Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಳಿ ವಯಸ್ಸಿನಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯೇ?
ಇತ್ತೀಚಿನ ದಿನಗಳಲ್ಲಿ ನಗರದ ಧೂಳು, ವಾತಾವರಣದಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಕೂದಲುದುರುವಿಕೆಯಂತೂ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ! ವಯಸ್ಸು ಇಪ್ಪತ್ತಾಯಿದೆಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತದೆ!
ಕೂದಲು ಉದುರುವುದಕ್ಕೆ ಶಕ್ತಿಹೀನತೆಯೇ ಮುಖ್ಯ ಕಾರಣ. ಪೋಷಕಾಂಶಗಳ ಅಭಾವದಿಂದ ಶಕ್ತಿಯ ಕೊರತೆಯುಂಟಾಗುವುದರಿಂದ ಇಳಿ ವಯಸ್ಸಿನಲ್ಲಿ ಹೆಚ್ಚು ಹೆಚ್ಚಾಗಿ ಕೂದಲು ಉದುರುವುದು. ಆದುದರಿಂದ ಉತ್ತಮ ಪೋಷಕಾಂಶಗಳುಳ್ಳ ಆಹಾರ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದ್ದಲ್ಲಿ ಕೂದಲು ಉದುರುವಿಕೆ ಅಷ್ಟಾಗಿ ಕಂಡುಬರುವುದಿಲ್ಲ.
ಕೂದಲು ಉದುರುವುದನ್ನು ತಡೆಗಟ್ಟಬೇಕಾದರೆ ಮಾಂಸ, ಮೀನು, ಹಾಲು, ಬೆಣ್ಣೆ, ತುಪ್ಪ, ಮೊಳೆತ ಕಡಲೆಕಾಳು, ಮೊಳೆತ ಹೆಸರುಕಾಳು ಕ್ರಮವಾಗಿ ಸೇವಿಸಬೇಕು. ಕರಿದ ತಿಂಡಿ, ತಿನಸುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಕೂದಲು ಉದುರುವ ಸಮಸ್ಯೆಗೆ ಇಲ್ಲಿ ಕೆಲವೊಂದು ಪರಿಹಾರವನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ:
ಮೊಸರಿನಿಂದ ನಿಮ್ಮ ಕೂದಲ ಹೊಳಪು ಹೆಚ್ಚಿಸಿ!

1. ಎಣ್ಣೆ ಹಾಗೂ ನಿಂಬೆ ರಸದ ಮಿಶ್ರಣ:
ಸುಮಾರು 100 ಗ್ರಾಂ ಕೊಬ್ಬರಿ ಎಣ್ಣೆಗೆ ಒಂದು ಚಹಾ ಚಮಚ ನಿಂಬೆರಸ ಹಿಂಡಿ. ನಂತರ, ಆ ಎಣ್ಣೆಯೊಂದಿಗೆ ಚೆನ್ನಾಗಿ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಪ್ರತಿದಿನವೂ ಕೂದಲಿಗೆ ಹಚ್ಚುವ ಅಭ್ಯಾಸವಿಟ್ಟುಕೊಳ್ಳಿ.

2. ಕೊಬ್ಬರಿ ಎಣ್ಣೆಯನ್ನು ಬಳಸಿ:
ರಾತ್ರಿ ಮಲಗುವುದಕ್ಕಿಂತ ಮುಂಚೆ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ತಲೆಬುರುಡೆಗೆ ಹಚ್ಚಿ ಚೆನ್ನಾಗಿ ತಿಕ್ಕಿ, ಮರುದಿನ ಬೆಳಿಗ್ಗೆ ತಲೆಗೆ ಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಈ ಕ್ರಮ ಅನುಸರಿಸಿ.

3. ನಿಂಬೆ ರಸ:
ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. ನೀವು ಈ ಕ್ರಮ ಅನುಸರಿಸುತ್ತಾ ಬಂದರೆ ಖಂಡಿತವಾಗಿಯೂ ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು.

