Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಂದದ ಕೂದಲಿಗಾಗಿ ಮೆಹಂದಿಯ ಆರೈಕೆ

ಮೆಹಂದಿಯನ್ನು ಕೂದಲಿಗೆ ಕಂಡೀಷನರ್ ಆಗಿ ಹಚ್ಚುವುದು ಸಾಮಾನ್ಯ. ಆದರೆ ಮೆಹಂದಿ ಕಲಿಸಿ ಹಾಗೆ ಮೇಲ್ಭಾಗದಲ್ಲಿ ಕಾಣುವ ಕೂದಲಿಗೆ ಹಚ್ಚಿದರೆ ಒಳಗಿನ ಬಿಳಿ ಕೂದಲು ಹಾಗೇ ಇರುತ್ತದೆ. ಬ್ಯೂಟಿ ಪಾರ್ಲರ್ ನಲ್ಲಿ ಇದಕ್ಕಾಗಿ ಸುಮ್ಮನೆ ಹಣ ವ್ಯಯ ಮಾಡುವ ಬದಲು ಈ ಕೆಳಗಿನಂತೆ ಹಚ್ಚಿ ಕೂದಲಿನ ಆರೈಕೆ ಮಾಡಿ.
1. ಮೆಹಂದಿಯನ್ನು ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಇಡಬೇಕು . ತಲೆಯಲ್ಲಿ ಹೊಟ್ಟು ಇದ್ದರೆ ಸ್ವಲ್ಪ ನಿಂಬೆರಸ ಸೇರಿಸಬಹುದು.
2. ಬೆಳಗ್ಗೆ ಸ್ನಾನ ಮಾಡುವ 2 ಗಂಟೆ ಮುಂಚೆ ಮೆಹಂದಿಯನ್ನು ಈ ಕೆಳಗಿನಂತೆ ಹಚ್ಚಿ.
* ಮೊದಲು ಕೂದಲನ್ನು ಬಾಚಬೇಕು.
* ನಂತರ ಮಧ್ಯದ ಸ್ವಲ್ಪ ಕೂದಲನ್ನು ತೆಗೆದು ಮೆಹಂದಿಯನ್ನು ಹಚ್ಚಿ ತುರುಬಿನಾಕಾರದಲ್ಲಿ ಸುತ್ತಿಡಬೇಕು.
* ಹೀಗೆ ಸ್ವಲ್ಪ-ಸ್ವಲ್ಪ ಕೂದಲನ್ನೇ ತೆಗೆದು ಮೆಹಂದಿಯನ್ನು ಹಚ್ಚುತ್ತಾ ಆ ತುರುಬಿಗೆ ಸೇರುವಂತೆ ಸುತ್ತುತ್ತಾ ಬರಬೇಕು. ಹೀಗೆಯೆ ಸಂಪೂರ್ಣ ಕೂದಲನ್ನು ಸುತ್ತ ಬೇಕು.
3. ಮೆಹಂದಿ ಹಚ್ಚಿ 1-2 ಗಂಟೆ ಇಟ್ಟು ನಂತರ ಶ್ಯಾಂಪೂ ಹಚ್ಚದೆ ಹಾಗೇ ತಲೆ ತೊಳೆಯಬೇಕು.
4. ಕೂದಲು ಚೆನ್ನಾಗಿ ಒಣಗಿದ ಮೇಲೆ ತಲೆ ತುಂಬಾ ಎಣ್ಣೆ ಹಚ್ಚಿ ನಂತರ ಮರುದಿನ ಶ್ಯಾಂಪೂ ಹಚ್ಚಿ ತಲೆಯನ್ನು ತೊಳೆದರೆ ಕೂದಲು ಹೊಳಪಿನಿಂದ ಕೂಡಿರುತ್ತದೆ.



Click it and Unblock the Notifications
