Latest Updates
-
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ!
ಹೇರ್ ಕಲರ್ ತೆಗೆಯುವುದು ಹೇಗೆ?

ಡ್ರೆಸ್ ಒಪ್ಪದಿದ್ದರೆ ಆ ಡ್ರೆಸ್ ಧರಿಸದಿದ್ದರೆ ಸಾಕು, ಆದರೆ ತಲೆಕೂದಲನ್ನು ಕಲರ್ ಮಾಡಿ, ಆ ಬಣ್ಣ ಒಪ್ಪದಿದ್ದಾಗ ಪೇಚಿಗೆ ಸಿಕ್ಕಿದಂತಾಗುವುದು. ಆದರೆ ರೀತಿಯ ಬಣ್ಣ ಸ್ವಲ್ಪ ದಿನದರಲ್ಲಿ ಹೋಗುವುದಾದರೂ ಅದು ಹೋಗುವವರೆಗೆ ಇಟ್ಟುಕೊಂಡು ಇರಲು ಇಷ್ಟವಾಗುವುದಿಲ್ಲ. ಆಗ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಕೂದಲಿನ ಬಣ್ಣ ಹೋಗಲಾಡಿಸಬಹುದು.
ಹೇರ್ ಸ್ಟೈಲಿಷ್ಟ್ ಭೇಟಿ : ಹೇರ್ ಕಲರ್ ಅನ್ನು ಮನೆಯಲ್ಲಿಯೆ ನೀವೆ ಮಾಡಿದ್ದರೂ ಕೂಡ ಹೇರ್ ಸ್ಟೈಲಿಷ್ಟ್ ನ ಭೇಟಿ ಮಾಡಬಹುದು. ಅವರು ನಿಮ್ಮ ಕೂದಲು ಆಕರ್ಷಕವಾಗಿ ಕಾಣುವಂತೆ ಮಾಡಿ ಕೊಡುತ್ತಾರೆ. ನಾವೇ ಹೇರ್ ಕಲರ್ ಮಾಡಿ ಪೇಚಿಗೆ ಸಿಕ್ಕುವ ಬದಲು ಪರಿಣಿತರ ಸಲಹೆ ಪಡೆಯುವುದು ಒಳ್ಳೆಯದು.
ವಿಟಮಿನ್ ಸಿ ಮಾತ್ರೆ: ತುಂಬಾ ಬೆಲೆ ಕಡಿಮೆ ಇರುವ ವಿಟಮಿನ್ ಸಿ ಇರುವ ಮಾತ್ರೆಯನ್ನು ಕೊಂಡು ಅದನ್ನು ಪುಡಿ ಮಾಡಿ ನೀರಿನಲ್ಲಿ ಮಿಶ್ರ ಮಾಡಿ ಗಟ್ಟಿಯಾದ ಪೇಸ್ಟ್ ರೀತಿ ಮಾಡಬೇಕು. ನಂತರ ಇದರಿಂದ ತಲೆಯನ್ನು ಮಸಾಜ್ ಮಾಡಬೇಕು. ರೀತಿ ಮಸಾಜ್ ಮಾಡಿ ಅರ್ಧ ಗಂಟೆ ಬಿಡಬೇಕು. ನಂತರ ಶ್ಯಾಂಪೂ ಹಾಕಿ ತಲೆಯನ್ನು ತೊಳೆದರೆ ಕೂದಲಿನ ಬಣ್ಣ ತುಂಬಾ ಹೋಗಿರುತ್ತದೆ. ಈ ರೀತಿ 2 ಬಾರಿ ಮಾಡಿದರೆ ಕೂದಲಿನಲ್ಲಿರುವ ಕೃತಕ ಬಣ್ಣವನ್ನು ಹೋಗಲಾಡಿಸಬಹುದು.
ಬಿಸಿ ಎಣ್ಣೆ ಚಿಕಿತ್ಸೆ: ಹದ ಬಿಸಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿದರೆ ಒಳ್ಳೆಯದು. ಈ ರೀತಿ ಮಾಡಿ ಕೂದಲಿನ ಬಣ್ಣ ಹೋಗಲಾಡಿಸಲು ಸಾಧ್ಯವಿಲ್ಲ. ಅದರ ಬದಲು ಕೂದಲಿಗೆ ಹಚ್ಚಿದ ಬಣ್ಣದಿಂದ ಕೂದಲಿಗೆ ಯಾವುದೇ ಹಾನಿಯಾಗದಂತೆ ತಡೆಯಬಹುದು. ಆದರೆ ಈ ರೀತಿ ಹದ ಬಿಸಿ ಎಣ್ಣೆಯಿಂದ ಮಸಾಜ್ ವಾರಕ್ಕೊಮ್ಮೆ ಮಾತ್ರ ಮಾಡಬೇಕು. ಹೆಚ್ಚಿನ ಬಾರಿ ಮಾಡಿದರೆ ಅದರಿಂದ ಕೂಡ ಹಾಳಾಗುವುದು.
ಡಿಟರ್ಜೆಂಟ್: ಶ್ಯಾಂಪೂ ಜೊತೆ ಸ್ವಲ್ಪ ಡಿಟರ್ಜೆಂಟ್ ಮಿಶ್ರ ಮಾಡಿ ಅದರಿಂದ ತಲೆ ತೊಳೆದರೆ ಕೂದಲಿನ ಬಣ್ಣ ಹೋಗಲಾಡಿಸಬಹುದು. ಆದರೆ ಈ ರೀತಿ ಮಾಡಿದರೆ ಕೂದಲಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸ್ವಲ್ಪ ಕಡಿಮೆ ಬ್ಲೀಚಿಂಗ್ ಅಂಶವಿರುವ ಡಿಟರ್ಜೆಂಟ್ ಬಳಸಿ ತಲೆ ಕೂದಲು ತೊಳೆದು ಕೃತಕ ಬಣ್ಣ ತೆಗೆಯಬಹುದು.
ಹೇರ್ ಕಲರ್ ರಿಮೂವರ್: ಸೌಂದರ್ಯವರ್ಧಕ ಸಾಧನಗಳು ದೊರೆಯುವ ಅಂಗಡಿಗಳಲ್ಲಿ ಹೇರ್ ಕಲರ್ ರಿಮೂವರ್ ದೊರೆಯುತ್ತದೆ ಅದನ್ನು ಬೆಕಾದರೂ ಬಳಸಬಹುದು. ಆದರೆ ಈ ರೀತಿಯ ಹೇರ್ ಕಲರ್ ರಿಮೂವರ್ ಕೊಳ್ಳುವಾಗ ಬ್ರಾಂಡ್ಡ್ ನೋಡಿ ಕೊಳ್ಳಬೇಕು.
ಪುನಃ ಕಲರ್ ಮಾಡುವುದು: ಮಾಡಿದ ಕಲರ್ ನಿಂದ ವಿಚಿತ್ರವಾಗಿ ಕಾಣುವಂತೆ ಆದರೆ ಇತರ ಬಣ್ಣವನ್ನು ಕೊಂಡು ಹಚ್ಚಿದರೆ ಸಾಕು. ಆದರೆ ಈ ರೀತಿ ಎರಡನೇ ಬಾರಿ ಹಚ್ಚುವಾಗ, ಹಚ್ಚುವ ಬಣ್ಣ ನಿಮ್ಮ ಮುಖಕ್ಕೆ ಒಪ್ಪುವಂತೆ ಇರಬೇಕು.



Click it and Unblock the Notifications