ಕುಂಭದಲ್ಲಿ ಮಾರ್ಗಿಯಾಗುವ ಶನಿ: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?

ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರುವ ಶನಿ ನವೆಂಬರ್ 4ಕ್ಕೆ ಮಾರ್ಗಿಯಾಗಿ ಚಲಿಸಲಿದೆ. ಶನಿ ತುಂಬಾ ಪ್ರಮುಖ ಗ್ರಹವಾಗಿದ್ದು ಶನಿಯ ಕೆಟ್ಟ ಪ್ರಭಾವದ
ಬಗ್ಗೆ ಜನರು ತುಂಬಾನೇ ಭಯ ಪಡುತ್ತಾರೆ.

ಯಾಕೆಂದರೆ ಶನಿಯ ಪ್ರಭಾವ ಆ ರೀತಿಯಿರುತ್ತದೆ. ಶನಿಯು ಹಿಮ್ಮುಖ ಚಲನೆಯಲ್ಲಿದ್ದಾಗ ಕೆಲವು ರಾಶಿಯವರು ಕಷ್ಟಗಳನ್ನು ಅನುಭವಿಸಿದ್ದರು, ಶನಿಯು ಮಾರ್ಗಿಯಾದಾಗ ಆ ರಾಶಿಯವರಿಗೆ ಪರಿಹಾರ ಸಿಗಲಿದೆ. ಅಲ್ಲದೆ ಶನಿ ಮಾರ್ಗಿಯಾದಾಗ ಕೆಲವು ರಾಶಿಯವರಿಗೆ ಒಳಿತಾದರೆ ಇನ್ನು ಕೆಲವು ರಾಶಿಯವರಿಗೆ ಶನಿಯ ದೆಸೆಯಿಂದ ಕೆಲ ಸಮಸ್ಯೆಗಳು ಬರುವುದು.

ಶನಿ ಮಾರ್ಗಿಯಾದಾಗ ಯಾವ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ, ಶನಿಯ ದೋಷಕ್ಕೆ ಪರಿಹಾರವೇನು ಎಂದು ನೋಡೋಣ ಬನ್ನಿ:

Saturn Direct In Aquarius 2023

ಮೇಷ ರಾಶಿ
ಮೇಷ ರಾಶಿಯವರಲ್ಲಿ ಶನಿಯು 11ನೇ ಮನೆಯಲ್ಲಿ ಮಾರ್ಗಿಯಾಗಿ ಸಂಚರಿಸಲಿದೆ. ಕುಂಭ ರಾಶಿಯಲ್ಲಿ ಶನಿಯು ಮಾರ್ಗಿಯಾದಾಗ ನೀವು ತೆಗೆದುಕೊಳ್ಳುವ ನಿರ್ಧಾರಗಳು ಸ್ಪಷ್ಟವಾಗಿರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಸ್ಪಷ್ಟತೆಯನ್ನು ಅನುಭವಿಸುವಿರಿ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಈ ಸಂಚಾರ ಒಳಿತು ಮಾಡಲಿದೆ. ಈ ಅವಧಿ ವ್ಯಾಪಾರದಲ್ಲಿ ಲಾಭ ಕಾಣುವಿರಿ. ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ಸಾಧಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.

ಹಣಕಾಸಿನ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ನೀವು ಹೆಚ್ಚಿನ ಹಣ ಗಳಿಸುತ್ತೀರಿ. ಕುಟುಂಬ ಜೀವನದಲ್ಲಿ ಒಳ್ಳೆಯ ವಾತಾವರಣ ಇರಲಿದೆ. ನಿಮ್ಮ ಆರೋಗ್ಯ ಉತ್ತಮವಾಗುವುದು. ಉತ್ತಮ ಆಹಾರಕ್ರಮ, ಧ್ಯಾನದ ಕಡೆ ಗಮನಹರಿಸಿ.
ಪರಿಹಾರ: ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಿರಿ

