Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಏಪ್ರಿಲ್ 6ಕ್ಕೆ ಶನಿ ತ್ರಯೋದಶಿ: ಈ ದಿನ ಸಂಜೆ ಶುಕ್ಲ ಯೋಗ, ಈ ಕಾರ್ಯ ಮಾಡಿದರೆ ತುಂಬಾ ಒಳ್ಳೆಯದು
ಶನಿಯು ಕರ್ಮಕ್ಕೆ ತಕ್ಕ ಫಲ ನೀಡುವ ಗ್ರಹವಾಗಿದೆ. ಇಂದು ಅಂದರೆ ಏಪ್ರಿಲ್ 06, 2024ಕ್ಕೆ ಶನಿ ತ್ರಯೋದಶಿ. ಪ್ರದೋಷ ಪೂಜೆಯ ಶುಭ ಸಮಯವು ಏಪ್ರಿಲ್ 06 ರಂದು ಸಂಜೆ 06:42 ರಿಂದ ರಾತ್ರಿ 08:58 ರವರೆಗೆ ಇರುತ್ತದೆ. ಪೂಜೆಯ ಸಮಯ ಎರಡು ಗಂಟೆ 16 ನಿಮಿಷಗಳು. ತ್ರಯೋದಶಿ ತಿಥಿಯು ಏಪ್ರಿಲ್ 06 ರಂದು ಬೆಳಗ್ಗೆ 10:21 ರಿಂದ ಪ್ರಾರಂಭವಾಗಿ ಏಪ್ರಿಲ್ 07 ರಂದು ಬೆಳಗ್ಗೆ 06:56 ಕ್ಕೆ ಮುಕ್ತಾಯವಾಗಲಿದೆ.

ಈ ಸಮಯ ಅತ್ಯಂತ ಮಂಗಳಕರವಾಗಿದೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಪ್ರಮುಖವಾದ ಶನಿ ತ್ರಯೋದಶಿಯ ದಿನದಂದು ಏಪ್ರಿಲ್ 6 ರಂದು ಶುಭ ಯೋಗವು ರೂಪುಗೊಳ್ಳುತ್ತಿದೆ. 27 ಯೋಗಗಳಲ್ಲಿ, ಶುಭ ಯೋಗವು 23 ನೇ ಸ್ಥಾನದಲ್ಲಿದೆ. ಇದೊಂದು ಪವಿತ್ರವಾದ ಮತ್ತು ಮಂಗಳಕರವಾದ ಯೋಗವಾಗಿದ್ದು ಈ ಯೋಗದಲ್ಲಿ ಏನಾದರ ಆರ್ಥಿಕ ಲಾಭವನ್ನು ನೀಡುತ್ತದೆ. ಈ ಯೋಗದಲ್ಲಿ ಪ್ರಾರಂಭಿಸಿದ ಕೆಲಸವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಈ ಶುಕ್ಲ ಯೋಗದಲ್ಲಿ ಜನಿಸಿದವರು ಪ್ರಾಮಾಣಿಕರು ಮತ್ತು ಬುದ್ಧಿವಂತರಾಗುತ್ತಾರೆ ಎಂದು ಹೇಳಲಾಗುವುದು.
ಶನಿ ತ್ರಯೋದಶಿ 2024 ರ ಮಹತ್ವ
ಶನಿಯನ್ನು ಪೂಜಿಸಲು ಈ ದಿನವನ್ನು ಅತ್ಯಂತ ಮಂಗಳಕರವೆಂದು ಹೇಳಲಾಗುವುದು.
ಶನಿ ತ್ರಯೋದಶಿಯಂದು ಏನು ಮಾಡಬೇಕು?
ಶನಿದೇವನ ದುಷ್ಪರಿಣಾಮಗಳನ್ನು ತಪ್ಪಿಸಲು ಈ ತ್ರಯೋದಶಿಯಂದು ಶನಿದೇವನನ್ನು ಆರಾಧಿಸಿ.
ಈ ದಿನದಂದು ಭಕ್ತರು ಉಪವಾಸವಿದ್ದು ಶನಿದೇವನ ಆಶೀರ್ವಾದ ಮಾಡಿ
ಶನಿ ತ್ರಯೋದಶಿಯಂದು ಶನಿ ದೋಷ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.
