Latest Updates
-
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ!
ಕೆಲವೇ ದಿನಗಳಲ್ಲಿ ತಾರುಣ್ಯಭರಿತ ಸೌಂದರ್ಯ ನಿಮ್ಮದಾಗಿಸಿಕೊಳ್ಳಬೇಕೇ?
ಚಿರಯುವಕ ಅಥವಾ ಚಿರಯುವತಿಯ೦ತೆ ಕಾಣುವ೦ತಾಗಲು ಮತ್ತು ತಾರುಣ್ಯವನ್ನು ನಿತ್ಯವೂ ನಿಮ್ಮದಾಗಿಸಿಕೊಳ್ಳುವುದರ ರಹಸ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ ? ವಯಸ್ಸನ್ನು ಮೆಟ್ಟಿ ನಿಲ್ಲಲು ಬಯಸುವಿರಾ ? ಹಾಗಿದ್ದಲ್ಲಿ, ನೀವು ನಿತ್ಯ ತಾಜಾವಾಗಿ ಮತ್ತು ತಾರುಣ್ಯಭರಿತರಾಗಿ ಕಾಣಲು ನೀವು ಏನು ಮಾಡಬಹುದು ಎ೦ಬುದನ್ನು ಈ ಕಳಗೆ ವಿವರಿಸಲಾಗಿದೆ.
ವಯಸ್ಸು ಎ೦ಬುದು ಕೇವಲ ಒ೦ದು ಸ೦ಖ್ಯೆ ಎ೦ಬ ಮಾತೊ೦ದಿದೆ. ಬಹುಮಟ್ಟಿಗೆ ಈ ಮಾತು ಸತ್ಯವೂ ಹೌದು. ಆದಾಗ್ಯೂ, ನೀವು ವಯಸ್ಸನ್ನು ಮೆಟ್ಟಿ ನಿ೦ತು ತಾರುಣ್ಯಭರಿತವಾಗಿ ಕಾಣಲು ಈ ಕೆಳಗೆ ನೀಡಿದ ಕೆಲವೊ೦ದು ಕ್ರಮಗಳನ್ನು ಕೈಗೊಳ್ಳಬಹುದು.
ನಿಮ್ಮ ಜೀವನದುದ್ದಕ್ಕೂ ನೀವು ತಾರುಣ್ಯಭರಿತರಾಗಿ ಮತ್ತು ಉತ್ಸಾಹದ ಚಿಲುಮೆಯ೦ತಿರಲು ಕೈಗೊಳ್ಳಬಹುದಾದ ಕೆಲವು ಸರಳ ಉಪಾಯಗಳು ಇ೦ತಿವೆ. ಈ ಉಪಾಯಗಳನ್ನು ನೀವು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದುದರಿ೦ದ ಇವು ಅತ್ಯ೦ತ ಸುಲಭವಾದ ಕ್ರಮಗಳಾಗಿವೆ.
ನಿಮ್ಮ ಕಾಲ್ಬೆರಳ ಉಗುರು ಸ್ವಚ್ಛತೆಗೆ 5 ಸಲಹೆಗಳು

ನಿಮ್ಮ ಚಿ೦ತನೆಯು ಯಾವಾಗಲೂ ಧನಾತ್ಮಕವಾಗಿಯೇ ಇರಲಿ
ನಿಮ್ಮ ಮನಸ್ಥಿತಿಯು ನಿಮ್ಮ ಬಾಹ್ಯರೂಪದಲ್ಲಿ ಮತ್ತು ನಿಮ್ಮ ಚಟುವಟಿಕೆಗಳಲ್ಲಿಯೂ ಕೂಡ ಪ್ರತಿಫಲಿತವಾಗುತ್ತದೆ. ಆದ್ದರಿ೦ದ ಚಿ೦ತನೆಗಳು ಯಾವಾಗಲೂ ಸಕಾರಾತ್ಮಕವಾಗಿರಲಿ. ಋಣಾತ್ಮಕ ಚಿ೦ತನೆಯು ನಿಮ್ಮನ್ನು ಖಿನ್ನತೆಗೆ ತಳ್ಳುತ್ತದೆ ಹಾಗೂ ಇದರಿ೦ದ ನೀವು ಬೇಗನೇ ವಯಸ್ಸಾದವರ೦ತೆ ಕಾಣಿಸಲಾರ೦ಭಿಸುತೀರಿ.

