Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಪಟಿಕ ಚೆಲುವಿನ ಕಣ್ಣಿಗಾಗಿ 6 ಸಲಹೆಗಳು

ಈ ಕೆಳಗಿನ ಸಲಹೆಗಳು ಸ್ಪಟಿಕದಂತಹ ಹೊಳಪಿನ ಕಣ್ಣನ್ನು ಪಡೆಯಲು ಸಹಾಯ ಮಾಡುತ್ತದೆ:
1. ಕಣ್ಣಿನ ಕೆಳಭಾಗಕ್ಕೆ ಕ್ರೀಮ್ ಹಚ್ಚುವುದು: ಕಣ್ಣಿನ ಸುತ್ತ ಕಪ್ಪು ವರ್ತುಲವಿದ್ದರೆ (ಡಾರ್ಕ್ ಸರ್ಕಲ್) ಮಾತ್ರ ಕ್ರೀಮ್ ಹಚ್ಚಬೇಕೆಂದಿಲ್ಲ. ಕಣ್ಣಿನ ಸುತ್ತ ಇರುವ ತ್ವಚೆ ಕೆನ್ನೆಯ ತ್ವಚೆಗಿಂತ ತುಂಬಾ ಮೃದುವಾಗಿರುವುದರಿಂದ ಕ್ರೀಮ್ ಅನ್ನು ಪ್ರತಿ ದಿನ ಹಚ್ಚಿದರೆ ಆ ಭಾಗದಲ್ಲಿ ಕಪ್ಪು ವರ್ತುಲವಿರುವುದಿಲ್ಲ ಮತ್ತು ತ್ವಚೆ ಆರೋಗ್ಯಕರವಾಗಿರುತ್ತದೆ.
2. ಕಣ್ಣಿನ ಪ್ಯಾಕ್: ಕಣ್ಣಿನ ಮೇಲೆ ಸೌತೆಕಾಯಿ ಅಥವಾ ಸ್ಟ್ರಾಬರಿ ಇಟ್ಟು 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದರೆ ಕಣ್ಣನಲ್ಲಿ ತುರಿಕೆಯ ಸಮಸ್ಯೆ ಇದ್ದರೆ ಹೋಗಲಾಡಿಸಬಹುದು ಮತ್ತು ಕಣ್ಣು ಹೊಳಪಿನಿಂದ ಕಾಣುತ್ತದೆ.
3. ಕಣ್ಣಿನ ಸುತ್ತ ಮಾಯಿಶ್ಚರೈಸರ್: ಮುಖದಲ್ಲಿ ನೆರಿಗೆ ಮೊದಲು ಕಣ್ಣಿನ ಸುತ್ತ ಬೀಳುತ್ತದೆ. ಆದ್ದರಿಂದ ಮುಖಕ್ಕೆ ಮಾಯಿಶ್ಚರಯಸರ್ ಮಾಡುವಾಗ ಕಣ್ಣಿನ ಸುತ್ತ ಕೂಡ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಬೇಕು. ತೆಂಗಿನೆಣ್ಣೆಯನ್ನು ಹಚ್ಚಿದರೆ ಒಳ್ಳೆಯದು. ಮೊದಲು ಸ್ವಲ್ಪ ಉರಿ ಅನಿಸಿದರೂ ಕಣ್ಣಿಗೆ ತುಂಬಾ ಒಳ್ಳೆಯದು.
4. ಕನ್ನಡಕ ಬದಲು ಲೆನ್ಸ್: ಕನ್ನಡಕವನ್ನು ಪ್ರತಿದಿನ ಬಳಸುತ್ತಿದ್ದರೆ ಕಣ್ಣಿನ ಸುತ್ತ ಕಪ್ಪು ಬಣ್ಣ ಬೀಳುತ್ತದೆ. ಆದ್ದರಿಂದ ಕನ್ನಡಕ ಬದಲು ಲೆನ್ಸ್ ಬಳಸಿದರೆ ಮುಖದ ಚೆಲುವು ಹೆಚ್ಚುವುದು.
5. ಒತ್ತಡವನ್ನು ಕಡಿಮೆ ಮಾಡಬೇಕು: ಮಾನಸಿಕ ಒತ್ತಡವಿದ್ದರೆ ಕಣ್ಣು ನೋಡಿದಾಗ ತಿಳಿಯುತ್ತದೆ. ಕಣ್ಣು ಕೆಂಪಾಗಿ ಮಂಕಾಗಿ ಕಾಣುತ್ತದೆ. ಆದ್ದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು 7-8 ಗಂಟೆ ಕಾಲ
6. ನೆಮ್ಮದಿಯ ನಿದ್ದೆ ಮಾಡಬೇಕು: ದೇಹದಲ್ಲಿ ನೀರಿನಂಶ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ವಿಟಮಿನ್ ಎ ಮತ್ತು ವಿಟಮಿನ್ ಸಿ ಇರುವ ಆಹಾರವು ಆಹಾರಕ್ರಮದಲ್ಲಿರಬೇಕು. ಈ ರೀತಿ ಮಾಡಿದರೆ ಕಣ್ಣಿನ ಚೆಲುವು ಹೆಚ್ಚುವುದು.



Click it and Unblock the Notifications
