Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಕಾಲ್ಬೆರಳಿನ ಉಗುರು ಫಂಗಸ್ ಅನ್ನು ಹೀಗೆ ನಿವಾರಿಸಿ!
ನಿಮ್ಮ ಉಗುರುಗಳು ಹಳದಿಗಟ್ಟಿರುವುದನ್ನು ನೀವು ತುಂಬಾ ಸಮಯದಿಂದ ನೋಡುತ್ತಿರುವಿರಾ, ಹಾಗಿದ್ದರೆ ಅದನ್ನು ಹಗುರವಾಗಿ ತೆಗೆದುಕೊಳ್ಳದಿರಿ, ಆರೋಗ್ಯ ಸಮಸ್ಯೆಗಳನ್ನು ನಿಧಾನವಾಗಿ ಉಂಟುಮಾಡುವಂತಹ ಉಗುರಿನ ಫಂಗಸ್ಗೆ ಇದು ಕಾರಣವಾಗಿರಬಹುದು.
ರೋಗ ನಿರೋಧಕ ಶಕ್ತಿ ಕಡಿಮೆ ಇರುವುದೂ ಕೂಡ ಉಗುರುಗಳು ಹಳದಿಗಟ್ಟಿರುವುದಕ್ಕೆ ಕಾರಣವಾಗಿದೆ. ಅದಲ್ಲದೆ ಕಡಿಮೆ ಕ್ಯಾಲ್ಶಿಯಂ, ಹಾಗೂ ಉಗುರನ್ನು ಸ್ವಚ್ಛವಾಗಿರಿಸಿಕೊಳ್ಳದಿರುವುದೂ ಕೂಡ ಫಂಗಸ್ ಸೋಂಕಿಗೆ ಕಾರಣವಾಗಿವೆ.
ಕಾಲ್ಬೆರಳಿನ ಉಗುರಿನ ಫಂಗಸ್ ಸಮಸ್ಯೆ ಸೌಂದರ್ಯಕ್ಕೆ ತಲೆನೋವಾಗಬಹುದು. ಬೆರಳ ಉಗುರು ಹದಗೆಟ್ಟಿರುವುದು, ಕೆಟ್ಟ ವಾಸನೆ, ವಿಸರ್ಜನೆ ಮತ್ತು ಒಣಉಗುರುಗಳು ಇದರ ಪರಿಣಾಮಗಳಾಗಿವೆ. ನಿಮ್ಮ ಈ ಕಾಲ್ಬೆರಳ ಉಗುರು ಸೋಂಕನ್ನು ಮನೆಯಲ್ಲೇ ಗುಣಪಡಿಸಬಹುದಾದ ಸರಳ ವಿಧಾನವನ್ನು ಈ ಲೇಖನ ನಿಮ್ಮ ಮುಂದಿಡುತ್ತಿದೆ.

ಫಂಗಸ್ ಸೋಂಕು ಉಂಟಾಗದಂತೆ ಉಗುರಿನ ಕುರಿತಾದ ಸೂಕ್ತವಾದ ಕಾಳಜಿಯನ್ನು ನೀವು ತೆಗೆದುಕೊಳ್ಳಬೇಕು. ಮನೆಯಲ್ಲೇ ನೈಸರ್ಗಿಕವಾಗಿ ಫಂಗಸ್ ಸೋಂಕನ್ನು ಗುಣಪಡಿಸಬಹುದಾದ ವಿಧಾನಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಯಾವುವು ಎಂಬುದನ್ನು ಮುಂದೆ ಓದಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮ ಉಗುರುಗಳ ಬಗ್ಗೆ ಕಾಳಜಿ ವಹಿಸುವುದು ಹೇಗೆ?
* ಅವುಗಳನ್ನು ಕತ್ತರಿಸಿ:
ಉಗುರುಗಳನ್ನು ಉದ್ದಕೆ ಇರಿಸಿಕೊಳ್ಳುವುದೂ ಸಹ ಫಂಗಸ್ ಸೋಂಕಿಗೆ ಕಾರಣವಾಗಿದೆ. ಉಗುರುಗಳನ್ನು ಕತ್ತರಿಸಿ ಅವುಗಳನ್ನು ಸ್ವಚ್ಛವಾಗಿಡಿ. ಇದು ಉಗುರುಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಗಟ್ಟುತ್ತದೆ ಮತ್ತು ಉಗುರುಗಳನ್ನು ಸ್ವಚ್ಛ ಹಾಗೂ ಕೊಳೆರಹಿತವಾಗಿ ಇರಿಸುತ್ತದೆ.
*ಉಗುರುಗಳನ್ನು ಒಣಗಿಸಿಟ್ಟುಕೊಳ್ಳಿ:
ಒದ್ದೆ ಉಗುರುಗಳು ಬ್ಯಾಕ್ಟೀರಿಯಾ ಮತ್ತು ಫಂಗಸ್ಗೆ ಆಹ್ವಾನವನ್ನು ಮಾಡಿದಂತೆ. ಉಗುರಗಳನ್ನು ತೊಳೆದ ನಂತರ ಅವುಗಳನ್ನು ಒಣಗಿಸಿಟ್ಟುಕೊಳ್ಳಬೇಕು. ಸ್ವಿಮ್ಮಿಂಗ್, ಸ್ನಾನದ ನಂತರ ನಿಮ್ಮ ಒದ್ದೆಯಾದ ಉಗುರುಗಳನ್ನು ಚೆನ್ನಾಗಿ ಒರೆಸಿ ಒಣಗಿಸಿಟ್ಟುಕೊಳ್ಳಿ.