4. ಮೆಂತ್ಯವನ್ನು ಬಳಸಿ:
ಮೆಂತ್ಯವನ್ನು ತಂಗಿನ ಹಾಲಿನೊಂದಿಗೆ ನುಣ್ಣಗೆ ಅರೆಯಿರಿ. ಈ ಸರಿಯನ್ನು ತಲೆಗೆ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ.

5. ತಲೆ ಕೂದಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ:
ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂಡಾ ಕಡಿಮೆಯಾಗುತ್ತದೆ.

6. ಎಣ್ಣೆ ಮಸಾಜ್ ಮಾಡಿ:
ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.

7. ತಲೆ ಹುಟ್ಟು ನಿವಾರಣೆಗೆ:
ತಲೆ ಹುಟ್ಟು ಕಂಡುಬರುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ತಲೆ ಹೊಟ್ಟನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

8. ಹೇರ್ ಡ್ರೈಯರ್ ಬಳಸಬೇಡಿ:
ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ.

9. ನೆಲ್ಲಿಕಾಯಿ ಪೇಸ್ಟ್:
ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ. ಇದರಿಂದ ಕೂದಲು ಉದುರುವುದನ್ನು ತಡೆಯಬಹುದಾಗಿದೆ

10 ಕಹಿಬೇವು, ಮೆಹೆಂದಿ ಸೊಪ್ಪಿನ ಎಣ್ಣೆ:
ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.

11. ಬಾದಾಮಿ ಹಾಗೂ ಆಲಿವ್ ಎಣ್ಣೆ:
ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಬಹುದು.

12. ಹೇರ್ ಜೆಲ್, ಕ್ರೀಂ, ಸ್ಪ್ರೇ ಬಳಸಬೇಡಿ:
ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.

13. ನೈಸರ್ಗಿಕ ಶಾಂಪೂವನ್ನೇ ಬಳಸಿ:
ಯಾವಾಗಲೂ ನೈಸರ್ಗಿಕ ಶಾಂಪೂವನ್ನೇ ತಲೆ ತೊಳೆಯಲು ಬಳಸಿ. ಆದರೂ ಬಹಳಷ್ಟು ಶಾಂಪೂಗಳು ರಾಸಾಯನಿಕವನ್ನೇ ಹೊಂದಿರುತ್ತದೆ. ಇದು ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರಲೂ ಬಹುದು. ರಾಸಾಯನಿಕಗಳು ತಲೆಯ ಉಷ್ಣವನ್ನು ಹೆಚ್ಚಿಸುತ್ತದೆ.

14. ಬಸಳೆ ಸೊಪ್ಪು ಹಾಗೂ ಕ್ಯಾರೆಟ್ ಜ್ಯೂಸ್ ಕುಡಿಯಿರಿ:
ಬಸಳೆ ಸೊಪ್ಪಿನ ಹಸಿಯಾದ ಜ್ಯೂಸ್ ಮಾಡಿ ಕುಡಿಯಿರಿ. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕೂಡಾ ಉತ್ತಮ.

15. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ:
ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಉತ್ತಮ ಫಲ ಕಾಣುತ್ತದೆ. ಬೋಳಾದ ತಲೆಗೂ ಇದು ಉತ್ತಮ.

16. ಸಾಸಿವೆ ಎಣ್ಣೆ:
ಒಂದು ಕಪ್ ಸಾಸಿವೆ ಎಣ್ಣೆಯನ್ನು ನಾಲ್ಕು ಚಮಚ ಮೆಹೆಂದಿ ಸೊಪ್ಪಿನ ಜತೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಟ್ಟು ದಿನವೂ ಬೋಳಾದ ತಲೆಯ ಭಾಗಕ್ಕೆ ಲೇಪಿಸಿ. ಇದು ಕೂದಲು ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ.

