Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಪಟಿಕ ಚೆಲುವಿನ ಕಣ್ಣಿಗಾಗಿ ಈ ವಿಧಾನ
ನಾವು ಒಬ್ಬ ವ್ಯಕ್ತಿಯ ಮುಖ ನೋಡಿದ ತಕ್ಷಣ ಅವರ ಕಣ್ಣುಗಳನ್ನು ನೋಡುತ್ತೇವೆ, ಕಣ್ಣುಗಳು ಆಕರ್ಷಕವಾಗಿದ್ದರೆ ಅವರು ನಮಗೆ ತುಂಬಾ ಆಕರ್ಷಕವಾಗಿ ಕಾಣುತ್ತಾರೆ. ಕೆಲ ಮೇಕಪ್ ಟಿಪ್ಸ್ ಬಳಸಿದರೆ ಕಣ್ಣುಗಳು ತುಂಬಾ ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಆದರೆ ಕಣ್ಣುಗಳು ಆಕರ್ಷಕವಾಗಿ ಕಾಣಸಬೇಕೆಂದರೆ ಮೊದಲು ಮಾಡಬೇಕಾದ ಕೆಲಸ ಅಂದರೆ ಅವುಗಳ ಆರೈಕೆ ಮಾಡಬೇಕು. ಕಣ್ಣುಗಳ ಆರೈಕೆಗೆ ಈ ಕೆಳಗಿನ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.

1. ವಾರದಲ್ಲಿ 2-3 ಬಾರಿ ಸೌತೆಕಾಯಿ ಜ್ಯೂಸ್ ಕುಡಿಯುವುದು ಒಳ್ಳೆಯದು. ಈ ರೀತಿ ಮಾಡಿದರೆ ಕಣ್ಣುಗಳ ಸುತ್ತ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು.
2. ಬಾದಾಮಿ ಮತ್ತು ಜೇನನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಮಿಶ್ರ ಮಾಡಿ ಕಣ್ಣಿನ ಸುತ್ತ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಈ ರೀತಿ 2-3 ವಾರಗಳ ಕಾಲ ಮಾಡಿದರೆ ಕಣ್ಣಿನ ಸುತ್ತ ಕಪ್ಪು ವರ್ತುಲವಿರುವುದಿಲ್ಲ.
3. ಮಿತಿ ಮೀರಿ ಟೀ ಕುಡಿಯುವುದು, ಅಧಿಕ ಎಣ್ಣೆ ಪದಾರ್ಥಗಳನ್ನು ತಿನ್ನುವುದು, ಖಾರ ತಿನ್ನುವುದನ್ನು ಮಾಡಿದರೆ ಕಣ್ಣಿನ ಸುತ್ತ ಕಪ್ಪು ಕಲೆಗಳು ಹೆಚ್ಚಾಗುವುದು. ಆದ್ದರಿಂದ ಈ ಅಭ್ಯಾಸವನ್ನು ಮೊದಲು ಬಿಡಬೇಕು.
5. ಸ್ನಾನದ ನಂತರ ಒಂದು ತಟ್ಟೆಯಲ್ಲಿ ಶುದ್ಧವಾದ ನೀರು ಹಿಡಿದುಕೊಂಡು ಅದರಲ್ಲಿ ಕಣ್ಣನ್ನು ನೆನೆಸಿದರೆ ಕಣ್ಣು ತುಂಬಾ ಶುದ್ಧವಾಗುವುದು.
6. ವಿಟಮಿನ್ ಇ ಎಣ್ಣೆಯನ್ನು ಮುಖಕ್ಕೆ ಮತ್ತು ಕಣ್ಣಿನ ಸುತ್ತ ಹಚ್ಚಿದರೆ ತುಂಬಾ ಒಳ್ಳೆಯದು, ಮುಖದಲ್ಲಿ ನೆರಿಗೆ ಮೊದಲು ಕಣ್ಣಿನ ಪಕ್ಕ ಬೀಳುವುದರಿಂದ ಈ ಎಣ್ಣೆ ಹಚ್ಚುತ್ತಿದ್ದರೆ ಅಕಾಲಿಕ ನೆರಿಗೆ ಮೂಡುವುದನ್ನು ತಡೆಗಟ್ಟಬಹುದು.
7. ಮಲಗುವ ಮುಂಚೆ ರೋಸ್ ವಾಟರ್ ನಿಂದ ಕಣ್ಣಿನ ಭಾಗವನ್ನು ಸ್ವಚ್ಛಗೊಳಿಸಿದರೆ ಒಳ್ಳೆಯದು.
8. ಸಮಯ ಸಿಕ್ಕಿದಾಗ ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ ಅದನ್ನು ಕಣ್ಣಿಗೆ ಇಟ್ಟು ವಿಶ್ರಾಂತಿ ತೆಗೆದುಕೊಳ್ಳಿ. ಈ ರೀತಿ ಮಾಡಿದರೆ ಕಣ್ಣಿಗೆ ಕಪ್ಪುವರ್ತುಲ ಬೀಳುವ ಸಮಸ್ಯೆ ಇರುವುದಿಲ್ಲ.
9. ನಿಂಬೆ ರಸ ಮತ್ತು ಟೊಮೆಟೊ ರಸವನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಕಣ್ಣಿನ ಸುತ್ತ ಮುಖ ಸುತ್ತ ಹಚ್ಚಿದರೆ ಮುಖದ ಕಾಂತಿ ಹೆಚ್ಚುವುದು.
10. ಕಣ್ಣಿನ ವ್ಯಾಯಾಮ ಮಾಡಬೇಕು, ತುಂಬಾ ಹೊತ್ತು ಕಂಪ್ಯೂಟರ್ ನೋಡಿ ಕೆಲಸ ಮಾಡಬಾರದು. ಒಂದು ಗಂಟೆಗೆ ಒಮ್ಮೆ ಕಣ್ಣಿಗೆ ಸ್ವಲ್ಪ ವಿಶ್ರಾಂತಿ ಕೊಡಬೇಕು. ಕಣ್ಣನ್ನು ಆಗಾಗ ಮಿಣುಕಿಸುತ್ತಾ ಇರಬೇಕು. ಈ ರೀತಿ ಮಾಡಿದರೆ ಕಣ್ಣಿನ ಆರೋಗ್ಯ ಹೆಚ್ಚುವುದು.
ಆರೋಗ್ಯವಂತ ಕಣ್ಣುಗಳು ಮುಖಕ್ಕೆ ಆಕರ್ಷಣೆಯನ್ನು ತರುತ್ತದೆ.



Click it and Unblock the Notifications
