Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಾನ್ಸೂನ್ ಗೆ ಧರಿಸಲು ಬೆಸ್ಟ್ ಸ್ಟೈಲೀಷ್ ಸ್ಲಿಪ್ಪರ್ಸ್
ಮಳೆಗಾಲದಲ್ಲಿ ನಮ್ಮ ಉಡುಗೆ-ತೊಡುಗೆಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮಳೆಗಾಲಕ್ಕೆ ತಕ್ಕ ಡ್ರೆಸ್ ಹಾಕಬೇಕು, ಅದರಲ್ಲೂ ಚಪ್ಪಲಿ ಮತ್ತು ಶೂಗಳಂತೂ ಮಳೆಗಾಲಕ್ಕೆ ತಕ್ಕ ಹಾಗೇ ಇರಬೇಕು. ಲೆದರ್, ಬಟ್ಟೆ, ಚಪ್ಪಲಿ ಧರಿಸಲು ಸಾಧ್ಯವಿಲ್ಲ, ಪ್ಲಾಸ್ಟಿಕ್ ಚಪ್ಪಲಿಗಳು ಬೆಸ್ಟ್.
ಮಳೆಗಾಲಕ್ಕೆ ಧರಿಸುವ ಚಪ್ಪಲಿಗಳು ಸ್ಟೈಲೀಷ್ ಆಗಿ ಇರಬೇಕೆಂದು ಬಯಸುವುದಾದರೆ ಈ ಕೆಳಗಿನ ಚಪ್ಪಲಿಗಳು ನಿಮಗೆ ಫ್ಯಾಷನಬಲ್ ಲುಕ್ ನೀಡುವುದು.

ಪಾರ್ಟಿಗೆ ಗೋಲ್ಡನ್ ಕಲರ್ ಬೆಸ್ಟ್
ತುಂಬಾ ಫ್ಯಾಷನಬಲ್ ಡ್ರೆಸ್ ಧರಿಸಿದಾಗ ಸಿಂಪಲ್ ಚಪ್ಪಲಿ ಧರಿಸಿದರೆ ನಿಮ್ಮ ಫ್ಯಾಷನಬಲ್ ಲುಕ್ ಹಾಳಾಗುವುದು. ಹಾಗಂತ ಲೆದರ್ ಚಪ್ಪಲಿ ಧರಿಸಲು ಸಾಧ್ಯವಿಲ್ಲ. ಗೋಲ್ಡನ್ ಬಣ್ಣದ ಪ್ಲಾಸ್ಟಿಕ್ ಚಪ್ಪಲಿ ಪಾರ್ಟಿ ಲುಕ್ ನೀಡುವುದು.

ಪ್ಲಾಸ್ಟಿಕ್ ಶೂ
ಇವುಗಳಂತೂ ತುಂಬಾ ಕಂಫರ್ಟ್. ಮಳೆಗಾಲದಲ್ಲಿ ಈ ರೀತಿಯ ಶೂ ಧರಿಸಿ ನಡೆದರೆ ಕಾಲಿಗೆ ಗ್ರಿಪ್ ಸಿಗುವುದು. ಅಲ್ಲದೆ ತೊಳೆದು ಒಣಗಿಸುವುದು ಕೂಡ ಸುಲಭ. ನಿಮ್ಮ branded ಶೂಗಳನ್ನು ಜೋಪಾನವಾಗಿ ತೆಗೆದಿಟ್ಟು ಇವುಗಳನ್ನು ಬಳಸುವುದು ಸೂಕ್ತ.

ಸಿಂಪಲ್ ಬ್ಲಾಕ್ ಸ್ಲಿಪ್ಪರ್
ಸ್ಲಿಪ್ಪರ್ ಅಂತೂ ಎಲ್ಲಾ ಕಾಲಕ್ಕೂ ಹೊಂದುವ ಫ್ಯಾಷನ್. ವಾಟರ್ ಫ್ರೂಟ್ ಇರುವ, ತಳದಲ್ಲಿ ಗ್ರಿಪ್ ಇರುವ ಸ್ಲಿಪ್ಪರ್ ಕೂಡ ಆಕರ್ಷಕವಾಗಿಯೇ ಕಾಣುವುದು.

