Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕೂದಲು ಉದುರುವಿಕೆಯ ಸಮಸ್ಯೆಗೆ ಸೂಕ್ತ ಪರಿಹಾರ
ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ.
ವಯಸ್ಸು ಇಪ್ಪತ್ತಾಯಿದೆಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತದೆ! ತಲೆ ಕೂದಲು ಉದುರುವುದು ಇಂದು ವಿಶ್ವವನ್ನೆ ಕಾಡುತ್ತಿರುವ ಸಮಸ್ಯೆಯಾಗಿದೆ.
ಇದಕ್ಕೆ ಆಹಾರ ಪದ್ಧತಿ, ಖನಿಜಾಂಶದ ಕೊರತೆ, ಔಷಧಿಗಳ ಅಡ್ಡ ಪರಿಣಾಮ, ಒತ್ತಡ, ಮಾಲಿನ್ಯ ಮತ್ತು ವಂಶವಾಹಿಗಳು ಕಾರಣವಾಗಿರುತ್ತವೆ. ಗಂಡಸರು ತಲೆಗೆ ಟೋಪಿ, ಹೆಲ್ಮೆಟ್ ಧರಿಸುವುದರಿಂದ ಸಹ ಕೂದಲು ಉದುರುತ್ತದೆ. ಹಾಗಾಗಿ ಇಂತಹ ಸಮಸ್ಯೆಯನ್ನು ನಿವಾರಿಸಲು ನಾವು ನಿಮಗಾಗಿ ಪರಿಹಾರಗಳನ್ನು ಸೂಚಿಸುತ್ತಿದ್ದೇವೆ ತೆಗೆದುಕೊಳ್ಳಿ.
20 ಹರೆಯದಲ್ಲಿಯೇ ಕೂದಲು ಉದುರಲು ಕಾರಣಗಳು

ಸಾಸಿವೆ ಎಣ್ಣೆ
ಒಂದು ಕಪ್ ಸಾಸಿವೆ ಎಣ್ಣೆಯನ್ನು ನಾಲ್ಕು ಚಮಚ ಮೆಹೆಂದಿ ಸೊಪ್ಪಿನ ಜತೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಟ್ಟು ದಿನವೂ ತಲೆಯ ಭಾಗಕ್ಕೆ ಲೇಪಿಸಿ. ಇದು ಕೂದಲು ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ ಜೊತೆಗೆ ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಕೂದಲಿನ ಆರೋಗ್ಯಕ್ಕೆ ವಿಟಮಿನ್ ತೆಗೆದುಕೊಳ್ಳಿ
ವಿಟಮಿನ್‍ಗಳು ಕೂದಲಿಗಷ್ಟೇ ಅಲ್ಲದೆ ಆರೋಗ್ಯಕ್ಕೆ ಸಹ ಒಳ್ಳೆಯದು. ವಿಟಮಿನ್ ಎ ನಿಮ್ಮ ಕೂದಲಿನ ಬುಡದಲ್ಲಿರುವ ಸೆಬಮ್‍ನ್ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ವಿಟಮಿನ್ ಇ ಯು ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇವು ಹೆಚ್ಚು ಕೂದಲು ಬೆಳೆಯುವುದಕ್ಕೆ ಸಹ ನೆರವಾಗುತ್ತದೆ. ವಿಟಮಿನ್ ಬಿಯು ಕೂದಲಿನ ಬಣ್ಣದ ಯಥಾಸ್ಥಿತಿಯನ್ನು ಕಾಪಾಡುತ್ತದೆ.

