Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ 9ನೇ ದಿನ ಆಯುಧ ಪೂಜೆ ಹಾಗೂ ಸರಸ್ವತಿ ಒಟ್ಟಿಗೆ ಮಾಡುವುದೇಕೆ?
ನವರಾತ್ರಿ 9ನೇ ದಿನ ಸಿದ್ಧಿಧಾತ್ರಿಯ ದೇವಿಯ ಆರಾಧನೆ ಮಾಡಲಾಗುವುದು. ನವರಾತ್ರಿಯ ಕೊನೆಯ ದಿನ ಮನೆಗಳಲ್ಲಿ ಸರಸ್ವತಿ ಪೂಜೆ ಹಾಗೂ ಆಯುಧ ಪೂಜೆಯನ್ನು ಮಾಡಲಾಗುವುದು. ಈ ಎರಡೂ ಪೂಜೆಯೂ ಬದುಕಿನಲ್ಲಿ ಆಯುಧ ಹಾಗೂ ಜ್ಞಾನ ಅವಶ್ಯಕತೆ ತಿಳಿಸುತ್ತದೆ.
ಬರೀ ಆಯುಧ ಮಾತ್ರವಿದ್ದರೆ ಸಾಲದು ಜ್ಞಾನವೂ ಬೇಕು
ಆಯುಧವನ್ನು ಒಳ್ಳೆಯ ಕಾರ್ಯಕ್ಕೆ, ಪ್ರಗತಿಗೆ ಬಳಸಲು ಜ್ಞಾನ ಬೇಕು. ನಮ್ಮಲ್ಲಿ ಶಕ್ತಿ ಮಾತ್ರವಿದ್ದರೆ ಸಾಲದು ಯುಕ್ತಿಯೂ ಬೇಕು, ಆದರೆ ಮಾತ್ರ ಬದುಕಿನಲ್ಲಿ ಮೇಲೆ ಬರಲು ಸಾಧ್ಯ, ಅದರ ಮಹತ್ವವನ್ನು ಈ ಎರಡು ಪೂಜೆಗಳು ತಿಳಿಸಿಕೊಡುತ್ತದೆ.

ಆಯುಧ ಪೂಜೆಗೆ ಯಾವ ದೇವರನ್ನು ಪೂಜಿಸಲಾಗುವುದು?
ಆಯುಧ ಪೂಜೆಯಲ್ಲಿ ಸರಸ್ವತಿ, ಪಾರ್ವತಿ, ಲಕ್ಷ್ಮಿಯನ್ನು ಆರಾಧಿಸಲಾಗುವುದು. ಈ ದಿನ ಆಯುಧಗಳ ಜೊತೆ ಮಕ್ಕಳು ಓದುವ ಪುಸ್ತಕಗಳನ್ನು ಕೂಡ ಇಟ್ಟು ಪೂಜಿಸಿ. ಸರಸ್ವತಿ ಕೃಪೆಯಿಂದ ಮಕ್ಕಳಿಗೆ ವಿದ್ಯೆ, ಬುದ್ಧಿಯ ಸಿದ್ಧಿ ದೊರೆಯಲಿ.
ಈ ಆಚರಣೆಯ ಮಹತ್ವವೇನು?
ನಾವು ಯಾವ ವೃತ್ತಿ ಮಾಡುತ್ತಿದ್ದೇವೆ ಆ ವೃತ್ತಿಗೆ ಸಂಬಂಧಿಸಿದ ವಸ್ತುಗಳೇ ನಮ್ಮ ಕೆಲಸವನ್ನು ಮಾಡುವ ಆಯುಧವಾಗಿರುತ್ತದೆ. ಅದರಿಂದಲೇ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಲ್ಯಾಪ್‌ಟಾಪ್ ತಮ್ಮ ಆಯುಧವಾದರೆ ಡ್ರೈವಿಂಗ್ ಕೆಲಸ ಮಾಡುವವರಿಗೆ ಗಾಡಿಯೇ ಅವರ ಆಯುಧ. ನಮ್ಮ ಕೆಲಸವನ್ನು ಪ್ರತಿನಿಧಿಸುವ ವಸ್ತುಗಳನ್ನು ಇಟ್ಟು ಪೂಜಿಸಲಾಗುವುದು. ಈ ದಿನ ಸರಸ್ವತಿಗೂ ಪೂಜೆ ಸಲ್ಲಿಸಬೇಕು. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ವಿವೇಚನೆ ನೀಡುವುದೇ ಬುದ್ಧಿ, ಅದನ್ನು ನೀಡುವವಳೇ ಸರಸ್ವತಿ. ಆದ್ದರಿಂದ ಈ ದಿನ ಆಯುಧ ಪೂಜೆ, ಸರಸ್ವತಿ ಪೂಜೆ ಮಾಡಲಾಗುವುದು. ಈ ದಿನ ಸರಸ್ವತಿ ಪೂಜೆ ಮಾಡುವುದರಿಂದ ಮಕ್ಕಲ ಕಲಿಕೆಗೆ ಸಂಬಂಧಿಸಿದ ಅಡೆತಡೆಗಳು ದೂರಾಗುವುದು ಎಂದು ಹೇಳಲಾಗುವುದು.
ಯಾವ ಸಮಯಕ್ಕೆ ಪೂಜೆಯನ್ನ ಸಲ್ಲಿಸಬೇಕು?
ಈ ವರ್ಷ ಮಧ್ಯಾಹ್ನ 02:02ರಿಂದ 02:48ರವರೆಗೆ ಶುಭ ಮುಹೂರ್ತವಿದೆ, ಈ ಸಮಯದಲ್ಲಿ ಪೂಜೆಯನ್ನು ಸಲ್ಲಿಸಿ.
ಹೇಗೆ ಪೂಜಿಸಬೇಕು?
ಆಯುಧ ಪೂಜೆ ಹಾಗೂ ಸರಸ್ವತಿ ಪೂಜೆ ಮಾಡುವಾಗ ನೀವು ಸರಸ್ವತಿ ಹಾಗೂ ಪಾರ್ವತಿಯ ಪೋಟೋಗಳನ್ನು ಹಲಗೆ ಮೇಲೆ ಇಡಿ, ನಂತರ ಹೂಗಳಿಂದ ಅಲಂಕರಿಸಿ, ದೇವಿ ಫೋಟೋಗಳಿಗೆ ಕುಂಕುಮ ಹಚ್ಚಿ, ನಂತರ ನಿಮ್ಮ ಕೆಲಸದಲ್ಲಿ ಬಳಸುವ ಆಯುಧಗಳನ್ನು ಜೋಡಿಸಿ, ಪುಸ್ತಕ, ಪೆನ್ನುಗಳನ್ನು ಇಡಿ.
ನಂತರ ದೀಪ ಹಚ್ಚಿ, ಕರ್ಪೂರ ಬೆಳಗಿ, ಕುಂಬಳಕಾಯಿಗೆ ಕುಂಕುಮ ತುಂಬಿ ಅದನ್ನು ಗಾಡಿಗಳ ಮುಂದೆ ಒಡೆಯಿರಿ. ನಂತರ ತಯಾರಿಸಿದ ಅವಲಕ್ಕಿ ಅಥವಾ ಪುರಿ ಪ್ರಸಾದವನ್ನು ಮನೆಯವರಿಗೆ ಹಂಚಿ ಸವಿಯಿರಿ.
ಸಿದ್ಧಿಧಾತ್ರಿಯ ಈ ಮಂತ್ರಗಳನ್ನು ಪಠಿಸಿ
ಓಂ ದೇವಿ ಸಿದ್ಧಿಧಾತ್ರಿಯೈ ನಮಃ
ಓಂ ದೇವಿ ಸಿದ್ಧಿಧಾತ್ರಿಯೈ ನಮಃ
ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ
ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ
ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ
ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ
ಸಿದ್ಧಿಧಾತ್ರಿ ದೇವಿಯ ಸ್ತುತಿ
ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications









