Latest Updates
-
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'! -
ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲವೇ? ಅಪಾರ್ಟ್ಮೆಂಟ್ನಲ್ಲಿ ಬೂಷ್ಟು ತಡೆಯಲು ಇಲ್ಲಿದೆ 15 ನಿಮಿಷದ ಸಿಂಪಲ್ ಟಿಪ್ಸ್! -
ಓಣಂ ಸದ್ಯದ ರುಚಿ ಸವಿಯುತ್ತಲೇ ಆರೋಗ್ಯ ಕಾಪಾಡಿಕೊಳ್ಳಿ: ಮಧುಮೇಹಿಗಳಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಓಣಂ ಮುಗಿದ್ರೂ ಕಮ್ಮಿ ಆಗಿಲ್ಲ ಸದ್ಯದ ಕ್ರೇಜ್! ಬೆಂಗಳೂರು, ಮುಂಬೈನಲ್ಲಿ ವೀಕೆಂಡ್ನಲ್ಲಿ ಎಲ್ಲಿ ಸಿಗುತ್ತೆ ರುಚಿಕರ ಊಟ? -
ರಾಷ್ಟ್ರೀಯ ಕ್ರೀಡಾದಿನ: ಜಿಮ್ ಇಲ್ಲದೆ ಮನೆಯಲ್ಲೇ ಫಿಟ್ ಆಗಲು ಈ 30 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ವರಮಹಾಲಕ್ಷ್ಮಿ ಹಬ್ಬದ ತಯಾರಿ: ಕುಟುಂಬದೊಂದಿಗೆ ಜಗಳವಿಲ್ಲದೆ, ಶಾಂತಿಯುತವಾಗಿ ಹಬ್ಬ ಆಚರಿಸುವುದು ಹೇಗೆ? -
ನಾಲ್ಕನೇ ಓಣಂ ಸಂಭ್ರಮ: ಪೂಕಳಂ ಸ್ಪರ್ಧೆಗೆ ಕ್ವಿಕ್ ಟಿಪ್ಸ್ ಮತ್ತು ಝೀರೋ-ವೇಸ್ಟ್ ಹ್ಯಾಕ್ಸ್! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ: ಇನ್ಮುಂದೆ ಕ್ಯಾನ್ ಮೇಲೆ ಈ ಹೆಸರು ಇರಲ್ಲ, FSSAI ಹೊಸ ರೂಲ್ಸ್! -
ರಕ್ಷಾಬಂಧನ 2026: ಚಂದ್ರಗ್ರಹಣದ ಭಯ ಬೇಡ, ರಾಖಿ ಕಟ್ಟಲು ಬೆಸ್ಟ್ ಟೈಮ್ ಇಲ್ಲಿದೆ! -
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್!
ಮದುವೆಯ ಅಡ್ಡ ಪರಿಣಾಮಗಳು !!
ಬ್ಯಾಚುಲರ್ ಆಗಿದ್ದಾಗಿನ ಜೀವನಕ್ಕಿಂತ ಮದುವೆಯ ನಂತರದ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದುಕೊಳ್ಳಬೇಕಾಗುತ್ತದೆ. ಮದುವೆಯ ನಂತರ ಜವಾಬ್ದಾರಿಯುತ ಪತಿಯಾಗಿ ನಂತರ ಮಗುವಾದ ನಂತರ ತಂದೆಯಾಗಿ ನಡೆದುಕೊಳ್ಳುವುದು ಅನಿವಾರ್ಯ. ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗಬಹುದು.
ಮದುವೆಯ ಜೀವನದಲ್ಲಿ ನೆಮ್ಮದಿ ಸಂತೋಷ ಇರಬೇಕೆಂದರೆ ಹೆಣ್ಣು, ಗಂಡು ಇಬ್ಬರಲ್ಲೂ ತಾಳ್ಮೆ,ಸಹನೆ,ಹೊಂದಾಣಿಕೆ ಮನೋಭಾವ ಇರಬೇಕಾದುದು ಅನಿವಾರ್ಯ ಕೂಡ ಹೌದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಭಾವಿ ಪತಿಯಲ್ಲಿರಬೇಕಾದ ಗುಣಗಳು!
ಇಲ್ಲಿ ಕೇವಲ ಪುರುಷರು ಮಾತ್ರ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದಲ್ಲ ಇಬ್ಬರಲ್ಲೂ ಪರಸ್ಪರ ಅರ್ಥಮಾಡಿಕೊಂಡು ಬಾಳುವ ಗುಣ ಇರಲೇಬೇಕು ಹಾಗಿದ್ದಲ್ಲಿ ಮಾತ್ರ ಜೀವನ ಸಂತೋಷವಾಗಿ ನಡೆಯಲು ಸಾಧ್ಯ.ಆದಾಗ್ಯೂ ಇಲ್ಲಿ ಪುರುಷರು ಬದಲಿಸಿಕೊಳ್ಳಬೇಕಾದ ಗುಣಗಳ ಬಗ್ಗೆ ಮಾಹಿತಿ ನೀಡಲಾಗಿದೆ.ಓದಿ ನೋಡಿ.
ಮದುವೆಯ ನಂತರ ಭಾರತೀಯ ಪುರುಷರು ಬದಲಾಯಿಸಿಕೊಳ್ಳಬೇಕಾದ ಅಥವಾ ತೃಪ್ತಿ ಪಡೆದುಕೊಳ್ಳಬೇಕಾದ ಹಲವಾರು ರೀತಿಯ ಗುಣಗಳಿವೆ. ಪ್ರತಿಯೊಬ್ಬ ಪುರುಷನೂ ಕೂಡ ಕುಟುಂಬ ಕಟ್ಟುವುದನ್ನು ಇಷ್ಟಪಡುತ್ತಾನೆ ಆದರೆ ಈ ಕೆಳಗೆ ನೀಡಿರುವ ಐದು ಅಂಶಗಳನ್ನು ಹೆಂಡತಿಯ ಸಲುವಾಗಿ ಬಿಡಬೇಕಾದ ಅಥವಾ ಅಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳುವ ವಿಷಯ ಮಾತ್ರ ಗಂಡಸರನ್ನು ಆಗಾಗ ಕಾಡುತ್ತದೆ!
ಈ ಕೆಳಗೆ ನೀಡಿರುವ ಕೆಲವು ಸಾಮಾನ್ಯ ಅಂಶಗಳನ್ನು ಪುರುಷರು ಮದುವೆಯ ನಂತರ ಕಳೆದುಕೊಳ್ಳುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮದುವೆ ಪ್ರಸ್ತಾಪ ಮಾಡಲು ಇರುವ 10 ಅತ್ಯುತ್ತಮ ಸ್ಥಳಗಳು

