Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸ್ಟ್ರೆಚ್‌ಮಾರ್ಕ್ಸ್ ಹೋಗಲಾಡಿಸುವ 4 ಮೆಡಿಕಲ್ ವಿಧಾನಗಳಿವು
ಹೆರಿಗೆಯ ಬಳಿಕ ಕಂಡು ಸಾಮಾನ್ಯ ಸಮಸ್ಯೆವೆಂದರೆ ಸ್ಟ್ರೆಚ್ ಮಾರ್ಕ್ಸ್. ಗರ್ಭಾವಸ್ಥೆಯಲ್ಲಿ ಹೊಟ್ಟೆ ದೊಡ್ಡದಾಗ ತ್ವಚೆ ಎಳೆದು ಸ್ಟ್ರೆಚ್ ಮಾರ್ಕ್ಸ್ ಬೀಳುವುದು, ಇನ್ನು ತುಂಬಾ ದಪ್ಪಗಿದ್ದವರು ತೆಳ್ಳಗಾದಾಗ ಕೈ ಹಾಗೂ ತೊಡೆಗಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಬೀಳುವುದು. ಸ್ಟ್ರೆಚ್ ಮಾರ್ಕ್ಸ್ ಬಿದ್ದರೆ ಇದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ, ಆದರೆ ಕೆಲವೊಂದು ಡ್ರೆಸ್ಸಿಂಗ್‌ನಲ್ಲಿ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಂಡರೆ ಈ ಕಲೆ ಕಡಿಮೆಯಾದರೆ ಒಳ್ಳೆಯದು ಎಂದು ಭಾವಿಸುತ್ತೇವೆ.

ಯಾವಾಗ ಸ್ಟ್ರೆಚ್ ಮಾರ್ಕ್ಸ್ ಉಂಟಾಗುತ್ತದೆ?
ಹದಿ ಹರಿಹರೆಯದ ಸಮಯದಲ್ಲಿ ಶರೀರದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಯಾದ, ಕೈ ತೊಡೆಗಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಕಂಡು ಬರುವುದು
* ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ಸ್ ಉಂಟಾಗುವುದು.
* ಇದ್ದಕ್ಕಿದ್ದಂತೆ ಮೈ ತೂಕ ಕಳೆದುಕೊಂಡರೆ ಸ್ಟ್ರೆಚ್ ಮಾರ್ಕ್ಸ್ ಕಂಡು ಬರುವುದು.
ಸ್ಟ್ರೆಚ್ ಮಾರ್ಕ್ಸ್‌ಗೆ ಲೋಷನ್ ಪರಿಣಾಮಕಾರಿಯೇ?
* ಸ್ಟ್ರೆಚ್ ಮಾರ್ಕ್ಸ್ ಬಿದ್ದಾಗ ಪ್ರಾರಂಭದಲ್ಲಿಯೇ ನೀವು ಲೋಷನ್ ಹಚ್ಚಿದರೆ ಅದರ ಕಲೆ ಕಡಿಮೆಯಾಗುವ ಸಾಧ್ಯತೆ ಇದೆ.
* ಲೋಷನ್ ಅನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಕಡೆ ಹಚ್ಚಿ ಮೆಲ್ಲನೆ ಮಸಾಜ್ ಮಾಡಬೇಕು.
ಸ್ಟ್ರೆಚ್ ಮಾರ್ಕ್ಸ್ ಬೀಳುವುದನ್ನು ತಡೆಗಟ್ಟಲು ಸಾಧ್ಯವೇ?
ಸ್ಟ್ರೆಚ್ ಮಾರ್ಕ್ಸ್ ತಡೆಗಟ್ಟಲು ಹಲವಾರು ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಆದರೆ ಸ್ಟ್ರೆಚ್ ಮಾರ್ಕ್ಸ್ ಬೀಳುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಕೆಲವೊಂದು ಎಣ್ಣೆ, ಗಿಡ ಮೂಲಿಕೆಗಳು ಸ್ಟ್ರೆಚ್ ಮಾರ್ಕ್ಸ್ ತುಂಬಾ ಬೀಳದಂತೆ ಅಂದರೆ ಎದ್ದು ಕಾಣದಂತೆ ತಡೆಗಟ್ಟಲು ಸಹಕಾರಿಯಾಗಿದೆ.
ಯಾವಾಗ ಚರ್ಮ ರೋಗ ತಜ್ಞರನ್ನು ಭೇಟಿಯಾಗಬೇಕು?
