Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಪ್ಪ ತೊಡೆಯನ್ನು ಮರೆಮಾಚುವ ಡ್ರೆಸ್ಸಿಂಗ್ ಸೆನ್ಸ್
ಹೆಚ್ಚಿನ ಮಹಿಳೆಯರಿಗೆ ದೇಹವೇನು ಅಷ್ಟೇನು ದಪ್ಪವಾಗಿರುವುದಿಲ್ಲ, ಆದರೆ ತೊಡೆಗಳು ದಪ್ಪವಿರುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ದಪ್ಪ ತೊಡೆಗಳು ನಿಮ್ಮನ್ನು ದಪ್ಪಗೆ ಕಾಣುವಂತೆ ಮಾಡಿ ನಿಮ್ಮ ಲುಕ್ ಹಾಳು ಮಾಡುತ್ತದೆ. ಹೊಟ್ಟೆ ಕರಗಿಸಿದಷ್ಟು ಸುಲಭವಾಗಿ, ದಪ್ಪ ತೊಡೆಯನ್ನು ಕರಗಿಸಲು ಸಾಧ್ಯವಿಲ್ಲ. ಆದರೆ ತೊಡೆಯನ್ನು ಕರಗಿಸುವ ವ್ಯಾಯಾಮ ಮಾಡಿದರೆ ಖಂಡಿತ ಕರಗಿಸಬಹುದು.
ಇಲ್ಲಿ ನಾವು ದಪ್ಪ ತೊಡೆಯನ್ನು ಮರೆ ಮಾಚುವ ಕೆಲ ಔಟ್ ಫಿಟ್ ಗಳ ಬಗ್ಗೆ ಹೇಳುತ್ತಿದ್ದೇವೆ. ಈ ಡ್ರೆಸ್ ಗಳು ನೋಡಲಿಕ್ಕೆ ಫ್ಯಾಷನಬಲ್ ಆಗಿದ್ದು, ನಿಮ್ಮ ದಪ್ಪ ತೊಡೆಯನ್ನು ಮರೆ ಮಾಚಿ, ಆಕರ್ಷಕವಾಗಿ ಕಾಣುವಂತೆ ಮಾಡುವುದು:

ಜಂಪ್ ಸೂಟ್
ಡ್ರೆಸ್ಸಿಂಗ್ ಸೆನ್ಸ್ ಗೊತ್ತಿದ್ದರೆ ದಪ್ಪಗಿದ್ದರೂ ಆಕರ್ಷಕವಾಗಿ ಕಾಣುವುದು. ಉದಾಹರಣೆಗೆ ಸೋನಾಕ್ಷಿ ಸಿನ್ಹಳನ್ನು ನೋಡಿ, ಅವರು ದಪ್ಪಕ್ಕೆ ಇದ್ದಾರೆ, ಆದರೆ ಅವರ ಡ್ರೆಸ್ಸಿಂಗ್ ಸೆನ್ಸ್ ಅದ್ಭುತವಾಗಿದೆ. ದಪ್ಪ ತೊಡೆ ಇರುವವರಿಗೆ ಬಿಗಿಯಾದ ಜೀನ್ಸ್ ಪ್ಯಾಂಟ್ ಗಿಂತ ಜಂಪ್ ಸೂಟ್ ಆಕರ್ಷಕವಾಗಿ ಕಾಣುವುದು.

ಕುರ್ತೀಸ್
ದಪ್ಪ ತೊಡೆ ಇರುವ ಮಹಿಳೆಯರು ಈ ಫ್ಯಾಷನ್ ಮಾಡಬಹುದು. ಸಂಪೂರ್ಣ ಮೈ ಮುಚ್ಚುವ ಈ ರೀತಿಯ ಕುರ್ತೀಸ್ ದಪ್ಪ ತೊಡೆಯನ್ನು ಮರೆ ಮಾಚಿಸುತ್ತದೆ.

