ಕುಂಭ ರಾಶಿಯಲ್ಲಿ ಶನಿ ಮಾರ್ಗಿ: ಈ 5 ರಾಶಿಗಳ ಮೇಲೆ ಮಾರ್ಚ್‌ 29ರವರೆಗೆ ಇದೆ ಋಣಾತ್ಮಕ ಪ್ರಭಾವ, ಜಾಗ್ರತೆ ಒಳ್ಳೆಯದು

ಶನಿಯು 139 ದಿನಗಳ ಹಿಮ್ಮುಖ ಚಲನೆಯಲ್ಲಿತ್ತು, ನವೆಂಬರ್ 15ರಿಂದ ನೇರ ಚಲನೆ ಮಾಡಲಾರಂಭಿಸಿದೆ, ಶನಿಯು ಮಾರ್ಚ್‌ 29ರವರಗೆ ಕುಂಭ ರಾಶಿಯಲ್ಲಿ ನೇರ ಸಂಚಾರ ಮಾಡುತ್ತಿದೆ. ಆ ಬಳಿಕ ಶನಿಯು ಮೀನ ರಾಶಿಗೆ ಸಂಚರಿಸುತ್ತದೆ, ಮತ್ತೆ ಎರಡೂವರೆ ವರ್ಷದ ಕಾಲ ಮೀನ ರಾಶಿಯಲ್ಲಿ ಇರಲಿದೆ.

ಶನಿಯು ಕುಂಭ ರಾಶಿಯಲ್ಲಿ ಇನ್ನು ನಾಲ್ಕು ತಿಂಗಳು ಇರಲಿದ್ದು, ಶನಿಯು ಕುಂಭ ರಾಶಿಯಲ್ಲಿ ನೇರ ಸಂಚಾರದಲ್ಲಿ ಇರುವ ಸಮಯ ಈ ರಾಶಿಯವರು ಹೆಚ್ಚಿನ ಜಾಗ್ರತೆವಹಿಸಬೇಕು.

Shani Margi In Kumba

ಕರ್ಕ ರಾಶಿ:

ಶನಿಯು ನೇರ ಸಂಚಾರದಲ್ಲಿರುವುದರಿಂದ ಕರ್ಕ ರಾಶಿಯವರು ಜಾಗ್ರತೆವಹಿಸಬೇಕು, ಈ ಅವಧಿಯಲ್ಲಿ ಆರೋಗ್ಯ ಸಂಬಮಧಿತ ಸಮಸ್ಯೆ ಬರಬಹುದು, ಕೆಲಸದಲ್ಲಿ ತುಂಬಾನೇ ಒತ್ತಡವಿರಬಹುದು, ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ, ಹಣಕಾಸಿನ ವಿಷಯದಲ್ಲಿಯೂ ತುಂಬಾನೇ ಜಾಗ್ತೆವಹಿಸಬೇಕು. ಅಲ್ಲದೆ ಈ ಅವಧಿಯಲ್ಲ ನೀವು ಯಾವುದೇ ರೀತಿಯ ವಿವಾದಗಳಿಂದ ದೂರವಿರುವುದು ಒಳ್ಳೆಯದು. ಹಣವನ್ನು ಬಜೆಟ್‌ ಪ್ರಕಾರ ಮಾಡಿ, ಅತಿಯಾದ ಖರ್ಚು ಆರ್ಥಿಕ ಸಂಕಷ್ಟ ತಂದೊಡ್ಡಬಹುದು.

ಸಿಂಹ ರಾಶಿ

ಶನಿಯು ನೇರ ಸಂಚಾರ ಮಾಡುತ್ತಿರುವುದರಿಂದ ಶನಿ ಕೆಟ್ಟ ದೃಷ್ಟಿ ಸಿಂಹ ರಾಶಿಯವರ ಮೇಲೂ ಇರಲಿದೆ. ಈ ಅವಧಿಯಲ್ಲಿ ನಮ್ಮ ಕೆಲಸಗಳಿಗೆ ಫಲ ಸಿಗುವುದು ವಿಳಂಬವಾಗಬಹುದು. ವೈವಾಹಿಕ ಜೀವನದಲ್ಲಿಯೂ ಏರಳಿತವಿರಬಹುದು. ಅವಾಹಿತರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಇನ್ನೂ ಸ್ವಲ್ಪ ಕಾಯುವಂತೆ ಸಲಹೆ ನೀಡಲಾಗುವುದು. ಹಣದ ವಿಷಯದಲ್ಲಿ ಜಾಗ್ರತೆವಹಿಸಿ. ಅನ್ಗಯತ ಖರ್ಚುಗಳಿಂದ ದೂರವಿರಿ. ಬಜೆಟ್‌ ಪ್ರಕಾರ ಹಣ ಖರ್ಚು ಮಾಡಿದರೆ ಒಳ್ಳೆಯದು.


ಮಕರ ರಾಶಿ

ಶನಿಯು ಮಾರ್ಗಿಯಾಗಿರುವ ಈ ಸಂದರ್ಭದಲ್ಲಿ ಮಕರ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕು, ಮಕರ ರಾಶಿಯವರು ಈ ಅವಧಿಯಲ್ಲಿ ಯಾವುದೇ ಹಣದ ವ್ಯವಹಾರ ಮಾಡಲು ಹೋಗಬೇಡಿ. ಅಲ್ಲದೆ ಈ ಅವಧಿಯಲ್ಲಿ ಸಾಲ ಕೊಡುವುದು ಕೂಡ ಮಾಡಬೇಡಿ. ಕೆಲಸದಲ್ಲಿ ಹೆಚ್ಚಿನ ಜಾಗ್ರತೆವಹಿಸಬೇಕು.

ಕುಂಭ ರಾಶಿ

ಕುಂಭ ರಾಶಿಯವರಲ್ಲಿಯೂ ಶನಿ ಸಾಡೇಸಾತಿ ನಡೆಯುತ್ತಿದೆ, ಹಾಗಾಗಿ ಶನಿಯ ಋಣಾತ್ಮಕ ಪ್ರಭಾವ ಇರಲಿದೆ, ವೃತ್ತಿ ಬದುಕಿನಲ್ಲಿ ಅಭದ್ರತೆ ಕಾಡಬಹುದು, ಕೆಲಸದಲ್ಲಿ ಹೆಚ್ಚಿನ ಗಮನಹರಿಸುವುದು ಒಳ್ಳೆಯದು, ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.

ಮೀನ ರಾಶಿ

ಶನಿಯು ಮಾರ್ಗಿಯಾಗಿ ಚಲಿಸಲಾರಂಭಿಸಿದ ಈ ಅವಧಿ ಮೀನ ರಾಶಿಯವರಿಗೆ ಅನುಕೂಲಕರವಲ್ಲ, ಮೀನ ರಾಶಿಯವರು ವೃತ್ತಿ ಬದುಕಿನಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಹಣದ ಖರ್ಚು ಹೆಚ್ಚಿರಬಹುದು, ಬಜೆಟ್‌ ಪ್ರಕಾರ ಹಣ ಖರ್ಚು ಮಾಡಿ. ನೀವು ವೈಯಕ್ತಿಕ ಜೀವನದ ಕಡೆಯೂ ಹೆಚ್ಚಿನ ಗಮನಹರಿಸಬೇಕು, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗದಂತೆ ಜಾಗ್ರತೆವಹಿಸಿ.

ಪರಿಹಾರವೇನು?

  • ಪ್ರತಿದಿನ ಹನುಮಾನ ಚಾಲೀಸ ಪಠಿಸಿ
  • ಶನಿವಾರದ ಶನಿ ದೇವಾಲಯಕ್ಕೆ ಭೇಟಿ ನೀಡಿ ಎಣ್ಣೆಯನ್ನು ದಾನ ಮಾಡಿ
  • ಶನಿ ಮಂತ್ರ ಪಠಿಸಿ
  • ಕಪ್ಪು ಬಟ್ಟೆಗಳನ್ನು ದಾನ ಮಾಡಿ
  • ನಿರ್ಗತಿಕರಿಗೆ ಎಳ್ಳು ಜೊತೆಗೆ ಆಹಾರ ದಾನ ಮಾಡಿ.

ಶನಿಯು ಕರ್ಮದ ಫಲ ನೀಡುವ ದೇವರು ಹಾಗಾಗಿ ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಒಳ್ಳೆಯ ಕೆಲಸವನ್ನು ಮಾಡಿ ಮಾಡಿ, ಇದರಿಂದ ಶನಿಯ ಕೆಟ್ಟ ಪರಿಣಾಮ ಕಡಿಮೆಯಾಗಲಿದೆ. ಅಲ್ಲದೆ ಶನಿವಾರ ರುದ್ರಾಭಿಷೇಕ ಪೂಜೆ ಮಾಡುವುದು ಕೂಡ ಒಳ್ಳೆಯದು. ರುದ್ರಾಭಿಷೇಕ ಪೂಜೆ ಮಾಡುವುದರಿಂದ ಶಿವನ ಕೃಪೆಯಿಂದ ಕಷ್ಟಗಳು ಕಡಿಮೆಯಾಗಲಿದೆ.

ಕೋಪ ಹೆಚ್ಚಿನ ಆಪತ್ತು ತರುತ್ತದೆ, ಕೋಪ ನಿಯಂತ್ರಣಕ್ಕೆ ಧ್ಯಾನದ ಕಡೆಗೆ ಗಮನಹರಿಸಿ, ಆಧ್ಯಾತ್ಮಿಕ ಕಾರ್ಯಗಳತ್ತ ಗಮನಹರಿಸುವುದು ಒಳ್ಳೆಯದು. ಹನುಂತನ ಮಂತ್ರ ಪ್ರತಿದಿನ ಫಠನೆ ಮಾಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Thursday, November 21, 2024, 18:38 [IST]
X
Desktop Bottom Promotion