Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿಯ ಕೊನೆಯ ಮೂರು ದಿನ ಮುತ್ತೈದೆಯರಿಗೆ ಯಾಕೆ ಸಂಭ್ರಮ ಗೊತ್ತಾ?
ಶರತ್ ಋತುವಿನಲ್ಲಿ ಶರನ್ನವರಾತ್ರಿ ಆಚರಣೆ ಮಾಡಲಾಗುತ್ತದೆ. ಹಿಂದುಗಳಿಗೆ ಇದೊಂದು ವಿಶೇಷವಾದ ಹಬ್ಬ. 9 ದಿನ 9 ರಾತ್ರಿ ದೇವಿಯ ವಿವಿಧ ಅವತಾರಗಳನ್ನು ಪೂಜೆ ಮಾಡಲಾಗುತ್ತೆ. ಶಾಂತ ಸ್ವರೂಪಿ ದೇವಿಯಿಂದ ಕಾಳಿ ಮಾತೆಯವರೆಗೂ ವಿಶೇಷವಾದ ಪೂಜೆ ಪುನಸ್ಕಾರಗಳು ನಡೆಯುತ್ತವೆ. ನವರಾತ್ರಿ ಅಂದ್ರೆ ಮಹಿಳೆಯರಿಗೆ ಸಂಭ್ರಮ. ಮುತ್ತೈದೆಯರು ನವರಾತ್ರಿಯ ಸಮಯದಲ್ಲಿ ಹಲವು ವ್ರತಗಳನ್ನು ಕೈಗೊಳ್ಳುವುದರ ಮೂಲಕ ಕುಟುಂಬದ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾರೆ.

ಮಹಿಳೆಯರಿಗೆ ಮಹತ್ವವಾದ ಹಬ್ಬ!
ಹೌದು, ನವರಾತ್ರಿ ಎನ್ನುವುದು ದೇವಿಗೆ ಸಂಬಂಧಿಸಿದ ಹಾಗಾಗಿ ಮುತ್ತೈದೆಯರಿಗೆ ಈ ನವರಾತ್ರಿಯ ಸಂದರ್ಭ ಬಹಳ ವಿಶೇಷವಾಗಿರುತ್ತದೆ ನಮ್ಮ ದೇಶದಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ನವರಾತ್ರಿ ಆಚರಣೆಗಳು ಇವೆ ಸಾಮಾನ್ಯವಾಗಿ ಮೈಸೂರು ಭಾಗದಲ್ಲಿ ಇರುವವರಿಗೆ ದಸರಾ ಅಥವಾ ನವರಾತ್ರಿ ಎನ್ನುವುದು ಬಹಳ ವಿಶೇಷವಾದ ಹಬ್ಬವಾಗಿದೆ. ನವರಾತ್ರಿಯ ದಿನ ನವಶಕ್ತಿ ದೇವಿಗಳನ್ನ ಪೂಜಿಸಲಾಗುತ್ತದೆ ಈ ಹಿನ್ನೆಲೆಯಲ್ಲಿ ಮುತ್ತೈದೆಯರು ಉಪವಾಸ ವ್ರತವನ್ನು ಕೂಡ ಆಚರಿಸುತ್ತಾರೆ. ಜಗನ್ಮಾತೆ ಕೂಡ ಮುತ್ತೈದೆ. ಹಾಗಾಗಿ ಆಕೆಯನ್ನು ಭಕ್ತಿ ಭಾವದಿಂದ ಪೂಜಿಸುವುದು ಮಾತ್ರವಲ್ಲದೆ ಅರಿಶಿನ ಕುಂಕುಮಕ್ಕೆ ನೀವು ಮಹತ್ವ ನೀಡಿದ್ದೆ ಆದರೆ ಕುಟುಂಬದ ಮೇಲೆ ಆಕೆಯ ಕೃಪೆ ಇದ್ದೇ ಇರುತ್ತೆ.
ಜಗನ್ಮಾತೆಯ 9 ಅವತಾರಗಳು!
ತಾಯಿ ಪಾರ್ವತಿ ದುರ್ಗಿಯಾಗಿ ಒಂದೊಂದು ಸಂದರ್ಭದಲ್ಲಿ ಒಂದೊಂದು ಅವತಾರವನ್ನು ತಡೆಯುತ್ತಾಳೆ ಈ ಮೂಲಕ ಭೂಲೋಕದಲ್ಲಿ ಅನ್ಯಾಯ ಹೋಗಲಾಡಿಸಿ ನ್ಯಾಯ ಉಳಿಯುವಂತೆ ಮಾಡುತ್ತಾಳೆ. ಶೈಲ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದ ಮಾತ, ಕಾತ್ಯಾಯಿನಿ, ಕಾಳರಾತ್ರಿ. ಮಹಾಗೌರಿ, ಸಿದ್ಧಿಧಾತ್ರಿ ಈ 9 ದೇವಿಯ ಅವತಾರಗಳನ್ನು ನವರಾತ್ರಿಯಂದು ಪೂಜಿಸಲಾಗುತ್ತದೆ.
ಮುತ್ತೈದೆಯರಿಗೆ ಯಾಕೆ ವಿಶೇಷ!
ಜಗನ್ಮಾತೆ, ಮಹಿಷಾಸುರ ಮರ್ದಿನಿಯಾಗಿ ಭೂಮಿಗೆ ಇಳಿಯುತ್ತಾಳೆ. ದುಷ್ಟರ ಸಂಹಾರಕ್ಕಾಗಿ ಪಣತೊಟ್ಟು ಧರೆಗೆ ಬಂದ ಜಗನ್ಮಾತೆ ಜನರ ಕಷ್ಟಗಳನ್ನ ದೂರ ಮಾಡಲು ಭೂಮಿ ಮೇಲೆಯೇ ನೆಲೆಸಿದ್ದಾಳೆ ಎಂದು ಹೇಳಲಾಗುತ್ತೆ. ನಾವು ಹೆಣ್ಣು ಮಕ್ಕಳನ್ನು ಜಗನ್ಮಾತೆಗೆ ಹೋಲಿಸುತ್ತೇವೆ. ಹೆಣ್ಣು ಮಕ್ಕಳು ಕೂಡ ದುರ್ಗಾದೇವಿಯಂತೆಯೇ ಕಷ್ಟವನ್ನು ಎದುರಿಸುವಂಥವರು. ದುಷ್ಟರನ್ನು ಸಂಹಾರ ಮಾಡುವಂತವರು. ಸಾಮಾನ್ಯ ಅರ್ಥದಲ್ಲಿ ದುಷ್ಟರು ಅಂದರೆ ನಮ್ಮ ಸಮಸ್ಯೆ ನಮ್ಮ ಕೌಟುಂಬಿಕ ತೊಂದರೆಗಳು. ಹಾಗಾಗಿ ಇವುಗಳ ನಿವಾರಣೆಗಾಗಿ ಹೆಣ್ಣುಮಕ್ಕಳು ನವರಾತ್ರಿಯ ದಿನ ವಿಶೇಷವಾದಂತಹ ಪೂಜೆ ಪುನಸ್ಕಾರಗಳನ್ನು ವೃತಾಧಿಗಳನ್ನು ಮಾಡುತ್ತಾರೆ.
ನವರಾತ್ರಿಗೆ ಉಪವಾಸ ವೃತ:
ನವರಾತ್ರಿಯ ಆರಂಭದ ದಿನ ಸಾಕಷ್ಟು ಮುತ್ತೈದೆಯರು ಉಪವಾಸ ವ್ರತವನ್ನು ಮಾಡುತ್ತಾರೆ. ಒಂಬತ್ತು ದಿನಗಳ ಕಾಲ ಕೇವಲ ಫಲಹಾರ ಮತ್ತು ನೀರನ್ನು ಸೇವಿಸಿ 9 ದಿನಗಳ ಕಾಲ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಮುತ್ತೈದೆಯರು 9 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ದೇವಿಯನ್ನು ಪೂಜೆ ಮಾಡುತ್ತಾರೆ ಇನ್ನು ಕೊನೆಯ ಮೂರು ದಿನಗಳು ಅಂದರೆ ವಿಜಯದಶಮಿಯವರೆಗೆ ಮುತ್ತೈದೆಯರು, ತಮ್ಮ ಮನೆಗಳಿಗೆ ಮುತ್ತೈದೆಯರನ್ನು ಕರೆದು "ಮುತ್ತೈದೆಯರ ಊಟ" ಎನ್ನುವ ಆಚರಣೆ ಮಾಡುತ್ತಾರೆ ಅಂದರೆ ಈ ಸಮಯದಲ್ಲಿ ಮುತ್ತೈದೆಯರನ್ನ ಕರೆದು ಅವರಿಗೆ ಅರಿಶಿನ ಕುಂಕುಮ ನೀಡಿ ಬಾಗಿನ ಕೊಡಲಾಗುತ್ತದೆ. ಮದುವೆಯಾಗಿರುವ ಮಹಿಳೆಯರು ಸಂತೃಪ್ತಿ ಗೊಳ್ಳುವ ಹಾಗೆ ಸಿಹಿ ಉಣಿಸಿ ಕಳುಹಿಸಲಾಗುತ್ತದೆ. ಹೀಗೆ ಮುತ್ತೈದೆಯರು ಮನೆಗೆ ಬಂದು ಹರಸಿ ಹೋದರೆ ಆ ಮನೆಯಲ್ಲಿ ಇರುವ ಮಹಿಳೆಯರ ತಾಳಿ ಭಾಗ್ಯ ಚೆನ್ನಾಗಿ ಇರುತ್ತದೆ ಗಂಡನ ಆಯಸ್ಸು ಹೆಚ್ಚಾಗುತ್ತದೆ ಜೊತೆಗೆ ಮನೆಯಲ್ಲಿ ಅಷ್ಟೈಶ್ವರ್ಯಗಳು ತುಂಬಿ ತುಳುಕುತ್ತವೆ ಎಂದು ಹೇಳಲಾಗುತ್ತೆ.
ಇನ್ನು ಕೆಲವು ಕಡೆಯ ಆಚರಣೆಯ ಪ್ರಕಾರ 9 ಕನ್ಯೆಯರನ್ನು ಕರೆದು ಅವರಿಗೆ ಬಾಗಿನ, ಸಿಹಿ ಕೊಡಲಾಗುತ್ತದೆ. ಇಲ್ಲಿ 9 ಕನ್ಯೆಯರು ಅಂದರೆ 9 ನವ ದುರ್ಗಿಯರು ಎಂದು ಅರ್ಥ. ಹೀಗೆ 9 ಹೆಣ್ಣು ಮಕ್ಕಳನ್ನು ಕರೆದು (ಹತ್ತು ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳು) ಅವರನ್ನು ಪೂಜಿಸಿದರೆ ಸಾಕ್ಷಾತ್ ದುರ್ಗಿಯ 9 ಅವತಾರಗಳನ್ನು ಪೂಜಿಸಿದಂತೆಯೇ ಅರ್ಥ. ಹೀಗೆ ಮುತ್ತೈದೆಯರನ್ನು ಹಾಗೂ ಹೆಣ್ಣು ಮಕ್ಕಳನ್ನು ಕನ್ಯೆಯರನ್ನಾಗಿ ಕರೆದು ಬಾಗಿನ ಕೊಟ್ಟು ಕಳುಹಿಸಿದರೆ ನವ ದುರ್ಗೆಯರ ಕೃಪೆ ಇರುತ್ತದೆ ಅಂತಹ ಮನೆಗಳಲ್ಲಿ ಯಾವುದೇ ಸಮಸ್ಯೆಯೂ ಇಲ್ಲದೆ ಆರೋಗ್ಯ ಐಶ್ವರ್ಯಾದಿಗಳು ತುಂಬಿ ತುಳುಕಾಡುತ್ತವೆ ಎನ್ನುವ ಪ್ರತಿತಿ ಇದೆ.
ಒಟ್ಟಿನಲ್ಲಿ 9 ದಿನಗಳ ನವರಾತ್ರಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಹೆಣ್ಣು ಮಕ್ಕಳು ಮುತ್ತೈದೆಯರು ಆಚರಿಸುತ್ತಾರೆ. ಇದರಿಂದ ವರ್ಷವಿಡಿ ದೇವಿಯ ಕೃಪೆ ನಮ್ಮ ಮೇಲಿರುತ್ತದೆ ಎಷ್ಟು ಭಕ್ತಿ ಭಾವದಿಂದ ದೇವಿಯನ್ನು ಪೂಜೆ ಮಾಡುತ್ತೇವೆ ಅಷ್ಟೇ ಬೇಗ ಆಕೆಯನ್ನು ಒಲಿಸಿಕೊಳ್ಳಬಹುದು ಎನ್ನುವುದು ನಂಬಿಕೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications