ಶುಕ್ರ ರಾಶಿಯಲ್ಲಿ ಶುಕ್ರ ಗೋಚಾರ ಫಲ: ದ್ವಾದಶ ರಾಶಿಗಳ ಮೇಲೆ ಈ ಸಂಚಾರದ ಪ್ರಭಾವ ಹೇಗಿರಲಿದೆ?

ಶುಕ್ರ ಜನವರಿ 18ಕ್ಕೆ ಧನುರಾಶಿಗೆ ಸಂಚರಿಸಿದೆ. ಈ ಶುಕ್ರ ಸಂಚಾರ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಿದರೆ ಇನ್ನು ಕೆಲವು ರಾಶಿಯವರು ಈ ಅವಧಿಯಲ್ಲಿ ಜಾಗ್ರತೆವಹಿಸಿ. ಬನ್ನಿ ಈ ಶುಕ್ರ ಸಂಚಾರ ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ಶುಕ್ರನ ಈ ಸಂಚಾರದ ಪರಿಣಾಮವಾಗಿ ಶಿಕ್ಷಕರು, ಸಲಹೆಗಾರರು ಮತ್ತು ಸಮಾಲೋಚನೆಯ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಗಳಿಂದಾಗಿ, ನೀವು ಬಯಸಿದ ಖ್ಯಾತಿಯನ್ನು ಸಾಧಿಸುವಿರಿ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಪ್ರತಿಫಲವನ್ನು ಪಡೆಯುತ್ತೀರಿ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿರುವವರಿಗೆ ಈ ಸಮಯದಲ್ಲಿ ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯುತ್ತೀರಿ.

Shukra Gochar In Dhanu Rashi

ವೃಷಭ ರಾಶಿ
ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ನಿಮಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ಕೆಲವೊಂದು ಹಠಾತ್‌ ಘಟನೆ ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು. ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ನಿರ್ಮಿಸಲು ಮಾತ್ರ ನೀವು ಪ್ರಯತ್ನಿಸಬಹುದು.

ಮಿಥುನ ರಾಶಿ
ಸ್ವಯಂ ಉದ್ಯೋಗ ಮಾಡುವವರು ಈ ಅವಧಿಯಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ವ್ಯಾಪಾರಿಗಳಿಗೆ ಈ ಅವಧಿ ಉತ್ತಮ. ನೀವು ನಿಮ್ಮ ಗುರಿ ಸಾಧನೆ ಕಡೆಗೆ ಗಮನಹರಿಸಿ.

ಕರ್ಕ ರಾಶಿ
ಆರೋಗ್ಯ ವಿಷಯದಲ್ಲಿ ಈ ಅವಧಿ ಅನುಕೂಲಕರವಲ್ಲ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಹೊಸ ಅವಕಾಶವನ್ನು ಹುಡುಕುತ್ತಿದ್ದರೆ, ಈ ಸಮಯವು ಬದಲಾವಣೆಗಳಿಗೆ ಮಂಗಳಕರವಾಗಿರುವುದಿಲ್ಲ. ಈ ಸವಾಲುಗಳನ್ನು ಎದುರಿಸಲು ನೀವು ಮಾನಸಿಕವಾಗಿ ಸಿದ್ಧರಾಗಿರಲು ಸಲಹೆ ನೀಡಲಾಗುವುದು.

ಸಿಂಹ ರಾಶಿ
ಈ ಅವಧಿಯಲ್ಲಿ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಉತ್ತಮ ಅವಕಾಶವನ್ನು ಪಡೆಯುತ್ತೀರಿ. ಅದು ನಿಮ್ಮ ವ್ಯಾಪಾರ ಅಥವಾ ಉದ್ಯೋಗವಾಗಿರಲಿ, ಈ ಅವಧಿ ನಿಮಗೆ ಉತ್ತಮವಾಗಿದೆ. ಧನು ರಾಶಿಯಲ್ಲಿ ಶುಕ್ರನ ಸಂಚಾರವು ನಿಮ್ಮ ವೃತ್ತಿ ಮತ್ತು ವೈಯಕ್ತಿಕ ವಿಷಯಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

ಕನ್ಯಾ ರಾಶಿ
ಸ್ವ ಉದ್ಯೋಗ ಮಾಡುತ್ತಿದ್ದರೆ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸ ಮತ್ತು ಕಠಿಣ ಪರಿಶ್ರಮವನ್ನು ಮೆಚ್ಚುತ್ತಾರೆ. ನಿಮ್ಮ ವೃತ್ತಿಜೀವನವು ವೇಗವಾಗಿ ಪ್ರಗತಿ ಹೊಂದುವುದನ್ನು ಕಾಣಬಹುದು.

ತುಲಾ ರಾಶಿ
ನಿಮ್ಮ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.ಈ ಸಮಯವು ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಧನಾತ್ಮಕವಾಗಿರುತ್ತದೆ.

