Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಈ ಮಹಾಶಿವರಾತ್ರಿಯಂದು 60 ವರ್ಷಗಳ ಬಳಿಕ ಉಂಟಾಗಿದೆ ಇಂಥ ವಿಶೇಷ ಯೋಗ: ಈ 3 ರಾಶಿಗಳಲ್ಲಿ ಹೆಚ್ಚಾಗಲಿದೆ ಶ್ರೀಮಂತಿಕೆ
ಈ ಮಹಾಶಿವರಾತ್ರಿಗೆ ನೀವು ಸಲ್ಲಿಸಿದ ಭಕ್ತಿಯ ಪೂಜಾ ಫಲದಿಂದ ನಿಮ್ಮ ಬದುಕಿನಲ್ಲಿ ಎಲ್ಲವೂ ಒಳಿತಾಗಲಿ.... ಜ್ಯೋತಿಷ್ಯವು ಕೂಡ ಈ ಮಹಾಶಿವರಾತ್ರಿ ಬಳಿಕ ಅನೇಕ ರಾಶಿಗಳ ಬದುಕಿನಲ್ಲಿ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಏಕೆಂದರೆ ಈ ಬಾರಿ ಶಿವರಾತ್ರಿ ಇನ್ನಷ್ಟು ವಿಶೇಷವಾಗಿದೆ, ತುಂಬಾ ವಿಶೇಷ ಯೋಗಗಳು ಶಿವರಾತರಿಯಂದು ಉಂಟಾಗಿದೆ.

60 ವರ್ಷಗಳ ಬಳಿಕ ಅಪರೂಪದ ಯೋಗ ಉಂಟಾಗಿದೆ
ಇಂಥ ವಿಶೇಷ ಯೋಗ 1965ರಂದು ಉಂಟಾಗಿತ್ತು, ಅದಾದ ಬಳಿಕ ಅಂಥ ವಿಶೇಷ ಯೋಗ ಏರ್ಪಟ್ಟಿರುವುದು ಇದೇ ವರ್ಷ.
ಕುಂಭ ರಾಶಿಯಲ್ಲಿ ಇದೆ ತ್ರಿಗ್ರಹ ಯೋಗ
ಕುಂಭ ರಾಶಿಯಲ್ಲಿ ಸೂರ್ಯ, ಬುಧ, ಶನಿಗಳ ಸಂಯೋಗವಾಗಿದೆ.
ಅಲ್ಲದೆ ಮೀನ ರಾಶಿಯಲ್ಲಿ ಶುಕ್ರ ಮತ್ತು ರಾಹು ಸಂಯೋಗವಿದೆ
ಮಹಾಶಿವರಾತ್ರಿಗೆ ಶುಕ್ರನು ತನ್ನ ಉನ್ನತ್ಥ ರಾಶಿಯಾದ ಮೀನ ರಾಶಿಯಲ್ಲಿ ಇರಲಿದೆ, ರಾಹು ಕೂಡ ಇದೇ ರಾಶಿಯಲ್ಲಿ ಇರಲಿದೆ.
ಕುಂಭ ರಾಶಿಯಲ್ಲಿ ಸೂರ್ಯ ಶನಿ ಅಂದರೆ ತಂದೆ ಮಗನ ಸಂಯೋಗವಿದೆ
ಮೀನ ರಾಶಿಯಲ್ಲಿ ಗುರು-ಶಿಷ್ಯರ ಅಂದರೆ ಶುಕ್ರ- ರಾಹುಗಳ ಸಂಯೋಗವಿದೆ.
ಶಿವರಾತ್ರಿಯಂದು ಈ ಪ್ರಹರ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು
ಮೊದಲ ಪ್ರಹರ ಪೂಜೆ ಸಮಯ: ಸಂಜೆ 06:19ರಿಂದ ರಾತ್ರಿ 09:26ರವರೆಗೆ ಇದೆ
ಎರಡನೇ ಪ್ರಹರ ಪೂಜೆ ಸಮಯ: ರಾತ್ರಿ 09:26ರಿಂದ ಮಧ್ಯರಾತ್ರಿ 12:34ರವರೆಗೆ ಇದೆ.
