Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Flat tummy ಪಡೆಯಲು ತೆಳ್ಳಗಾದರೆ ಮಾತ್ರ ಸಾಲದು
ಸಣ್ಣಗಾದರೆ ಹೊಟ್ಟೆಯೂ ಕಮ್ಮಿಯಾಗಿ, flat tummy ನಿಮ್ಮದಾಗುವುದೆಂದು ಬಯಸಿದ್ದೀರಾ? ಹಾಗಾದರೆ ನಿಮ್ಮ ಆಲೋಚನೆ ಸರಿಯಲ್ಲ. ಏಕೆಂದರೆ ತೆಳ್ಳಗಾದ ಮಾತ್ರಕ್ಕೆ ಸಮತಟ್ಟಾದ ಹೊಟ್ಟೆ ನಿಮ್ಮದಾಗುವುದಿಲ್ಲ, ಸಮತಟ್ಟಾದ ಹೊಟ್ಟೆ ಬೇಕೆಂದರೆ ಅದಕ್ಕಾಗಿ ಪ್ರಯತ್ನ ಕೂಡ ಅಗತ್ಯ.
ನಾವು ತೆಳ್ಳಗಾದಾಗ ಹೊಟ್ಟೆ ಕರಗಿದರೂ ಹೊಟ್ಟೆಯ ತ್ವಚೆ ಸಡಿಲವಾಗಿರುತ್ತದೆ, ಆದ್ದರಿಂದ ಹೊಟ್ಟೆ flat ಆಗಿ ಕಾಣಿಸುವುದಿಲ್ಲ. ಸಮತಟ್ಟಾದ, ಆಕರ್ಷಕವಾದ ಹೊಟ್ಟೆ ನಿಮ್ಮದಾಗಬೇಕೆಂದರೆ ಈ ರೀತಿ ಮಾಡಿ:

ನಿಮ್ಮ ತ್ವಚೆಯ ಆರೈಕೆ ಮಾಡಿ
ಹೊಟ್ಟೆಗೆ ಮಾಯಿಶ್ಚರೈಸರ್ ಹಚ್ಚಿ ಮಸಾಜ್ ಮಾಡಿ, ಕಾಲು, ಕೈಗಳಿಗೂ ಮಸಾಜ್ ಮಾಡಿ, ಮಸಾಜ್ ಮಾಡುವುದರಿಂದ ತ್ವಚೆ ಸಡಿಲವಾಗದೆ, ನಿಮ್ಮ ಯೌವನದ ಲುಕ್ ಹೆಚ್ಚಿಸುವುದು.

ಎಕ್ಸ್ ಫೋಲೆಟ್ ಮಾಡಿ
ಮೈ ಉಜ್ಜಲು ಒಳ್ಳೆಯ ಬ್ರಷ್ ಬಳಸಿ, ಇದರಿಂದ ನಿರ್ಜೀವ ತ್ವಚೆ ಹಾಗೂ ಕೊಳೆಯನ್ನು ಹೋಗಲಾಡಿಸಬಹುದು.

ಕ್ರಂಚಸ್ ಬೆಸ್ಟ್
ಹೊಟ್ಟೆಯನ್ನು ಬಿಗಿಯಾಗಿಸಲು ಕ್ರಂಚಸ್ ವ್ಯಾಯಾಮ ಒಳ್ಳೆಯದು. ಕ್ರಂಚಸ್ ಮಾಡುವುದರಿಂದ ಬೇಗನೆ flat tummy ಒಡೆಯರು ನೀವಾಗುವಿರಿ.

ದೈಹಿಕ ಚಟುವಟಿಕೆ
ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾಗ ಬೇಕೆಂದರೆ ದೈಹಿಕ ಚಟುವಟಿಕೆಯನ್ನು ಹೆಚ್ಚು ಮಾಡಬೇಕು. ವ್ಯಾಯಾಮ, ಲಿಫ್ಟ್ ಬದಲು ಸ್ಟೆಪ್ ಬಳಸುವುದು, ಮನೆ ಕೆಲಸ ಇವೆಲ್ಲಾ ದೈಹಿಕ ಶ್ರಮ ಹೆಚ್ಚಿಸಿ, ಕೊಬ್ಬನ್ನು ಕರಗಿಸುತ್ತದೆ.

ನೀರಿನಂಶ
ಸಮತಟ್ಟಾದ ಹೊಟ್ಟೆ ಬೇಕೆಂದರೆ ಸಾಕಷ್ಟು ನೀರು ಕುಡಿಯಿರಿ, ನೀರಿನಂಶವಿರುವ ಆಹಾರ ತಿನ್ನಿ. ನೀರು ಕಲ್ಮಶವನ್ನು ಹೊರಹಾಕುತ್ತದೆ, ತ್ವಚೆಯನ್ನು ಸಡಿಲವಾಗದಂತೆ ತಡೆದು, ತ್ವಚೆಯಲ್ಲಿ ತೇವಾಂಶವನ್ನು ಕಾಪಾಡುತ್ತದೆ.

ಆಹಾರಕ್ರಮ
ಸಮತಟ್ಟಾದ ಹೊಟ್ಟೆ ಪಡೆಯಲು ಆಹಾರಕ್ರಮದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ಕೊಬ್ಬಿನಂಶ ಕಡಿಮೆ ಇರುವ ನಾರಿನಂಶ, ಖನಿಜಾಂಶ, ಪ್ರೊಟೀನ್ ಅಧಿಕವಿರುವ ಆಹಾರಗಳನ್ನು ತಿನ್ನಬೇಕು.



Click it and Unblock the Notifications