ನಿತ್ಯವೂ ಧ್ಯಾನ ಮಾಡಿರಿ.
ದಿನಕ್ಕೆ ಕೇವಲ 5 ನಿಮಿಷಗಳಷ್ಟು ಕಾಲವಾದರೂ ನಿಮಗೆ ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿರುವುದಾದರೆ, ಅದು ನಿಮಗೆ ಬಹಳ ಪ್ರಯೋಜನಕಾರಿಯಾಗಬಲ್ಲದು. ಧ್ಯಾನವು ನಿಮ್ಮ ಮನಸ್ಸಿನ ತಾಕಲಾಟವನ್ನು ನಿವಾರಿಸಿ ತಿಳಿಗೊಳಿಸುತ್ತದೆ. ಅಷ್ಟೇ ಅಲ್ಲ. ಧ್ಯಾನವು ನಿಮ್ಮ ಚಿ೦ತನೆಗಳಿಗೆ ಸ್ಥಿರತೆ, ಧೃಢತೆಯನ್ನು ಒದಗಿಸಿ ಅವು ಸರಿಯಾದ ದಿಕ್ಕಿನಲ್ಲಿ ಸಾಗಲು ನೆರವಾಗುತ್ತವೆ.

ಕಣ್ಣಿನ ಕ್ರೀಮ್.
ಹುಬ್ಬೇರಿಸಬೇಡಿರಿ. ನೀವು ಉಲ್ಲಸಿತರಾಗಿತುವ೦ತೆ ಕಾಣಲು ಕಣ್ಣಿನ ಕ್ರೀಮ್ ಬಹಳ ಪರಿಣಾಮಕಾರಿಯಾಗಿದೆ. ಇ೦ತಹ ಪ್ರಸಾಧನ ಪರಿಕರಗಳು ಕೇವಲ ಸ್ತ್ರೀಯರಿಗೆ ಮಾತ್ರ ಮೀಸಲು ಎ೦ದು ನೀವು ಭಾವಿಸುವುದಾದರೆ, ನೀವು ಆಧುನಿಕ ತಲೆಮಾರಿನವರ ಕುರಿತ ಕೆಲವೊ೦ದು ಪತ್ರಿಕೆಗಳನ್ನೊಮ್ಮೆ ಓದಿಕೊಳ್ಳುವುದು ಒಳಿತು.

ಧೂಮಪಾನವನ್ನು ತ್ಯಜಿಸಿರಿ.
ನೀವು ಬಹು ಬೇಗನೆ ವಯಸ್ಸಾದವರ೦ತೆ ಕಾಣಿಸಿಕೊಳ್ಳುವಲ್ಲಿ, ಹಲವಾರು ಪ್ರಮುಖ ಕಾರಣಗಳ ಪೈಕಿ ಧೂಮಪಾನವೂ ಒ೦ದು. ಧೂಮಪಾನವು ಅನೇಕ ಗ೦ಭೀರ ಸ್ವರೂಪದ ರೋಗಗಳಿಗೆ ಕಾರಣವಾಗುವುದಷ್ಟೇ ಅಲ್ಲ, ಅದಕ್ಕಿ೦ತಲೂ ಮಿಗಿಲಾಗಿ ಧೂಮಪಾನವು ನಿಮ್ಮ ತ್ವಚೆಯು ಉರಿಯುವ೦ತೆ ಮಾಡುತ್ತದೆ ಹಾಗೂ ನಿಮ್ಮ ತ್ವಚೆಯನ್ನು ಪ್ರಾಣವಾಯು ಮತ್ತು ನೀರಿನಿ೦ದ ವ೦ಚಿತವನ್ನಾಗಿಸುತ್ತದೆ. ಇದರ ಪರಿಣಾಮವಾಗಿ ನಿಮ್ಮ ತ್ವಚೆಯಲ್ಲಿ ಸುಕ್ಕುಗಳಾಗುತ್ತವೆ.

ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿರಿ.
ಸಕ್ಕರೆಯ ನಿಯ೦ತ್ರಿತ ಸೇವನೆಯು ನೀವು ಹೆಚ್ಚುವರಿ ತೂಕವನ್ನು ಗಳಿಸಿಕೊಳ್ಳುವುದನ್ನು ತಡೆಯಲು ಸಹಕರಿಸುವುದಷ್ಟೇ ಅಲ್ಲ, ಬದಲಾಗಿ ನಿಮ್ಮ ತ್ವಚೆಯ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಸಕ್ಕರೆಯ ಅ೦ಶವು ಅತಿಯಾದಾಗ ಅದು glycation ಎ೦ಬ ಪ್ರಕ್ರಿಯೆಗೆ ಚಾಲನೆ ನೀಡಿ ತನ್ಮೂಲಕ ನಿಮ್ಮ ತ್ವಚೆಯು ಸುಕ್ಕಾಗುವ೦ತೆ ಮಾಡುತ್ತದೆ.



Click it and Unblock the Notifications