ಪ್ರತಿನಿತ್ಯ ನಿಮ್ಮ ಕೂದಲನ್ನು ಮೆದುವಾದ ಶಾಂಪೂ ಬಳಸಿ ತೊಳೆಯಿರಿ
ಪ್ರತಿನಿತ್ಯ ನಿಮ್ಮ ಕೂದಲನ್ನು ಮೆದುವಾದ ಶಾಂಪೂ ಬಳಸಿ ತೊಳೆಯುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಇದರಿಂದ ಕೂದಲು ಒಡೆಯುವುದು ಸಹ ನಿವಾರಣೆಯಾಗುತ್ತದೆ. ಹೀಗೆ ಮಾಡುವುದರಿಂದ ತಲೆ ಹೊಟ್ಟು ಮತ್ತು ಇನ್‍ಫೆಕ್ಷನ್ ಸಮಸ್ಯೆ ಕಡಿಮೆಯಾಗುತ್ತದೆ. ತಲೆ ಹೊಟ್ಟು ಕೂದಲು ಉದುರುವುದಕ್ಕೆ ಮತ್ತು ಒಡೆಯುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯಬೇಡಿ. ಅಲ್ಲದೆ ಸ್ವಚ್ಛವಾದ ಕೂದಲು ನಿಮ್ಮ ಒಟ್ಟಾರೆ ಅಂದಕ್ಕೆ ಮೆರಗು ನೀಡುತ್ತದೆ.

ಒಣದ್ರಾಕ್ಷಿ
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದು ಕೂದಲಿಗೂ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಆಹಾರದಲ್ಲಿ ಪ್ರೋಟಿನ್ ಅಂಶವನ್ನು ಹೆಚ್ಚಾಗಿ ಸೇವಿಸಿ
ಮಾಂಸ, ಮೀನು, ಸೋಯಾ ಅಥವಾ ಪ್ರೋಟಿನ್ ಅಂಶಗಳನ್ನು ಸೇವಿಸುವುದರಿಂದ ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ.

ಕೂದಲಿನ ಬುಡವನ್ನು ಅಗತ್ಯವಾದ ಎಣ್ಣೆಗಳಿಂದ ಮಸಾಜ್ ಮಾಡಿ
ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಕೂದಲಿನ ಬುಡಕ್ಕೆ ಎಣ್ಣೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಕೂದಲಿನ ಬೇರು ಆರೋಗ್ಯವಾಗಿರುತ್ತದೆ. ಇದಕ್ಕಾಗಿ ನೀವು ಬಾದಾಮಿ ಅಥವಾ ಎಳ್ಳು ಎಣ್ಣೆಯನ್ನು ಬಳಸಬಹುದು.

ಸೊಪ್ಪು
ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಅಧಿಕ ಪೋಷಕಾಂಶವಿರುವುದರಿಂದ ದೇಹದ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ತಲೆ ಕೂದಲಿಗೆ ಮೆಂತೆ ನೀರನ್ನು ಬಳಸಿ
ಮೆಂತೆಯನ್ನು ರಾತ್ರಿ ನೀರು ಅಥವಾ ಮೊಸರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ರುಬ್ಬಿ ತಲೆಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಒದ್ದೆ ಕೂದಲನ್ನು ಬ್ರಷ್ ಮಾಡಬೇಡಿ
ಕೂದಲು ಒದ್ದೆಯಾಗಿರುವಾಗ ಅದನ್ನು ಬ್ರಷ್ ಮಾಡಬೇಡಿ. ಇದರಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ. ಆದರೆ ನೀವು ಕೂದಲನ್ನು ದೊಡ್ಡ ಹೆಣಿಗೆ ಇರುವ ಬಾಚಾಣಿಗೆಯಿಂದ ತಲೆ ಬಾಚಿಕೊಳ್ಳಿ. ನಿಯಮಿತವಾಗಿ ಬ್ರಷ್ ಮಾಡುವುದನ್ನು ನಿಲ್ಲಿಸಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯಾಗಿ, ಕೂದಲು ಉದುರುವುದು ಅಧಿಕವಾಗುತ್ತದೆ. ಸಿಕ್ಕನ್ನು ಬಿಡಿಸಲು ಬಾಚಣಿಗೆ ಅಥವಾ ಬ್ರಷ್ ಬದಲು, ನಿಮ್ಮ ಬೆರಳುಗಳನ್ನು ಬಳಸಿ.

ಮೊಸರು ಹಾಗೂ ಮೊಟ್ಟೆ
ಹುಳಿ ಮೊಸರಿಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ



Click it and Unblock the Notifications