17. ವಾಲ್ ನೆಟ್:
ವಾಲ್ ನೆಟ್ ನಲ್ಲಿ ವಿಟಮಿನ್ ಇ ಅಧಿಕವಿರುತ್ತದೆ. ಇದು ತಲೆ ಬುಡದಲ್ಲಿ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ ಹಾಗೂ ಇದರಲ್ಲಿ ಸತುವಿಂಶ ಅಧಿಕವಾಗಿ ಇದೆ. ಇದರಿಂದಾಗಿ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

18. ಬಾದಾಮಿ:
ಬಾದಾಮಿಲ್ಲೂ ವಿಟಮಿನ್ ಇ ಇರುವುದರಿಂದ ಇದನ್ನು ಪ್ರತಿದಿನ ತಿನ್ನುವುದು ಕೂದಲಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

19. ಸೂರ್ಯಕಾಂತಿ ಬೀಜ:
ಸೂರ್ಯಕಾಂತಿ ಹೂವಿನ ಬೀಜದಲ್ಲಿ ಅಧಿಕ ಪ್ರೋಟೀನ್, ಪೊಟಾಷ್ಯಿಯಂ, ವಿಟಮಿನ್ ಇ, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಇರುತ್ತದೆ. ಈ ಬೀಜ ತಿನ್ನಲೂ ರುಚಿಕರವಾಗಿರುತ್ತದೆ. ಈ ಬೀಜವನ್ನು ಕೊಳ್ಳುವಾಗ ಅದರಲ್ಲಿ ಸೋಡಿಯಂ ಅಥವಾ ಇತರ ರುಚಿಯ ರುಚಿಯನ್ನು ಸೇರಿಸಿದ್ದರೆ ಅಂತಹ ಬೀಜಗಳನ್ನು ಕೊಳ್ಳಬೇಡಿ.

20. ಅಂಜೂರ:
ಅಂಜೂರದಲ್ಲಿ ಎ,ಬಿ ಮತ್ತು ಸಿ, ಫಾಲಿಕ್ ಆಸಿಡ್, ಸತು, ಸೋಡಿಯಂ ಮತ್ತು ಪೊಟಾಷ್ಯಿಯಂ ಇರುತ್ತದೆ. ಅಂಜೂರದಲ್ಲಿ ಬಾಳೆ ಹಣ್ಣಿನಲ್ಲಿ ಇರುವುದಕ್ಕಿಂತ 80% ಅಧಿಕ ಪೊಟಾಷ್ಯಿಯಂ ಅಂಶವಿರುತ್ತದೆ.

21 ಆಪ್ರಿಕಾಟ್ ಮತ್ತು ಪೀಚ್:
ಇದರಲ್ಲಿ ಹಿಮೋಗ್ಲೋಬಿನ್ ಗೆ ಅವಶ್ಯಕವಾದ ಕಬ್ಬಿಣದಂಶ ಅಧಿಕವಿರುತ್ತದೆ. ಕಬ್ಬಿಣದಂದ ಕೊರತೆ ಉಂಟಾದರೆ ಮುಖ ಬಿಳುಚಿಕೊಳ್ಳುವುದು, ಕೂದಲು ತೆಳ್ಳಗಾಗುವುದು.

22 ಬಾಳೆಹಣ್ಣು:
ಇದರಲ್ಲಿ ಅಮೈನೊ ಆಸಿಡ್ ಅಧಿಕವಿರುತ್ತದೆ. ಅಮೈನೊ ಆಸಿಡ್ ದೇಹಕ್ಕೆ ಅವಶ್ಯಕವಾಗಿ ಬೇಕು. ಆದರೆ ಅದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ಅಮೈನೊ ಆಸಿಡ್ ಇರುವ ಆಹಾರ ಸೇವಿಸುವುದು ಅವಶ್ಯಕ.

23 ರಾಸ್ ಬರಿ ಹಾಗೂ ಸ್ಟ್ರಾಬರಿ:
ಇವುಗಳಲ್ಲಿ ವಿಟಮಿನ್ ಎ ಮತ್ತು ಇ ಇದ್ದು ತಲೆ ಬುಡದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಸಹಕಾರಿಯಾಗಿದೆ.