ಹಣ:
ನೀವು ಯಾವುದಾದರೂ ಒಳ್ಳೆಯ ಸ್ಮಾರ್ಟ್ ಫೋನ್ ನೋಡಿ ತಕ್ಷಣ ಅದನ್ನು ಕೊಂಡುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ,ಆದರೆ ಇನ್ನು ಅದು ಸಾಧ್ಯವಿಲ್ಲದ ಮಾತು.ನೀವು ನಿಮ್ಮ ಹುಡುಗಿಯ ಕುತ್ತಿಗೆಗೆ ಗಂಟು ಬಿಗಿದ ತಕ್ಷಣದಿಂದ ನಿಮ್ಮ ಹಣಕ್ಕೂ ಗಂಟು ಬಿಗಿದಂತೆಯೇ ಸರಿ ಇನ್ನುಳಿದ ಹಣವೆಲ್ಲ ಆಕೆಯ ವ್ಯಯಕ್ಕೆ ಸರಿಹೊಂದಿಸುವುದೇ ಆಗುತ್ತದೆ.

ಶಾಂತಿ:
ನಿಮಗೆ ಅರ್ಥಮಾಡಿಕೊಳ್ಳುವ ಹೆಂಡತಿ ಸಿಕ್ಕಿಬಿಟ್ಟರೆ ನೀವು ಅದೃಷ್ಟವಂತ ಎಂದೇ ಹೇಳಬೇಕು.ಆದಾಗ್ಯೂ ನಿಮ್ಮ ಮಗು ಮಾತ್ರ ನೀವು ಕಷ್ಟಪಟ್ಟು ಬೆಳಗಿನಿಂದ ಸಂಜೆವರೆಗೆ ಕೆಲಸ ಮಾಡುವುದನ್ನು ಒಪ್ಪಿಕೊಳ್ಳುವುದಿಲ್ಲ.ಮಗುವಾದ ನಂತರ ನೀವು ಬೆಳಗಿನಿಂದ ಕೆಲಸ ಎಷ್ಟೇ ಮಾಡಿ ಬಂದಿದ್ದರೂ ಕೂಡ ರಾತ್ರಿ ಡೈಪರ್ ಬದಲಿಸುವುದು ತಪ್ಪುವುದಿಲ್ಲ ಮತ್ತು ನಿಮ್ಮ ಹೆಂಡತಿಯನ್ನು ಸಂತೋಷವಾಗಿಡಲು ತಡರಾತ್ರಿಯವರೆಗೆ ಮ್ಯಾಚ್ ನೋಡುತ್ತಾ ಕುಳಿತುಕೊಳ್ಳಲಾಗುವುದಿಲ್ಲ.

ಅಧಿಕಾರ:
ಇದನ್ನು ಎದುರಿಸಲು ತಯಾರಾಗಿ,ಪುರುಷರು ಯಾವಾಗಲೂ ಅಧಿಕಾರ ಚಲಾಯಿಸುವುದನ್ನು ಇಷ್ಟಪಡುತ್ತಾರೆ.ಆದರೆ ಮದುವೆಯ ನಂತರ ನಿಮ್ಮ ಅಧಿಕಾರ ಚಲಾವಣೆ ನಡೆಯುವುದಿಲ್ಲ.ನೀವು ಹಾಲಿಕೊಳ್ಳುವ ಡ್ರೆಸ್ ದಿಂದ ಪ್ರಾರಂಭವಾಗಿ,ನಿಮ್ಮ ಇಷ್ಟದ ಸಿನೆಮಾ ಮತ್ತು ನೀವು ಆಕೆಯ ಗೆಳತಿಯರೆದುರು ಹೇಗೆ ಮಾತನಾಡುತ್ತೀರಿ ಎಲ್ಲಾ ವಿಷಯಗಳು ಕೂಡ ನಿಮ್ಮ ಪತ್ನಿಯಿಂದ ವಿಮರ್ಶಿಸಲ್ಪಡುತ್ತದೆ.

ಗರ್ವ ಅಥವಾ ಹೆಮ್ಮೆ :
ನಿಮಗೆ ಮದುವೆ ಆದ ನಂತರ ನೀವು ನಿಮ್ಮ ಕುಟುಂಬವನ್ನು ಹೇಗೆ ನೋಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಪ್ರತಿಷ್ಠೆ ಇರುತ್ತದೆ.ನೀವು ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಂಡರೆ ಅದು ನಿಮಗೆ ಒಳ್ಳೆಯದು.ಅದಿಲ್ಲದಿದ್ದರೆ ಮನೆಯ ಒಳಗೆ ಮತ್ತು ಹೊರಗೆ ನಿಮ್ಮ ಗರ್ವಕ್ಕೆ ಧಕ್ಕೆಯಾಗುವುದನ್ನು ಎದುರಿಸಲು ತಯಾರಾಗಿರಿ.ಇದರಲ್ಲಿ ನಿಮ್ಮ ತಪ್ಪು ಏನು ಇಲ್ಲ ಮಹಿಳೆಯರಿಗೆ ತಮಗೆ ಬೇಕಾಗಿರುವುದನ್ನು ಪಡೆದುಕೊಳ್ಳಲು ಅದರಲ್ಲೂ ಅವರಿಗೆ ಬೇಕಾಗಿರುವ ೨೪ ಕ್ಯಾರೆಟ್ ಬಂಗಾರ ನಿಮಗೆ ಕೊಡಿಸಲಾಗದಿದ್ದಲ್ಲಿ ನಿಮ್ಮ ಗರ್ವಕ್ಕೆ ಧಕ್ಕೆ ತರುವುದು ಒಂದು ಉಪಾಯ ಎಂಬುದು ತಿಳಿದಿರುತ್ತದೆ.

ಸ್ನೇಹಿತರು:
ಬಹುಶಃ ಒಂದು ಮಹಿಳೆ ಪುರುಷರಿಂದ ಕಸಿದುಕೊಳ್ಳುವ ಮುಖ್ಯ ಅಂಶವೆಂದರೆ ಜೀವನಪರ್ಯಂತ ಕಾಪಾಡಿಕೊಂಡು ಬಂದಿರುವ ಸ್ನೇಹಿತರನ್ನು ದೂರಮಾಡುವುದು.ಇದು ಬೇಕೆಂದೇ ಮಾಡುತ್ತಾರೆ ಎಂದಲ್ಲ ನೀವು ಎಷ್ಟು ಬ್ಯುಸಿ ಆಗಿಬಿಡುತ್ತೀರೆಂದರೆ ಕೆಲಸ ಮತ್ತು ಮನೆ ನಿರ್ವಹಿಸುವ ಬ್ಯುಸಿಯಲ್ಲಿ ನಿಮಗೆ ಸ್ವಲ್ಪ ಸಮಯವೇನಾದರೂ ಸಿಕ್ಕಿದರೆ ನಿಮಗೆ ವಿಶ್ರಾಂತಿಗೆಂದು ಬಳಸಬೇಕಾಗುತ್ತದೆ.ನಿಮ್ಮ ಸ್ನೇಹಿತ ಇನ್ನೂ ಮದುವೆ ಆಗಿಲ್ಲದವನು ಅಥವಾ ಸಿಗರೇಟ್ ಇನ್ನಿತರ ಚಟ ಇರುವವನಾದರೆ ಅವನೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದು ಸಾಧ್ಯವಾಗದ ಮಾತು.



Click it and Unblock the Notifications