Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೇಲ್ ಪಾಲೀಷ್ ಬೇಗನೆ ಒಣಗಲು ಕೆಲ ಸಲಹೆಗಳು
ನೇಲ್ ಪಾಲೀಷ್ ಅನ್ನು ಹಚ್ಚುವ ರೀತಿ ಗೊತ್ತಿದ್ದರೆ ಮಾತ್ರ ಆ ನೇಲ್ ಪಾಲೀಷ್ ನಿಮ್ಮ ಕೈ ಮತ್ತು ಕಾಲು ಬೆರಳುಗಳ ಅಂದವನ್ನು ಹೆಚ್ಚಿಸುತ್ತದೆ. ನೇಲ್ ಪಾಲೀಷ್ ಹಾಕಿ ಅದು ಸಂಪೂರ್ಣ ಒಣಗುವವರೆಗೆ ಬಿಡಬೇಕು. ಇಲ್ಲದಿದ್ದರೆ ಬೆರಳುಗಳಿಗೆ ಸ್ವಲ್ಪ ಏನಾದರೂ ತಾಗಿದರೆ ನೇಲ್ ಪಾಲಿಷ್ ಅಳಸಿ ಹೋಗುವುದು, ಈ ರೀತಿಯಾದರೆ ಬೆರಳುಗಳು ಸುಂದರವಾಗಿ ಕಾಣುವುದಿಲ್ಲ. ಪುನಃ ರಿಮೋವರ್ ನಿಂದ ತೆಗೆದು ನೇಲ್ ಪಾಲೀಷ್ ಹಚ್ಚಬೇಕು, ಡಬಲ್ ಕೆಲಸವಾಗುತ್ತದೆ. ನೇಲ್ ಪಾಲಿಷ್ ಹಾಕಿದ ತಕ್ಷಣ ಒಣಗಲು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

1. ನೇಲ್ ಪಾಲೀಷ್ ಬಾಟಲಿಯನ್ನು ಶೇಕ್ ಮಾಡಬೇಕು: ನೇಲ್ ಪಾಲಿಷ್ ಹಾಗೇ ಇಟ್ಟಿರುವುದರಿಂದ ಅದು ಸ್ವಲ್ಪ ಗಟ್ಟಿಯಾಗಿರುತ್ತದೆ. ಆದ್ದರಿಂದ ಅದನ್ನು ಹಾಕುವ ಮೊದಲು ಶೇಕ್(ಅಲ್ಲಾಡಿಸಬೇಕು) ಮಾಡಬೇಕು. ಸ್ವಲ್ಪ ಗಟ್ಟಿ ಅನಿಸದರೆ ಸ್ವಲ್ಪ ಅಸಿಟೋನ್ ಹಾಕಿ ಚೆನ್ನಾಗಿ ಶೇಕ್ ಮಾಡಿದರೆ ಉಗುರುಗಳಿಗೆ ನೀಟಾಗಿ ಹಾಕಬಹುದು.
2. ಹಾಕುವ ರೀತಿ: ನೇಲ್ ಪಾಲಿಷ್ ಅನ್ನು ಒಂದು ಬಾರಿ ಹಚ್ಚಿ, ಡಬಲ್ ಕೋಟ್ ಕೊಡಬೇಕೆನಿಸಿದರೆ ಆ ಕ್ಷಣವೇ ಕೊಡಬೇಡಿ. ಮೊದಲು ಹಾಕಿದ ನೇಲ್ ಪಾಲೀಷ್ ಚೆನ್ನಾಗಿ ಒಣಗಿದ ನಂತರ ಹಚ್ಚಬೇಕು.
3. ಹೇರ್ ಡ್ರೈಯರ್ ಬಳಸಬಹುದು: ನೇಲ್ ಪಾಲಿಷ್ ಹಚ್ಚಿ ಹೇರ್ ಡ್ರೈಯರ್ ಬಳಸಿದರೆ ಬೇಗನೆ ಒಣಗುವುದು. ಏಕೆಂದರೆ ಹೇರ್ ಡ್ರೈಯರ್ ಪೇಯಿಂಟ್ ನಲ್ಲಿರುವ ತೇವಾಂಶ ಬೇಗನೆ ಆರುವಂತೆ ಮಾಡುತ್ತದೆ.
4.ತಣ್ಣನೆಯ ನೀರು: ನೇಲ್ ಪಾಲಿಷ್ ಹಚ್ಚಿ ಅದನ್ನು ಮುಟ್ಟಿ ನೋಡುತ್ತಿರಬಾರದು. ಹಾಗೆ ಮುಟ್ಟಿದರೆ ಉಗುರು ಗುರುತು ನೇಲ್ ಪಾಲಿಷ್ ಮೇಲೆ ಬಿದ್ದು , ಉಗುರು ಕ್ಲೀನ್ ಇಲ್ಲದ ರೀತಿ ಕಾಣುತ್ತದೆ. ಅದರ ಬದಲು ನೇಲ್ ಪಾಲೀಷ್ ಹಚ್ಚಿ ಕೈ ಬೆರಳನ್ನು ತಣ್ಣೀರಿನಲ್ಲಿ ನೆನೆಸಿ. ಈ ರೀತಿ ಮಾಡಿದರೆ ನೇಲ್ ಬೇಗನೆ ಒಣಗುತ್ತದೆ.



Click it and Unblock the Notifications