24 ಸಿಟ್ರಸ್ ಆಹಾರ:
ಕಿತ್ತಳೆ, ನಿಂಬೆ ರಸ, ನೆಲ್ಲಿಕಾಯಿ ಹೀಗೆ ವಿಟಮಿನ್ ಸಿ ಇರುವ ಹಣ್ಣುಗಳನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

25. ಒಣದ್ರಾಕ್ಷಿ:
ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದು ಕೂದಲಿಗೂ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

26. ಹಾಲು, ಸೋಯಾ:
ಹಾಲು, ಸೋಯಾ ಇ, ಹಾಲಿನ ಉತ್ಪನ್ನಗಳಲ್ಲಿ ವಿಟಮಿನ್ ಎ ಹಾಗೂ ಬಿ12 ಅಧಿಕವಿದ್ದು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

27. ದವಸ ಧಾನ್ಯಗಳು:
ದವಸ ಧಾನ್ಯಗಳಲ್ಲಿ ವಿಟಮಿನ್ ಬಿ5 ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು.

28 ಸೊಪ್ಪು:
ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ. ಅಧಿಕ ಪೋಷಕಾಂಶವಿರುವುದರಿಂದ ದೇಹದ ಹಾಗೂ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

29. ಹೇರ್ ಪ್ಯಾಕ್:
ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹೆಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು. ಇದರಿಂದ ಕೂದಲು ಉದುರುವಿಕೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

30. ನಿಂಬೆಹಣ್ಣಿನ ಬೀಜ ಹಾಗೂ ಕರಿಮೆಣಸು:
ನಿಂಬೆಹಣ್ಣಿನ ಬೀಜ ಹಾಗೂ ಕರಿಮೆಣಸನ್ನು ಚೆನ್ನಾಗಿ ಅರೆದು ಬೋಳಾದ ಜಾಗಕ್ಕೆ ಹಚ್ಚಿದರೆ ಹೊಸ ಕೂದಲು ಹುಟ್ಟಿ ಬೆಳೆಯಲು ಆರಂಭವಾಗುತ್ತದೆ.

31. ನೆಲ್ಲಿಕಾಯಿ ತಿನ್ನಿ:
ನೆಲ್ಲಿಕಾಯಿಯನ್ನು ತಿನ್ನುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

32. ತಲೆ ಕೂದಲಿಗೆ ಮೆಂತೆ ನೀರನ್ನು ಬಳಸಿ:
ಮೆಂತೆಯನ್ನು ರಾತ್ರಿ ನೀರು ಅಥವಾ ಮೊಸರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ರುಬ್ಬಿ ತಲೆಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

33. ಮೊಸರು ಹಾಗೂ ಮೊಟ್ಟೆ:
ಹುಳಿ ಮೊಸರಿಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನಿವಾರಣೆಯಾಗುತ್ತದೆ.

34. ಮೆಂತೆ ಸೊಪ್ಪು ಹಾಗೂ ಕರಿಬೇವಿನ ಎಲೆ
ಮೆಂತೆ ಸೊಪ್ಪು ಹಾಗೂ ಕರಿಬೇವಿನ ಎಲೆಗಳನ್ನು ಅರೆದು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನಿವಾರಣೆಯಾಗುತ್ತದೆ.

35 ದಾಸವಾಳದ ಎಲೆಗಳು
ದಾಸವಾಳದ ಎಲೆಗಳನ್ನು ಮೋಸರಿನಲ್ಲಿ ಮಿಶ್ರ ಮಾಡಿ ಅರೆದು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ನಿವಾರಣೆಯಾಗುತ್ತದೆ.

36. ಬಿಸಿ ಎಣ್ಣೆ ಮಸಾಜ್:
ತಲೆಗೆ ಸರಿಯಾಗಿ ಎಣ್ಣೆ ಹಚ್ಚಿ. ಅದರಲ್ಲೂ ತಲೆಗೆ ಎಣ್ಣೆಯನ್ನು ಬಿಸಿ ಮಾಡಿ ಹಚ್ಚಿದರೆ ಕೂದಲಿನ ಬುಡದ ರಂಧ್ರಗಳು ತೆರೆದುಕೊಂಡು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಆರೋಗ್ಯ ಹೆಚ್ಚಾಗುವುದು.

37. ಈರುಳ್ಳಿ ರಸ
ಈರುಳ್ಳಿ ರಸವನ್ನು ಎಣ್ಣೆಯ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿದರೆ ತಲೆ ಹೊಟ್ಟು ಮಾಯವಾಗುವುದು, ಕೂದಲು ಕೂಡ ದಪ್ಪವಾಗಿ ಬೆಳೆಯುತ್ತದೆ.