ವೃಷಭ ರಾಶಿ
ವೃಷಭ ರಾಶಿಯಲ್ಲಿ ಶನಿಯು 10ನೇ ಮನೆಯಲ್ಲಿದೆ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ನೀವು ಉತ್ತಮ ತೃಪ್ತಿಯನ್ನು ಪಡೆಯುತ್ತೀರಿ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಪಡೆಯುತ್ತೀರಿ. ಹೊಸ ಉದ್ಯಮದಲ್ಲಿ ನೀವು ಅಭಿವೃದ್ಧಿ ಪಡೆಯುತ್ತೀರಿ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ನಿಮಗೆ ಹಣ ಉಳಿಸಲು ಸಾಧ್ಯವಾಗುವುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಪರಿಹಾರ: ಪ್ರತಿದಿನ 33 ಬಾರಿ 'ಓಂ ಭಾರ್ಗವಾಯ ನಮಃ' ಜಪಿಸಿ.

ಮಿಥುನ ರಾಶಿ
ಮಿಥುನ ರಾಶಿಯಲ್ಲಿ 9ನೇ ಮನೆಯಲ್ಲಿ ಇರಲಿದೆ. ತಂದೆಯ ಆರೋಗ್ಯಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು . ಕುಂಭ ರಾಶಿಯಲ್ಲಿ ಶನಿಯ ನೇರ ಸಂಚಾರದ ಸಮಯದಲ್ಲಿ, ನಿಮ್ಮ ಜೀವನದಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಹೆಚ್ಚಿನ ಲಾಭಗಳನ್ನು ಪಡೆಯಲು ನೀವು ಸರಿಯಾದ ಯೋಜನೆಯನ್ನು ಮಾಡಬೇಕಾಗುತ್ತದೆ. ಆದರೆ ಚಿಂತಿಸಬೇಡಿ, ಕಠಿಣ ಪರಿಶ್ರಮದಿಂದ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ, ವ್ಯಾಪಾರಸ್ಥರು ಈ ಅವಧಿಯಲ್ಲಿ ಜಾಗ್ರತೆವಹಿಸಿ.
ಅಹಂನಿಂದಾಗಿ ಕುಟುಂಬದಲ್ಲಿ ಸಮಸ್ಯೆ ಉಂಟಾಗಬಹುದು. ನಿಮ್ಮ ಸಂಬಂಧದಲ್ಲಿ ಸಂತೋಷವನ್ನು ಮರಳಿ ತರಲು ಸಾಧ್ಯವಾದಷ್ಟು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಕೆಲವೊಂದು ಆರೋಗ್ಯ ಸಮಸ್ಯೆ ಕಾಡಬಹುದು.
ಪರಿಹಾರ: ಪ್ರತಿದಿನ 41 ಬಾರಿ 'ಓಂ ಬುಧಾಯ ನಮಃ' ಜಪಿಸಿ.

ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಶನಿ 8ನೇ ಮನೆಯಲ್ಲಿ ಇರಲಿದೆ. ಶನಿಯ ಈ ಬದಲಾವಣೆ ಆರ್ಥಿಕ ಸಮಸ್ಯೆ ತರಬಹುದು. ವೃತ್ತಿ ಜೀವನದಲ್ಲಿ ಒತ್ತಡ ಇರಲಿದೆ. ಕೆಲಸ ಬದಲಾಯಿಸಲು ನೀವು ಯೋಚಿಸಬಹುದು. ವ್ಯಾಪಾರಸ್ಥರು ತುಂಬಾ ಕಠಿಣ ಸ್ಪರ್ಧೆ ಎದುರಿಸಬಹುದು. ಶನಿಯ ಈ ಸಂಚಾರದ ಅವಧಿಯಲ್ಲಿ ಸಾಲವನ್ನು ಮಾಡಬಹುದು.
ನಿಮಗೆ ಬರಬೇಕಾಗಿರುವ ಹಣವನ್ನು ಪಡೆಯುವಲ್ಲಿ ಸ್ವಲ್ಪ ವಿಳಂಬವಾಗಬಹುದು. ಕುಟುಂಬದಲ್ಲಿ ಕೆಲ ಸಮಸ್ಯೆಗಳಿರಬಹುದು, ಆರೋಗ್ಯದ ಕಡೆಯೂ ಗಮನಹರಿಸಬೇಕು.
ಪರಿಹಾರ: ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿ

ಸಿಂಹ ರಾಶಿ
ಸಿಂಹ ರಾಶಿಯವರಲ್ಲಿ ಶನಿಯು 7ನೇ ಮನೆಯಲ್ಲಿ ಇರಲಿದೆ. ಶನಿಯ ಈ ಸಂಚಾರದಿಂದ ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿಯೂ ಕೆಲವು ದೊಡ್ಡ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಕೆಲಸವನ್ನು ತಕ್ಷಣವೇ ಬದಲಾಯಿಸುವುದು ಅಷ್ಟು ಸುಲಭವಲ್ಲ. ವ್ಯಾಪಾರಸ್ಥರು ಊಹಿಸಿದ ಲಾಭ ಪಡೆಯುವುದಿಲ್ಲ. ಈ ಅವಧಿಯಲ್ಲಿ, ಪಾಲುದಾರಿಕೆಯಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹಣಕಾಸಿನ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ನೀವು ಪ್ರಯಾಣದ ಸಮಯದಲ್ಲಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು. ಶನಿ ಮಾರ್ಗಿಯಾಗಿರುವ ಈ ಸಮಯದಲ್ಲಿ ನಿಮ್ಮ ಸಂಗಾತಿಯ ಆರೋಗ್ಯಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು. ನೀವು ಯಾರಿಗೂ ಸಾಲ ನೀಡದಿರುವುದು ಒಳ್ಳೆಯದು. ಸಂಬಂಧದಲ್ಲಿಯೂ ಕೆಲ ಸಮಸ್ಯೆ ಎದುರಿಸಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಪರಿಹಾರ: ಶನಿವಾರದಂದು ದುರ್ಗಾ ದೇವಿಗೆ ಪೂಜೆ ಸಲ್ಲಿಸಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಶನಿ 6ನೇ ಮನೆಯಲ್ಲಿ ಇರಲಿದೆ. ನಿಮ್ಮ ವೃತ್ತಿಜೀವನದಲ್ಲಿ ಪ್ರಗತಿ ಕಾಣುವಿರಿ. ಈ ಸಮಯದಲ್ಲಿ, ಹೊಸ ಉದ್ಯೋಗಾವಕಾಶಗಳು ದೊರೆಯಲಿದೆ. ಈ ಅವಧಿಯಲ್ಲಿ ವಿದೇಶ ಪ್ರಯಾಣದ ಅವಕಾಶ ದೊರೆಯಬಹುದು. ವ್ಯಾಪಾರಸ್ಥರು ಕೂಡ ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಈ ಅವಧಿಯಲ್ಲಿ ಅದೃಷ್ಟ ನಿಮಗೆ ಇರುವುದರಿಂದ ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುತ್ತೀರಿ. ಹಣಕಾಸಿನ ಸ್ಥಿತಿಯೂ ತುಂಬಾ ಚೆನ್ನಾಗಿರಲಿದೆ, ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ವೈವಾಹಿಕ ಹಾಗೂ ಕುಟುಂಬ ಜೀವನ ಕೂಡ ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಕೂಡ ಚೆನ್ನಾಗಿಯೇ ಇರಲಿದೆ.
ಪರಿಹಾರ: ಶನಿವಾರದಂದು ಶನಿದೇವನ ಪೂಜಿಸಿ.