3ನೇ ಪ್ರಹರ ಪೂಜೆ ಸಮಯ: ಫೆಬ್ರವರಿ 26 ಮಧ್ಯರಾತ್ರಿ 12:34ರಿಂದ ಮುಂಜಾನೆ 03:41ರವರೆಗೆ ಇದೆ
4ನೇ ಪ್ರಹರ ಪೂಜೆ: ಫೆಬ್ರವರು 27 ಮುಂಜಾನೆ 03:41ರಿಂದ ಬೆಳಗ್ಗೆ 06:48ರವರೆಗೆ ಇದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಶಿವರಾತ್ರಿ ಯೋಗವು ಧನ ಲಾಭ ತಂದಿದೆ. ನೀವು ನಿಮ್ಮ ಬದುಕಿನಲ್ಲಿ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಪ್ರಮುಖ ಯೋಜನೆ ನಿಮಗೆ ಆರ್ಥಿಕ ಲಾಭ ತರಲಿದೆ, ಆರ್ಥಿಕ ಸಮಸ್ಯೆವಿದ್ದರೆ ಅದೆಲ್ಲಾ ದೂರಾಗಲಿದೆ. ವ್ಯಾಪಾರಿಗಳು ತಮ್ಮ ನಿರೀಕ್ಷೆಗೆ ಮೀರಿದ ಆರ್ಥಿಕ ಲಾಭ ಪಡೆಯಬಹುದು.
ಧನು ರಾಶಿ
ಈ ಶಿವರಾತ್ರಿಯ ಬಳಿಕ ಧನು ರಾಶಿಯವರು ತಮ್ಮ ಬದುಕಿನಲ್ಲಿ ಅತ್ಯುತ್ತಮವಾದ ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಈಗ ಏನಾದರೂ ಆರ್ಥಿಕ ಸಮಸ್ಯೆ, ಕೆಲಸದಲ್ಲಿ ಅಡೆತಡೆ ಎದುರಿಸುತ್ತಿದ್ದರೆ ಅವೆಲ್ಲಾ ದೂರಾಗಲಿದೆ, ಪರಶಿವನ ವಿಶೇಷ ಕೃಪೆ ನಿಮ್ಮ
ಮೇಲೆ ಇರುವುದರಿಂದ ಇಟ್ಟ ಹೆಜ್ಜೆಯಲ್ಲಿ ಯಶಸ್ಸು ದೊರೆಯಲಿದೆ, ಹಣಕಾಸಿನ ಸ್ಥಿತಿಯಲ್ಲಿ ಅಭಿವೃದ್ಧಿ ಕಂಡು ಬರುವುದು.
ಮೀನ ರಾಶಿ
ಮೀನ ರಾಶಿಯವರಿಗೆ ಕೂಡ ಈ ವಿಶೇಷ ಯೋಗದಿಂದಾಗಿ ಧನ ಲಾಭ ಪಡೆಯುತ್ತೀರಿ, ಈ ಶಿವರಾತ್ರಿ ಬಳಿಕ ನಿಮ್ಮ ವೃತ್ತಿ ಬದುಕಿನಲ್ಲಿ ಬದಲಾವಣೆ ಕಾಣಬಹುದು, ಬಡ್ತಿ ನಿರೀಕ್ಷೆಯಲ್ಲಿದ್ದರೆ ಬಡ್ತಿ ಸಿಗಲಿದೆ, ಕೆಲಸ ಬದಲಾವಣೆಗೆ ಕೂಡ ಈ ಸಮಯ ಉತ್ತಮವಾಗಿದೆ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಪ್ರಯೋಜನ ಪಡೆಯುತ್ತೀರಿ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