38. ತಲೆಗೆ ಮಸಾಜ್:
ವಾರದಲ್ಲಿ ಎರಡು ಸಲ ತಲೆಗೆ ಎಣ್ಣೆ ಮಸಾಜ್ ಮಾಡಿಕೊಳ್ಳಿ. ನಂತರ ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ತಲೆಗೆ ಸುತ್ತಿಕೊಳ್ಳಿ. ಈ ರೀತಿ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗಿ ಹೊಸ ಕೂದಲು ಹುಟ್ಟಲಾರಂಭಿಸುತ್ತದೆ.

40. ಒತ್ತಡ:
ಮಾನಸಿಕ ಒತ್ತಡವಿದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ದಿನದಲ್ಲಿ ಸ್ವಲ್ಪ ಸಮಯ ಧ್ಯಾನಕ್ಕಾಗಿ ಮೀಸಲಿಡಿ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಕೂದಲಿನ ಹಾಗೂ ದೇಹದ ಆರೋಗ್ಯ ಹೆಚ್ಚುತ್ತದೆ.

41 ಹೆಲ್ಮೆಟ್:
ಹೆಲ್ಮೆಟ್ ಧರಿಸುವವರಲ್ಲಿ ಕೂದಲು ಉದುರುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿರುತ್ತದೆ. ಏಕೆಂದರೆ ಬೆವರು ಹೆಚ್ಚಾದಂತೆಲ್ಲ ಕೂದಲಿನ ಬುಡ ಹಾನಿಗೊಂಡು ಕೂದಲು ಉದುರುತ್ತದೆ. ಹಾಗಾಗಿ ತಲೆಗೆ ಸ್ಕಾರ್ಫ್ ಧರಿಸಿ ಕೂದಲನ್ನು ರಕ್ಷಿಸಿಕೊಳ್ಳಬಹುದು.

42. ರಾಸಾಯನಿಕಗಳಿಂದ ದೂರವಿರಿ:
ರಾಸಾಯಾನಿಕಗಳು ಕೂದಲು ಉದುರುವಂತೆ ಮಾಡುತ್ತವೆ. ಹಾಗಾಗಿ ಅದಷ್ಟು ಅವುಗಳಿಂದ ದೂರವಿರಿ. ಹಾಗಾಗಿ ಕೂದಲಿಗೆ ಬಣ್ಣವನ್ನು ಸಹ ಹಚ್ಚಬೇಡಿ.

43. ಔಷಧಗಳ ಬಗ್ಗೆ ಎಚ್ಚರಿಕೆಯಿಂದಿರಿ:
ಕೆಲವು ಔಷಧಗಳು ನಿಮ್ಮ ಕೂದಲಿನ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ ಕೆಲವು ಕೂದಲು ಉದುರುವುದನ್ನು ಸಹ ಪ್ರಚೋದಿಸುತ್ತವೆ. ಹಾಗಾಗಿ ಈ ಕುರಿತು ನಿಮ್ಮ ವೈದ್ಯರ ಬಳಿ ಮಾತನಾಡಿ.

44. ನಿಮ್ಮ ಆರೋಗ್ಯದ ಕಡೆಗೆ ಗಮನಕೊಡಿ:
ಆರೋಗ್ಯ ಸರಿಯಿಲ್ಲವಾದರೆ ನಿಮ್ಮ ಕೂದಲು ಸಹ ಆರೋಗ್ಯಕರವಾಗಿರುವುದಿಲ್ಲ. ಆಗಾಗಿ ತೀವ್ರತರದ ಕಾಯಿಲೆ, ಜ್ವರ ಮತ್ತು ಇನ್‍ಫೆಕ್ಷನ್‍ಗಳ ಬಗ್ಗೆ ತಾತ್ಸಾರ ಮನೋಭಾವ ತೋರದಿರಿ.

