Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ಪುರುಷರು ಚರ್ಮದ ಟ್ಯಾನ್ ಅನ್ನು ಹೋಗಲಾಡಿಸಲು ಮನೆ ಮದ್ದುಗಳು
ಹೊರದೇಶಗಳಲ್ಲಿ ಟ್ಯಾನ್ ಆದ ಚರ್ಮ ಹೊಂದಿರುವುದನ್ನು ಸಾಕಷ್ಟು ಇಷ್ಟಪಡುತ್ತಾರೆ. ಆದರೆ ಭಾರತ, ಕೊರಿಯ, ಚೀನಾ ದೇಶಗಳಲ್ಲಿ ಟ್ಯಾನ್ ಆಗುವುದನ್ನು ಇಷ್ಟಪಡುವುದಿಲ್ಲ. ಟ್ಯಾನ್ ಆಗುವುದು ಆಕರ್ಷಕಣೆಗೆ ಅಡ್ಡಿ ಎಂಬುದು ನಮ್ಮ ಭಾರತೀಯರ ಅಭಿಪ್ರಾಯ.
ಹೆಚ್ಚಿನ ಜನರು ತ್ವಚೆ ಸೂರ್ಯನ ಕಿರಣಗಳಿಗೆ ಒಳಗೊಂಡು ಕಳೆಗುಂದುವುದನ್ನು ಇಚ್ಚಿಸುವುದಿಲ್ಲ.ಚರ್ಮ ಈ ರೀತಿ ಟ್ಯಾನ್ ಆಗುವುದು ಬೇಸಿಗೆಯ ಬೇಗೆ ಹೆಚ್ಚಿದಾಗ ಮತ್ತು ಸೂರ್ಯನ ವಿಕಿರಣಗಳಲ್ಲಿ ಮೆಲನಿನ್ ಅಂಶ ಹೆಚ್ಚಿದಾಗ. ಒಂದು ಕಾಲದಲ್ಲಿ ಕೇವಲ ಮಹಿಳೆ ಮಾತ್ರ ತನ್ನ ತ್ವಚೆಯ ಬಗ್ಗೆ ಕಾಳಜಿವಹಿಸುತ್ತಿದ್ದಳು ಆದರೆ ಈಗ ಪುರುಷರು ಕೂಡ ತ್ವಚೆ ಬಗ್ಗೆ ಕಾಳಜಿವಹಿಸುತ್ತಿದ್ದಾಳೆ.ಸಾಕಷ್ಟು ಮನೆಮದ್ದುಗಳು ತ್ವಚೆಗೆ ಟ್ಯಾನ್ ಆಗುವುದನ್ನು ಹೋಗಲಾಡಿಸುತ್ತದೆ.
ಈ ಎಣ್ಣೆಗಳಿರುವಾಗ ಸನ್ ಟ್ಯಾನ್ ಚಿಂತೆ ಏಕೆ?

ಮೊಸರು:-
ಮೊಸರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಸಹಾಯಕವಾಗುತ್ತದೆ.ಮೊಸರು ರಂದ್ರಗಳನ್ನು ಬಿಗಿಗೊಳಿಸುವುದರ ಮೂಲಕ ಟ್ಯಾನ್ ಆಗುವುದನ್ನು ತಡೆಯುತ್ತದೆ.ಒಂದು ತಟ್ಟೆಯಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಟೊಮೇಟೊ ಮತ್ತು ಸೌತೆಕಾಯಿಯ ರಸವನ್ನು ಸೇರಿಸಿ.ಇದಕ್ಕೆ ಅರ್ಧ ಕಪ್ ನಷ್ಟು ಕಡಲೆ ಹಿಟ್ಟನ್ನು ಬೆರೆಸಿ.ಇದನ್ನು ಚೆನ್ನಾಗಿ ಬೆರೆಸಿ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಿ.ಇದನ್ನು ಅರ್ಧ ಮುಕ್ಕಾಲು ಗಂಟೆಯವರೆಗೆ ಹಾಗೆಯೇ ಬಿಟ್ಟು ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ನಿಂಬೆ ರಸ :-
ನಿಂಬೆಹಣ್ಣು ಬ್ಲೀಚಿಂಗ್ ಎಂದೇ ಹೇಳಬಹುದು.ನಿಮ್ಮ ಮುಖ ಟ್ಯಾನ್ ಆದ ಭಾಗಕ್ಕೆ ತಾಜಾ ನಿಂಬು ರಸವನ್ನು ಹಚ್ಚಬಹುದು.ನಿಂಬೆ ರಸಕ್ಕೆ ಸಕ್ಕರೆ ಬೆರೆಸಿ ಕೂಡ ಬಳಸಬಹುದು.ಇದನ್ನು ವಾರದಲ್ಲಿ ಎರಡು ಮೂರು ಬಾರಿ ಬಳಸುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು.

ಆಲೂಗಡ್ಡೆ :-
ಸೂರ್ಯನ ಕಿರಣಗಳಿಂದ ಟ್ಯಾನ್ ಆದ ಚರ್ಮದ ಪದರ ಹೊರತೆಗೆಯಬೇಕು ಎಂದರೆ ನೀವು ಆಲೂಗಡ್ಡೆ ಬಳಸಬಹುದು.ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಸ್ವಾಭಾವಿಕ ಬ್ಲೀಚ್ ಆಗಿ ಕೆಲಸ ಮಾಡುತ್ತದೆ.ಎರಡು ಸಣ್ಣ ಆಲೂಗಡ್ಡೆ ತೆಗೆದುಕೊಳ್ಳಿ,ಇದರ ಸಿಪ್ಪೆ ತೆಗೆದು ಕತ್ತರಿಸಿ ಮಿಕ್ಸರ್ ನಲ್ಲಿ ಬ್ಲೆಂಡ್ ಮಾಡಿ.ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ ಮತ್ತು ನಿಮ್ಮ ಮುಖ ಟ್ಯಾನ್ ಮುಕ್ತವಾಗುವುದನ್ನು ಕಾಣಬಹುದು.

ಆಲೋವೆರ :-
ನಿಮ್ಮ ಮನೆಯ ಹೂತೋಟದಲ್ಲಿ ಆಲೋವೆರ ಇರಲೇಬೇಕು, ಇದು ತ್ವಚೆ ಮತ್ತು ಆರೋಗ್ಯಕ್ಕೆ ಕೂಡ ಸಹಾಯಕ್ಕೆ ಬರುತ್ತದೆ.ನೀವು ಆಲೋವೆರ ಹಚ್ಚುವುದರಿಂದ ನಿಮ್ಮ ತ್ವಚೆ ಒಂದು ವಾರದಲ್ಲಿ ಹೊಳಪನ್ನು ಪಡೆಯುತ್ತದೆ.ಇದು ತ್ವಚೆಯನ್ನು ಸ್ವಚ್ಚಗೊಳಿಸಿ,ಪೋಷಣೆ ನೀಡುತ್ತದೆ.ನೀವು ಮಲಗಲು ಹೋಗುವ ಮೊದಲು ತಾಜಾ ಆಲೋವೆರ ಬಳಸಬಹುದು,ಅಥವಾ ಬೆಳಗಿನ ಮುಂಜಾನೆ ಕೂಡ ಇದನ್ನು ಹಚ್ಚಿ ತ್ವಚೆಯ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.



Click it and Unblock the Notifications