ದು ಕೂದಲನ್ನು ಬುಡದಿಂದಲೇ ದೃಢಗೊಳಿಸಲು ನೆರವಾಗುತ್ತದೆ. ಒಣಗೂದಲಿಗೆ ಆರ್ದ್ರತೆಯ ಕೊರತೆಯೇ ಪ್ರಮುಖ ಕಾರಣವಾಗಿದೆ. ಸಾಕಷ್ಟು ಆರ್ದ್ರತೆ ಪಡೆದ ಕೂದಲ ಬುಡದ ಚರ್ಮದಿಂದ ಅರೋಗ್ಯಕರ ಕೂದಲು ಬೆಳೆಯಲು ಸಾಧ್ಯವಾಗುತ್ತದೆ.
ಇದರೊಂದಿಗೆ ಮೊಟ್ಟೆಯ ಹಳದಿಭಾಗ ಮತ್ತು ಕೊಬ್ಬರಿ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನುಗಳು ಮತ್ತು ಖನಿಜಗಳಿದ್ದು ಕೂದಲ ದೃಢತೆ ಹೆಚ್ಚಿಸಲು ನೆರವಾಗುತ್ತವೆ. ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ವ್ಹಿಪ್ಡ್ ಕ್ರೀಮ್ ತಲೆಯ ಚರ್ಮದ ಪಿಎಚ್ ಮಟ್ಟ ಅಂದರೆ ಆಮ್ಲೀಯತೆ ಮತ್ತು ಕ್ಷಾರೀಯತೆಯನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.
ತಲೆಯ ಚರ್ಮ ಒಣಗಿದಷ್ಟೂ ಚರ್ಮ ಒಸರುವ ದ್ರವ ಹೆಚ್ಚು ಹೆಚ್ಚು ಆಮ್ಲೀಯವಾಗುತ್ತಾ ಕೂದಲ ಬುಡ ಸಡಿಲಗೊಳ್ಳುತ್ತಾ ಹೋಗಿ ಕೂದಲು ಉದುರಲು ಕಾರಣವಾಗುತ್ತದೆ. ಕ್ರೀಂನಲ್ಲಿ ಈ ಮಟ್ಟವನ್ನು ಸಮತೋಲನದಲ್ಲಿರಿರುವ ಗುಣಗಳಿವೆ. ಅಲ್ಲದೇ ಕ್ರೀಂ ಸಹಾ ಪೋಷಣೆ ಮತ್ತು ಆರ್ದ್ರತೆ ನೀಡುವ ಮೂಲಕ ಕೂದಲನ್ನು ಇನ್ನಷ್ಟು ಬಲಪಡಿಸುತ್ತದೆ. ಒಟ್ಟಾರೆಯಾಗಿ ಈ ಮೂರು ಪರಿಕರಗಳು ಕೂದಲನ್ನು ರೇಶ್ಮೆಯಂತೆ ನುಣುಪಾಗಿಸಲು ಮತ್ತು ಕಾಂತಿಯುಕ್ತವಾಗಿಸಲು ಸಕ್ಷಮವಾಗಿವೆ.
ತಯಾರಿಕಾ ವಿಧಾನ
*ಒಂದು ಚಿಕ್ಕ ಬೋಗುಣಿಯಲ್ಲಿ ಈ ಮೂರೂ ಪರಿಕರಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ದಪ್ಪನೆಯ ಲೇಪನ ತಯಾರಿಸಿ.
ಈ ಲೇಪನವನ್ನು ಈಗತಾನೇ ತೊಳೆದುಕೊಂಡು ಒರೆಸಿಕೊಂಡ ಕೂದಲಿನ ಬುಡದಿಂದ ತುದಿಯವರೆಗೆ ತಗಲುವಂತೆ ಹಚ್ಚಿ.
*ಕೂದಲನ್ನು ಹರಡಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಒಣಗಲು ಬಿಡಿ
*ಬಳಿಕ ತಣ್ಣೀರು, ಸಾಧ್ಯವಾಗದಿದ್ದರೆ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಬಿಸಿನೀರು ಬಳಸಬೇಡಿ, ಇದು ಪೋಷಕಾಂಶಗಳನ್ನು ತೊಳೆದು ಹಾಕುತ್ತದೆ.



Click it and Unblock the Notifications


