Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನ.15 ಕಾರ್ತಿಕ ಹುಣ್ಣಿಮೆ: ಇದರ ಧಾರ್ಮಿಕ ಮಹತ್ವದ ಬಗ್ಗೆ ಗೊತ್ತೇ? ಈ ದಿನ ನದಿ ಸ್ನಾನಕ್ಕೆ ಏಕಿಷ್ಟು ಮಹತ್ವ?
ಇದೀಗ ಕಾರ್ತಿಕ ಮಾಸ ನಡೆಯುತ್ತಿದೆ, ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಕಾರ್ತಿಕ ಪೂರ್ಣಿಮೆಯೆಂದು ಆಚರಿಸಲಾಗುವುದು. ಧಾರ್ಮಿಕ ದೃಷ್ಟಿಯಿಂದ ಈ ದಿನಕ್ಕೆ ತುಂಬಾನೇ ಮಹತ್ವವಿದೆ. ಕಾರ್ತಿಕ ಸ್ನಾನದಂದು ಮಾಡುವ ನದಿ ಸ್ನಾನ ತುಂಬಾ ವಿಶೇಷವಾದದ್ದು. ಕಾರ್ತಿಕ ಪೂರ್ಣಿಮೆಯಂದು ದೇವ್ ದೀಪಾವಳಿಯೆಂದು ಆಚರಿಸಲಾಗುವುದು. ಈ ಕಾರ್ತಿಕ ಹುಣ್ಣಿಮೆಯ ಮಹತ್ವದ ಬಗ್ಗೆ ತಿಳಿಯೋಣ:

ಕಾರ್ತಿಕ ಹುಣ್ಣಿಮೆ ಯಾವಾಗ?
ಈ ವರ್ಷ ಕಾರ್ತಿಕ ಹುಣ್ಣಿಮೆಯನ್ನು ನವೆಂಬರ್ 15ರಂದು ಆಚರಿಸಲಾಗುವುದು.
ಕಾರ್ತಿಕ ಹುಣ್ಣಿಮೆ ತಿಥಿ: ನವೆಂಬರ್ 15 ಬೆಳಗ್ಗೆ 06:16ಕ್ಕೆ ಪ್ರಾರಂಭವಾಗುವುದು
ಕಾರ್ತಿಕ ಹುಣ್ಣಿಮೆ ತಿಥಿ ಮುಕ್ತಾಯ: ನವೆಂಬರ್ 16 ಮಧ್ಯಾಹ್ನ 2:28ರವರೆಗೆ ಇದೆ.
ಕಾರ್ತಿಕ ಹುಣ್ಣಿಮೆಯಂದು ದೇವ್ ದೀಪಾವಳಿ ಆಚರಣೆ
ಕಾರ್ತಿಕ ಹುಣ್ಣಿಮೆಯಂದುದೇವ್ ದೀಪಾವಳಿಯನ್ನು ಆಚರಿಸಲಾಗುವುದು. ಈ ದಿನ ರಾಕ್ಷಸ ತ್ರಿಪುರಾನನ್ನು ಶಿವನು ಸೋಲಿಸಿದ ಎಂಬ ಪೌರಾಣಿಕ ಕತೆಯಿದೆ. ಈ ದಿನ ಗಂಗಾನದಿಯಲ್ಲಿ ಸಾವಿರಾರು ಜನರು ಹಣತೆಯನ್ನು ಹಚ್ಚಿ ತೇಲಿ ಬಿಡುತ್ತಾರೆ., ಇಡೀ ದಿನ ಜಾಗರಣೆ ಇದ್ದು ಶಿವನ ಹಾಡುಗಳನ್ನು ಹಾಡುತ್ತಾ ಶಿವ ಧ್ಯಾನದಲ್ಲಿಯೇ ರಾತ್ರಿ ಕಳೆಯುತ್ತಾರೆ.
ಗಂಗಾ ನದಿಗೆ 21 ಬ್ರಾಹ್ಮಣರು, 24 ಮಹಿಳೆಯರು ಆರತಿ ಎತ್ತಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.
ದೇವ್ ದೀಪಾವಳಿ ಆಚರಣೆಗೆ ಸಮಯ: ಬೆಳಗ್ಗೆ 05:10ರಿಂದ 07:47ರವರೆಗೆ ಇರಲಿದೆ.
ಕಾರ್ತಿಕ ಸ್ನಾನದ ಮಹತ್ವ
ಕಾರ್ತಿಕ ಹುಣ್ಣಿಮೆಯಂದು ಪುಣ್ಯ ನದಿಯಲ್ಲಿ ಸ್ನಾ ಮಾಡುತ್ತಾರೆ. ಗಂಗಾ ನದಿಗೆ ಹೋಗಿ ಕೆಲವರು ಸ್ನಾನ ಮಾಡಿದರೆ ಇನ್ನು ಕಲವರು ತಮ್ಮ ಪ್ರದೇಶದಲ್ಲಿರುವ ನದಿಯಲ್ಲಿ ಸ್ನಾನ ಮಾಡುತ್ತಾರೆ. ಈ ದಿನ ನದಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುವುದು ಎಂಬ ನಂಬಿಕೆ. ಜನರು ತಾವು ಅರಿಯದೆ ಮಾಡಿದ ಪಾಪಗಳಿದ್ದರೆ ಅದು ತೊಳೆದು ಹೋಗಲಿ, ಮೋಕ್ಷ ಸಿಗುವಂತಾಗಲಿ ಎಂದು ಪುಣ್ಯ ಸ್ನಾನ ಮಾಡುತ್ತಾರೆ.
ಪುಣ್ಯ ಸ್ನಾನ ಮಾಡುವುದರಿಂದ ಮೈಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಚರ್ಮ ಸಂಬಂಧಿತ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ.
ಕಾರ್ತಿಕ ಹುಣ್ಣಮೆಯಂದು ಪುಣ್ಯ ಸ್ನಾನಕ್ಕೆ ಶುಭ ಮುಹೂರ್ತ: ಬೆಳಗ್ಗ 04:58ರಿಂದ 05:51ರವರೆಗೆ ಇದೆ. ಸೂರ್ಯೋದಯಕ್ಕೆ ಮುನ್ನ ಎದ್ದು ನದಿ ಸ್ನಾನ ಮಾಡಬೇಕು.
ಈ ದಿನ ಸತ್ಯ ನಾರಾಯಣ ಪೂಜೆ ಮಾಡಲಾಗುವುದು
ಕಾರ್ತಿಕ ಹುಣ್ಣಿಮೆಯಂದು ಮಾಡುವ ಸತ್ಯ ನಾರಾಯಣ ಪೂಜೆಗೆ ತುಂಬಾನೇ ಮಹತ್ವವಿದೆ. ಈ ದಿನದ ಸತ್ಯ ನಾರಾಯಣ ಪೂಜೆ ಮಾಡಿದರೆ ಇತರ ದಿನಗಳಿಗಿಂತ 10 ಪಟ್ಟುಅಧಿಕ ಸಿಗಲಿದೆ ಎಂಬ ನಂಬಿಕೆ.
ಧಾನ ಧರ್ಮದ ಮಹತ್ವ: ಕಾರ್ತಿಕ ಹುಣ್ಣಿಮೆಯಂದು ಮಾಡುವ ದಾನ ಧರ್ಮಕ್ಕೂ ಅಷ್ಟೊಂದು ಮಹತ್ವವಿದೆ. ಈ ದಿನ ಶಕ್ತಿಗೆ ತಕ್ಕಂತೆ ದಾನ ಮಾಡಬೇಕು. ಇದರಿಂದ ಒಳಿತಾಗುವುದು, ಕಷ್ಟಗಳು ದೂರಾಗುವುದು.
ಕಾರ್ತಿಕ ಹುಣ್ಣಿಮೆಯಂದು ಲಕ್ಷ್ಮಿ ಪೂಜೆ
ಕಾರ್ತಿಕ ಹುಣ್ಣಿಮೆಯಂದು ಲಕ್ಷ್ಮಿ ಪೂಜೆ ಮಾಡಲಾಗುವುದು, ಅದರಲ್ಲಿಯೂ ಶುಕ್ರವಾರದ ದಿನ ಕಾರ್ತಿಕ ಹುಣ್ಣಿಮೆ ಆಚರಿಸಲಾಗುತ್ತದೆ, ಶುಕ್ರವಾರ ಲಕ್ಷ್ಮಿ ಪೂಜೆಗೆ ಅತ್ಯಂತ ಶ್ರೇಷ್ಠ ದಿನ. ಕಾರ್ತಿಕ ಹುಣ್ಣಿಮೆಯಂದು ಲಕ್ಷ್ಮಿ ಪೂಜೆ ಮಾಡಿದರೆ ಲಕ್ಷ್ಮಿ ಕೃಪೆಯಿಂದ ಸಂಪತ್ತು ಹೆಚ್ಚಾಗಲಿದೆ. ಏನಾದರೂ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೆ ಅದು ದೂರಾಗಲಿದೆ ಎಂಬುವುದು ನಂಬಿಕೆ.
ಲಕ್ಷ್ಮಿ ಪೂಜೆಯನ್ನು ರಾತ್ರಿ 11:39ರಿಂದ 12:33ರ ಸಮಯದಲ್ಲಿ ಆಚರಿಸಬಹುದು.
ಲಕ್ಷ್ಮಿ ಪೂಜೆಯನ್ನು ರಾಹುಕಾಲ ಮತ್ತು ಭದ್ರ ಕಾಲದಲ್ಲಿ ಆಚರಣೆ ಮಾಡಬಾರದು.
ನವೆಂಬರ್ 15ರಂದು ರಾಹುಕಾಲ ಬೆಳಗ್ಗೆ 10:44ರಿಂದ ಮಧ್ಯಾಹ್ನ 12:05ರವರೆಗೆ ಇದೆ
ಭದ್ರಾ ಕಾಲ ಬೆಳಗ್ಗೆ 06:43ರಿಂದ 04:37ರವರೆಗೆ ಇದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