ರಬ್ಬರ್ ಸ್ಲಿಪ್ಪರ್
ರಬ್ಬರ್ ಸ್ಲಿಪ್ಪರ್ ಧರಿಸಿದರೂ ಕಾಲು ಕೂಡ ಬೆಚ್ಚಗಿರುತ್ತದೆ. ಅಲ್ಲದೆ ಒಳ್ಳೇ ಗ್ರಿಪ್ ಕೂಡ ಸಿಗುವುದು. ಆದರೆ ಎಲ್ಲಾ ರಬ್ಬರ್ ಸ್ಲಿಪ್ಪರ್ಸ್ ಧರಿಸಲು ಕಂಫರ್ಟ್ ಆಗಿದ್ದರೂ ಸ್ಟೈಲೀಷ್ ಆಗಿರುವುದಿಲ್ಲ. ಆದ್ದರಿಂದ ಸ್ಟೈಲೀಷ್ ಚಪ್ಪಲಿಯನ್ನು ಹುಡುಕಿ ಕೊಂಡುಕೊಳ್ಳಿ.

ಓಪನ್ ಲೇಸ್ ಶೂ
ಈ ರೀತಿಯ ಶೂಗಳ ಸೈಡ್ ನಲ್ಲಿ ರಂಧ್ರಗಳ ಡಿಸೈನ್ ಇರುವುದರಿಂದ ಸ್ಟೈಲೀಷ್ ಲುಕ್ ನೀಡುವುದರ ಜೊತೆಗೆ ಶೂನಲ್ಲಿ ನೀರೂ ನಿಲ್ಲುವುದಿಲ್ಲ. ಆದ್ದರಿಂದ ಮಳೆಯಲ್ಲಿ ಧರಿಸಿ ನಡೆಯಲು ತುಂಬಾ ಕಂಫರ್ಟ್.

ಹೀಲ್ ಇರುವ ಸ್ಲಿಪ್ಪರ್
ಹೀಲ್ ಇರುವ ಈ ರೀತಿಯ ಸ್ಲಿಪ್ಪರ್ ನೋಡಲು ಸೆಕ್ಸಿ ಮತ್ತು ಸ್ಟೈಲೀಷ್ ಆಗಿ ಕಾಣುವುದು. ಆದರೆ ಚಪ್ಪಲಿಯ ತಳ ನೋಡಿ ಗ್ರಿಪ್ ಸಿಗುವುದೇ ಎಂದು ಪರೀಕ್ಷಿಸಿದ ಬಳಿಕವಷ್ಟೇ ಕೊಳ್ಳಿ.

ಫ್ಲಿಪ್ ಫ್ಲೋಪ್
ಬಣ್ಣ-ಬಣ್ಣದ ಈ ರೀತಿಯ ಸ್ಪಿಪ್ಪರ್ ಜೀನ್ಸ್, ಶಾರ್ಟ್ಸ್, ಸ್ಕರ್ಟ್ಸ್ ಗೆ ಆಕರ್ಷಕವಾಗಿ ಕಾಣುವುದು.

ಫ್ಲೋಟೆರ್ಸ್
ಈ ರೀತಿಯ ಚಪ್ಪಲಿಯಂತೂ ಮಳೆಗಾಲಕ್ಕೆ ತುಂಬಾ ಬೆಸ್ಟ್. ಇವು ಟ್ರೆಂಡ್ ನಲ್ಲಿರುವ ಚಪ್ಪಲಿಗಳಲ್ಲ, ಆದರೆ ಈ ರೀತಿಯ ಚಪ್ಪಲಿಗಳು ಎಲ್ಲಾ ಮಳೆಗಾಲದಲ್ಲೂ ಧರಿಸಬಹುದು. ಫ್ಯಾಷನ್ ಔಟ್ ಡೇಟ್ ಆಗುವುದೇ ಇಲ್ಲ.

ಕಲ್ಲಿರುವ ಸ್ಯಾಂಡಲ್ಸ್
ಕಲ್ಲಿರುವ ಚಪ್ಪಲಿ ನೋಡಲು ತುಂಬಾ ಆಕರ್ಷಕವಾಗಿ ಕಾಣುವುದು. ಆದರೆ ತಳ ಪ್ಲಾಸ್ಟಿಕ್ ದಾಗಿರಲಿ.



Click it and Unblock the Notifications