45. ಕೂದಲನ್ನು ಕತ್ತರಿಸುವ ಶೈಲಿ ಬದಲಾಯಿಸಿ:
ನಿಮ್ಮ ಕೂದಲು ನಿಧಾನವಾಗಿ ಉದುರುತ್ತಿದ್ದರೆ, ನೀವು ಕೂದಲನ್ನು ಉದ್ದ ಬಿಡುವುದು ಒಳ್ಳೆಯದು. ಏಕೆಂದರೆ ಸಣ್ಣ ಮಟ್ಟದಲ್ಲಿ ಕೂದಲು ಕತ್ತರಿಸುತ್ತಿದ್ದರೆ ಕಾಲಾನುಕ್ರಮದಲ್ಲಿ ಬೊಕ್ಕ ತಲೆಯುಂಟಾಗುವ ಸಾಧ್ಯತೆಗಳು ಇವೆ.

46. ನಿಮ್ಮ ತಲೆ ಬೆವರು ಮುಕ್ತವಾಗಿರಲಿ:
ಎಣ್ಣೆಗೂದಲು ಇರುವ ಗಂಡಸರಲ್ಲಿ ತಲೆ ಹೊಟ್ಟು ಮತ್ತು ತಲೆಗೂದಲು ಉದುರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕಾಗಿ ಲೋಳೆ ಮತ್ತು ಬೇವಿನ ಶಾಂಪೂವನ್ನು ಬಳಸಿ ಇದನ್ನು ನಿಯಂತ್ರಿಸಬಹುದು.

47. ಕೂದಲನ್ನು ಒಣಗಲು ಬಿಡಬೇಡಿ:
ಹೀಗೆ ಮಾಡುವುದರಿಂದ ನಿಮ್ಮ ಕೂದಲು ದುರ್ಬಲವಾಗಿ ಅದು ಒಡೆಯುವ ಸಾಧ್ಯತೆಯಿರುತ್ತದೆ. ಇದರಿಂದ ಕೂದಲು ಉದುರುತ್ತದೆ. ಹಾಗಾಗಿ ಕೂದಲನ್ನು ನಿರಂತರವಾಗಿ ಬಿಸಿಯಾಗಲು ಅಥವಾ ಒಣಗಲು ಬಿಡಬೇಡಿ.

48. ಒತ್ತಡವನ್ನು ಹೊರದಬ್ಬಿ:
ಒತ್ತಡವನ್ನು ನಿವಾರಿಸಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಆಗಾಗಿ ನಿಮ್ಮನ್ನು ನೀವು ಧ್ಯಾನ, ಯೋಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒತ್ತಡದಿಂದ ಹೊರಬನ್ನಿ.

49. ವ್ಯಾಯಾಮ:
ನಿಮ್ಮ ದೇಹಕ್ಕೆ ಅಗತ್ಯವಾದ ನಡಿಗೆ, ಈಜು, ಸೈಕ್ಲಿಂಗ್‍ನಂತಹ ಚಟುವಟಿಕೆಗಳಿಗೆ ಪ್ರತಿದಿನವು 30 ನಿಮಿಷಗಳಷ್ಟು ಸಮಯವನ್ನು ಮೀಸಲಿಡಿ. ಇದರಿಂದ ಹಾರ್ಮೋನುಗಳ ಮಟ್ಟವು ಸಮತೋಲನದಲ್ಲಿರುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಸಹ ಕೂದಲು ಉದುರುವುದನ್ನು ತಡೆಯಬಹುದು.

50. ಧೂಮಪಾನ ಕಮ್ಮಿ ಮಾಡುತ್ತಾ ಬನ್ನಿ:
ಧೂಮಪಾನದಿಂದ ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯಾಗುವುದನ್ನು ಕಡಿಮೆಯಾಗುವುದು. ಇದರಿಂದಾಗಿ ಕೂದಲ ಬುಡ ಸಡಿಲವಾಗಿ ಕೂದಲ ಬೆಳವಣಿಗೆ ಕುಂಠಿತವಾಗುತ್ತದೆ.