ತುಲಾ ರಾಶಿ
ತುಲಾ ರಾಶಿಯವರಲ್ಲಿ ಶನಿ 5ನೇ ಮನೆಯಲ್ಲಿ ಇರಲಿದೆ. ಕುಂಭ ರಾಶಿಯಲ್ಲಿ ಶನಿಯ ನೇರ ಸ್ಥಾನದಿಂದಾಗಿ ನಿಮ್ಮ ಜೀವನದಲ್ಲಿ ನೀವು ತೃಪ್ತಿಯನ್ನು ಕಾಣುತ್ತೀರಿ. ನೀವು ದೊಡ್ಡ ಕಾರ್ಯಗಳನ್ನುಸುಲಭವಾಗಿ ಪೂರ್ಣಗೊಳಿಸುತ್ತೀರಿ. ಅದೃಷ್ಟ ನಿಮ್ಮ ಪರವಾಗಿರಲಿದೆ. ಆದರೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ವಿದೇಶದಲ್ಲಿ ನಿಮ್ಮ ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಸಂಬಂಧ ತುಂಬಾ ಚೆನ್ನಾಗಿರಲಿದೆ, ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ನಿಮಗೆ ಅನುಕೂಲಕರವಾಗಿರುತ್ತದೆ.
ಪರಿಹಾರ: ಮಂಗಳವಾರ ಹನುಮಂತನನ್ನು ಆರಾಧಿಸಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಶನಿ 3ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಹಣಕಾಸಿನ ಖರ್ಚು ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ತೃಪ್ತಿ ಇರಲ್ಲ. ನಿಮ್ಮ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು. ವ್ಯವಹಾರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುವುದು. ಹಣಕಾಸಿನಲ್ಲಿ ವಿಶೇಷ ಪ್ರಯೋಜ ಇರುವುದಿಲ್ಲ. ಕುಟುಂಬದಲ್ಲಿಯೂ ಕೆಲ ಸಮಸ್ಯೆಗಳು ಇರಲಿದೆ, ಆರೋಗ್ಯದ ಬಗ್ಗೆ ಹೇಳುವದಾದರೆ ಕಾಲುಗಳಲ್ಲಿ ನೋವಿನ ಸಮಸ್ಯೆ ಇರಬಹುದು.
ಪರಿಹಾರ: ಶನಿ ಮಂತ್ರವನ್ನು ಪ್ರತಿದಿನ 41 ಬಾರಿ ಪಠಿಸಿ.

ಧನು ರಾಶಿ
ಧನು ರಾಶಿಯವರಲ್ಲಿ ಶನಿಯು 3ನೇ ಮನೆಯಲ್ಲಿದೆ. ಶನಿಯ ಈ ಸ್ಥಾನದಿಂದಾಗಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಆರಂಭದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು, ಆದರೆ ನಂತರ ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿದೆ. ನೀವು ವ್ಯಾಪಾರದಲ್ಲಿ ಉತ್ತಮ ಹಿಡಿತ ಸಾಧಿಸಬಹುದು. ಈ ಅವಧಿಯಲ್ಲಿ ಆರ್ಥಿಕ ಲಾಭ ಪಡೆಯುತ್ತೀರಿ. ವೈವಾಹಿಕ ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಪರಿಹಾರ: 'ಓಂ ನಮಃ ಶಿವಾಯ' ಮಂತ್ರವನ್ನು ಪ್ರತಿದಿನ 41 ಬಾರಿ ಪಠಿಸಿ.

ಮಕರ ರಾಶಿ
ಮಕರ ರಾಶಿಯವರಲ್ಲಿ ಶನಿ 2ನೇ ಮನೆಯಲ್ಲಿ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಹೊಸ ಉದ್ಯೋಗಾವಕಾಶವನ್ನು ಪಡೆಯಬಹುದು. ನಿಮ್ಮ ಕಠಿಣ ಶ್ರಮದಿಂದ ಯಶಸ್ಸು ದೊರೆಯಲಿದೆ. ಶನಿಯ ದೆಸೆಯಿಂದ ವ್ಯಾಪಾರಸ್ಥರು ಉತ್ತಮ ಲಾಭ ಪಡೆಯುತ್ತೀರಿ. ನೀವು ಉತ್ತಮ ಆದಾಯ ಗಳಿಸಲು ಸಾಧ್ಯವಾಗುವುದು. ವ್ಯಾಪಾರ ಉದ್ಯಮಗಳಲ್ಲಿ ಹೆಚ್ಚಿನ ಮಟ್ಟದ ಲಾಭವನ್ನು ಸಾಧಿಸಲು ಸಾಧ್ಯವಾಗುತ್ತದೆ. ನೀವು ಕೆಲವು ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಲಾಭದ ಸೂಚನೆಗಳಿವೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಹಲ್ಲು ನೋವಿನ ಸಮಸ್ಯೆ ಇರಬಹುದು.
ಪರಿಹಾರ: ಶನಿವಾರದಂದು ಕಾಲಭೈರವನನ್ನು ಆರಾಧಿಸಿ.

