Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ತೆಳುಗೂದಲನ್ನು ದಪ್ಪವಾಗಿಸುವುದು ಹೇಗೆ?

ದಪ್ಪವಾದ ಕೂದಲು ಚೆಲುವಿಗೆ ಮತ್ತಷ್ಟು ಮೆರಗನ್ನು ನೀಡುತ್ತದೆ. ಆದ್ದರಿಂದ ದಪ್ಪವಾದ ಮತ್ತು ಮೃದುವಾದ ಕೂದಲನ್ನು ಪಡೆಯಬೇಕೆಂದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ.
1. ಕೂದಲಿಗೆ ಮಸಾಜ್ ಮಾಡಿದರೆ ಕೂದಲಿನ ಬೆಳವಣಿಗೆಗೆ ತುಂಬಾ ಚೆನ್ನಾಗಿ ಆಗುತ್ತದೆ. ತಲೆ ತೊಳೆಯುವ ಕೆಲವು ಗಂಟೆಗಳ ಮೊದಲು ತಲೆಗೆ ಎಣ್ಣೆಯಿಂದ ಮಸಾಜ್ ಮಾಡಬೇಕು.
2.ಬಾದಾಮಿ ಎಣ್ಣೆ ಮತ್ತು ಹರಳೆಣ್ಣೆಯನ್ನು ಕೊಬ್ಬರಿಯೆಣ್ಣೆ ಜೊತೆ ಬೆರೆಸಿ ಹಚ್ಚಬೇಕು.
3. ತಲೆಯನ್ನು ಬಗ್ಗಿಸಿ ತೊಳೆಯಬೇಕು. ಇದರಿಂದ ತಲೆಯಲ್ಲಿ ರಕ್ತ ಸಂಚಾರ ಹೆಚ್ಚಾಗಿ ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.
4.ತೇವ ಕೂದಲನ್ನು ಟವಲ್ ನಿಂದ ಒರೆಸಬಾರದು ಅದರ ಬದಲು ಟವಲ್ ಸುತ್ತಿ ಹಾಗೆಯೆ ನೀರು ಹೀರಿ ಕೊಳ್ಳಲು ಬಿಡಿ, ಸ್ವಲ್ಪ ಹೊತ್ತು ನಂತರ ಟವಲ್ ತೆಗೆದು ತಲೆಕೂದನ್ನು ಹಾಗೆಯೆ ಒಣಗಿಸ ಬೇಕು.
5. ಒದ್ದೆ ಕೂದಲನ್ನು ಬಾಚಬಾರದು, ಸ್ನಾನಕ್ಕೆ ಮುನ್ನ ಬಾಚಿದರೆ ಕೂದಲು ಗಂಟಾಗುವುದನ್ನು ತಡೆಯಬಹುದು.
6. ಕೂದಲಿಗೆ ಐರನ್ ಮಾಡುವುದಾಗಲಿ, ಅಥವಾ ಹೇರ್ ಬ್ಲೋ ಡ್ರೈಯರ್ ಬಳಸಬಾರದು. ಇದರಿಂದ ಕೂದಲು ಮತ್ತಷ್ಟು ತೆಳುವಾಗುವುದು.
7. ಅಧಿಕ ನೀರನ್ನು ಕುಡಿಯಬೇಕು, ನೀರು ದೇಹದಲ್ಲಿ ತೇವಾಂಶವನ್ನು ಕಾಪಾಡುವುದರ ಜೊತೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
8. ಕೂದಲು ಕವಲೊಡದರೆ ಕತ್ತರಿಸಬೇಕು, ಇಲ್ಲದಿದ್ದರೆ ಕೂದಲು ಬೆಳೆಯುವುದಿಲ್ಲ.
9. ಕೂದಲನ್ನು ಬಾಚಿ ತುಂಬಾ ಬಿಗಿಯಾಗಿ ಅಥವಾ ಸಡಿಲವಾಗಿ ಕಟ್ಟಬಾರದು.



Click it and Unblock the Notifications