ಸ್ಯಾರಿ
ದಪ್ಪ ತೊಡೆಯನ್ನು ಸೀರೆ ಧರಿಸುವುದರಿಂದಲೂ ಮರೆ ಮಾಚಬಹುದು. ಸೀರೆ ತುಂಬಾ ಸಪೂರ ತೊಡೆಯವರಿಗಿಂತ ದಪ್ಪ ತೊಡೆಯವರಿಗೆ ಆಕರ್ಷಕವಾಗಿ ಕಾಣುತ್ತದೆ.

ಧೋತಿ ಪ್ಯಾಂಟ್
ದಪ್ಪ ತೊಡೆಯವರಿಗೆ ಆಕರ್ಷಕ ಲುಕ್ ನೀಡುವ ಮಿಂಚುವಿರಿ.

ಪ್ಲಾಜೋ ಪ್ಯಾಂಟ್
ಪ್ಲಾಜೋ ಪ್ಯಾಂಟ್ ನಲ್ಲಿ ತುಂಬಾ ನೆರಿಗೆ ಇರುವುದರಿಂದ ದಪ್ಪ ತೊಡೆಯವರು ಈ ರೀತಿಯ ಪ್ಯಾಂಟ್ ಧರಿಸಿದರೆ ತೊಡೆ ಸಪೂರವಾಗಿ ಕಾಣುವುದು.

ಗೌನ್
ಗೌನ್ ವಿಥ್ ಸ್ಲೀವ್ ಅಥವಾ ಹ್ಯಾಂಡ್ ಲೆಸ್ ಗೌನ್ ದೊರೆಯುವುದು. ಗೌನ್ ಉದ್ದವಾಗಿರುವುದರಿಂದ ದಪ್ಪ ತೊಡೆಯನ್ನು ಮರೆಮಾಚುವುದು.

ಸ್ಕರ್ಟ್ಸ್
ಉದ್ದ ಲಂಗದಲ್ಲಿ ತುಂಬಾ ಫ್ಯಾಷನಬಲ್ ಆದ ಡ್ರೆಸ್ ಗಳು ದೊರೆಯುತ್ತದೆ. ಮಿಡಿ, ಲಂಗಗಳು ಕೂಡ ಮೈ ಮಾಟ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಪ್ರಿಂಟಡ್ಡ್ ಡ್ರೆಸ್
ಪ್ರಿಂಟ್ ಇರುವ ಡ್ರೆಸ್ ಧರಿಸಿದಾಗ ತೊಡೆ ದಪ್ಪವಿದೆ ಅಂತ ಅನಿಸುವುದಿಲ್ಲ. ಆದ್ದರಿಂದ ಡ್ರೆಸ್ ಕೊಳ್ಳುವಾಗ ದೊಡ್ಡ-ದೊಡ್ಡ ಪ್ರಿಂಟ್ ಇರುವ ಡ್ರೆಸ್ ಆಯ್ಕೆ ಮಾಡಿ.

ಕುರ್ತಾ ವಿಥ್ ಪ್ಯಾರಲೆಲ್ ಪ್ಯಾಂಟ್
ಪ್ಯಾರಲೆಲ್ ಪ್ಯಾಂಟ್ ಫ್ಯಾಷನ್ ಔಟ್ ಡೇಟ್ ಆಗಿದ್ದರೂ ಈಗ ಸ್ವಲ್ಪ ಬದಲಾವಣೆಯೊಂದಿಗೆ ಮತ್ತೆ ಟ್ರೆಂಡ್ ಲೋಕಕ್ಕೆ ಕಾಲಿಡುತ್ತದೆ. ಕುರ್ತಾಕ್ಕೆ ಪ್ಯಾರಲೆಲ್ ಪ್ಯಾಂಟ್ ಧರಿಸಿದರೆ ತೊಡೆ ದಪ್ಪಗೆ ಕಾಣುವುದಿಲ್ಲ.



Click it and Unblock the Notifications