51. ನಿಮ್ಮ ಕೂದಲಿಗೆ ಆಗದ ವಿಚಾರಗಳನ್ನು ಗಮನಿಸಿ:
ನಿಮ್ಮ ಕೂದಲು ಆರೋಗ್ಯವಾಗಿರಬೇಕಾದರೆ ಅದಕ್ಕೆ ಸರಿಹೋಗದ ವಿಚಾರಗಳನ್ನು ಗಮನಿಸಿ. ಅದರ ಆರೋಗ್ಯದ ಮೇಲೆ ಸದಾ ನಿಗಾ ಇಡಿ. ಅದಕ್ಕಾಗಿ ಒದ್ದೆ ಕೂದಲನ್ನು ಟವೆಲ್‍ನಿಂದ ಉಜ್ಜುವುದನ್ನು ನಿಲ್ಲಿಸಿ. ಅದು ತಾನಾಗೇ ಒಣಗಲು ಬಿಡಿ.

52. ನಿಮ್ಮ ದೇಹದಲ್ಲಿ ನೀರಿನ ಪ್ರಮಾಣವನ್ನು ಸಮಸ್ಥಿತಿಯಲ್ಲಿಡಿ:
ಕೂದಲಿನ ಬುಡಗಳು ನಮ್ಮ ದೇಹದಲ್ಲಿರುವ ನಾಲ್ಕನೇ ಒಂದು ಭಾಗ ನೀರನ್ನು ಎಳೆದುಕೊಳ್ಳುತ್ತವೆ. ಹಾಗಾಗಿ ದಿನಕ್ಕೆ ಎಂಟು ಕಪ್ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ.

54. ಒದ್ದೆ ಕೂದಲನ್ನು ಬ್ರಷ್ ಮಾಡಬೇಡಿ:
ಕೂದಲು ಒದ್ದೆಯಾಗಿರುವಾಗ ಅದನ್ನು ಬ್ರಷ್ ಮಾಡಬೇಡಿ. ಇದರಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ. ಆದರೆ ನೀವು ಕೂದಲನ್ನು ದೊಡ್ಡ ಹೆಣಿಗೆ ಇರುವ ಬಾಚಾಣಿಗೆಯಿಂದ ತಲೆ ಬಾಚಿಕೊಳ್ಳಿ. ನಿಯಮಿತವಾಗಿ ಬ್ರಷ್ ಮಾಡುವುದನ್ನು ನಿಲ್ಲಿಸಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯಾಗಿ, ಕೂದಲು ಉದುರುವುದು ಅಧಿಕವಾಗುತ್ತದೆ. ಸಿಕ್ಕನ್ನು ಬಿಡಿಸಲು ಬಾಚಣಿಗೆ ಅಥವಾ ಬ್ರಷ್ ಬದಲು, ನಿಮ್ಮ ಬೆರಳುಗಳನ್ನು ಬಳಸಿ.

55. ನಿಮ್ಮ ಆಹಾರದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಾಗಿ ಸೇವಿಸಿ:
ಮಾಂಸ, ಮೀನು, ಸೋಯಾ ಅಥವಾ ಪ್ರೋಟೀನ್ ಅಂಶಗಳನ್ನು ಸೇವಿಸುವುದರಿಂದ ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ.

56 ಕೂದಲಿನ ಆರೋಗ್ಯಕ್ಕೆ ವಿಟಮಿನ್ ತೆಗೆದುಕೊಳ್ಳಿ:
ವಿಟಮಿನ್‍ಗಳು ಕೂದಲಿಗಷ್ಟೇ ಅಲ್ಲದೆ ಆರೋಗ್ಯಕ್ಕು ಸಹ ಒಳ್ಳೆಯದು. ವಿಟಮಿನ್ ಎ ಕೂದಲಿನ ಬುಡದಲ್ಲಿರುವ ಸೆಬಮ್‍ನ್ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ವಿಟಮಿನ್ ಇ ಯು ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇವು ಹೆಚ್ಚು ಕೂದಲು ಬೆಳೆಯುವುದಕ್ಕೆ ಸಹ ನೆರವಾಗುತ್ತದೆ. ವಿಟಮಿನ್ ಬಿ ಕೂದಲಿನ ಬಣ್ಣದ ಯಥಾಸ್ಥಿತಿಯನ್ನು ಕಾಪಾಡುತ್ತದೆ.



Click it and Unblock the Notifications