Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತಲೆಹೊಟ್ಟು ಸಮಸ್ಯೆ ನಿವಾರಿಸಲು 12 ನೈಸರ್ಗಿಕ ಮನೆಮದ್ದುಗಳು
ಇಂದಿನ ದಿನಗಳಲ್ಲಿ ತಲೆಹೊಟ್ಟು ಬೆಳೆಯುತ್ತಿರುವ ದೊಡ್ಡ ಸಮಸ್ಯೆ. ನಾವೆಲ್ಲರೂ ಈಗಾಗಲೇ ಕೆಲವೊಂದು ರಾಸಾಯನಿಕ ಮತ್ತು ಶಾಂಪೂಗಳನ್ನು ಬಳಸಿ ಅದರ ನಿವಾರಣೆಗೆ ಪ್ರಯತ್ನಿಸಿದ್ದರೂ ಅದು ತಾತ್ಕಾಲಿಕ ಪರಿಹಾರ ಮಾತ್ರ. ತಲೆಹೊಟ್ಟು ಹೆಚ್ಚಿನವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಬಂದರೆ ತಲೆಯಲ್ಲಿ ಕೆರೆತ ಉಂಟಾಗಿ ತುಂಬಾ ಕಿರಿಕಿರಿ ಅನಿಸುವುದು, ಅಲ್ಲದೆ ಮೊಡವೆ, ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ.
ಈ ರೀತಿ ಕಾಣಿಸಿಕೊಂಡಾಗ ಬರೀ ಶ್ಯಾಂಪೂ, ಸೋಪು ಅಂತ ಹಚ್ಚಿ ಹೊಟ್ಟು ನಿವಾರಣೆಗೆ ಪ್ರಯತ್ನಿಸುತ್ತೇವೆ. ಆದರೆ ಈ ರೀತಿ ಮಾಡಿದರೂ ಕೆಲವೊಮ್ಮೆ ಹೊಟ್ಟು ನಿವಾರಣೆಯಾಗುವುದಿಲ್ಲ. ಹಾಗಾಗಿ ಅಂಗಡಿಗೆ ಹೋಗಿ ಕಂಡ ಕಂಡ ಶಾಂಪೂವನ್ನು ಪ್ರಯೋಗಿಸುವ ಬದಲು ಇಲ್ಲಿ ನೀಡಿರುವ ಮನೆ ಚಿಕಿತ್ಸೆಗಳನ್ನು ಒಮ್ಮೆ ಪ್ರಯತ್ನಿಸಿ. ಕೂದಲನ್ನು ಸುಂದರಗೊಳಿಸುವ ಆರು ಚಮತ್ಕಾರಿಕ ಉತ್ಪನ್ನಗಳು

ನಿಂಬೆ ಹಣ್ಣಿನ ಸ್ನಾನ
ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅವುಗಳನ್ನು 4-5 ಕಪ್ ಬಿಸಿ ನೀರಿನಲ್ಲಿ 15-20 ನಿಮಿಷಗಳ ಕಾಲ ಬೇಯಿಸಿ. ಇದು ಆರಿದ ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಇದನ್ನು ಒಂದು ವಾರ ಪುನರಾವರ್ತಿಸಿ.

ವಿನೇಗರ್ ಚಿಕಿತ್ಸೆ
ವಿನೇಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿಕೊಂಡು ಒಂದು ಮಿಶ್ರಣವನ್ನು ಮಾಡಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, ರಾತ್ರಿ ಪೂರ್ತಿ ಬಿಡಿ. ಮಾರನೆಯ ದಿನ ಇದನ್ನು ಒಂದು ಬೇಬಿ ಶಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.

ಮೊಸರಿನ ಪರಿಹಾರ
ಮೊಸರನ್ನು ನಿಮ್ಮ ಕೂದಲಿಗೆ ಹಚ್ಚಿ, ಕನಿಷ್ಠ ಒಂದು ಗಂಟೆ ನೆನೆಯಲು ಬಿಡಿ. ನಂತರ ಇದನ್ನು ಒಂದು ಮೆದುವಾದ ಶಾಂಪೂವನ್ನು ಬಳಸಿಕೊಂಡು ಚೆನ್ನಾಗಿ ತೊಳೆಯಿರಿ. ಹೀಗೆ ವಾರಕ್ಕೆ ಕನಿಷ್ಠ ಎರಡು ಬಾರಿಯಾದರು ಮಾಡಿ.

ಮೊಟ್ಟೆಗಳನ್ನು ಬಳಸಿ
ಎರಡು ಮೊಟ್ಟೆಗಳನ್ನು ತೆಗೆದುಕೊಂಡು, ಅದನ್ನು ಪೇಸ್ಟ್ ಆಗಿ ಪರಿವರ್ತಿಸಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, ಒಂದು ಗಂಟೆ ನೆನೆಯಲು ಬಿಡಿ. ಈ ಚಿಕಿತ್ಸೆಯಿಂದ ನಿಮಗೆ ಇರುವ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಬೆಚ್ಚಗಿನ ಎಣ್ಣೆಯ ಮಸಾಜ್
ಉಗುರು ಬೆಚ್ಚಗೆ ಇರುವ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆಯನ್ನು ಹಾಕಿಕೊಂಡು ಮಸಾಜ್ ಮಾಡುವುದರಿಂದ ನಿಮ್ಮ ಕೂದಲಿನಲ್ಲಿರುವ ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು. ಹೀಗೆ ಎಣ್ಣೆಯನ್ನು ಹಚ್ಚಿ ರಾತ್ರಿ ಪೂರ್ತಿ ಬಿಟ್ಟು, ಬೆಳಗ್ಗೆ ಅದನ್ನು ಚೆನ್ನಾಗಿ ತೊಳೆಯಿರಿ.