ಸ್ಟ್ರೆಚ್ ಮಾರ್ಕ್ಸ್‌ನಿಂದ ಯಾವುದೇ ಸಮಸ್ಯೆಯಿಲ್ಲ, ಆದರೆ ಇದರಿಂದ ನಿಮ್ಮ ನಿಮ್ಮ ದೇಹ ಸೌಂದರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ನಿಮಗನಿಸಿದರೆ ನೀವು ಚರ್ಮ ರೋಗ ತಜ್ಞರನ್ನು ಕಂಡು ಅವರ ಸಲಹೆ ಸೂಚನೆ ಪಡೆಯಬಹುದು. ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಕೆಲವೊಂದು ಪರಿಣಾಮಕಾರಿ ಮೆಡಿಕಲ್ ವಿಧಾನಗಳಿವೆ. ವೈದ್ಯರು ನಿಮಗೆ ಸೂಕ್ತವಾದದ್ದನ್ನು ಸೂಚಿಸುತ್ತಾರೆ.
ಸ್ಟ್ರೆಚ್ ಮಾರ್ಕ್ಸ್ ಗೆ ಈ ಬಗೆಯ ಮೆಡಿಕಲ್ ಚಿಕಿತ್ಸೆ ಪರಿಣಾಮಕಾರಿ ನೋಡಿ:
ಕಾಂಬಿನೇಷನ್ ಟ್ರೀಟ್ಮೆಂಟ್:ಕಾಂಬಿನೇಷನ್ ಟ್ರೀಟ್ಮೆಂಟ್ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ತುಂಬಾನೇ ಸಹಕಾರಿ ಹಾಗೂ ಜನಪ್ರಿಯ ಕೂಡ. ಲೇಸರ್ ಹಾಗೂ ಗ್ರೋಥ್ ಫ್ಯಾಕ್ಟರ್ ಕಾಂಬಿನೇಷನ್‌ನ ಈ ಚಿಕಿತ್ಸೆ ಸ್ಟ್ರೆಚ್ ಮಾರ್ಕ್ಸ್ ಕಲೆ ತೆಗೆಯುವಲ್ಲಿ ಸಹಕಾರಿಯಾಗಿದೆ. ಯಾರಿಗೆ ತುಂಬಾನೇ ಸ್ಟ್ರೆಚ್‌ಮಾರ್ಕ್ಸ್ ಇರುತ್ತದೋ ಅಂಥವರಿಗೆ ಈ ಚಿಕಿತ್ಸೆ ಪರಿಣಾಮಕಾರಿ.
ಗ್ರೋಥ್ ಫ್ಯಾಕ್ಟರ್ ಟ್ರೀಟ್ಮೆಂಟ್
ಇದು ಕೂಡ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಪ್ರೊಟೀನ್ ಬಳಸಿ ಸೆಲ್ ಗ್ರೋಥ್ ಮಾಡಲಾಗುವುದು. ಗ್ರೋಥ್ ಫ್ಯಾಕ್ಟರ್ ಟ್ರೀಟ್ಮೆಂಟ್ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ, ಇದರಿಂದ ತ್ವಚೆ ಬಿಗಿದುಕೊಂಡು ಸ್ಟ್ರೆಚ್ ಮಾರ್ಕ್ಸ್ ಕಲೆ ಹೋಗಲಾಡಿಸಲು ಸಹಕಾರಿ.
ಲೇಸರ್ ಟ್ರೀಟ್ಮೆಂಟ್
ಇದು ಕೂಡ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ತುಂಬಾನೇ ಸಹಕಾರಿ ಹಾಗೂ ಪರಿಣಾಮಕಾರಿ. ಇದನ್ನು ಮಾಡಲು ಒಂದು ಗಂಟೆಯೂ ಬೇಕಾಗಿಲ್ಲ. ಮೈಲ್ ಅರವಳಿಕೆ ನೀಡಿ ಲೇಸರ್ ಟ್ರೀಟ್ಮೆಂಟ್ ನೀಡಲಾಗುವುದು.
ಡರ್ಮಾರೋಲರ್ ಟ್ರೀಟ್ಮೆಂಟ್:ಇದು ಕೂಡ ಸ್ಟ್ರೆಚ್ ಮಾರ್ಕ್ಸ್ ತೆಗೆಯುವಲ್ಲಿ ಸಹಕಾರಿ. ಇದನ್ನು ತ್ವಚೆ ತಜ್ಞರು ಸ್ಟ್ರೆಚ್ ಮಾರ್ಕ್ಸ್ ಕಲೆ ಇಟ್ಟು ರೋಲ್ ಮಾಡಲಾಗುವುದು. ಇದರಿಂದ ಕೂಡ ಸ್ಟ್ರೆಚ್ ಮಾರ್ಕ್ಸ್ ಕಲೆ ದೂರಾಗುವುದು.



Click it and Unblock the Notifications