ಕುಂಭ ರಾಶಿ
ಶನಿಯು ಕುಂಭ ರಾಶಿಯಲ್ಲಿ ಮಾರ್ಗಿಯಾಗಿ ಚಲಿಸಲಿದೆ. ಕುಂಭ ರಾಶಿಯಲ್ಲಿ ಶನಿಯ ನೇರ ಸ್ಥಾನದಿಂದಾಗಿ, ಕಾಲು ನೋವು, ಕಣ್ಣುಗಳಲ್ಲಿ ನೋವು ಮುಂತಾದ ಆರೋಗ್ಯ ಸಂಬಂಧಿಸಿದ ಸಮಸ್ಯೆ ಕಾಡಬಹುದು. ನಿಮ್ಮ ವೃತ್ತಿಯಲ್ಲಿ ಸ್ವಲ್ಪ ವಿಳಂಬ ಕಾಣಬಹುದು. ಕುಂಭ ರಾಶಿಯಲ್ಲಿ ಶನಿಯು ಮಾರ್ಗಿಯಾದಾಗ ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳಿಂದ ನೀವು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಶನಿಯು ಮಾರ್ಗಿಯಾದಾಗ ಹಣಕಾಸಿನ ತೊಂದರೆಗಳು ಇರಲ್ಲಕುಟುಂಬದಲ್ಲಿ ಕೆಲ ಸಮಸ್ಯೆಗಳು ಇರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ನಿದ್ದೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.
ಪರಿಹಾರ: 'ಓಂ ಭಾಸ್ಕರಾಯ ನಮಃ' ಮಂತ್ರವನ್ನು ಪ್ರತಿದಿನ 19 ಬಾರಿ ಪಠಿಸಿ.

ಮೀನ ರಾಶಿ
ಮೀನ ರಾಶಿಯವರಲ್ಲಿ ಶನಿ 12ನೇ ಮನೆಯಲ್ಲಿ ಮಾರ್ಗಿಯಾಗಲಿದೆ. ಈ ಅವಧಿಯಲ್ಲಿ ವೆಚ್ಚ ಅಧಿಕವಿರಲಿದೆ. ವೃತ್ತಿ ಬಗ್ಗೆ ಅತೃಪ್ತಿ ಇರಬಹುದು. ನಿಮ್ಮ ಪ್ರಸ್ತುತ ಕೆಲಸದಲ್ಲಿ ಹೆಚ್ಚಿನ ಒತ್ತಡವಿರಲಿದೆ, ನಿಮ್ಮ ಮೇಲಧಿಕಾರಿಗಳಿಂದ ಸರಿಯಾದ ಬೆಂಬಲ ಸಿಗದ ಕಾರಣ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಕಾರಣದಿಂದಾಗಿ, ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆಯೂ ನೀವು ಯೋಚಿಸಬಹುದು. ನೀವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. ನೀವು ವ್ಯಾಪಾರ ಪಾಲುದಾರರಿಂದ ಕಠಿಣ ಸ್ಪರ್ಧೆ, ವಿರೋಧವನ್ನು ಎದುರಿಸಬೇಕಾಗುತ್ತದೆ.ಕುಟುಂಬದಲ್ಲಿಯೂ ಕೆಲವು ಒತ್ತಡದ ಪರಿಸ್ಥಿತಿ ಇರಲಿದೆ. ವೈವಾಹಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆ ಇರಲಿದೆ. ಕೆಲವೊಂದು ಆರೋಗ್ಯ ಸಮಸ್ಯೆಗಳೂ ಕಾಡುವುದು.
ಪರಿಹಾರ: ಗುರುವಾರದಂದು ಗುರು ಮಂತ್ರ ಪಠಿಸಿ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Saturn Direct In Aquarius: effects On 12 Zodiac Signs In Kannada

Saturn Direct In Aquarius 2023: How it will affects on 12 zodiac signs, read on...
X
Desktop Bottom Promotion