ತೆಂಗಿನ ಎಣ್ಣೆ
ಒಂದು ಚಮಚ ನಿಂಬೆಹಣ್ಣಿನ ರಸಕ್ಕೆ 5 ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿಕೊಂಡು, ನಿಮ್ಮ ಕೂದಲಿಗೆ ಹಚ್ಚಿ. - 20- 30 ನಿಮಿಷಗಳ ಕಾಲ ಬಿಡಿ. ನಂತರ ಒಂದು ಉತ್ತಮ ಶಾಂಪೂವನ್ನು ಹಾಕಿಕೊಂಡು, ಚೆನ್ನಾಗಿ ತಿಕ್ಕಿ ತೊಳೆಯಿರಿ.

ಸೇಬು ಹಣ್ಣು ಸೇವಿಸಿ, ಕೂದಲನ್ನು ಕಾಪಾಡಿ
ಸೇಬು ಮತ್ತು ಕಿತ್ತಳೆಗಳನ್ನು ಸಮಪ್ರಮಾಣಾಲ್ಲಿ ತೆಗೆದುಕೊಂಡು,ಅವುಗಳಿಂದ ಪೇಸ್ಟ್ ತಯಾರಿಸಿ, ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. - ನಂತರ ಇದನ್ನು 20-30 ನಿಮಿಷಗಳ ಕಾಲ ಬಿಟ್ಟು, ಚೆನ್ನಾಗಿ ತೊಳೆಯಿರಿ.

ತುಳಸಿಯ ಮಹಿಮೆ
ತುಳಸಿ ಮತ್ತು ನೆಲ್ಲಿ ಕಾಯಿಯ ಪುಡಿಯನ್ನು ನೀರಿನಲ್ಲಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. ಅರ್ಧ ಗಂಟೆಗಳ ಕಾಲ ಅದನ್ನು ಹಾಗೆಯೇ ಬಿಡಿ. ನಂತರ ನಿಮ್ಮ ಕೂದಲನ್ನು ನೀರು ಮತ್ತು ಶಾಂಪೂವನ್ನು ಬಳಸಿ ಚೆನ್ನಾಗಿ ತೊಳೆಯಿರಿ.

ತಲೆ ಹೊಟ್ಟಿಗೆ ರಾಮಬಾಣ ಬೆಳ್ಳುಳ್ಳಿ
ಎರಡು ಚಮಚದಷ್ಟು ಬೆಳ್ಳುಳ್ಳಯ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸವನ್ನು ಬೆರೆಸಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, 30 ರಿಂದ 40 ನಿಮಿಷಗಳಷ್ಟು ಕಾಲ ಬಿಡಿ. ನಂತರ ಇದನ್ನು ಶಾಂಪೂ ಮತ್ತು ತಣ್ಣೀರನ್ನು ಬಳಸಿ, ಚೆನ್ನಾಗಿ ತೊಳೆಯಿರಿ.

ಈರುಳ್ಳಿ ಪೇಸ್ಟ್
ನಿಮ್ಮ ಕೂದಲಿಗೆ ಈರುಳ್ಳಿ ಪೇಸ್ಟ್ ಹಚ್ಚಿ . ಒಂದು ಗಂಟೆ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ಪೂರ್ತಿಯಾಗಿ ತೊಳೆಯಿರಿ. ನಂತರ ಅದಕ್ಕೆ ತಾಜಾ ನಿಂಬೆಯ ರಸವನ್ನು ಹಚ್ಚಿ. ಇದರಿಂದ ನಿಮ್ಮ ಕೂದಲಿನಲ್ಲಿರುವ ಈರುಳ್ಳಿಯ ವಾಸನೆಯು ಹೊರಟು ಹೋಗುತ್ತದೆ.

ಶುಂಠಿ ಮತ್ತು ಬೀಟ್‍ರೂಟ್ ಪೇಸ್ಟ್
ಶುಂಠಿ ಮತ್ತು ಬೀಟ್‍ರೂಟನ್ನು ರುಬ್ಬಿ ಪೇಸ್ಟ್ ಆಗಿ ಪರಿವರ್ತಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ ರಾತ್ರಿಯೆಲ್ಲ ನೆನೆಯಲು ಬಿಡಿ.ಮಾರನೆಯ ದಿನ ಬೆಳಗ್ಗೆ ಇದನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ.ಈ ಅಭ್ಯಾಸವನ್ನು ನಿರಂತರವಾಗಿ 4- 5 ದಿನಗಳ ರಾತ್ರಿಯಂದು ತಪ್ಪದೆ ಮಾಡಿ.

ನಿಮ್ಮ ಕೂದಲನ್ನು ಪ್ರತಿದಿನ ತೊಳೆಯಿರಿ
ಪ್ರತಿದಿನ ಅಥವಾ ದಿನ ಬಿಟ್ಟು ದಿನ ತಲೆಗೆ ಸ್ನಾನ ಮಾಡುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಬಹುದು. ಅಲ್ಲದೆ ತಲೆಹೊಟ್ಟನ್ನು ಕೂದಲಿಗೆ ಬೇಕಾದ ಚಿಕಿತ್ಸೆಗಳನ್ನು ಪಡೆಯುವುದರಿಂದ ಮತ್ತು ಕೂದಲಿನ ಬುಡವನ್ನು ಸಂಪೂರ್ಣವಾಗಿ ಸ್ವಚ್ಛಮಾಡುವುದರಿಂದ ನಿವಾರಿಸಿಕೊಳ್ಳಬಹುದು.



Click it and Unblock the Notifications
