Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸರಳ ವಿಧಾನದಿಂದ ಸೊಂಪಾದ ಕೂದಲು

1. ಕೂದಲನ್ನು ಒಣಗಿಸುವುದು: ಸ್ನಾನದ ನಂತರ ಕೂದಲನ್ನು ಚನ್ನಾಗಿ ಒಣಗಿಸಬೇಕು. ಆದರೆ ಅದಕ್ಕಾಗಿ ಹೇರ್ ಡ್ರೈ ಬಳಸಬಾರದು. ಸೂರ್ಯನ ಬಿಸಿಲಿಗೆ ಕೂದಲನ್ನು ಒಣಗಿಸಿ. ಒಂದು ವೇಳೆ ಕೂದಲನ್ನು ಒಣಗಿಸುವಷ್ಟು ಸಮಯವಿಲ್ಲದಿದ್ದರೆ ಕೂದಲನ್ನು ಬಾಚಬೇಡಿ, ಹಾಗೇ ಬಿಡಿ, ಕೂದಲು ಒಣಗಿದ ಮೇಲಷ್ಟೆ ಬಾಚಿ ಕಟ್ಟಿ.
2. ಕೂದಲನ್ನು ಕಟ್ಟುವುದು: ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಬಾರದು. ಜುಟ್ಟು ಕಟ್ಟುವುದಾದರೆ ಸ್ವಲ್ಪ ಸಡಲವಾಗಿ ಕಟ್ಟಿ. ತುಂಬಾ ಹೇರ್ ಪಿನ್, ಮತ್ತು ಕ್ಲಿಪ್ ಬಳಸಿದರೆ ಕೂದಲು ಹಾಳಾಗುವುದು.
3. ಶ್ಯಾಂಪೂ: ಅಧಿಕ ಕೆಮಿಕಲ್ ಇರುವ ಶ್ಯಾಂಪೂ ಬಳಸಬಾರದು. ಮೃದುವಾದ ಶ್ಯಾಂಪೂ ಬಳಸಬೇಕು. ಎಣ್ಣೆ ಕೂದಲನ್ನು ಹೊಂದಿದ್ದರೂ ಕೂಡ ಮೃದುವಾದ ಶ್ಯಾಂಪೂಗಳನ್ನೆ ಬಳಸಿ.
4. ಕೂದಲು ಕವಲೊಡೆಯುವುದು: ಕೂದಲು ಕವಲೊಡೆದಿದ್ದರೆ ಅದನ್ನು ಹಾಗೇ ಬಿಡದೆ ಕತ್ತರಿಸಿ ಬಿಸಾಡಬೇಕು. ಹತ್ತು ವಾರಗಳಿಗೆ ಒಮ್ಮೆ ಕೂದಲಿನ ಬುಡ ಕತ್ತರಿಸಿ ಆರೈಕೆ ಮಾಡಬೇಕು.
5. ಉದ್ದ ಕೂದಲಿನ ಆರೈಕೆ: ಉದ್ದ ಕೂದಲಿಗೆ ಅಧಿಕ ಆರೈಕೆ ಮಾಡಬೇಕಾಗುತ್ತೆ. ಇಲ್ಲದಿದ್ದರೆ ಕೂದಲು ಹಾಳಾಗುವುದು. ಒಂದು ವೇಳೆ ಕೂದಲು ಹಾಳಾಗಿದ್ದರೆ ಅದನ್ನು ಕತ್ತರಿಸಿ ಪುನಃ ಬೆಳೆಸುವುದು ಒಳ್ಳೆಯದು. ಉದ್ದ ಕೂದಲನ್ನು ಕತ್ತರಿಸಲು ಮನಸ್ಸು ಬರುವುದಿಲ್ಲ. ಆದರೆ ಹಾಗೇ ಬಿಟ್ಟರೆ ಕೂದಲು ಸಂಪೂರ್ಣ ಹಾಳಾಗುತ್ತದೆ. ಆದ್ದರಿಂದ ಕತ್ತರಿಸಿ ಪುನಃ ಚೆನ್ನಾಗಿ ಪೋಷಣೆ ಮಾಡಿದರೆ ಕೂದಲು ಆಕರ್ಷಕವಾಗಿ ಬೆಳೆಯುವುದು.
6. ಡಯಟ್: ಕೂದಲಿನ ಆರೋಗ್ಯಕ್ಕೆ ಪಾಲಾಕ್, ಸೊಪ್ಪು ತರಕಾರಿಗಳು, ಸಿಹಿ ಗೆಣಸು, ಕ್ಯಾರೆಟ್, ಚಿಕನ್, ಮೊಟ್ಟೆ ತಿನ್ನುವುದು ಒಳ್ಳೆಯದು.



Click it and Unblock the Notifications