ವೃಶ್ಚಿಕ ರಾಶಿ
ಈ ಸಂಚಾರ ನಿಮ್ಮ ಆರ್ಥಿಕ ಜೀವನಕ್ಕೆ ಉತ್ತಮವಾಗಿದೆ. ಶುಕ್ರ ಸಂಚಾರದ ಸಮಯದಲ್ಲಿ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸಿದರೆ, ಅದು ನಿಮಗೆ ಲಾಭದಾಯಕ. ನಿಮ್ಮ ಖ್ಯಾತಿಯು ಹೆಚ್ಚಾಗುತ್ತದೆ, ನಿಮ್ಮ ಆರ್ಥಿಕ ಜೀವನದಲ್ಲಿ ನೀವು ಸ್ಥಿರತೆಯನ್ನು ಪಡೆಯುತ್ತೀರಿ. ನಿಮ್ಮ ಕುಟುಂಬ ಸದಸ್ಯರಿಂದ ನೀವು ಆರ್ಥಿಕ ಬೆಂಬಲವನ್ನು ಪಡೆಯುತ್ತೀರಿ.

ಧನು ರಾಶಿ
ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಬಹುದು, ಉದ್ಯೋಗಿಗಳಿಗೆ, ಸ್ವಯಂ ಉದ್ಯೋಗ ಮಾಡುವವರಿಗೆ, ಉದ್ಯಮಿಗಳಿಗೆ ಖ್ಯಾತಿ ಮಾತ್ರವಲ್ಲದೆ ಹೆಚ್ಚಿನ ಲಾಭವೂ ಸಿಗುತ್ತದೆ. ಈ ಅವಧಿ ನಿಮಗೆ ಅನುಕೂಲಕರವಾಗಿದೆ.

ಮಕರ ರಾಶಿ
ಈ ಸಂಚಾರ ಮಕರ ರಾಶಿಯವರಿಗೆ ನಷ್ಟಗಳು, ವೆಚ್ಚಗಳನ್ನು ಸೂಚಿಸುತ್ತದೆ. ಕೆಲವೊಮ್ಮೆ ನೀವು ಹಣಕಾಸಿನ ಲಾಭವನ್ನು ಪಡೆಯುತ್ತೀರಿ, ಆದರೆ ನೀವು ನಿಮ್ಮ ಖರ್ಚುಗಳ ಮೇಲೆ ಕಣ್ಣಿಡಬೇಕು , ಯೋಚಿಸಿ ಖರ್ಚು ಮಾಡಬೇಕು. ನೀವು ಆಮದು ಮತ್ತು ರಫ್ತು ವ್ಯವಹಾರವನ್ನು ಮಾಡಿದರೆ, ನೀವು ಕೆಲವು ಸಮಯದಲ್ಲಿ ಲಾಭವನ್ನು ಪಡೆಯುತ್ತೀರಿ.

ಕುಂಭ ರಾಶಿ
ಈ ಸಮಯದಲ್ಲಿ, ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ, ವಿಶೇಷವಾಗಿ ನಿಮ್ಮ ವೃತ್ತಿಪರ ಜೀವನದಲ್ಲಿ, ನೀವು ಅಪಾರ ಖ್ಯಾತಿಯನ್ನು ಪಡೆಯುತ್ತೀರಿ. ನೀವು ಭೌತಿಕ ಸೌಕರ್ಯಗಳನ್ನು ಆನಂದಿಸುತ್ತೀರಿ. ದೀರ್ಘಾವಧಿಯ ಹೂಡಿಕೆಗಳನ್ನು ಮಾಡಲು ಯೋಚಿಸಿದರೆ ಈ ಅವಧಿ ಒಳ್ಳೆಯದಿದೆ. ಈ ಅವಧಿ ನಿಮ್ಮ ಸಂಬಂಧದ ವಿಷಯದಲ್ಲಿಯೂ ಉತ್ತಮವಾಗಿದೆ.

ಮೀನ ರಾಶಿ
ಮೀನ ರಾಶಿಯವರಿಗೆ ಈ ಸಾಗಣೆಯು ಅನುಕೂಲಕರವಾಗಿದೆ. ನಿಮ್ಮ ಕೆಲಸದಲ್ಲಿ ನೀವು ಹೆಚ್ಚು ಸೃಜನಶೀಲರಾಗಿರುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ದಣಿವರಿಯದ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ, ನಿಮ್ಮ ಪ್ರಮುಖ ಯೋಜನೆಗಳಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ, ಆದರೆ ಅದನ್ನು ನೀವು ರಹಸ್ಯವಾಗಿಡಬೇಕು, ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ನೀವು ಮೋಸ ಹೋಗಬಹುದು.

ಪರಿಹಾರ:ಶುಕ್ರ ಬೀಜ ಮಂತ್ರ ಪಠಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Shukra Gochar In Dhanu Rashi 2024: Effects On 12 Zodiac Signs In Kannada

Shukra Gochar In Dhanu Rashi 2024: How it affects on 12 zodiac signs read on...
Story first published: Thursday, January 18, 2024, 20:32 [IST]
X
Desktop Bottom Promotion