ಈ ದಿನ ನೀವು ಬಡವರಿಗೆ ಕಪ್ಪು ಬಣ್ಣದ ಬಟ್ಟೆಗಳನ್ನು ದಾನ ಮಾಡಿ.
ಶನಿ ತ್ರಯೋದಶಿ 2024 ರ ಪೂಜೆಯಿಂದ ಏನು ಪ್ರಯೋಜನಗಳು?
ಈ ವಿಶೇಷ ದಿನಾಂಕದಂದು ಶನಿದೇವನನ್ನು ಪೂಜಿಸುವುದರಿಂದ ಪಾಪಗಳಿಂದ ಮುಕ್ತಿ ದೊರೆಯುತ್ತದೆ, ಕಷ್ಟಗಳು ದೂರಾಗುವುದು. ಈ ದಿನದಂದು ಶನಿಯ ಪೂಜೆ ಮಾಡುವವರು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಪಡೆಯುತ್ತಾರೆ ಎಂದು ನಂಬಲಾಗುವುದು.
ಈ ಮಂತ್ರಗಳನ್ನು ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
' ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ
ಶನಿದೋಷ, ಶಿನಿ ಧೈಯ್ಯ ಇರುವವರು ಶನಿಯ ಕೆಟ್ಟ ಪರಿಣಾಮ ಕಡಿಮೆ ಮಾಡಲು ಏನು ಮಾಡಬೇಕು?
ಶನಿವಾರ ಉಪವಾಸವಿದ್ದು, ಸಂಜೆ ಸೂರ್ಯಾಸ್ತದ ಬಳಿಕ ಅಕ್ಕಿ ಮತ್ತು ಕಪ್ಪು ಉದ್ದಿನಿಂದ ಮಾಡಿರುವ ಕಿಚಡಿ ಸೇವಿಸಬೇಕು.
ನೀಲಮಣಿ ಧರಿಸಿ.
14 ಮುಖಿ ರುದ್ರಾಕ್ಷಿ ಅಥವಾ ಸಪ್ತಮುಖಿ ರುದ್ರಾಕ್ಷಿಯ ಮಾಲೆ ಧರಿಸಿ ಅಥವಾ 36 ಮುಖಿ ಮಣಿ ಇರುವಂತಹ ಶನಿಮಾಲೆ ಧರಿಸಿ.
ಶನಿವಾರ ಹನುಮಾನ್ ಚಾಲೀಸ ಪಠಿಸಿ. ಹನುಮಂತನನ್ನು ಪ್ರತಿನಿತ್ಯ ಪೂಜಿಸಿ, ಅದರಲ್ಲೂ ಮಂಗಳವಾರ ಪಹನುಮಂತನ ದೇವಾಲಯಕ್ಕೆ ಹೋಗಿ ಹನುಮಂತನಿಗೆ ಪ್ರಸಾದ ಅರ್ಪಿಸಿ.
ನ್ಯಾಯಯುತವಾಗಿ ನಡೆದುಕೊಂಡರೆ ಶನಿಯ ಕೃಪೆಗೆ ಪಾತ್ರರಾಗುತ್ತೇವೆ, ಇಲ್ಲಾಂದ್ರೆ ಶನಿ ನೀಡುವ ಕಠೋರ ಪರೀಕ್ಷೆ ಜೀವನದಲ್ಲಿ ಹಲವು ಸಂಕಷ್ಟ ತರುವುದು, ಹಾಗಾಗಿ ಶನಿ ದೇವನ ಕೆಟ್ಟ ಪ್ರಭಾವಕ್ಕೆ ಜನ ಭಯಪಡುತ್ತಾರೆ. ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ, ಬಡವರಿಗೆ ದಾನ ಮಾಡುವುದರಿಂದ , ನಿರ್ಗತಿಕರನ್ನು ನೋಡಿಕೊಳ್ಳುವುದರಿಂದ ಶನಿ ಕೃಪೆಗೆ ಪಾತ್ರರಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications