Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾಮ ನವಮಿ: ಈ 3 ರಾಶಿಯವರಿಗೆ ಗಜಕೇಸರಿ ಯೋಗ
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ರಾಮ ನವಮಿಯನ್ನು ಏಪ್ರಿಲ್ 17ರಂದು ಆಚರಿಸಲಾಗುವುದು. ಶ್ರೀರಾಮ ಜನಿಸಿದ ದಿನವನ್ನು ರಾಮ ನವಮಿಯಂದು ಆಚರಿಸಲಾಗುವುದು. ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ತಾರೀಖಿನಂದು ಅಭಿಜಿತ್ ಮುಹೂರ್ತದಲ್ಲಿ ಜನಿಸಿದನು ಎಂದು ಹೇಳಲಾಗುವುದು.

ಈ ವರ್ಷ ರಾಮ ನವಮಿ ಬಲು ವಿಶೇಷ
ಪ್ರತಿಬಾರಿಯೂ ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದೇವೆ, ಆದರೆ ಈ ವರ್ಷ ತುಂಬಾನೇ ವಿಶೇಷ, ಏಕೆಂದರೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಬಂದು ಶ್ರೀರಾಮನ ದರ್ಶನ ಮಾಡಿ ಹೋಗುತ್ತಿದ್ದಾರೆ. ಆ ಬಾಲ ರಾಮನ ಮೂರ್ತಿ ನೋಡುತ್ತಿದ್ದರೆ ಎಂಥವರ ಮನಸ್ಸಿನಲ್ಲಿಯೂ ಭಕ್ತಿ ಉಕ್ಕಿ ಬರುತ್ತದೆ.
ಅಪರೂಪದ ದಿನದಂದು ರಾಮನವಮಿ ಬಂದಿದೆ
ರಾಮ ನವಮಿ ಹಬ್ಬವು ಚೈತ್ರ ನವರಾತ್ರಿಯ ಕೊನೆಯ ದಿನವಾಗಿದೆ. ಈ ದಿನ, ಒಂಬತ್ತು ದಿನಗಳ ಕಾಲ ದುರ್ಗಾದೇವಿಯನ್ನು ಪೂಜಿಸಿದ ನಂತರ, ಅವಳನ್ನು ಬೀಳ್ಕೊಡಲಾಗುತ್ತದೆ. ಈ ದಿನ ಗಜಕೇಸರಿ ಯೋಗ ಕೂಡ ಇದೆ. ತ್ರೇತಾಯುಗದಲ್ಲಿ ಭಗವಾನ್ ರಾಮನ ಜನನದ ಸಮಯದಲ್ಲಿ ಕೂಡ ಇದೇ ಯೋಗವಿತ್ತಂತೆ, ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಮಾಡಿದ ವರ್ಷವೇ ರಾಮ ನವಮಿಯಂದು ಗಜಕೇಸರಿ ಯೋಗವೂ ಉಂಟಾಗಿದೆ.
ಏಪ್ರಿಲ್ 17ರಂದು ಗಜಕೇಸರಿ ಯೋಗ ಕೂಡ ರೂಪುಗೊಳ್ಳಲಿದೆ. ಭಗವಾನ್ ರಾಮನು ತ್ರೇತಾಯುಗದಲ್ಲಿ ಜನಿಸಿದಾಗ, ಸೂರ್ಯನು ಮೇಷ ರಾಶಿಯಲ್ಲಿದ್ದನು,ಈಗಲೂ ಸೂರ್ಯ ಮೇಷ ರಾಶಿಯಲ್ಲಿದ್ದಾನೆ. ಈ ರಾಮ ನವಮಿ ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ ತಂದಿದೆ:
ಮೇಷ ರಾಶಿ
ಸೂರ್ಯ ಮೇಷ ರಾಶಿಯಲ್ಲಿ ಇದೆ. ಇದರಿಂದಾಗಿ ಮೇಷ ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಕೆಲವು ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು. ಕೆಲಸದಲ್ಲಿ ಉನ್ನತ ಸ್ಥಾನ ಪಡೆಯುತ್ತೀರಿ. ವ್ಯಾಪಾರಿಗಳಿಗೆ ತುಂಬಾನೇ ಲಾಭದಾಯಕವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಲಾಭ ಗಳಿಸುತ್ತೀರಿ.
ತುಲಾ ರಾಶಿ
ಈ ರಾಮನವಮಿ ನಿಮ್ಮ ಬದುಕಿಗೆ ವಿಶೇಷ ಕೊಡುಗೆ ನೀಡಲಿದೆ. ನೀವು ಎಲ್ಲಾ ರೀತಿಯ ಭೌತಿಕ ಸೌಕರ್ಯಗಳನ್ನು ಪಡೆಯುತ್ತೀರಿ. ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಬಾಕಿ ಉಳಿದಿರುವ ನಿಮ್ಮೆಲ್ಲಾ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತವೆ. ನೀವು ಆಸ್ತಿ ಖರೀದಿಗೆ ಬಯಸುತ್ತಿದ್ದರೆ ಆ ಕನಸು ನನಸಾಗಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಶ್ರೀರಾಮನ ವಿಶೇಷ ಕೃಪೆ ಇರಲಿದೆ, ನಿಮ್ಮ ಕೆಲಸದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಯಶಸ್ಸನ್ನು ಪಡೆಯುತ್ತೀರಿ ಬಹಳ ದಿನಗಳಿಂದ ಇದ್ದ ನಿಮ್ಮ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದು. ಉದ್ಯೋಗಸ್ಥರಿಗೆ ಹೊಸ ಉದ್ಯೋಗಕ್ಕೆ ಉತ್ತಮ ಅವಕಾಶಗಳು ಸಿಗುತ್ತವೆ , ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಸುಧಾರಣೆ ಕಂಡು ಬರುವುದು.
ಶ್ರೀ ರಾಮ ರಕ್ಷಾ ಸ್ತೋತ್ರ
ಶ್ರೀಗಣೇಶಾಯ ನಮಃ ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ | ಬುಧಕೌಶಿಕಋಷಿಃ | ಶ್ರೀಸೀತಾರಾಮಚಂದ್ರೋ ದೇವತಾ | ಅನುಷ್ಟುಪ್ ಛನ್ದಃ | ಸೀತಾ ಶಕ್ತಿಃ | ಶ್ರೀಮದ್ಧನುಮಾನ್ ಕೀಲಕಮ್ | ಶ್ರೀರಾಮಚಂದ್ರಪ್ರೀತ್ಯರ್ಥೇ ಜಪೇವಿನಿಯೋಗಃ | ಅಥ ಧ್ಯಾನಮ್ | ಧ್ಯಾಯೇದಾಜಾನಬಾಹುಂ ಧೃತಶರಧನುಷಂಬದ್ಧಪದ್ಮಾಸನಸ್ಥಮ್ | ಪೀತಂ ವಾಸೋ ವಸಾನಂನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ | ವಾಮಾಙ್ಕಾರುಢಸೀತಾಮುಖಕಮಲಮಿಲಲ್ಲೋಚನಂನೀರದಾಭಂ | ನಾನಾಲಙ್ಕಾರದೀಪ್ತಂ ದಧತಮುರುಜಟಾಮಣ್ಡನಂರಾಮಚಂದ್ರಮ್ || ಇತಿ ಧ್ಯಾನಮ್ |
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications









