Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೊಸ ವರ್ಷ ದೇಶದ -ವಿದೇಶದ ಮೇಲೆ ಬೀರುವ ಪ್ರಭಾವವೇನು? ಚುನಾವಣೆ ಯಾರಿಗೆ ಜಯವಾಗಲಿದೆ?
ಹಿಂದೂ ಹೊಸ ವರ್ಷ 4 ಏಪ್ರಿಲ್ 8, 2024 ರಂದು ಸೋಮವಾರ ರಾತ್ರಿ 11:51 ರಿಂದ ಪ್ರಾರಂಭವಾಗುವುದು. ಉದಯ ಸೂರ್ಯದ ಲೆಕ್ಕದಲ್ಲಿ ಯುಗಾದಿಯನ್ನು ಈ ವರ್ಷ ಏಪ್ರಿಲ್ 9, 2024 ರಂದು ಆಚರಿಸಲಾಗುವುದು.
ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದದಂದು ಹೊಸ ವರ್ಷ ಪ್ರಾರಂಭವಾಗುತ್ತದೆ. ಈ ದಿನದಂದು ತ್ರಿಕೋನ ರಾಜಯೋಗ ಕೂಡ ಉಂಟಾಗಲಿದೆ. ಈ ರಾಜಯೋಗವನ್ನು ಅತ್ಯಂತ ಮಂಗಳಕರ ಸಮಯ ಎಂದು ಹೇಳಲಾಗುವುದು. ಈ ಹೊಸ ಸಂತ್ಸರ ದೇಶ-ವಿದೇಶಗಳ ಮೇಲೆ ಬೀರುವ ಪ್ರಭಾವವೇನು ಎಂದು ನೋಡೋಣ ಬನ್ನಿ:

- ಉತ್ತರದ ದೇಶಗಳು ಮತ್ತು ಪ್ರದೇಶಗಳ ನಿವಾಸಿಗಳು ಸಾಪೇಕ್ಷ ಸಂತೋಷವನ್ನು ಅನುಭವಿಸುತ್ತಾರೆ. ಮಧ್ಯ ದೇಶಗಳಲ್ಲಿ ಅತಿವೃಷ್ಟಿಯಿಂದ ರೋಗ ರುಜಿನಗಳು ಹೆಚ್ಚಾಗಬಹುದು, ಪಶ್ಚಿಮ ಘಟ್ಟಗಳಲ್ಲಿ ಜಾನುವಾರುಗಳ ನಷ್ಟದಿಂದಾಗಿ ತುಪ್ಪ, ಧಾನ್ಯಗಳಿಗೆ ತೊಂದರೆ ಉಂಟಾಗಬಹುದು.
- ಈ ವರ್ಷವು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತುಂಬಾನೇ ಸುಧಾರಣೆಯ ನಿರೀಕ್ಷೆಯಿದೆ.
- ಸಾಮಾಜಿಕ, ಧಾರ್ಮಿಕ, ಕಲಾ ಸಂಬಂಧಗಳಲ್ಲಿ ಉಪಯುಕ್ತ ಕೆಲಸಗಳು ನಡೆಯಲಿದ್ದು, ಕಲಾವಿದರು ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗುತ್ತಾರೆ.
- ವ್ಯಾಪಾರ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಪ್ರಗತಿ ಕಂಡು ಬರಲಿದೆ.
- ರೈಲ್ವೆ ಮೂಲಸೌಕರ್ಯವೂ ಹೆಚ್ಚಾಗುವುದು, ಹೊಸ ರೈಲು ಮಾರ್ಗಗಳನ್ನು ತೆರೆಯಬಹುದು. ಬುಲೆಟ್ ಟ್ರೈನ್‌ಗೆ ಸಂಬಂಧಿಸಿದ ಕೆಲವು ವಿಶೇಷ ಕೆಲಸಗಳು ಈ ವರ್ಷವೂ ಪ್ರಾರಂಭವಾಗಬಹುದು
- ಸೂರ್ಯನಿಗೆ ರಾಹುವಿನ ಬಾಧೆ ಇರುವುದರಿಂದ ಸರ್ಕಾರ ಮತ್ತು ಜನರ ನಡುವೆ ಸ್ವಲ್ಪ ನಂಬಿಕೆಯ ಕೊರತೆ ಉಂಟಾಗಬಹುದು. ಸರ್ಕಾರದ ಸಮಸ್ಯೆಗಳು ಹೆಚ್ಚಾಗುವುದು, ಜನರು ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಾರೆ.
- ಸಣ್ಣ ಚುನಾವಣೆಗಳಲ್ಲಿ ಆಡಳಿತ ಪಕ್ಷ ದುರ್ಬಲವಾಗಬಹುದು.
- ಖನಿಜ ಮತ್ತು ಲೋಹ ಕೈಗಾರಿಕೆಗಳಲ್ಲಿ ವಿಶೇಷ ಪ್ರಗತಿಯ ಸಾಧ್ಯತೆಗಳಿವೆ.
- ಸೂರ್ಯ ಮತ್ತು ಶುಕ್ರನೊಂದಿಗೆ ಚಂದ್ರನು ರಾಹುವಿನ ಪ್ರಭಾವದಲ್ಲಿದ್ದಾನೆ ಹಾಗೂ ಪೀಡಿತ ಸ್ಥಿತಿಯಲ್ಲಿರುತ್ತಾನೆ. ಈ ಕಾರಣಕ್ಕಾಗಿ, ಎತ್ತರದ ಕಟ್ಟಡಗಳಲ್ಲಿ ಅಪಘಾತಗಳು ಹೆಚ್ಚಾಗಬಹುದು ಮತ್ತು ಗಣಿಗಳಲ್ಲಿ ಕೆಲವು ರೀತಿಯ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ.
- ಗುರುವು ವೃಷಭ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಕೆಲವು ಬ್ಯಾಂಕ್‌ಗಳು ವಿಲೀನಗೊಳ್ಳುತ್ತವೆ, ಕೆಲವು ಬ್ಯಾಂಕ್ ಹಗರಣಗಳು ಸಹ ಬಹಿರಂಗಗೊಳ್ಳಬಹುದು.
- ಆಟೋಮೊಬೈಲ್ ಷೇರುಗಳು ಲಾಭದಾಯಕವಾಗಿರುವುದಿಲ್ಲ
- ಸಾರಿಗೆ ಸಂಬಂಧಿತ ಸಿಬ್ಬಂದಿಯ ಅಸಮಾಧಾನ ಹೆಚ್ಚಾಗಬಹುದು.
- ತೆರಿಗೆ ಸಂಗ್ರಹ, ಆದಾಯ ಉತ್ಪಾದನೆ ಮತ್ತು ವಿದೇಶಿ ವ್ಯಾಪಾರದ ಪರಿಸ್ಥಿತಿಯನ್ನು ಪರಿಗಣಿಸಲಾಗುವುದು. ಈ ಬಗ್ಗೆ ಗಮನ ಹರಿಸುವುದು ಅಗತ್ಯ.
- ನೆರೆಯ ರಾಷ್ಟ್ರಗಳೊಂದಿಗೆ, ವಿಶೇಷವಾಗಿ ಚೀನಾ ಮತ್ತು ನೇಪಾಳದೊಂದಿಗೆ ಭಾರತದ ಸಂಬಂಧಗಳು ಹದಗೆಡಬಹುದು.
- ಈ ವರ್ಷ, ಭಯೋತ್ಪಾದನೆ ಮತ್ತು ಸಮಾಜ ವಿರೋಧಿ ಅಂಶಗಳನ್ನು ನಿಯಂತ್ರಿಸಲು ಭಾರತದ ಪ್ರಯತ್ನಗಳು ಯಶಸ್ವಿಯಾಗುತ್ತವೆ.
- ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ ಮತ್ತು ಕೈಗಾರಿಕಾ ವಲಯದಲ್ಲಿ ಉತ್ಪಾದನೆಯ ಹೆಚ್ಚಳದಿಂದ ದೇಶದ ಜಿಡಿಪಿ ಸುಧಾರಿಸಬಹುದು,
- ಆಹಾರ ಧಾನ್ಯಗಳು ಮತ್ತು ಆರ್ಥಿಕ ವಿಷಯಗಳ ಪರಿಸ್ಥಿತಿ ಚಿಂತಾಜನಕವಾಗಿ ಉಳಿಯುತ್ತದೆ.
- ಸ್ನೇಹ ದೇಶಗಳ ಪರಿಸ್ಥಿತಿ ಅಸಹಜವಾಗುತ್ತದೆ.
- ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ಅಪರಾಧ ಪ್ರಕರಣಗಳು ತುಂಬಾ ನಡೆಯಲಿದೆ.
- ಅನೇಕ ದೊಡ್ಡ ಕಂಪನಿಗಳು, ಕೈಗಾರಿಕಾ ಮನೆಗಳು ಮತ್ತು ಬ್ಯಾಂಕುಗಳು ಪರಸ್ಪರ ವಿಲೀನಗೊಳ್ಳಬಹುದು.
- ಕೆಲವು ಹೊಸ ಹಗರಣಗಳು ಬಹಿರಂಗಗೊಳ್ಳುತ್ತವೆ. ದೊಡ್ಡ ವ್ಯಕ್ತಿಗಳ ಮುಖವಾಡ ಬಯಲಾಗಲಿದೆ.
- ಸಮುದ್ರ ವಲಯದಲ್ಲಿ ಅಪಘಾತಗಳು ಹೆಚ್ಚಾಗಬಹುದು.
ಈ ಕ್ರೋಧಿನಾಮ ಸಂವತ್ಸರದಲ್ಲಿ ಸಮಸ್ಯೆಗಳು ಹೆಚ್ಚಿರಲಿದೆ, ಪ್ರಕೃತಿ ವಿಕೋಪಗಳು ಹೆಚ್ಚಿರಲಿದೆ, ಬರಗಾಲ, ಪ್ರವಾಹ ಈ ಬಗೆಯ ಪ್ರಕೃತಿ ವಿಕೋಪಗಳು ಹೆಚ್ಚಾಗಲಿದೆ. ಇದು ಸವಾಲಿನ ವರ್ಷ, ಈ ದಿನ ಆತ್ಮವಿಶ್ವಾಸದಿಂದ ಇರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
