Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಏಕೆ ಮಾಡುತ್ತಾರೆ..! ಪಾರ್ವತಿ ನೀಡಿದ ವರವೇನು ಗೊತ್ತಾ?
ದೀಪಾವಳಿ ಹತ್ತಿರ ಬರುತ್ತಿದೆ. ಇದೇ ತಿಂಗಳ ಕೊನೆಯಲ್ಲಿ ದೀಪಾವಳಿ ಆರಂಭಗೊಂಡು ಷಷ್ಠಿವರೆಗೂ ಮುಂದುವರೆಯುವುದು ನಾವು ನೋಡಬಹುದು. ದೀಪೋತ್ಸವಗಳು, ಕಾರ್ತಿಕ ದೀಪೋತ್ಸವ ಸೇರಿ ದೇವಾಲಯದ ಪ್ರಮುಖ ಜಾತ್ರೆಗಳು ಕೂಡ ಇದೇ ಸಮಯದಲ್ಲಿ ನಡೆಯುತ್ತೆ. ಹೀಗಾಗಿ ನವೆಂಬರ್ ತಿಂಗಳಲ್ಲಿ ಹಲವು ಹಬ್ಬಗಳು ಶುಭ ಮುಹೂರ್ತಗಳು ಬರುತ್ತವೆ.
ಇನ್ನು ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಮಾಡಿಯೇ ಮಾಡುತ್ತಾರೆ. ಗಣಪತಿ ಹಾಗೂ ಲಕ್ಷ್ಮಿಗೆ ಜೊತೆಯಾಗಿಯೇ ಪೂಜೆ ನೆರವೇರಲಿದೆ. ದೀಪಾವಳಿಯ ಆರಂಭದ ದಿನದಲ್ಲೇ ಲಕ್ಷ್ಮಿ ಪೂಜೆ ನಾವು ನೋಡಬಹುದು. ಅಂದು ಹೆಚ್ಚಿನವರು ಮನೆ ಹಾಗೂ ಅಂಗಡಿ ಪೂಜೆ ವಾಹನ ಪೂಜೆ ಕೂಡ ನೆರವೇರಿಸುತ್ತಾರೆ. ಹಾಗಾದ್ರೆ ಈ ಲಕ್ಷ್ಮಿ ಪೂಜೆ ಹಿಂದಿರುವ ಕಥೆ ಏನು? ಏಕೆ ಲಕ್ಷ್ಮಿ ಪೂಜೆ ಮಾಡಬೇಕು ಅನ್ನೋದು ನಿಮಗೆ ಗೊತ್ತಾ?

ಈ ಬಾರಿ ಅಕ್ಟೋಬರ್ 31ರಂದು ಲಕ್ಷ್ಮಿ ಪೂಜೆ ಮಾಡಲಾಗುತ್ತೆ. ಅದರಲ್ಲೂ ಸಂಜೆ ವೇಳೆ ಲಕ್ಷ್ಮಿ ಪೂಜೆ ನೆರವೇರಿಸುತ್ತಾರೆ. ಇದೇ ಸಮಯದಲ್ಲಿ ಗಣೇಶನಿಗೂ ಪೂಜೆ ಸಲ್ಲಿಸಲಾಗುತ್ತದೆ. ಹಾಗಾದ್ರೆ ಇದರ ಮಹತ್ವವೇನು ಎಂಬುದನ್ನು ನೋಡಿ. ಲಕ್ಷ್ಮಿ ಹಾಗೂ ಗಣೇಶನ ಮೂರ್ತಿ ಪೂಜೆಯ ಹಿಂದೆ ವಿಷ್ಣು ನೀಡಿರುವ ಶಾಪದ ಕಥೆ ಇದೆ.
ಭೂಲೋಕದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪೂಜಿಸುವುದು ನಡೆಯುತ್ತಿರುತ್ತದೆ. ಆದರೆ ವಿಷ್ಣುವಿಗೆ ಅಷ್ಟೊಂದು ಪೂಜೆಗಳು ನಡೆಯುತ್ತಿರಲಿಲ್ಲ. ಇದೇ ವಿಚಾರವಾಗಿ ಲಕ್ಷ್ಮಿ ಹಾಗೂ ವಿಷ್ಣುವಿನ ನಡುವೆ ಚರ್ಚೆ ಏರ್ಪಡುತ್ತದೆ. ಮಾತಿನ ಭರದಲ್ಲಿ ವಿಷ್ಣು ತಾಯಿ ತನ ಅನುಭವಿಸದ ಮಹಿಳೆ ಪರಿಪೂರ್ಣ ಮಹಿಳೆ ಅಲ್ಲ ಎಂಬ ವಿಚಾರವಾಗಿ ಚರ್ಚೆ ಮುಂದಿಡುತ್ತಾನೆ. ಇದರಿಂದ ನೊಂದ ಲಕ್ಷ್ಮಿ ಇದಕ್ಕೆ ಪರಿಹಾರ ಪಡೆಯಬೇಕೆಂದು ನಿರ್ಧರಿಸುತ್ತಾಳೆ.
ಹಾಗೆ ಪಾರ್ವತಿಯನ್ನು ಭೇಟಿಯಾದ ಆಕೆ ನಿನಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಪುತ್ರನನ್ನು ದತ್ತು ನೀಡುವಂತೆ ಕೇಳಿದಳು. ಆದ್ರೆ ಪಾರ್ವತಿ ತನ್ನ ಇಬ್ಬರು ಮಕ್ಕಳು ಎರಡು ಕಣ್ಣುಗಳು ಇಬ್ಬರಲ್ಲಿ ಒಬ್ಬರನ್ನು ನಿನಗೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾಳೆ. ಆದ್ರೆ ನಿನಗೊಂದು ವರ ನೀಡುತ್ತೇನೆ ಎಂದು. ಭೂ ಲೋಕದಲ್ಲಿ ಎಲ್ಲಿ ಲಕ್ಷ್ಮಿಯ ಪೂಜೆ ನಡೆಯುತ್ತದೆಯೋ ಅಲ್ಲಿ ನಿನ್ನ ಪುತ್ರನಂತೆ ಗಣೇಶನಿಗೂ ಪೂಜೆ ನಡೆಯಲಿದೆ ಎನ್ನುತ್ತಾಳೆ. ಹೀಗಾಗಿ ಲಕ್ಷ್ಮಿಯ ಜೊತೆ ಗಣೇಶನಿಗೂ ಪೂಜೆ ನೆರವೇರುತ್ತದೆ.
ದೀಪಾವಳಿ ಹಬ್ಬದಂದು, ಲಕ್ಷ್ಮಿ ದೇವಿಯನ್ನು ಸಂಪತ್ತನ್ನು ಪಡೆಯುವ ಬಯಕೆಯಿಂದ ಪೂಜಿಸಲಾಗುತ್ತದೆ, ಏಕೆಂದರೆ ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯು ಮನೆಗೆ ಆಗಮಿಸುತ್ತಾಳೆ ಎಂದು ನಂಬಲಾಗಿದೆ. ಆದ್ರೆ ಲಕ್ಷ್ಮಿಯ ರೂಪದಲ್ಲಿ ಹಣ ಬಂದಾಗ ಮಾನವನ ಬುದ್ಧಿ ಕೆಡುತ್ತದೆಯಂತೆ. ಹೀಗಾಗಿ ಒಳ್ಳೆಯ ಬುದ್ದಿ ಬರಲಿ ಎಂಬ ಕಾರಣಕ್ಕೆ ವಿನಾಯಕನನ್ನು ಪೂಜಿಸಲಾಗುತ್ತದೆ.
ಈ ಲಕ್ಷ್ಮಿ ಪೂಜೆಯ ದಿನದಂದು ಖರೀದಿಸಿದ ವಸ್ತುಗಳು ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ನಂಬಲಾಗುತ್ತದೆ. ಹೀಗಾಗಿ ಹೊಸ ವಾಹನ, ವಸ್ತುಗಳು, ಚಿನ್ನ, ಬೆಳ್ಳಿ ಖರೀದಿಸುತ್ತಾರೆ. ಅದರಲ್ಲೂ ಈ ದಿನ ಬೆಳ್ಳಿಯ ವಿಗ್ರಹಗಳ ಖರೀದಿಸುವವರನ್ನು ಹೆಚ್ಚಾಗಿ ನೋಡಬಹುದು.
ಈ ವರ್ಷ ಅಕ್ಟೋಬರ್ 31ರಂದು ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತದೆ. ಈ ದಿನ ಸಂಜೆಯ ಸಮಯದಲ್ಲಿ ಬಾಗಿಲ ಮುಂದೆ ದೀಪಗಳ ಹಚ್ಚಿ ಇಡಲಾಗುತ್ತದೆ. ಇದರಿಂದ ಲಕ್ಷ್ಮಿ ಮನೆಯೊಳಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಸೂರ್ಯಾಸ್ತವಾದ ಮೂರು ಗಂಟೆಗಳ ಒಳಗೆ ಲಕ್ಷ್ಮಿ ಪೂಜೆ ನೆರವೇರಿಸುತ್ತಾರೆ, ಇದೇ ಸಮಯದಲ್ಲಿ ಕ್ಷೀರ ಸಾಗರದಿಂದ ಲಕ್ಷ್ಮಿ ಆಗಮಿಸಿದ್ದಳು ಎನ್ನಲಾಗುತ್ತದೆ. ಹಾಗೆ ಶ್ರೀರಾಮ ವನವಾಸ ಮುಗಿಸಿ ಮರಳಿ ಅರಮನೆಗೆ ಬಂದಾಗಲು ಈ ಲಕ್ಷ್ಮಿ ನೆರವೇರಿಸಿದ್ದ ಎಂಬ ನಂಬಿಕೆ ಇದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications