Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಎಲ್ಲಾ ಬಗೆಯ ಕೂದಲಿನ ಸಮಸ್ಯೆಗೆ ಮನೆಮದ್ದು
ಪ್ರತಿಯೊಬ್ಬರನ್ನು ಕಾಡುವ ದೊಡ್ಡ ಸಮಸ್ಯೆಯೆಂದರೆ ಅದು ಕೂದಲು ಉದುರುವುದು. ಕಲುಷಿತ ವಾತಾವರಣ, ಅನಾರೋಗ್ಯಕರ ಜೀವನ ಮತ್ತು ಹವ್ಯಾಸಗಳಿಂದ ಕೂದಲಿನ ಸಮಸ್ಯೆಗಳಾದ ಕೂದಲು ಉದುರುವುದು, ಕೂದಲ ತುಂಡಾಗುವುದು, ಒರಟು ಅಥವಾ ಒಣ ಕೂದಲು ಇತ್ಯಾದಿ ಬರಬಹುದು. ನಿಮ್ಮ ಕೂದಲು ಬಲ ಮತ್ತು ಹೊಳಪು ನೀಡಲು ಅದರ ಆರೈಕೆ ಮಾಡುವುದು ತುಂಬಾ ಮುಖ್ಯ. ಕೂದಲು ನಷ್ಟವಾಗುವುದು ಕೂದಲಿನ ಪ್ರಮುಖ ಸಮಸ್ಯೆ.
ಕೂದಲು ನಷ್ಟವಾಗಲು ಪ್ರಮುಖ ಕಾರಣವೆಂದರೆ ತಲೆಹೊಟ್ಟು, ಒಣ ಕೂದಲು, ಕೂದಲನ್ನು ಗಡಸು ನೀರಿನಿಂದ ತೊಳೆಯುವುದು ಮತ್ತು ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು. ಕೂದಲು ಉದುರುವಿಕೆಯನ್ನು ತಡೆಯಲು ಹಲವಾರು ರಾಸಾಯನಿಕ ಶಾಂಪೂ ಮತ್ತು ಸೀರಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ರಾಸಾಯನಿಕ ಚಿಕಿತ್ಸೆ ಅತ್ಯಂತ ತ್ವರಿತ ಮತ್ತು ಸ್ವಲ್ಪ ಸಮಯದವರೆಗೆ ಮಾತ್ರ. ಈ ರಾಸಾಯನಿಕಗಳಿಂದ ಅಡ್ಡ ಪರಿಣಾಮಗಳಾಗಬಹುದು ಮತ್ತು ಕೂದಲಿಗೆ ಇದು ಹಾನಿಕಾರಕವಾಗಬಹುದು.

ಬಿಸಿ ಎಣ್ಣೆಯ ಮಸಾಜ್
ಕೂದಲು ಉದುರುವುದನ್ನು ತಡೆಯಲು ಇರುವ ಅತ್ಯುತ್ತಮ ವಿಧಾನವೆಂದರೆ ಬಿಸಿ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದು. ಬಿಸಿ ಎಣ್ಣೆಯ ಮಸಾಜ್ ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುತ್ತದೆ. ಇದು ಹಾನಿಗೊಳಗಾದ ಕೂದಲನ್ನು ತೆಗೆಯುತ್ತದೆ ಮತ್ತು ಕೂದಲಿಗೆ ಬೇಕಿರುವ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಬಿಸಿ ಎಣ್ಣೆಯ ಮಸಾಜ್ ನಿಂದ ಕೂದಲು ಬಲವಾಗುತ್ತದೆ ಮತ್ತು ಇದು ಉದುರುವಿಕೆಯನ್ನು ತಡೆಯುತ್ತದೆ. ವಾರದಲ್ಲಿ ಒಂದು ದಿನವಾದರೂ ಕೂದಲಿಗೆ ಬಿಸಿ ಎಣ್ಣೆಯ ಮಸಾಜ್ ಮಾಡಬೇಕು.
ತೆಂಗಿನಕಾಯಿ ಸಾರ
ತೆಂಗಿನಕಾಯಿ ತುಂಬಾ ಆರೋಗ್ಯಕಾರಿ. ಇದರಲ್ಲಿ ಹಲವಾರು ರೀತಿಯ ಲಾಭಗಳಿವೆ. ಇದು ಕೂದಲಿಗೆ ಪೋಷಕಾಂಶವನ್ನು ಒದಗಿಸುತ್ತದೆ. ತೆಂಗಿನ ಎಣ್ಣೆ ಮತ್ತು ತೆಂಗಿನ ಕಾಯಿ ಹಾಲು ಕೂದಲು ಉದುರುವಿಕೆಗೆ ಒಳ್ಳೆಯ ಚಿಕಿತ್ಸೆ. ಇದು ಕೂದಲಿಗೆ ಪೋಷಕಾಂಶ ಒದಗಿಸುವುದರೊಂದಿಗೆ ಅದನ್ನು ನಯ ಮತ್ತು ಬಲವಾಗಿಸುತ್ತದೆ. ತೆಂಗಿನಕಾಯಿ ಕೂದಲು ಉದುರುವ ಸಮಸ್ಯೆಗೆ ನೈಸರ್ಗಿಕ ಪರಿಹಾರ.
ಅಲೋವೆರಾ
ಕೂದಲಿನ ನೈಸರ್ಗಿಕ ಚಿಕಿತ್ಸೆಗೆ ಅಲೋವೆರಾ ತುಂಬಾ ಉಪಯುಕ್ತ. ಇದನ್ನು ನಿಮ್ಮ ತೋಟದಲ್ಲಿ ಸುಲಭವಾಗಿ ಬೆಳೆಸಬಹುದು. ಅಲೋವೆರಾವನ್ನು ಪೇಸ್ಟ್ ಅಥವಾ ಒಣ ಪೌಡರ್ ರೂಪದಲ್ಲಿ ಬಳಸಬಹುದು. ಕೂದಲಿಗೆ ಪೇಸ್ಟ್ ನ್ನು ಹಚ್ಚಿ ಸುಮಾರು 15-30 ನಿಮಿಷ ತನಕ ಬಿಡಿ. ಅಲೋವೆರಾ ಕೂದಲಿನ ಅಂಗಾಂಶಗಳನ್ನು ಬಲಪಡಿಸಿ ಅದು ಬೆಳೆಯಲು ನೆರವಾಗುತ್ತದೆ. ಕೂದಲಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಲೋವೆರಾವನ್ನು ವಾರಕ್ಕೆ ಎರಡು ಸಲ ಬಳಸಬಹುದು. ಕೂದಲಿನ ಉದುರುವಿಕೆಗೆ ತಡೆಯಲು ಅಲೋವೆರಾ ನೈಸರ್ಗಿಕ ವಿಧಾನ



Click it and Unblock the Notifications