*ಚಪ್ಪಲಿಗಳನ್ನು ಧರಿಸಿ:
ಕಾಲ್ಬೆರಳಿನ ಉಗುರುಗಳ ಫಂಗಸ್ ಅನ್ನು ತಡೆಗಟ್ಟಲು, ಗಾಳಿಯಾಡುವಂತಹ ಮತ್ತು ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆಯುವಂತಹ ಚಪ್ಪಲಿಗಳನ್ನು ಧರಿಸಿ. ಆದ್ದರಿಂದ ಬರಿಗಾಲಿನಲ್ಲಿ ನಡೆದಾಡಲು ಆದಷ್ಟು ಪ್ರಯತ್ನಿಸಿ. ಬೆರಳ ಉಗುರುಗಳ ಮಧ್ಯೆ ಬೆವರು ಉಂಟಾಗುವುದನ್ನು ಇದು ತಡೆಯುತ್ತದೆ.
*ಹೈಜೀನ್:
ಕಾಲ್ಬೆರಳಿನ ಫಂಗಸ್ ಅನ್ನು ನಿವಾರಿಸಲು, ಉಗುರಿನ ಸ್ವಚ್ಛತೆಯ ಕಡೆಗೆ ನೀವು ಮೊದಲು ಗಮನಹರಿಸಬೇಕು. ಉದಾಹರಣೆಗೆ ಒಂದು ದಿನಕ್ಕಿಂತ ಹೆಚ್ಚು ನೀವು ಒಂದೇ ಸಾಕ್ಸ್ ಅನ್ನು ಬಳಸಬಾರದು. ಬೆವರು ಮತ್ತು
ಬ್ಯಾಕ್ಟೀರಿಯಾ ಫಂಗಸ್ ಸೋಂಕಿಗೆ ಕಾರಣವಾಗುತ್ತದೆ. ಬಿಳಿ ಸಾಕ್ಸ್ ಅನ್ನು ಆದಷ್ಟು ಬಳಸಿ. ಬಟ್ಟೆಯನ್ನು ತೊಳೆದ ನಂತರವೂ ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆದರೆ ಇತರ ಬಣ್ಣದ ಸಾಕ್ಸ್ಗಳನ್ನು ಸೋಂಕು ನಿವಾರಕದಲ್ಲಿ ಅದ್ದಿ ತೊಳೆಯಬೇಕು.
*ವಿನೇಗರ್:
ವಿನೇಗರ್ ಮತ್ತು ನೀರಿನಲ್ಲಿ ಕಾಲುಗಳನ್ನು ಅದ್ದಿ ಮತ್ತು ಅವುಗಳನ್ನು ಸ್ವಚ್ಛಗೊಳಿಸಿ. ವಿನೇಗರ್ನಲ್ಲಿರುವ ಏಸಿಡಿಕ್ ಅಂಶಗಳು ಸೂಕ್ಷ್ಮಾಣುಜೀವಿಗಳನ್ನು ಕೊಂದು ಕಾಲ್ಬೆರಳ ಫಂಗಸ್ ಉಂಟಾಗುವಿಕೆಯನ್ನು ತಡೆಯುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತ್ವಚೆಯ ಸುಟ್ಟ ಗಾಯ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ!
*ವಾರಕ್ಕೊಮ್ಮೆ ಪೆಡಿಕ್ಯೂರ್:
ವಾರಕ್ಕೊಂದು ಬಾರಿ ನೀವು ಪೆಡಿಕ್ಯೂರ್ ಅನ್ನು ಮಾಡಿಸಬೇಕು. ಇದಕ್ಕಾಗಿ ನೀವು ಸ್ಪಾ ಅಥವಾ ಪಾರ್ಲರ್ಗೆ ಹೋಗಬೇಕಾಗಿಲ್ಲ. ನಿಮ್ಮ ಕಾಲುಗಳನ್ನು ಉಪ್ಪು ಬೆರೆತ ಬಿಸಿನೀರಿನಲ್ಲಿ ಅದ್ದಿಡಿ. ಮತ್ತು ಉಗುರುಗಳನ್ನು ಸ್ವಚ್ಛಗೊಳಿಸಿ. ಉಗುರುಗಳಲ್ಲಿರುವ ಮೃತ ಕ್ಯೂಟಿಕಲ್ ಅನ್ನು ನಿವಾರಿಸುತ್ತದೆ ಮತ್ತು ಮಾಯಿಶ್ಚರೈಸರ್ ಚೆನ್ನಾಗಿ ಹರಿಯುವಂತೆ ಮಾಡುತ್ತದೆ. ಇದು ನೈಸರ್ಗಿಕವಾಗಿ ಕಾಲ್ಬೆರಳಿನಿಂದ ಫಂಗಸ್ ಅನ್ನು ನಿವಾರಿಸುವ ವಿಧಾನವಾಗಿದೆ.
ಈ ವಿಧಾನಗಳನ್ನು ಬಳಸಿಕೊಂಡು ನೈಸರ್ಗಿಕವಾಗಿ ನಿಮ್ಮ ಕಾಲ್ಬೆರಳಿನ ಫಂಗಸ್ ಅನ್ನು ನಿವಾರಿಸಿಕೊಳ್ಳಿ. ಉಗುರುಗಳನ್ನು ಸ್ವಚ್ಛವಾಗಿರಿಸಿ ಹಾಗೂ ಸೂಕ್ತ ಕಾಳಜಿಯನ್ನು ನಿಮ್ಮ ಉಗುರುಗಳಿಗೆ ಮಾಡಿ.



Click it and Unblock the Notifications
